Sunday, May 31, 2009

‘ಬಾನಿ’ಗೆ ಎಲ್ಲೆ, ಎಣೆ ಎಲ್ಲಿದೆ ?

ಇಂಥ ಅವೆಷ್ಟೋ ಚಿಕ್ಕ ಪುಟ್ಟ ಸಂಗತಿಗಳನ್ನು ದಿನ ನಿತ್ಯ ನೋಡುತ್ತಿರುತ್ತೇವೆ. ಅದೇನೂ ವಿಶೇಷವೆಂದು ನಮಗೆ ಕಾಣುವುದೇ ಇಲ್ಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇಂಥವು ಎಲ್ಲರಿಗೂ ಮಾಮೂಲಿ ಸಂಗತಿಯಾಗಿರುತ್ತದೆ. ಆದರೆ, ಇದರ ಹಿಂದಿನ ಕಳಕಳಿ ಹಾಗೂ ಅವುಗಳ ನಿರ್ವಹಣೆ ಸಣ್ಣ ಮಾತೇನಲ್ಲ.
ಅದೊಂದು ಬಿರು ಬಿಸಿಲಿನ ಮಧ್ಯಾಹ್ನ. ರಣಗುಡುತ್ತಿದೆ ವಾತಾವರಣ. ಒಮ್ಮೆ ಹೊರ ಬಿದ್ದರೆ ಮಾರು ದೂರ ನಡೆಯುವಷ್ಟರಲ್ಲಿ ಎಲ್ಲಿ ನೀರು ಸಿಕ್ಕೀತೋ ಎಂದು ಹುಡುಕುವಂತಾಗುತ್ತದೆ. ಏನು ಕುಡಿದರೂ ಸಮಾಧಾನವಿಲ್ಲ. ಮಜ್ಜಿಗೆ, ಎಳನೀರು, ಶರಬತ್ತು ಹೀಗೆ ಸಿಕ್ಕಸಿಕ್ಕದ್ದನ್ನು ಕುಡಿದು ಹೊಟ್ಟೆ ಕೊಳಗುಡುತ್ತಿದ್ದರೂ ಬಾಯಾರಿಕೆ ಮಾತ್ರ ತಣಿಯುವುದಿಲ್ಲ. ಸಾಕಪ್ಪಾ, ಈ ತಿರುಗಾಟ ಎಂಬಷ್ಟರಮಟ್ಟಿಗೆ ಬಿಸಿಲು ಬಾರಿಸುತ್ತಿದ್ದರೂ ಅನಿವಾರ್ಯತೆ ಹೆಜ್ಜೆಯನ್ನು ಕಿತ್ತಿಡುವಂತೆ ಮಾಡುತ್ತಿರುವಾಗಲೇ ಕಣ್ಣಿಗೆ ಬಿದ್ದದ್ದು ಮನೆಯೊಂದರ ಮುಂದೆ ಗುಂಪುಗುಂಪಾಗಿದ್ದ ಜಾನುವಾರುಗಳ ಹಿಂಡು. ಮೊದಲ ಬಾರಿಗೆ ಏನೋ ತರಕಾರಿ ಸಿಪ್ಪೆಯನ್ನೋ, ಬಾಳೆ ಎಲೆಯನ್ನೋ ಮನೆಯವರು ತಂದು ಹಾಕಿರಬಹುದು. ಅದನ್ನು ತಿನ್ನಲು ದನಕರುಗಳು ಬಂದಿವೆ ಎಂದುಕೊಂಡರೆ ಅದಲ್ಲ. ಒಂದೆರಡು ಕ್ಷಣಗಳಾಗಿರಬಹುದು, ಗೇಟ್ ದಾಟಿ ಬಂದ ಮಧ್ಯವಯಸ್ಕ ಗೃಹಿಣಿಯೊಬ್ಬರು ಸೊಂಟದ ಮೇಲಿಟ್ಟುಕೊಂಡು ಬಂದ ಕೊಡದಿಂದ ನೀರು ಸುರಿದರು. ನೋಡ ನೋಡುತ್ತಲೇ ದನಕರುಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಅದೆಲ್ಲಿದ್ದವೋ...ಸಣ್ಣದು, ಪುಟ್ಟದು, ದೊಡ್ಡದು, ಕಂದು ಬಣ್ಣದ್ದು, ಕಪ್ಪು ಬಿಳಿ ಹಂಡ ಹಂಡದ್ದು, ಒಂದರ ಹಿಂದೊಂದರಂತೆ ತಮ್ಮ ಪಾಡಿಗೆ ತಾವು ಬಂದು ನೀರು ಕುಡಿದು, ಅಲ್ಲೇ ಒಂದಷ್ಟು ಗಂಜಲ ಹೊಯ್ದು, ಸಗಣಿ ಹಾಕಿ, ಪರಸ್ಪರ ಮೈ ನೆಕ್ಕಿಕೊಳ್ಳುತ್ತ ಸಂಪ್ರೀತಿಯಿಂದ ಹೋಗುತ್ತಲೇ ಇವೆ. ಆಕೆ ಕೊಡದಲ್ಲಿ ನೀರು ತಂದು ಸುರಿಯುತ್ತಲೇ ಇದ್ದಾರೆ....ಅವು ಬರುತ್ತಲೇ ಇವೆ....ಆಕೆ ನೀರು ಹಾಕುತ್ತಲೇ ಇದ್ದಾರೆ...
ಕುತೂಹಲಕ್ಕೆ ಇಣುಕಿದರೆ ಮನೆಯೆದುರು ಅರ್ಧ ಮಣ್ಣಿನೊಳಗೆ ಹೂತು ಇನ್ನರ್ಧ ಮೇಲಿಣುಕಿ ನೋಡುತ್ತಿರುವಂತಿರುವ ನೀರಿನ ಟ್ಯಾಂಕ್. ಅದೇನು ಟ್ಯಾಂಕ್ ಎಂದರೆ ಗ್ಯಾಲನ್‌ಗಟ್ಟಲೇ ನೀರು ಹಿಡಿಸಬಹುದಾದದ್ದೇನೂ ಅಲ್ಲ. ಮೂರ್‍ನಾಲ್ಕು ಕೊಡ, ಹೆಚ್ಚೆಂದರೆ ಹತ್ತು ಬಿಂದಿಗೆ ನೀರಷ್ಟೇ ಹಿಡಿಸಬಹುದು. ಆದರೆ, ಅದರ ಆಕಾರವೇ ಗಮನ ಸೆಳೆಯುವಂತಿದೆ. ಸುಂದರವಾಗಿದೆ. ಸಾಲದ್ದಕ್ಕೆ ಮನೆಯವರು ಅದರ ಸುತ್ತಲೂ ನೀಟಾಗಿ ಗಾರೇ ಹಾಕಿ, ಬಣ್ಣ ಹಚ್ಚಿ, ಮೇಲೊಂದೆರಡು ರಂಗೋಲಿ ಎಳೆ ಎಳೆದು ಅಂದಗೊಳಿಸಿದ್ದಾರೆ. ಫಕ್ಕನೆ ನೆನಪಿಗೆ ಬಂದದ್ದು ಮಲೆನಾಡಿನ ನೀರ ಬಾನಿ. ಅರೆ ಇನ್ನೂ ಇವು ಉಳಿದಿವೆಯೇ ಅನ್ನಿಸಿತು.
ಈಗ ಯೋಚಿಸಿ ನೋಡಿ, ಇಂಥ ನೀರಿನ ಬಾನಿಗಳಲ್ಲಿ ಏನಿದೆ ಅಂಥ ವಿಶೇಷ ಎನ್ನಬಹುದು. ಹಳ್ಳಿಗಳಲ್ಲಿ ಸಾಮಾನ್ಯ ಎಲ್ಲರ ಮನೆಗಳೆದುರು ಜಾನುವಾರುಗಳ ಉಪಯೋಗಕ್ಕಾಗಿ ಇಂಥ ಪುಟ್ಟ ಪುಟ್ಟ ತೊಟ್ಟಿಗಳನ್ನು ನಿರ್ಮಿಸಿಯೇ ಇರುತ್ತಾರೆ....ಹಾಗೆನ್ನುವುದಕ್ಕಿಂತ ನಿರ್ಮಿಸಿರುತ್ತಿದ್ದರು ಎನ್ನುವುದೇ ಸೂಕ್ತವೇನೋ? ಇಂದಿನ ದಿನಗಳಲ್ಲಿ ಅಪರೂಪಕ್ಕೊಮ್ಮೆ ಇದು ಕಾಣ ಸಿಗುತ್ತಿದೆ ಎನ್ನುವುದೇ ವಿಶೇಷ. ನೀರಿನ ಸಾಂಪ್ರದಾಯಿಕ ರಚನೆಗಳಲ್ಲಿ ಇಂಥ ಬಾನಿಗಳೂ ಒಂದು. ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿದ್ದ ಇವು ನಗರೀಕರಣದ ಇಂದಿನ ಯಾಂತ್ರಿಕ ಯುಗದಲ್ಲಿ ತೀರಾ ಅಪರೂಪವಾಗಿದ್ದಂತೂ ಸತ್ಯ.
ಬಾನಿ, ಮರಿಗೆ, ಕಲ್ಲು ಕವುಳಿಗೆ, ಗೋ ತೊಟ್ಟಿ, ಕಲ್ಮರಿಗೆ ಎಂಬಿತ್ಯಾದಿ ಹೆಸರುಗಳಿಂದ ಮಲೆನಾಡ ಭಾಗದಲ್ಲಿ ಗುರುತಿಸಲಾಗುವ ಇಂಥ ಸಂರಚನೆಗಳ ಹಿಂದೆ ಉತ್ಕಟ ಮಾನವೀಯ ಕಳಕಳಿ, ಭಾರತೀಯ ಸಂಸ್ಕೃತಿ, ಈ ನೆಲದ ಪರಂಪರೆ ಪ್ರತಿಫಲಿಸುತ್ತಿರುತ್ತದೆ. ಹಳ್ಳಿಗಳಲ್ಲಿ ಇವುಗಳನ್ನು ಕಲ್ಲಿನಿಂದಲೇ ನಿರ್ಮಿಸುವುದು ಪದ್ಧತಿ. ಇದು ಬಾನಿಯ ವಿಶೇಷತೆಯೂ ಹೌದು. ಸಾಮಾನ್ಯವಾಗಿ ಒಂದೇ ಕಲ್ಲಿನಲ್ಲಿ ಕಡೆದು ಹೊಂಡ ಮಾಡಿ ಪಾತ್ರೆಯಾಕಾರದಲ್ಲಿ ಇವುಗಳನ್ನು ನಿರ್ಮಿಸಿರುತ್ತಾರೆ. ಜಾನುವಾರುಗಳು ನೀರು ಕುಡಿಯುವ ಭರದಲ್ಲಿ ಒಂದಕ್ಕೊಂದು ತಿಕ್ಕಾಟ ನಡೆಸುವಾಗ ಮಣ್ಣಿನ ಅಥವಾ ಇನ್ನಾವುದೇ ವಸ್ತುಗಳಿಂದ ನಿರ್ಮಿಸಿದ ತೊಟ್ಟಿಗಳು ನಾಶವಾಗುವ ಸಾಧ್ಯತೆಗಳಿರುವುದರಿಂದ ಕಲ್ಲಿನಿಂದಲೇ ಕಡೆದು ಮಾಡುವುದು ರೂಢಿ. ಜತೆಗೆ ಬಿಸಿಲು, ಗಾಳಿ-ಮಳೆಯೆನ್ನದೇ ಸರ್ವಕಾಲಕ್ಕೂ ತಾಳಿಕೆ ಬರಲಿ ಎಂಬ ಉದ್ದೇಶವೂ ಇರಬಹುದು. ಒಟ್ಟಾರೆ ನುಣುಪಾಗಿ ಕೆತ್ತಿ, ವೈವಿಧ್ಯಮಯ ಆಕಾರಕ್ಕೆ ತಂದು ಮನೆಯ ಮುಂಭಾಗದಲ್ಲಿ ಅರ್ಧ ಭಾಗ ಹೂತಿರಲಾಗಿರ್‍ತುದೆ. ಇದರಲ್ಲೂ ಕಲಾತ್ಮಕತೆ ಮೆರೆದಿರುವ ಉದಾಹರಣೆಗಳೂ ಇವೆ. ತೊಟ್ಟಿಯ ಮೇಲ್ಭಾಗದಲ್ಲಿ ಹೊರಗೆ ಸುತ್ತಲೂ ಬಳ್ಳಿಗಳನ್ನು ಕೆತ್ತಿ ಅಲಂಕಾರ ಮಾಡಿರುತ್ತಾರೆ. ತೊಟ್ಟಿಯೆಂದಾಕ್ಷಣ ಎಲ್ಲವೂ ಒಂದೇ ಆಕಾರದಲ್ಲಿರಬೇಕೆಂದೇನೂ ಇಲ್ಲ. ಒಂದು ವೃತ್ತಾಕಾರ, ಒಂದು ಚೌಕ, ಇನ್ನೊಂದು ಆಯತ...ಒಟ್ಟಾರೆ ನಿರ್ಮಿಸಿದವನ ಕ್ರಿಯಾಶೀಲತೆಗಳಿಗನುಗುಣವಾಗಿ ಮರಿಗೆಗಳು ವಿವಿಧ ಆಕಾರ ತಳೆದಿರುತ್ತವೆ. ಎಲ್ಲದರಲ್ಲೂ ಒಂದೇ ಸಾಮ್ಯತೆಯೆಂದರೆ ಸಾಮಾನ್ಯವಾಗಿ ಎಲ್ಲದರ ಬಾಯಿಯೂ ಅಗಲವಾಗಿರುತ್ತದೆ. ಮೂರ್‍ನಾಲ್ಕು ಹಸುಗಳು ಬಂದರೂ ಒಟ್ಟಿಗೇ ಬಂದು ನೀರು ಕುಡಿದು ಹೋಗಲು ಅನುಕೂಲವಾಗಲಿ ಎಂಬುದು ಇದರ ಉದ್ದೇಶ.
ದಿನಾಲೂ ಬೆಳಗ್ಗೆ ಎದ್ದು ಬಾಗಿಲು ತೊಳೆದು ರಂಗೋಲಿ ಹಾಕಿ ಮುಗಿಯುತ್ತಿದ್ದಂತೆ ಇದಕ್ಕೂ ನಾಲ್ಕು ಕೊಡ ನೀರು ತುಂಬಿಸಿಡುವುದು ಮನೆಯೊಡತಿಗೆ ಅಭ್ಯಾಸ. ನಂತರದ ಸರದಿ ಕುಟುಂಬದ ಇತರ ಸದಸ್ಯರದ್ದು. ಬಿಡುವಾದಾಗಲೆಲ್ಲ ಒಬ್ಬರಲ್ಲ ಮತ್ತೊಬ್ಬರು ಹೊರಬಂದು ಈ ಮರಿಗೆಗಳ ಮೇಲೊಂದು ಇಣುಕು ಹಾಕಿ ಹೋಗುತ್ತಾರೆ. ಒಟ್ಟಾರೆ ಯಾವುದೇ ಸಂದರ್ಭದಲ್ಲೂ ಇವು ಖಾಲಿಯಾಗಿರದಂತೆ ಜಾಗ್ರತೆ ವಹಿಸುತ್ತಾರೆ. ಬಿಸಿಲ ಝಳದಲ್ಲಿ ಬಳಲಿ ಬೆಂಡಾಗಿ ಬರುವ ಜಾನುವಾರುಗಳಿಗೆ ಎಂಥ ಸಂದರ್ಭದಲ್ಲೂ ನೀರು ಸಿಗದೇ ಹೋಗಬಾರದು ಎಂಬ ಕಾಳಜಿಯನ್ನೂ ಮನೆಯವರೆಲ್ಲರೂ ಅನಾಯಾಸವಾಗಿ ರೂಢಿಸಿಕೊಂಡಿರುತ್ತಾರೆ. ಜಾನುವಾರುಗಳು ಬೆಳ್ಳಂಬೆಳಗ್ಗೆ ಮೇವು ಹುಡುಕುತ್ತ ಹೊರ ಬಿದ್ದರೆ ಮನೆಗೆ ಬಂದು ಸೇರುವುದು ಇನ್ನು ಸಂಜೆಯೇ. ಬೆಟ್ಟ ಗುಡ್ಡಗಳನ್ನು ಸುತ್ತಿ ಸುಳಿದಾಡಿ ಬರುವಾಗ ಅವು ಬಾಯಾರಿ ಬೆಂಡಾಗಿರುತ್ತವೆ. ಜತೆಗೆ ನೀರಿಗಾಗಿಯೂ ಅಲೆದಾಡುವಂತಾಗಬಾರದು ಎಂಬ ಸದುದ್ದೇಶದಿಂದ ಇಂಥ ಬಾನಿಗಳನ್ನು ಮನೆಯ ಮುಂದೆ ನಿರ್ಮಿಸಿಟ್ಟು ಅನುಕೂಲ ಮಾಡಿರುತ್ತಾರೆ.
ಬಹುತೇಕ ಗ್ರಾಮೀಣ ಭಾಗದಲ್ಲಿ ಇಂಥ ಬಾನಿಗಳ ಬಗ್ಗೆ ಪೂಜ್ಯ ಭಾವನೆಯೂ ಇರುತ್ತದೆ. ಗೋವುಗಳೆಂದರೆ ಮೂವತ್ತಮೂರು ಕೋಟಿ ದೇವತೆಗಳ ಆವಾಸಸ್ಥಾನ. ಹೀಗಾಗಿ, ಅವುಗಳಿಗೆ ನೀರುಣಿಸುವುದೆಂದರೆ ಅದು ಪುಣ್ಯ ಸಂಚಯದ ಕಾರ್ಯ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಇಂಥ ಬಾನಿಗಳು ಯಾವತ್ತಿಗೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತಾರೆ. ರಂಗೋಲಿ ಹಾಕಿ, ಅರಿಷಿಣ, ಕುಂಕುಮ ಹಚ್ಚಿ ಮುಂಜಾನೆ ಪೂಜಿಸಿರುತ್ತಾರೆ. ಕಲ್ಲು ಮರಿಗೆ ಇಡದ ಮನೆಯೆಂದರೆ ಅದು ಪಕ್ಕಾ ಜಿಪುಣಾಗ್ರೇಸರರ ಮನೆಯೆಂದೇ ಗುರುತಿಸಲಾಗುತ್ತದೆ.
ನಂಬಿಕೆಗಳ ಪ್ರಶ್ನೆ ಏನೇ ಇರಲಿ, ಮೂಕ ಪ್ರಾಣಿಗಳಿಗಾಗಿ ನೀರಿಟ್ಟು ಸಲಹುವ ನಮ್ಮ ಗ್ರಾಮೀಣ ಭಾಗದ ಜನರ ಇಂಥ ಉತ್ತಮ ನಡವಳಿಕೆ, ನಿಸ್ವಾರ್ಥ ಮನೋಭಾವ, ಎಲ್ಲ ಜೀವಿಗಳ ಬಗೆಗೂ ತೋರುವ ಕಳಕಳಿ, ಅದರಲ್ಲೂ ವೈವಿಧ್ಯವನ್ನು ತೋರುವ ಕ್ರಿಯಾಶೀಲತೆ -ಇಂಥವು ವಿಶ್ವದ ಬೇರೆಲ್ಲೂ ಕಾಣಸಿಗುವುದಿಲ್ಲ. ನಿಜಕ್ಕೂ ಮೇರಾ ಭಾರತ್ ಮಹಾನ್ ಎನಿಸುವುದು ಇಂಥ ಕಾರಣಗಳಿಗಾಗಿಯೇ. ಈಗ ಹೇಳಿ, ಇವು ನೋಡಿ ಹಾಗೆಯೇ ಹೋಗಿ ಬಿಡುವ ಪುಟ್ಟ ಸಂಗತಿಯೇ ? ನಾವು ಭಾರತೀಯರು ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುತ್ತಿದ್ದೇವೆ ಎಂಬ ಮಾತ್ರಕ್ಕೆ ಇಂಥ ಸೌಜನ್ಯ, ಸಜ್ಜನಿಕೆಯ ನಡೆಯನ್ನು ಕಳೆದುಕೊಳ್ಳಬೇಕೇ ?

‘ಲಾಸ್ಟ್’ಡ್ರಾಪ್: ಕಲ್ಲೂ ಕರಗಿ ಮರಿಗೆಗಳ ರೂಪ ತಾಳಿ ಮೂಕ ಪ್ರಾಣಿಗಳಿಗೆ ಸ್ಪಂದಿಸುತ್ತವೆ ಎಂದ ಮೇಲೆ ಮಾನವರಾಗಿ ನಮಗೆ ಮರಿಗೆಗಳನ್ನು ತುಂಬಿಸಿಡುವಷ್ಟಾದರೂ ಮೃದು ಮನಸ್ಸು ಇಲ್ಲದಿದ್ದರೆ ಹೇಗೆ ?

Tuesday, May 26, 2009

ಸಂತೆಬೆನ್ನೂರಿನ ಈ ಸುಂದರಿ ಸರ್ವಕಾಲಕ್ಕೂ ಸಲ್ಲುವ ಮಾದರಿ

ವ್ ಅಟ್ ಫಸ್ಟ್ ಸೈಟ್ ಎನ್ನುತ್ತಾರಲ್ಲ, ಹಾಗೆಯೇ. ನೀವಾಕೆಯನ್ನು ನೋಡಿದ ಮೊದಲ ನೋಟದಲ್ಲೇ ಪ್ರೇಮಪಾಶದಲ್ಲಿ ಬೀಳದಿದ್ದರೆ ಕೇಳಿ. ಅಂಥ ಅದ್ಭುತ ಸೌಂದರ್ಯದ ಖನಿಯಾಕೆ. ಆ ನುಣುಪಾದ ಮೈ ಮಾಟ. ಸೂಕ್ಷ್ಮ ಅವಯವಗಳು. ಸುಂದರ ಬಣ್ಣ. ಆಕರ್ಷಕ ನಿಲುವು. ಕಣ್ತುಂಬಿಕೊಳ್ಳುವ ಹರವು. ಎಲ್ಲೆಲ್ಲಿ ಎಷ್ಟೆಷ್ಟು ಇರಬೇಕೋ ಅಷ್ಟಷ್ಟೇ ನಿಖರವಾಗಿ ಅಳತೆ ಮಾಡಿ ಕೂರಿಸಿದ ಕೌಶಲ್ಯ. ಅದ್ಯಾವ ಗಳಿಗೆಯಲ್ಲಿ ಮೈದಾಳಿ ನಿಂತಳೋ...ಅಬ್ಬ ನೋಡುತ್ತಿದ್ದರೆ ನೋಡುತ್ತಲೇ ನಿಂತುಕೊಳ್ಳಬೇಕೆನಿಸುವ ಆ ಸೌಂದರ್ಯಕ್ಕೆ ಅದೇ ಸಾಟಿ.
ಸಂತೇ ಬೆನ್ನೂರಿನ ಆ ಪುಷ್ಕರಿಣಿಯನ್ನು ನೋಡಿದವರ್‍ಯಾರೂ ಅದನ್ನು ನಿರ್ಜೀವ ಕಟ್ಟಡವೆನ್ನಲು ದೇವರಾಣೆ ಸಾಧ್ಯವಿಲ್ಲ. ಜೀವಂತಿಕೆ ಪುಟಿಪುಟಿದೇಳುತ್ತಲೇ ಇರುವ ಆ ಪುಟ್ಟ ಹೊಂಡದ್ದು ಯಾವ ಕನ್ನಿಕೆಗೆ ಕಡಿಮೆಯಿಲ್ಲದ ವಯ್ಯಾರ. ಎತ್ತರದ ನಿಲುವು, ಬಿತ್ತರದ ಬಿನ್ನಾಣ, ಮಹತ್ತರ ಉದ್ದೇಶ ಸಾಧನೆಯ ಗುರಿಯನ್ನು ಹೊಂದಿರುವ ಆ ಪುಷ್ಕರಿಣಿಯ ಕಂಡೇ ಧನ್ಯರಾಗಬೇಕು. ಹೊಂಡವೆಂದಾಕ್ಷಣ ಒಂದು ಪುಟ್ಟ ಗುಂಡಿ, ಆ ಗುಂಡಿಯೊಳಗೊಂದಿಷ್ಟು ನೀರು, ನೀರಿನೊಳಗಷ್ಟು ಕಸ-ಕಡ್ಡಿ, ಹೂಳು ಇದು ಇದ್ದದ್ದೇ ಬಿಡಿ ಗೋಳು ಎಂದು ಮೂಗುಮುರಿಯುವಂತಿಲ್ಲ. ಸಂತೆಬೆನ್ನೂರಿನ ಈ ಹೊಂಡಕ್ಕೆ ಎಲ್ಲ ಹೊಂಡಗಳಲ್ಲಿರುವ ಭಂಡತನವಿಲ್ಲ. ಬದಲಾಗಿ ಭರಪೂರ ವೈಶಿಷ್ಟ್ಯ, ವೈವಿಧ್ಯಗಳ ಭಂಡಾರವಿದೆ.
ಅಸಲಿಗೆ ಇದು ಕೊಳವಲ್ಲ. ಕೊಳದೊಳಗಿರುವ ದೇಗುಲ. ಇಂಥವಕ್ಕೆ ನಮ್ಮ ಇತಿಹಾಸದಲ್ಲಿ ಕೊರತೆಯೇನಿಲ್ಲ. ಕೊಳಕ್ಕೊಂದು ದೇಗುಲವೋ, ದೇಗುಲಕ್ಕೊಂದು ಕೊಳ್ವೋ ಅಂತೂ ಅವೆರಡೂ ಒಟ್ಟೊಟ್ಟಿಗೇ ಇರುವುದನ್ನು ನೋಡಿಕೊಂಡೇ ಬಂದಿದ್ದೇವೆ. ಮನುಷ್ಯನಿಗೆ ಮೊದಲ ಆದ್ಯತೆಯಾದ ಜೀವಜಲಕ್ಕೊಂದು ಮೂಲ ಸೃಷ್ಟಿಸಿ ಅದರ ಪಾವಿತ್ರ್ಯ ರಕ್ಷಣೆಗೆ ದೈವತ್ವವನ್ನು ಆರೋಪಿಸುವುದು ನಮ್ಮ ಪರಂಪರೆಯೇ. ದೇವಸ್ಥಾನ ಕಟ್ಟಿದಾಗ ಅಲ್ಲಿನ ಪೂಜೆ ಪುನಸ್ಕಾರಕ್ಕೆ, ಭಕ್ತರ ಅನುಕೂಲಕ್ಕೆ ಜತೆಗೆ ನೀರಿನ ಆಸರೆಯಾಗಿ ಕಲ್ಯಾಣಿಗಳನ್ನು ನಿರ್ಮಿಸುವ ಪದ್ಧತಿ ನಮ್ಮಲ್ಲಿ ಹಿಂದಿನಿಂದಲೂ ಇದೆ. ಇವುಗಳಿಗೆ ತೀರ್ಥಗಳೆಂದು ಕರೆಯುವುದು ವಾಡಿಕೆ. ಎಲ್ಲ ದಾನಗಳಂತೆಯೇ ಜಲದಾನವೂ ಪುಣ್ಯ ಸಂಚಯವೆಂಬ ನಂಬಿಕೆಯೂ ಅದೆಷ್ಟೋ ಕೆರೆಕಟ್ಟೆಗಳ ನಿರ್ಮಾಣಕ್ಕೆ ಕಾರಣವಾದದ್ದೂ ಇದೆ. ಇದೂ ಅಂಥದ್ದೇ ಒಂದು. ಆದರೆ ವಿಶೇಷ ಇರುವುದು ಇದರ ವಿನ್ಯಾಸದಲ್ಲಿ ಹಾಗೂ ಇದಕ್ಕೆ ಹುಡುಕಿದ ಜಲಮೂಲದಲ್ಲಿ. ಸರಿಸುಮಾರು ಐದು ದಶಕಗಳ ಹಿಂದೆಯೇ ಮಳೆ ನೀರು ಸಂಗ್ರಹಕ್ಕೆ ಇಷ್ಟೊಂದು ವೈಜ್ಞಾನಿಕ ವ್ಯವಸ್ಥೆ ರೂಪಿಸಲಾಗಿತ್ತು ಎಂಬುದು ನಿಜಕ್ಕೂ ಗಮನಾರ್ಹ ಸಂಗತಿಯಾಗುತ್ತದೆ. ಆತನ ಹೆಸರು ಕೆಂಗಪ್ಪ. ವಿಜಯ ನಗರ ಅರಸರ ಪಾಳೆಗಾರ. ಸಂತೇಬೆನ್ನೂರುನ್ನಾಳಿದ ನಾಯಕರ ಪೈಕಿ ಮೊದಲಿಗ. ಆತ ಶಾಲಿವಾಹನ ಶಖೆ ೧೪೮೦ನೇ ಕಾಳಾಯುಕ್ತಿ ಸಂವತ್ಸರದಲ್ಲಿ ಅಂದರೆ ಕ್ರಿ.ಶ. ೧೫೫೮ರಲ್ಲಿ ಇದನ್ನು ನಿರ್ಮಸಿದನೆನ್ನುತ್ತದೆ ಇತಿಹಾಸ. ಮೊದಲಿಗೆ ಕಟ್ಟಿದ್ದು ಆತ ದೇಗುಲವನ್ನೇ. ಅದಾದರೂ ಪುಟ್ಟದೇನಲ್ಲ. ಬರೋಬ್ಬರಿ ೬೪ ಅಂಕಣಗಳ ದೇವಸ್ಥಾನ. ಅಲ್ಲಿ ತನ್ನ ಮಲೆದೈವ ಶ್ರೀರಾಮಚಂದ್ರ ದೇವರನ್ನು ಪ್ರತಿಷ್ಠೆ ಮಾಡಿ ಅದರ ಮುಂದೆ ಶ್ರೀರಾಮತೀರ್ಥವೆಂಬ ಈ ನಮ್ಮ ಸುಂದರಿಯನ್ನು ಕರೆತಂದು ಕುಳ್ಳಿರಿಸಿದನಂತೆ ಎಂದು ಸುಮತೀದ್ರ ನಾಡಿಗರು ಕೊಳದ ಬಗ್ಗೆ ಬರೆದ ಲೇಖನದಲ್ಲಿ ನಮೂದಿಸುತ್ತಾರೆ.
ಇತಿಹಾಸದ ಕಥೆ ಏನೇ ಇರಲಿ. ನೈಸರ್ಗಿಕ ಮಳೆ ನೀರು ಸಂಗ್ರಹಕ್ಕಾಗಿ ನಿರ್ಮಿಸುವ ಹೊಂಡಕ್ಕೂ ಇಂಥದ್ದೊಂದು ಸೌಂದರ್ಯವನ್ನು ಕಲ್ಪಿಸುತ್ತಾರೆಂದರೆ ಕೆಲಸದ ಬಗೆಗೆ ಅವರಿಗಿದ್ದ ನಿಷ್ಠೆ. ಅದರ ಹಿಂದಿರುವ ಕ್ರಿಯಾಶೀಲತೆಯನ್ನು ಎಂಥವರೂ ಮೆಚ್ಚಲೇಬೇಕು. ವಾಸ್ತು ವಿಷಯಕ್ಕೆ ಬಂದರೆ ಇದು ಧ್ವಜಾಯವಂತೆ. ೨೩.೫ ಅಡಿ ಉದ್ದ ೨೪೫ ಅಡಿ ಅಗಲವಿದೆ. ನೆಲಮಟ್ಟದಿಂದ ಸುಮಾರು ೪೦ ಅಡಿ ಆಳ ಇದೆ. ಸುತ್ತಲೂ ಕೆಂಪು ಕಣಶಿಲೆ (ಗ್ರಾನೈಟ್)ಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇಷ್ಟು ಬೃಹತ್ ಕೊಳದ ಕೊನೆಯವರೆಗೂ ಇಳಿಯಲು ೫೪ ದೊಡ್ಡಮೆಟ್ಟಿಲುಗಳನ್ನು ಕಲ್ಪಿಸಲಾಗಿದೆ. ಸುತ್ತಲೂ ಉಳಿದ ಭಾಗದಲ್ಲಿ ೪೪ ಚಿಕ್ಕಪಾವಟಿಗಳು ಇವೆ. ಕೊಳದ ಎಂಟು ದಿಕ್ಕಿನಲ್ಲೂ ಂದರಮಂಟಪಗಳನ್ನು ಹಿಂದೂ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿತ್ತು. ಈಗದು ಬಹುತೇಕ ನಾಶವಾಗಿದ್ದು, ಆರು ಮಂಟಪಗಳು ಮಾತ್ರ ಉಳಿದಿವೆ. ಇದರ ಗೋಪುರಗಳು ಹಂಪಿಯ ಕಮಲ ಮಹಲ್, ಅಶ್ವಶಾಲೆ, ಗಜಶಾಲೆಯ ಗೋಪುರಗಳು, ವಿಠಲಮಂದಿರದ ಹತ್ತಿರವಿರುವ ಪುಷ್ಕರಣಿಯ ಮಂಟಪದ ಗೋಪುರಗಳನ್ನು ಹೋಲುತ್ತವೆ.
ಅಸಲು ಸೌಂದರ್ಯವಿರುವುದು ಪುಷ್ಕರಣಿಯ ಮಧ್ಯ ಭಾಗದಲ್ಲಿ ನಿರ್ಮಿಸಿರುವ ೨೧ ಅಡಿ ಅಗಲ, ೨೧ ಅಡಿ ಉದ್ದದ ವಸಂತಮಂಟಪದಲ್ಲಿ. ಇದರ ಭವ್ಯತೆಯನ್ನು ಹೇಳಿಮುಗಿಯುವುದಿಲ್ಲ ಬಿಡಿ. ಕಲ್ಲಿನತೇರಿನಂತೆ ಕಾಣುವ ಈ ಮಂಟಪ ನಾಲ್ಕು ದಿಕ್ಕಿನಿಂದ ಒಂದೇ ರೀತಿಯಿದೆ. ಒಟ್ಟು ೫ ಅಂತಸ್ತುಗಳಿವೆ. ಕಲ್ಲುಬಂಡೆಯ ಮೇಲೆ ಭದ್ರವಾದ ನಿರ್ಮಣ. ಕೆಳ ಅಂತಸ್ತು (ನೆಲಮಹಡಿ) ಸರಳಗೋಡೆ. ನಂತರ ರಹಸ್ಯಮಹಡಿ, ಮೂರನೆಯದ್ದು ವೀಕ್ಷಣಾಮಹಡಿ, ಅದರ ಮೇಲೆ ಉಯ್ಯಾಲೆಮಹಡಿ, ಕೊನೆಯಲ್ಲಿ ಗೋಪುರಮಹಡಿ, ನೆಲಮಹಡಿಗೆ ಒಂದನೇ ಅಂತಸ್ತಿನಲ್ಲಿ ಮಧ್ಯದಿಂದ ಮಾತ್ರ ಒಳಗೆ ಹೋಗಬಹುದು. ಆದರೆ ಈಗ ಇದನ್ನು ಮುಚ್ಚಲಾಗಿದೆ. ರಕ್ಷಣಾ ಮಹಡಿ ಒಳಗಿಂದ ನೆಲಮಹಡಿಗೆ ಹೋಗಿ ಅಲ್ಲಿಂದ ಪೂರ್ವದಿಕ್ಕಿನ ಸುರಂಗಮಾರ್ಗದ ಮೂಲಕ ಹೊರಗೆ ಹೋಗುವಂತೆ ವ್ಯವಸ್ಥೆ ಇತ್ತಂತೆ. ಎರಡನೇ ಮಹಡಿಯಲ್ಲಿ ಬಾಲ್ಕಾನಿ ಇದೆ. ವೀಕ್ಷಣಾ ಗ್ಯಾಲರಿಯಾಗಿ ಇದನ್ನು ಉಪಯೋಗಿಸಬಹುದು. ವೀಕ್ಷಣಾ ಮಹಡಿ ಮಧ್ಯೆ ಕಮಾನಿನ ಗೂಡಿನ ತರಹ ರಚಿಸಲಾಗಿದೆ. ಬಾಲ್ಕನಿಗಳಿಗೆ ಬೋದಿಕೆಗಳನ್ನು ಆಧಾರಮಾಡಿ, ತುದಿಯಲ್ಲಿ ಮೆಲಾರ್ನ್‌ನಿಂದ ಅಲಂಕರಿಸಲಾಗಿದೆ. ಮೂರನೇ ಮಹಡಿಯಲ್ಲಿ ಹಿಂದೆ ವಸಂತಕಾಲದಲ್ಲಿ ಪುಷ್ಕರಣಿ ಸುತ್ತ ತೆಪ್ಪದಲ್ಲಿ ದೇವರನ್ನು ಕೂಡಿಸಿ, ಸುತ್ತಿಸಿ ನಂತರ ಉಯ್ಯಾಲೆ ಮಂಟಪದಲ್ಲಿ ದೇವರನ್ನು ಕುಳ್ಳಿರಿಸಿ ಉತ್ಸವ ಮಾಡುತ್ತಿದ್ದರಂತೆ. ನಂತರ ಗೋಪುರ ಮಹಡಿ. ಇದರ ಗೋಪುರವನ್ನು ಕುಂಬಳಕಾಯಿಯಂತೆ ನಿರ್ಮಿಸಲಾಗಿದೆ. ಕೊಣೆಯ ಗೋಪುರ ಮಹಡಿಯಲ್ಲಿನ ಸೂಕ್ಷ್ಮ ಕುಸರಿಯೇ ಇಡೀ ಪುಷ್ಕರಿಣಿಗೆ ಕಳಶವಿಟ್ಟಂತಾಗಿ ಗಮನ ಸೆಳೆಯುತ್ತದೆ. ಮಂಟಪದ ನೆಲಮಹಡಿ ಆರು ಅಡಿ ಎತ್ತರವಿದ್ದು, ಉಳಿದ ಮಹಡಿಗಳು ತಲಾ ೧೦ ಅಡಿ ವಿಸ್ತಾರವಿದ್ದು, ಸಂಪೂರ್ಣ ತಳದಿಂದ ಗೋಪುರದವರೆಗೆ ಇದರ ಎತ್ತರ ಸುಮಾರು ೬೦ ಅಡಿ ಇದೆ. ಈ ಮಂಟಪದಿಂದ ನೀರು ಹೊರಗೆ ಚಿಮ್ಮುವ ವ್ಯವಸ್ಥೆ ಇತ್ತಂತೆ. ಹಾಗಾಗಿ ಇದಕ್ಕೆ ಸ್ಥಳೀಯರು ಕಾರಂಜಿ ಮಂಟಪ ಎಂದೂ ಇದನ್ನು ಕರೆಯುತ್ತಾರೆ.
ವಿಶೇಷ ವೆಂದರೆ ಏನಿಲ್ಲವೆಂದರೂ ಈ ಮಂಟಪ ನಿರ್ಮಿಸಿ ೫೦೦ಗಳಾಗಿವೆ. ಮಳೆ ಗಾಳಿ ಬಿಸಿಲೆನ್ನದೇ ಇದು ನಿಂತಿದೆ. ಇಂದಿಗೂ ಒಂದಿನಿತೂ ಇದಕ್ಕೆ ಧಕ್ಕೆ ಗಿಲ್ಲ. ಪುಷ್ಕರಣಿಯಲ್ಲಿ ಸುತ್ತಲಿನ ಒಂದೇ ಸಾಲಿನ ಮೆಟ್ಟಿಲಿನಲ್ಲಿ ಒಂದೇ ಸಮತಟ್ಟದಲ್ಲಿ ನೀರು ನಿಲ್ಲುವಂತೆ ರಚಿಸಿರುವುದು ಅಂದಿನ ತಾಂತ್ರಿಕ ನೈಪುಣ್ಯಕ್ಕೆ ಸಾಕ್ಷಿ. ಇನ್ನೊಂದು ಗಮನಿಸಲೇ ಬೇಕಾದ ಸಂಗತಿಯೆಂದರೆ ಇಡೀ ಹೊಂಡ ಇರುವುದು ಕಲ್ಲು ಬಂಡೆಯ ಮೇಲೆ. ಹೇಗೆ ನೋಡಿದರೂ ಇಲ್ಲಿ ನೀರಿನ ಸೆಲೆ ಸಿಗಲು ಸಾಧ್ಯವಿಲ್ಲ. ಮಳೆಯೊಂದೇ ಇದಕ್ಕೆ ಆಧಾರ. ಮಳೆಗಾಲದಲ್ಲಿ ಪಕ್ಕದ ಜಮೀನು, ಭೂಮಿಯಲ್ಲಿ ಬಿದ್ದ ನೀರು, ಈ ಪುಷ್ಕರಣಿಯ ದಕ್ಷಿಣಕ್ಕಿರುವ ಅಗಲವಾದ ಮಣ್ಣಿನ ಗುಂಡಿಗೆ(ಆನೆಹೊಂಡ ) ಬಂದು ಶೇಖರವಾಗುತ್ತದೆ. ಅಲ್ಲಿಂದ ಕತ್ತರಿಯಂತೆ ನಿರ್ಮಿಸಿರುವ ತೂಬಿನಲ್ಲಿ ಬಂದು ಅಲ್ಲಿ ಶುದ್ಧೀಕರಣ ಪ್ರಕ್ರಿಯೆಗೊಳಪಡುತ್ತದೆ. ನಂತರ ದಕ್ಷಿಣ ದಿಕ್ಕಿನಲ್ಲಿರುವ ಕಲಾತ್ಮಕ ಜಲಹರಿ ಮಂಟಪದ ಮೂಲಕ ಪುಷ್ಕರಣಿಗೆ ನೀರು ಬರುತ್ತದೆ. ಹೆಚ್ಚಾದ ನೀರು ಈಶಾನ್ಯ ದಿಕ್ಕಿನ ಮಂಟಪದ ತೂಬಿನ ಮಂಟಪದ ಮೂಲಕ ಹೊರಹೋಗುವ ವ್ಯವಸ್ಥೆ ಮಾಡಿದ್ದಾರೆ. ಈಗ ಹೂಳು ತುಂಬಿ ಈ ತೂಬು ಕಾರ್ಯ ನಿರ್ವಹಿಸುತ್ತಿಲ್ಲ.
ಇಲ್ಲಿನ ಪುಷ್ಕರಣಿಯ ಎಲ್ಲಾ ಮಂಟಪಗಳಲ್ಲೂ ವಿವಿಧ ದೇವತಾ ಮೂರ್ತಿಗಳು, ಹೂವಿನ ಬಳ್ಳಿ, ನಿರ್ಮಾತೃಗಳ ಉಬ್ಬುಶಿಲ್ಪಗಳು ಶ್ರೀರಾಮ, ಆಂಜನೇಯ, ವೆಂಕಟೇಶ, ಗೋಪಾಲಕೃಷ್ಣ, ಗಣಪತಿ, ಶಿವಪಾರ್ವತಿ, ಸೂರ್ಯ, ಆಯಾ ದಿಕ್ಪಾಲಕರ ಮಂಟಪದಲ್ಲಿ ಅಷ್ಟ ದಿಕ್ಪಾಲಕರಾದ ಈಶಾನ್ಯ, ಇಂದ್ರ, ಯಮ, ವಾಯು, ಕುಬೇರರ ಉಬ್ಬುಶಿಲ್ಪಗಳು, ನಾಗದೇವತೆಗಳು, ಮೃಗಪುರುಷ ಇತ್ಯಾದಿ ವಿಗ್ರಹಗಳಿವೆ. ಒಟ್ಟಿನಲ್ಲಿ ಈ ಪುಷ್ಕರಣಿ ದಕ್ಷಿಣ ಭಾರತದ ಸುಂದರ ಪುಷ್ಕರಣಿಯಲೊಂದು ಎನ್ನಲಡ್ಡಿಯಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಮಳೆ ಸಂಗ್ರಹದ ತಾಂತ್ರಿಕತೆ ಇಂದಿನ ಆಧುನಿಕ ಯುಗಕ್ಕೂ ಮಾದರಿ.

Monday, May 11, 2009

IS BOTTLED WATER BAD FOR THE PLANET?

Is buying bottled water about as green as firing up a million patio heaters? Is our mains supply safe to drink, or is it contaminated with drugs? And can you really demand a restaurant serves you tap water? We sift through the hype…

The H2O furore all comes down to carbon. A litre of tap water generates 0.3g of CO2, while a 750ml bottle of mineral water can have a footprint up to 300 times higher. ‘Bottled water is expensive, unnecessary and damages the environment,’ says Richard Watts from eco campaigners Sustain.However, the Bottled Water Association (BWA) has a few stats of its own. ‘We only account for 0.03% of total UK carbon emissions,’ says Liz Bastone. ‘There’s a misconception about bottled water being flown around the globe, when 75% comes from the UK.’While bottled H2O is only a tiny part of the global warming issue, water is in a unique position in that it’s literally on tap. ‘You can’t avoid the fact there is really no need for bottled water, except in emergencies,’ says Richard.


DOES RECYCLING MAKE BOTTLED WATER ECO-FRIENDLY?

Most bottled water now comes in PET packaging, which is 100% recyclable and requires less plastic in the first place to make it. One mineral water company told Celebs On Sunday that these facts made its product ‘kind to the environment’. True? Not according to Sustain. ‘Only around 20% of plastic bottles get recycled, and the majority ends up in a landfill or being dumped at sea,’ says Richard. ‘Recycling does spare resources, and I’d encourage everyone to do it, but most bottles are transported to China for recycling, which has its own environmental cost. It also takes a lot of petrol to make the bottles in the first place, even if they are re-used.’


IS TAP WATER SAFE?

The mains supply is independently tested for everything from bugs to chemicals, and last year 99.96% of water met government and World Health Organisation standards. And that other 0.04%? ‘The most common problem is rusty iron deposits, which are not harmful but turn water orange,’ says Sue Penniston from the Drinking Water Inspectorate. ‘Our last prosecution was of a company that supplied water containing the parasite cryptosporidium, which made a number of people ill. But that is incredibly rare.’ Tellingly, even the Bottled Water Association doesn’t make any health claims for mineral water over tap. ‘It’s an issue of choice, not health, and we wouldn’t question the safety of tap water,’ says BWA’s Liz.


IS MY WORK’s WATER COOLER ECO-FRIENDLY?

Sustain advocates using coolers that filter the mains supply rather than ones that use bottled water. However, the British Water Cooler Association, currently calculating the carbon footprint for both types, says it’s not a simple matter of good coolers vs bad.‘The bottles used in water coolers are refilled for five years before being recycled, and none end up in landfill,’ says Michael Barnett from the BWCA. If your office has a water cooler, make sure you are taking advantage of the BWCA scheme to collect cups for recycling.


IS TAP WATER POLLUTED BY DRUGS?

There have been some alarming headlines about drugs, such as the Pill, trickling into our water supply, but the truth is more complex. ‘This scare stems from an Environment Agency report about drug residues found in river water, which people then wrongly equated to drinking water,’ says Sue from DWI. ‘Although some of the UK’s drinking water is sourced from rivers, it’s purified before reaching the tap.’An independent report found water treatment reduced drug residues to negligible levels, and even in the worst case scenario, where tiny residues from all the different types of painkillers were grouped together, tap water showed ‘no significant risk to health’.


SHOULD I FILTER TAP WATER?

Filters get the eco thumbs up from Sustain, and can improve the taste of tap water. ‘Filters take out chlorine, which is necessary for killing bacteria but can affect taste,’ says Anna Gilbert from Brita (www.brita.net). ‘We don’t make any health claims for filtering, though, because tap water is already safe. Filters can further reduce residues, such as pesticides, but these are already at safe levels in tap water.’ The one exception is if your house has lead piping, which can contaminate tap water. ‘Water is monitored for lead levels, but only when it’s in the mains,’ says Sue. Filtering removes lead by more than 90%. If you have lead pipes, your water company can test lead levels for you.


CAN A RESTAURANT REFUSE ME TAP WATER?

Absolutely not, so stand your ground if a restaurant claims they can’t provide tap water on ‘regulation’ grounds. ‘All restaurants need a fresh water supply and there is no reason why they can’t serve tap water,’ says Eve Buckland from the Consumer Council for Water. ‘You don’t need a license for it. Restaurants should offer tap water just as they do salt and pepper. UK consumers have invested £70 billion in the water industry since privatisation and we should demand our money’s worth.’


HOW CAN I MAKE MY WATER GREENER?

Drink tap water at home and chill or filter it if you don’t like the taste. Blind tests show people can’t tell the difference between bottled water and chilled tap water.Buy a reusable bottle to carry tap water when you’re out and about.Always recycle plastic bottles and support water cooler cup recyling schemes.Order tap water at restaurants.If you do buy bottled water, buy British to reduce food miles, and look for companies who are investing in carbon offsets or biodegradable bottles, such as carbon-neutral Belu (www.belu.org). But bear in mind that all bottles require energy to make.


Question the habit of bottled water
Some daily routines are built into our lives and we fail to stop to contemplate why. I never questioned making French toast with orange juice as my mother taught me, until someone told me therecipe actually calls for milk. I never questioned drinking bottled water until a newspaper story revealed the impact of my daily mindless decision. To probe why an average American chooses bottle over faucet would likely elicit vague responses.Linfield tries to instill a spirit of critical thinking in its students, from the first day of Colloquium to commencement. And in this spirit,

I question: Why do millions of Americans drink bottled water?

The answer: the fitness craze and advertising. It wasn’t always fashionable to wake up early and hit the treadmill. This health trend has brought water to the forefront of national thought. Now, in addition to four Diet Cokes and two cups of coffee, Americans add a liberal dose of bottled water, preferably one with a brand name. Americans rarely stop to make informed decisions. They have no time to painstakingly weigh the pros and cons of every seemingly mundane and routine decision. America never thought about the consequences of her actions when 24-packs of water began to fly off the shelves atCostco. Like AIDS without Bono or global warming without Al Gore, bottled water is alone. No celebrity has come out against bottled water. No politician is trumpeting the end of tap water. No incriminating photos of Dasani and Aquafina in a compromising position have flashed across the grocery store racks. Only the mayors ofAmerica, a decidedly unsexy group, declared themselves against bottled water for city employees. I may not be a celebrity, but I do care about Mother Earth.

Why are you drinking bottled water? Is it because it is easier to stay hydrated? Buy a reusable water bottle. It costs the same as four disposable ones, but lastsindefinitely longer. Plus, most are dishwasher safe. Is it because bottled water is cleaner? Natural Resources Defense Council studied bottled water. Its 1999 study found33 percent of bottled water exceeded state standards for bacterial and/or chemical contamination. Less than half of the bottles were found to be pure. For the full results, visit www.nrdc.org/water. Is it because it tastes better than tap water? The same study found 25 percent of bottled water is filled from a municipal water source. Today, 60 million disposable bottles of water will be thrown away. The average American recycles only 22 percent of bottles used. Though you as an Oregon college student may not be average, you may not realize the impact of your decision. Even if you toss your used bottle into the new co-mingled recycling bins behind your residence hall, it’s not enough. The production of the plastic bottles uses additional fossil fuels and releases chemicals into the air. After calling my mother, I now know why I use orange juice instead of milk. Do you know why you drink bottled water? Defy the expectations of Americans and make a smart decision not to drink bottled water. Save your money for your student loans. Don’t wait for a celebrity to denounce it. Start a grassroots trend here at Linfield and spread it to everyone you know.

Friday, May 1, 2009

ಚುನಾವಣಾ ಪ್ರಣಾಳಿಕೆಯಲ್ಲಿ ಹಸಿರ ಉಸಿರೇ ಇಲ್ಲ

ಪ್ರತಿ ಚುನಾವಣೆ ಬಂದಾಗಲೂ ನಾನಾ ಪಕ್ಷಗಳವರು ಪ್ರಣಾಳಿಕೆಗಳ ರೂಪದಲ್ಲಿ ಭರವಸೆಯ ಭರಪೂರವನ್ನೇ ಹರಿಸುತ್ತಾರೆ. ಮರು ದಿನದ ಪತ್ರಿಕೆಗಳಲ್ಲಿ ಅದು ದೊಡ್ಡ ದೊಡ್ಡ ಹೆಡ್ಡಿಂಗ್‌ಗಳಲ್ಲಿ ಅಚ್ಚಾಗಿರುತ್ತದೆ. ನನ್ನ ಕಣ್ಣು ಪತ್ರಿಕೆಗಳ ತುಂಬೆಲ್ಲ ಹುಡುಕಾಡುತ್ತದೆ; ಯಾವುದೇ ಒಂದು ಪಕ್ಷವಾದರೂ ತನ್ನ ಪ್ರಣಾಳಿಕೆಯಲ್ಲಿ ನೀರು-ನೆರಳಿನ ಬಗ್ಗೆ ಪ್ರಸ್ತಾಪ ಮಾಡಿದೆಯೇ ಎಂದು. ದುರದೃಷ್ಟ ಈವರೆಗೆ ನಮ್ಮ ರಾಜಕೀಯ ಪಕ್ಷಗಳಿಗೆ ಒಂದು ಬಾರಿಯೂ ಇಂಥ ವಿಚಾರಗಳು ಪ್ರಮುಖವಾಗಿಯೇ ಇಲ್ಲ.
ತಪ್ಪು ಅವರದ್ದಲ್ಲ ಬಿಡಿ. ಏಕೆಂದರೆ ಅದು ಎಂದಿಗೂ ಚುನಾವಣೆಯ ವಿಷಯವಾಗುವುದೇ ಇಲ್ಲ. ಹಸಿರು, ನೀರು, ಪರಿಸರ ಎಂದೆಲ್ಲ ಬಡಬಡಿಸಿದರೆ ಜನ ಸುಮ್ಮನೆ ನಗುತ್ತಾರೆಯೇ ವಿನಾ, ಅವರಿಗೆ ಮತ ಹಾಕುವುದಿಲ್ಲ. ಈ ವಿಚಾರ ರಾಜಕಾರಣಿಗಳಿಗೂ ಚೆನ್ನಾಗಿ ಗೊತ್ತು. ಹಸಿರು ಸಮೃದ್ಧಿಯಾದರೆ ನಮ್ಮ ಮನೆಗೇನು ಲಾಭ, ನನಗೇನು ಸಿಕ್ಕೀತು ? ನೀರು ನಿರ್ಮಲವಾಗಿದ್ದರೆ ನಾನೇನು ಉದ್ಧಾರವಾಗುತ್ತೇನೆಯೇ? ಇಂಥ ಮನೋಭಾವವನ್ನು ಅರಿತಿರುವುದರಿಂದಲೇ ಪಕ್ಷಗಳು ೨-೩ ರೂಪಾಯಿಗೆ ಅಕ್ಕಿ, ಮನೆಗೊಂದು ಬಣ್ಣದ ಟೀವಿ, ಕೈಗೊಂದು ಮೊಬೈಲು ಹೀಗೆ ಆಮಿಷಗಳ ಪಟ್ಟಿಯನ್ನೇ ಮುಂದಿಡುತ್ತಾ ಹೋಗುತ್ತವೆ. ಅದಕ್ಕೂ ಮುಂದೆ ಹೋಗಿ ‘ನೀವು ಎಷ್ಟು ಬೇಕಾದರೂ ಸಾಲ ಮಾಡಿ, ಅದನ್ನು ತೀರಿಸಬೇಕಾಗಿಯೇ ಇಲ್ಲ. ಭಯ ಬೇಡ ನಾವು ಅಕಾರಕ್ಕೆ ಸಾಲ ಮನ್ನಾ ಮಾಡುತ್ತೇವೆ; ನಿಶ್ಚಿಂತೆಯಿಂದ ಇರಿ’ ಎನ್ನುತ್ತಾರೆ ನಮ್ಮ ನಾಯಕ ವರೇಣ್ಯರು. ಅಷ್ಟೇ ನೋಡಿ ಬೇಡಬೇಡವೆಂದರೂ ನಾವು ಪಕ್ಷಕ್ಕೇ ವೋಟು ಒತ್ತಿ ಬರುತ್ತೇವೆ.
ಇದನ್ನು ಬಿಟ್ಟು, ಜಾಗತಿಕ ತಾಪಮಾನ ನಿಯಂತ್ರಣಕ್ಕೆ ನಮ್ಮ ಪಕ್ಷ ಇಂಥ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದೆ. ನೀರಿನ ಸಂರಕ್ಷಣೆಗೆ ನಾವು ಇಷ್ಟು ಯೋಜನೆಗಳನ್ನು ರೂಪಿಸಲಿದ್ದೇವೆ.....ನಾವು ಅಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಭಾರತದ ಎಲ್ಲ ನದಿಗಳನ್ನೂ ಮಾಲಿನ್ಯ ಮುಕ್ತಗೊಳಿಸುತ್ತೇವೆ....ಈ ಎಲ್ಲ ಭರವಸೆಗಳನ್ನು ಯಾವ ಅಭ್ಯರ್ಥಿಯೂ ಮುಂದಿಡುವುದೂ ಇಲ್ಲ. ಒಂದೊಮ್ಮೆ ಮುಂದಿಟ್ಟರೆ ಅದನ್ನು ನಂಬಿ ನಾವು ಮತ ಹಾಕಿ ಗೆಲ್ಲಿಸುವುದೂ ಇಲ್ಲ. ಬದಲಾಗಿ ಇಂಥ ಮಾತುಗಳನ್ನಾಡುತ್ತ ಚುನಾವಣೆಯಲ್ಲಿ ಮತ ಕೇಳಲು ಹೋದರೆ ನಮಗದು ಹಾಸ್ಯಾಸ್ಪದ ಅನ್ನಿಸುವುದೇ ಹೆಚ್ಚು. ‘ಎಂಥ ಭ್ರಮೆ ಈ ಮನುಷ್ಯನಿಗೆ...ಹೀಗೆಲ್ಲ ಹೇಳಿದರೆ ಗೆಲ್ಲಲು ಸಾಧ್ಯವೇ’ ಎಂದು ನಾವೇ ಅವನನ್ನು ಗೇಲಿ ಮಾಡುತ್ತೇವೆ. ಬೇಕಿದ್ದರೆ ಹಿಂದೊಮ್ಮೆ ನಮ್ಮೆಲ್ಲರ ಹೆಮ್ಮೆಯ ಕಾರಂತಜ್ಜ ಚುನಾವಣೆಗೆ ನಿಂತದ್ದನ್ನು ಒಮ್ಮೆ ನೆನಪಿಸಿಕೊಳ್ಳಿ. ಪರಿಸರ ಹೋರಾಟವನ್ನೇ ವಿಷಯವಾಗಿಸಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಶಿವರಾಮ ಕಾರಂತರು ಚುನಾವಣಾ ಕಣಕ್ಕಿಳಿದಿದ್ದರು. ಹಾಗೆ ನೋಡಿದರೆ ಕಾರಂತರಿಗಿಂತ ಯೋಗ್ಯ ಅಭ್ಯರ್ಥಿ ನಮಗೆ ಬೇರಾರು ಸಿಗಲು ಸಾಧ್ಯ ? ಈ ದೇಶದ ದುರದೃಷ್ಟ, ಅಂಥ ಅಸೀಮ ಇಚ್ಛಾಶಕ್ತಿಯ, ಅತ್ಯಂತ ಮೇಧಾವಿ ವ್ಯಕ್ತಿಯೊಬ್ಬರ ಬೆನ್ನಿಗೆ ನಿಲ್ಲಲು ಯಾವುದೇ ಪ್ರಮುಖ ಪಕ್ಷಗಳೂ ಸಿದ್ಧವಿರಲಿಲ್ಲ. ಅಷ್ಟೇಕೆ ಅವರೆದುರು ಅಭ್ಯರ್ಥಿಗಳನ್ನು ಹಾಕದಿರುವ, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸುವ ಸೌಜನ್ಯವೂ ನಮ್ಮ ಮುಖಂಡರಲ್ಲಿ ಇರಲಿಲ್ಲ. ಕೊನೇ ಪಕ್ಷ ಅಂಥವರೊಬ್ಬರನ್ನು ಚುನಾಯಿಸಿ ನಮ್ಮ ಪಾರ್ಲಿಮೆಂಟ್‌ನ ಘನತೆಯನ್ನು ಹೆಚ್ಚಿಸಬೇಕೆಂಬ ಯೋಚನೆಯೂ ಮತದಾರಪ್ರಭುವಿಗೆ ಬರಲಿಲ್ಲ. ದುರಂತ ಅವರು ಸೋತರು. ಕಾರಂತಜ್ಜನಂಥ ಸಂಭಾವಿತರು ರಾಜಕೀಯಕ್ಕೆ ಬರುವುದು ನಮಗೇ ಬೇಕಿರಲಿಲ್ಲ ಇರಬೇಕು. ನಂತರದ ದಿನಗಳಲ್ಲಿ ಅಂಥ ಸಂದಿಗ್ಧವೇ ನಮ್ಮ ಮುಂದೆ ಬರಲಿಲ್ಲ ಬಿಡಿ.
ಅದಂತಲೇ ಅಲ್ಲ. ಸ್ವಾತಂತ್ರ್ಯೋತ್ತರ ಭಾರತದ ಈ ೧೫ ಚುನಾವಣೆಗಳಲ್ಲಿ ಒಮ್ಮೆಯೂ ಸಹ ಹಸಿರು, ಪರಿಸರ ಚುನಾವಣೆಯ ವಿಷಯವಾಗಲೇ ಇಲ್ಲ. ಕೊನೇ ಪಕ್ಷ ಯಾವುದೇ ಒಂದು ಪಕ್ಷವೂ ಇದನ್ನು ತನ್ನ ಪ್ರಣಾಳಿಕೆಯ ಭರವಸೆಗಳಲ್ಲಿ ಒಂದನ್ನಾಗಿಯೂ ಪರಿಗಣಿಸಲೇ ಇಲ್ಲ. ಹಾಗೆಂದು ವಿಷಯವನ್ನು ಪ್ರಸ್ತಾಪಿಸಿಯೇ ಇಲ್ಲವೆಂದಲ್ಲ. ಪರೋಕ್ಷವಾಗಿ ಅಲ್ಲೊಂದು ಇಲ್ಲೊಂದು ಪರಿಸರದ ವಿಷಯಗಳು ಒಮ್ಮೊಮ್ಮೆ ಇಣುಕುತ್ತವೆಯಾದರೂ ಅದಕ್ಕೆ ಹೇಳಿಕೊಳ್ಳುವ ಮಹತ್ವ ಇರುವುದಿಲ್ಲ. ಒಂದೊಮ್ಮೆ ಆ ಪಕ್ಷ ಅಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿನ ಪರಿಸರದ ಭರವಸೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗಂಭೀರ ನಿರ್ಧಾರವನ್ನೆಂದೂ ತೆಗೆದುಕೊಂಡ ಉದಾಹರಣೆ ಇಲ್ಲ. ಇದು ಹೀಗೇಕೆ ? ಪರಿಸರ ಅಷ್ಟು ಸಣ್ಣ ಸಂಗತಿಯೇ ? ಪ್ರಶ್ನೆಗೆ ಉತ್ತರಿಸುವವರು ಯಾರು ?
ಈ ಚುನಾವಣೆಯಲ್ಲಿ ಸಹ ಕಾಂಗ್ರೆಸ್, ಬಿಜೆಪಿ, ತೃತೀಯ ರಂಗದ ಸದಸ್ಯ ಪಕ್ಷಗಳಲ್ಲದೇ ತೀರಾ ಸ್ಥಳೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು...ಹೀಗೆ ಎಲ್ಲರೂ ತಮ್ಮದೇ ಅಜೆಂಡಾ ಇಟ್ಟುಕೊಂಡು ಕಣಕ್ಕಿಳಿದಿದ್ದಾರೆ. ಆದರೆ, ಹಚ್ಚ ಹಸಿರಿನ ಯೋಚನೆಯೊಂದು ಯಾರ ತಲೆಯಲ್ಲಿ ಸುಳಿದಾಡಿದೆ ? ಮೇಲ್ನೋಟಕ್ಕೆ ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲೂ ಪರಿಸರದ ವಿಷಯ ಇಣುಕಿದೆ. ಭೂ ತಾಪಮಾನದಲ್ಲಿನ ಬದಲಾವಣೆ ಬಗ್ಗೆ ಪ್ರತಿ ಪಕ್ಷದ ಪ್ರಣಾಳಿಕೆಯಲ್ಲೂ ಉಲ್ಲೇಖವಿದೆ. ಪರಿಸರ ರಕ್ಷಣೆ ಬಗ್ಗೆ, ನದಿಗಳ ಮಾಲಿನ್ಯ ನಿಯಂತ್ರಣದ ಕುರಿತು ಹಾಗೂ ನವೀಕರಿಸಬಹುದಾದ ಸಂಪನ್ಮೂಲಗಳ ಮೇಲೆಯೇ ಬಂಡವಾಳ ಹೂಡುವ ಬಗ್ಗೆ ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಎಂಗಳು ತಮ್ಮ ಪ್ರಣಾಳಿಕೆಗಳಲ್ಲಿ ಬದ್ಧತೆ ವ್ಯಕ್ತಪಡಿಸಿವೆ. ಹುಲಿ ಹಾಗೂ ಇತರ ವನ್ಯಪ್ರಾಣಿಗಳ ಉಳಿವಿಗಾಗಿ ಶಾಶ್ವತ ಕಾರ್‍ಯಪಡೆಯೊಂದನ್ನು ರಚಿಸುವುದಾಗಿ ಬಿಜೆಪಿ ಹೇಳಿದೆ.
ಇಷ್ಟಾದರೆ ಮುಗಿದು ಹೋಯಿತೇ ? ಹೇಳಿಕೇಳಿ ನಮ್ಮ ರಾಜಕಾರಣಿಗಳ ಭರವಸೆಗಳೆಂದರೆ ಅವು ಭರವಸೆಗಳಷ್ಟೇ. ಭಾರತದಂಥ ಸಮೃದ್ಧ ನಿಸರ್ಗ ಸಂಪನ್ಮೂಲದ ರಾಷ್ಟ್ರದಲ್ಲಿ ಪರಿಸರವನ್ನು ನಾವು ನೋಡುವ ದೃಷ್ಟಿಕೋನ ಇಷ್ಟಕ್ಕೇ ಸೀಮಿತವಾದರೆ ಸಾಕಾದೀತೆ ? ಹಾಗೆ ನೋಡಿದರೆ ಪರಿಸರದ ವಿಷಯಗಳನ್ನು ನಾವು ದೇಶದ ಇಂದಿನ ಅಭಿವೃದ್ಧಿ ಹಾಗೂ ಆರ್ಥಿಕ ಬದಲಾವಣೆಯ ವೇಗದೊಂದಿಗೆ ಸಮೀಕರಿಸದೇ ಬರೀ ‘ಜನಪ್ರಿಯತೆ’ಯ ಚೌಕಟ್ಟಿನೊಳಗೇಸೀಮಿತಗೊಳಿಸುತ್ತಿದ್ದೇವೆ ಎನ್ನಿಸುತ್ತದೆ. ಯಾಕೆಂದರೆ, ಪರಿಸರದ ಬಗ್ಗೆ ಮಾತಾಡುತ್ತಿರುವ ಪಕ್ಷಗಳೆಲ್ಲ ಅದಕ್ಕೂ ದೊಡ್ಡ ಧ್ವನಿಯಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿವೆ. ಅಸಲಿಗೆ ಸಮಸ್ಯೆ ಇರುವುದೇ ಇಲ್ಲಿ. ಪರಿಸರಕ್ಕೆ ಪೂರಕ ಅಭಿವೃದ್ಧಿ ಎಂಬುದು ನಮ್ಮಲ್ಲಿ ದೂರದ ಮಾತಾಗಿದೆ. ಅವೆರಡೂ ಒಟ್ಟೊಟ್ಟಿಗೇ ಸಾಗಬೇಕೆಂಬ ಪರಿಕಲ್ಪನೆಯಿಂದಲೇ ನಾವಿನ್ನೂ ಬಹುದೂರ ಉಳಿದಿದ್ದೇವೆ. ಪರಿಸರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಅಭಿವೃದ್ಧಿ ಸಾಸುವುದೇ ನಿಜವಾದ ಸವಾಲು.
ಮಾತೆತ್ತಿದರೆ ಪಾಶ್ಚಿಮಾತ್ಯ ರಾಷ್ಟ್ರಗಳ ಮಾದರಿಯನ್ನು ಪ್ರತಿಪಾದಿಸುವ ನಾವು ಇಂಥ ವಿಚಾರದಲ್ಲಿ ಮಾತ್ರ ಐರೋಪ್ಯ ದೇಶಗಳನ್ನು ಅನುಸರಿಸುವುದಿಲ್ಲ ಎಂಬುದೇ ಅರ್ಥವಾಗುವುದಿಲ್ಲ. ಎಲ್ಲಿಕ್ಕಿಂತ ಮಿಗಿಲಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೇ ವೆಸ್ಟ್‌ಮಿನ್‌ಸ್ಟರ್ ಅನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡದ್ದು. ಯುರೋಪ್‌ನಲ್ಲಿ ಪ್ರಮುಖ ರಾಜಕೀಯ ಪಕ್ಷಗಳೆಲ್ಲ ಚುನಾವಣೆಯಲ್ಲಿ ಪರಿಸರ ವಿಷಯವನ್ನು ಬಲವಾಗಿ ಪ್ರತಿಪಾದಿಸುತ್ತವೆ. ಕಡಿಮೆ ಇಂಗಾಲದ ತಂತ್ರಜ್ಞಾನ ಹಾಗೂ ವಾತಾವರಣದಲ್ಲಿನ ಏರುಪೇರು ತಡೆ ಮತ್ತಿತರ ಘೋಷಣೆಗಳು ಅಲ್ಲಿ ಢಾಳಾಗಿ ಸಿಗುತ್ತವೆ. ಆದರೆ, ಐರೋಪ್ಯ ರಾಷ್ಟ್ರಗಳಲ್ಲಿ ಪರಿಸರ ಕುರಿತಾದ ಇಂಥ ಸಂಗತಿಗಳು ಹತ್ತರಲ್ಲಿ ಹನ್ನೊಂದನೆಯದ್ದಲ್ಲ. ಆದಾಗ್ಯೂ, ಒಮ್ಮೆ ಅಕಾರಕ್ಕೆ ಬಂದ ಮೇಲೆ ಪರಿಸರ ಸಂಬಂ ಭರವಸೆಗಳನ್ನು ಈಡೇರಿಸಲು ಅಲ್ಲಿನ ಪಕ್ಷಗಳು ಸೋಲುತ್ತಿವೆ ಎಂಬುದು ಬೇರೆ ಪ್ರಶ್ನೆ. ಸಿಕ್ಕಾಪಟ್ಟೆ ಹೊಗೆ ಹೊರಸೂಸುವ ಬೃಹತ್ ಕೈಗಾರಿಕೆಗಳಿಗೆ ಎಗ್ಗಿಲ್ಲದೇ ಪರವಾನಗಿ ನೀಡುತ್ತಿರುವ ಜರ್ಮನಿ ಸರಕಾರ, ಪರಿಸರ ಉಳಿಸುವ ಭರವಸೆಗಳಿಂದ ಹಿಂದೆ ಸರಿದಿದೆ. ಕಾರು ಹಾಗೂ ಹೊಸ ವಾಹನಗಳನ್ನು ಕೊಳ್ಳುವವರಿಗೆ ಸಬ್ಸಿಡಿ ನೀಡುವುದರಲ್ಲೂ ಸರಕಾರ ಹಿಂದೆ ಬಿದ್ದಿಲ್ಲ.
ಆಸ್ಟ್ರೇಲಿಯದಲ್ಲೂ ಇದೇ ಕತೆ. ಜಾನ್ ಹೋವರ್ಡ್ ಸರಕಾರದ ಪರಿಸರ ವಿರೋ ನೀತಿಗಳನ್ನು ವಿರೋಸುತ್ತಲೇ ಅಕಾರಕ್ಕೆ ಬಂದಿತ್ತು ಅಲ್ಲಿನ ಲೇಬರ್ ಪಾರ್ಟಿ. ಆದರೆ, ಪರಿಸರದ ಬಗ್ಗೆ ಸರಕಾರ ತಾಳಿರುವ ನಿರ್ಲಕ್ಷ್ಯ ನೋಡಿದರೆ ಅಕ್ಕಿ ತಿನ್ನುವವ ಹೋದ ಹೊಟ್ಟು ತಿನ್ನುವವ ಬಂದ ಎಂಬಂತಾಗಿದೆ ಅಲ್ಲಿನ ಪರಿಸ್ಥಿತಿ.
ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಹಸಿರಿನ ಭರವಸೆ ನೀಡುತ್ತಿರುವ ಪಕ್ಷಗಳ ಹಕೀಕತ್ ಆದರೂ ಏನು ? ವಾಸ್ತವ ಏನೆಂದರೆ, ನಮ್ಮ ದೇಶದ ಬಹುಪಾಲು ಜನಸಂಖ್ಯೆ ಪರಿಸರವನ್ನೇ ಅವಲಂಬಿಸಿ ಜೀವನ ರೂಪಿಸಿಕೊಂಡಿದೆ. ಅದು ಭೂಮಿ ಇರಬಹುದು, ನೀರು ಹಾಗೂ ಅರಣ್ಯವಿರಬಹುದು. ಹಾಗಾಗಿ, ಇವರು ಅವಲಂಬಿಸಿರುವ ನೈಸರ್ಗಿಕ ಸಂಪನ್ಮೂಲದ ಉತ್ಪಾದಕತೆ ಹೆಚ್ಚಿಸುವುದೇ ನಿಜವಾದ ಪರಿಸರದ ಇಶ್ಯೂ ಆಗಬೇಕು. ಇದರಿಂದ ಸ್ಥಳೀಯರು ನೈಸರ್ಗಿಕ ಸಂಪನ್ಮೂಲದ ಮೇಲೆ ಅವಲಂಬಿತವಾಗಿರುವ ಅರ್ಥವ್ಯವಸ್ಥೆಯನ್ನು ಬಲಪಡಿಸಿಕೊಂಡು ತಮ್ಮ ಜೀವನ ಸದೃಢಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಪರಿಸರದ ಮೇಲೆ ಸರಕಾರ ಹಾಕುವ ಬಂಡವಾಳದಿಂದ ಸ್ಥಳೀಯರ ಬದುಕು ಹಸನಾಗುವಂತಿರಬೇಕು.
ಕುಡಿಯುವ ಜೀವಜಲಕ್ಕೆ ಜನರು ಅವಲಂಬಿಸಿರುವ ನದಿಗಳು ಮಲಿನವಾಗಕೂಡದು. ಅಭಿವೃದ್ಧಿ ಯೋಜನೆಗಳ ಗತಿ ಬದಲಾಗಬೇಕು. ಏಕೆಂದರೆ, ಜನರ ವಾಸಸ್ಥಾನವನ್ನೇ ಅವು ನುಂಗುತ್ತ ಬದುಕು ಕಸಿಯುತ್ತಿವೆ. ಎಲ್ಲರಿಗೂ ಬಳಕೆಗೆ ಸಿಗುವ ರೀತಿಯಲ್ಲಿ ಜಲ ಸಂಪನ್ಮೂಲದ ವಿಕೇಂದ್ರೀಕರಣವಾಗಬೇಕು.
ಮೇಲ್ನೋಟಕ್ಕೆ ಮಧ್ಯಮ ವರ್ಗ ತಲೆದೂಗುವ ರೀತಿಯಲ್ಲಿ ಒಂದಿಷ್ಟು ಪರಿಸರದ ವಿಷಯಗಳನ್ನು ಪ್ರಸ್ತಾಪಿಸುವುದು ದೊಡ್ಡ ವಿಷಯವಲ್ಲ. ಆದರೆ ಹಾಗೆ ಕೈಗೆತ್ತಿಕೊಂಡ ವಿಷಯದ ಆಳವೆಷ್ಟು ? ಸ್ಥಳೀಯರಿಗೆ ಅಲ್ಲಿನ ಸಂಪನ್ಮೂಲಗಳ ಮೇಲೆ ಹಕ್ಕು ಸಿಗುವಂತೆ ವ್ಯವಸ್ಥೆ ಬಲವಾಗಬೇಕಿದೆ.

‘ಲಾಸ್ಟ್’ಡ್ರಾಪ್: ಪರಿಸರ, ಅಭಿವೃದ್ಧಿ ಎಂಬುದು ಎರಡು ವಿರುದ್ಧ ಧ್ರುವಗಳು ಎಂಬತಾಗಿಬಿಟ್ಟಿದೆ. ನಿಜವಾಗಿ ಈ ದೃಷ್ಟಿಯಿಂದ ನಮ್ಮ ಅಭಿವೃದ್ಧಿಯ ವ್ಯಾಖ್ಯಾನ ಬದಲಾಗುವ ಅಗತ್ಯವಿದೆ.