Wednesday, April 28, 2010

ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು

ಕೃಷಿ ಎಂಬುದು ಸಮಸ್ಯೆ ಅಂತ ಅನ್ನಿಸುವುದು ಯಾಕೋ ? ಸಮಸ್ಯೆಯೇ ಇಲ್ಲದ ಉದ್ಯೋಗ ಅಂತ ಈ ಜಗತ್ತಿನಲ್ಲಿ ಇರಲಿಕ್ಕಾದರೂ ಸಾಧ್ಯವೇ ? ರಾಜಸ್ಥಾನದ ಲಾಪೋಡಿಯಾದ ಜಲಸೇನಾನಿ ಲಕ್ಷ್ಮ ಣ್ ಸಿಂಗ್ ಅತ್ಯಂತ ಮುಗ್ಧವಾಗಿ ಪ್ರಶ್ನಿಸುತ್ತಾರೆ. ‘ನನಗೆ ಈವರೆಗೆ ಇದು ಹೀಗೇಕೆ ಎಂದು ಅರ್ಥವೇ ಆಗುತ್ತಿಲ್ಲ. ಬಹುತೇಕರು ಇದೇ ಧಾಟಿಯಲ್ಲಿ ಮಾತನಾಡುತ್ತಾರೆ. ಈ ಜಗತ್ತಿನಲ್ಲಿ ಕೃಷಿಯಲ್ಲಿ ಇರುವಷ್ಟು ಸಮಸ್ಯೆ ಬೇರಾವುದರಲ್ಲೂ ಇಲ್ಲವೇ ಇಲ್ಲ. ಸಮಸ್ಯೆ ಎಂಬುದು ಇರುವುದು ಕೃಷಿಯಲ್ಲಿ ಮಾತ್ರ ಎಂಬರ್ಥದ ಅವರ ಮಾತುಗಳನ್ನು ಕೇಳಿದಾಗಲೆಲ್ಲ ಅಚ್ಚರಿಯಾಗುತ್ತದೆ. ಕೃಷಿ ಸಮಸ್ಯೆಯಾಗಿ ಕಾಡುವುದಿದ್ದರೆ ಅದಕ್ಕೆ ಅಗತ್ಯ ಸಂಪನ್ಮೂಲವನ್ನು ನಾವು ಹೊರಗಿನಿಂದ ತಂದು ಸಾಸುತ್ತೇವೆ ಎಂದು ಹೊರಟಾಗ ಮಾತ್ರ. ಅದರಲ್ಲೂ ನೀರು ಸ್ಥಳೀಯವಾಗಿ ಲಭ್ಯವಿಲ್ಲದಿದ್ದರೆ ಖಂಡಿತಾ ಕೃಷಿ ಎಂಬುದು ಸಮಸ್ಯೆಯೇ. ಆದರೆ ಅದಕ್ಕಿರುವ ಪರಿಹಾರವನ್ನು ಮಾತ್ರ ನಾವು ಸ್ಥಳೀಯವಾಗಿ ಕಂಡುಕೊಳ್ಳಲು ಹೋಗುವುದೇ ಇಲ್ಲ....’

ಲಕ್ಷ್ಮಣ್‌ಜೀ ಮಾತುಗಳಲ್ಲಿ ನಿಖರತೆ ಇದೆ. ಅನುಭವ ಜನ್ಯ ನುಡಿಗಳವು.-‘ಅದು ಯಾವುದೇ ಪ್ರದೇಶವಿರಬಹುದು ಕೃಷಿ ಸಮಸ್ಯೆಯಾಗಿ ಕಾಡುವುದೇ ಹೊರಗಿನಿಂದ ನೀರನ್ನು ಕೊಡಲು ಆರಂಭಿಸಿದಾಗಿನಿಂದ. ಹೊರಗಿನಿಂದ ಬಂದವರು ಯಾವತ್ತಿಗೂ ಶಾಶ್ವತವಾಗಿರಲು ಸಾಧ್ಯ ಇಲ್ಲ. ಕೃಷಿಯೇ ಜೀವನಾಧಾರವಾಗಿದ್ದ ಲಾಪೋಡಿಯಾ ಮಕಾಡೆ ಮಲಗಿಬಿಟ್ಟಿತ್ತಲ್ಲಾ ಅದಕ್ಕೆ ಕಾರಣವೇ ನೀರು. ಹಾಗೆಂದು ಅಲ್ಲಿನ ಕೃಷಿಗೆ ನೀರನ್ನು ಹೊರಗಿನಿಂದ ತರುವ ಅನಿವಾರ್ಯತೆ ಇದ್ದೇ ಇರಲಿಲ್ಲ. ಆದರೂ ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತೆಂದರೆ ಕೇವಲ ನಿರ್ಲಕ್ಷ್ಯದಿಂದ. ‘ಸೌಹಾರ್ದ ಅಭಿವೃದ್ಧಿ’ಯ ಪರಿಕಲ್ಪನೆ ನಮ್ಮ ಗಾಮೀಣ ಜನಮಾನಸದಿಂದ ಯಾವತ್ತು ದೂರಾಯಿತೋ ಅವತ್ತೇ ನೀರು ಊರಿಗೆ ಊರನ್ನೇ ಬಹಿಷ್ಕರಿಸಿ ಹೊರನಡೆಯಿತು. ಹೋಗುವಾಗ ಒಂಟಿಯಾಗಿ ಹೋಗಲಿಲ್ಲ. ಊರವರ ಸುಖವನ್ನು, ಕೃಷಿಯ ಸಮೃದ್ಧಿಯನ್ನು, ಪಾರಿಸಾರಿಕ ಸೌಂದರ್ಯವನ್ನು, ಜೈವಿಕ ನೆಮ್ಮದಿಯನ್ನು ...ಹೀಗೆ ಒಂದರ ಹಿಂದೆ ಒಂದರಂತೆ ಎಲ್ಲವನ್ನೂ ಕರೆದುಕೊಂಡೇ ಹೊರಟಿತ್ತು...ಅವೆಲ್ಲವೂ ಮತ್ತೆ ಊರಿನತ್ತ ಮುಖ ಮಾಡುವುದೇ ನೈಜ ಅಭಿವೃದ್ಧಿ ಎಂದು ನಿರ್ಧರಿಸಿದೆವು. ಮೊದಲು ಹೋದವರು ಮೊದಲು ವಾಪಸಾಗಬೇಕು; ಅವರು ಬಂದರೆ ಉಳಿದೆಲ್ಲರೂ ವಾಪಸಾಗುತ್ತಾರೆ ಎಂದುಕೊಳ್ಳುವ ಹಾಗೆಯೇ ಇಲ್ಲ. ಮೊದಲು ಹೋದ ನೀರನ್ನು ಕರೆತರುವ ಮೊದಲು, ಮೊದಲಿದ್ದ ಎಲ್ಲರನ್ನೂ ಮೊದಲಿನಂತೆಯೇ ಸುಸ್ಥಿತಿಗೆ ತಂದಿಡಬೇಕಾದ ಅಗತ್ಯವಿತ್ತು. ಇದಕ್ಕೆ ತಗುಲಿದ ಸಮಯ ಬರೋಬ್ಬರಿ ೩೦ ವರ್ಷಗಳು. ಯಾವುದು ಮೊದಲು ಬಂತು, ಯಾವುದು ಕೊನೆಗೆ ಎಂಬುದಕ್ಕಿಂತ ಎಲ್ಲವನ್ನೂ ಮರಳಿ ಕರೆ ತರುವ ಹೊತ್ತಿಗೆ ಊರಿನ ಕೃಷಿ ಉತ್ಪಾದನೆ ಎಂಬುದು ಸ್ವತಃ ಕೃಷಿಕರ ಅರಿವಿಗೇ ಬಾರದಂತೆ ಐದು ಪಟ್ಟು ಹೆಚ್ಚಾಗಿತರ್‍ತು....’

ಸುಮಾರು ಎರಡು ತಿಂಗಳ ಹಿಂದೆ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆವರಣದ ಕಾಫೀ ಡೆ ಮುಂದಿನ ಅರಳೀ ಕಟ್ಟೆಯ ನೆರಳಲ್ಲಿ ಲಕ್ಷ್ಮಣ್‌ಜೀ ನಿರರ್ಗಳವಾಗಿ ನೀರಿನ ಬಗೆಗೆ ಮಾತನಾಡುತ್ತಿದ್ದರೆ, ಎದುರಿಗಿದ್ದ ನಾನು ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರ ಗ್ರಾಹಕ ಮಹೇಶ್‌ಭಟ್ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ಇದೇನು ಈ ಮನುಷ್ಯನ ಕೈಲಿ ಮಾಯಾದಂಡವಿದೆಯೇ ? ಮನದಲ್ಲಿ ಮೂಡಿದ ಪ್ರಶ್ನೆಯನ್ನು ಎದುರಿದ್ದ ಅವರಿಗೇ ಎಸೆದರೆ ತೊಟ್ಟ ಅಂಗಿಯಷ್ಟೇ ಅಚ್ಚ ಬಿಳಿಯ ನಗು ನಕ್ಕು ಮಾತ್ತೆ ಮಾತಿಗೆ ಶುರುವಿಟ್ಟುಕೊಂಡರು ಲಕ್ಷ್ಮ ಣ್‌ಜೀ...

ಅನ್ನ ಸಾಗರ್ (ಲಾಪೋಡಿಯಾದಲ್ಲಿ ಜಲಯೋಧರಿಂದ ಪುನರುಜ್ಜೀವನಗೊಂಡ ಬೃಹತ್ ತಾಲಾಬ್) ಅಭಿವೃದ್ಧಿಯಿಂದಲೇ ಆರಂಭಗೊಂಡದ್ದು ಊರಿನ ಅಭಿವೃದ್ಧಿಯ ಶಖೆ. ಇಪ್ಪತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಊರಿನ ಹೊಲಗಳಲ್ಲಿ ಗೋ ತೆನೆಯೊಡೆಯಿತು. ನೀರಾವರಿ ಜಮೀನಿನ ಪ್ರಮಾಣ ೩೦೦ ಹೆಕ್ಟೇರ್‌ನಿಂದ ೧೫೦೦ ಹೆಕ್ಟೇರ್‌ಗೆ ಏರಿತು. ಕೃಷಿ ಉತ್ಪಾದನೆ ಏನಿಲ್ಲವೆಂದರೂ ಐದುಪಟ್ಟು ಹೆಚ್ಚಳ ಕಂಡಿತು. ಒಂದು ಕಾಲದಲ್ಲಿ ಅತ್ಯುತ್ತಮ ಮಳೆಯಾದರೆ ಮಾತ್ರ ನೇಗಿಲು ಹಿಡಿಯುತ್ತಿದ್ದ ಮಂದಿ ಆಟ ಆಡಿಕೊಂಡು ವರ್ಷಕ್ಕೆ ಎರಡು ನೀರಾವರಿ ಬೆಳೆ ತೆಗೆಯಲಾರಂಭಿಸಿದರು. ಕುಟುಂಬದ ಆದಾಯ ಹೆಚ್ಚೆಂದರೆ ೫೦೦ರೂ. ಇದ್ದದ್ದು ೧೭ ಸಾವಿರ ದಾಟಿತು. ಇದೆಲ್ಲ ಮಂತ್ರದಂಡದಿಂದ ಆಗುವಂಥದ್ದಲ್ಲ. ಹಾಗಾಗಿಯೂ ಇಲ್ಲ. ಆದದ್ದೆಲ್ಲ ಸಂಘಟಿತ ಪರಿಶ್ರಮದಿಂದ. ಸಾಮೂಹಿಕ ಹೊಣೆ ನಿರ್ವಹಣೆಯಿಂದ...

ಇನ್ನೂ ಲಕ್ಷ್ಮಣ್ ಮಾತು ಮುಗಿದಿರಲಿಲ್ಲ. ಮಹೇಶ್ ಭಟ್‌ಗೆ ಏನೋ ನೆನಪಾದಂತಾಗಿ ಕಳೆದ ವರ್ಷ ಲಾಪೋಡಿಯಾದಲ್ಲಿ ಸುತ್ತಾಡಿದ ಸಂದರ್ಭದಲ್ಲಿ ಕಂಡ ನುಣುಪಾದ ಹುಲ್ಲೊಂದರ ಬಗ್ಗೆ ಕೇಳಿದರು. ಇವರಿಗೆ ಅದರ ಹೆಸರು ಮರೆತು ಹೋಗಿತ್ತು. ಅವರಿಗೆ ಯಾವುದೆಂಬುದು ತಟ್ಟನೆ ಹೊಳೆಯಲಿಲ್ಲ. ಕೊನೆಗೆ ಲಕ್ಷ್ಮಣ್‌ಸಿಂಗ್‌ರಂತೆ ವಿಭಿನ್ನ ಕ್ಷೇತ್ರದಲ್ಲಿ ಹಲವು ಬಗೆಯ ಸಾಧನೆ ಮಾಡಿದವರ ಬಗೆಗೆ ಹೊರತಂದಿರುವ, ತಮ್ಮದೇ ಸಂಪಾದಕತ್ವದ ನುಡಿಚಿತ್ರಗಳ ಸಂಕಲನ ‘ಅನ್‌ಸಂಗ್’ ಅನ್ನು ಹೊರತೆಗೆದರು. ಕಪ್ಪು ಬಿಳುಪು ಸುಂದರಿಯಂತೆ ಕಂಗೊಳಿಸುತ್ತಿದ್ದ ಮುದ್ದಾದ ಆ ಪುಸ್ತಕದ ಯಾವುದೋ ಪುಟವೊಂದನ್ನು ತಿರುಗಿಸಿ ಮುಂದೆ ಹಿಡಿದರು ಮಹೇಶ್ ಭಟ್. ‘ವೋ ದೂಬ್ ಹೈ’ ಲಕ್ಷ್ಮಣ್ ಇಮ್ಮಡಿಯ ಉತ್ಸಾಹದೊಂದಿಗೆ ಅದರ ಬಗೆಗೆ ಹೇಳಲಾರಂಭಿಸಿದರು.

ಬರಡು ನೆಲವೂ ಹಸಿರಾಗಬೇಕು. ಊರಿನ ಜಾನುವಾರುಗಳ ಹಸಿವೂ ಇಂಗಬೇಕು. ಇದಕ್ಕೆ ಪರಿಹಾರವಾಗಿ ಕಂಡದ್ದು ದೂಬ್. ಅತ್ಯಂತ ಸಣ್ಣ ಎಳೆಯ, ಪುಟ್ಟ ಹುಲ್ಲಿನ ಜಾತಿಯ ಈ ಗಿಡ, ಅತ್ಯಂತ ಕಡಿಮೆ ನೀರಿನಲ್ಲಿ ಚಿಗುರೊಡೆಯಬಲ್ಲುದು. ಲಾಪೋಡಿಯಾದಲ್ಲಿ ಚೌಕಾಪದ್ಧತಿಯನ್ನು ಪರಿಚಯಿಸಿದ ಮೇಲೆ ಅದರ ನಡುವೆಲ್ಲ ಇಂಥ ಗರಿಕೆ ಹುಲ್ಲು ಯಥೇಚ್ಛವಾಗಿ ಬೆಳೆಯಲಾರಂಬಿಸಿತು. ಜಾನುವಾರುಗಳನ್ನು ಅಲ್ಲಿ ಸ್ವತಂತ್ರವಾಗಿ ಮೇಯಲು ಬಿಡಲಾಯಿತು. ಇದರಿಂದ ಮೇವಿನ ಸಮಸ್ಯೆ ನಿವಾರಣೆಯಾದದ್ದು ಮಾತ್ರವಲ್ಲ, ಹೈನುಗಾರಿಕೆ ನಿರೀಕ್ಷಿದ್ದಕ್ಕಿಂತ ವೇಗವಾಗಿ ಅಭಿವೃದ್ಧಿ ಕಂಡಿತು. ಇದೆಲ್ಲಕ್ಕಿಂತ ಹೆಚ್ಚಾಗಿ ಐದೇ ವರ್ಷಗಳಲ್ಲಿ ಗೋತ್ಯಾಜ್ಯಗಳಿಂದ ಬರಡು ಭೂಮಿ ಹಸನಾಯಿತು. ಊರಲ್ಲಿ ವೇಸ್ಟ್ ಲ್ಯಾಂಡ್ ಎನ್ನುವ ಮಾತೇ ಮರೆತು ಹೋಯಿತು. ಇದೇ ರೀತಿ ಸ್ವಾಭಾವಿಕ ಅರಣ್ಯಕ್ಕೆ ಇಂಬು ನೀಡಿದ ಇನ್ನೊಮದು ಬೆಳೆ ‘ಕರೆಂಡಾ’ಕಾಯಿಯದ್ದು. ತೀರಾ ಹೆಮ್ಮರವಾಗೇನೂ ಬೆಳೆಯದ, ಅತ್ಯಂತ ಕಡಿಮೆ ನೀರನ್ನು ಬೇಡುವ ಕರೆಂಡಾ ನೀರನ ಮಟ್ಟವನ್ನು ಹೆಚ್ಚಿಸಿದ್ದಲ್ಲದೇ ಕೃಷಿಗೆ ನೆರಳಾಗಿಯೂ ನಿಂತಿತು. ಸೌಹಾರ್ದ ಅಭಿವೃದ್ಧಿಯೆಂದರೆ ಇದೇ. ಒಂದಕ್ಕೊಂದು ಪೂರವಾಗಿ ಸಾಗುವುದೇ ನಿಜವಾದ ಅಭಿವೃದ್ಧಿ. ಅದೇ ಲಾಪೋಡಿಯಾದ ಪರಿವಥ್ನೆಯ ವಿಶೇಷ.

ಮತ್ತೆ ಲಕ್ಷ್ಮಣ್‌ರ ಮಾತು ಕೃಷಿಯತ್ತ ಹೊರಳಿತು. ಮನಸ್ಸು ನೆನೆಪಿನಾಳಕ್ಕೆ ಜಿಗಿದಿದ್ದಿರಬೇಕು. ಮುಖದಲ್ಲಿ ಒಮ್ಮೆಲೆ ಹೊಳಪು ನುಗ್ಗಿ ಬಂತು....‘ಅದು ೧೯೯೬ನೇ ಇಸವಿ. ಲಾಪೋಡಿಯಾದ ಪಾಲಿಗೆ ಅದು ಸುವರ್ಣ ವರ್ಷ. ಗ್ರಾಮದ ಮನೆಮನೆಗಳಲ್ಲಿನ ಕಣಜ ಮೇವು-ಧಾನ್ಯಗಳಿಂದ ಆ ವರ್ಷ ಅಕ್ಷರಶಃ ತುಂಬಿ ತುಳುಕಿತು. ನೀರೆಚ್ಚರದ ಕೆಲಸಗಳ ನಿಜವಾದ ಫಲ ರಿವಿಗೆ ಬಂದದ್ದು ಆ ವರ್ಷವೇ. ತೀರಾ ಕಡಿಮೆ ಮಳೆ ಸರಾಸರಿಯಲ್ಲಿ ಅವತ್ತು ಅತ್ಯಕ ಕೃಷಿ ಉತ್ಪಾದನೆಯನ್ನು ಊರಿನ ರೈತ ಕಂಡಿದ್ದ. ಅದಕ್ಕೂ ವಿಶೇಷವೆಂದರೆ ಇಷ್ಟಾಗುವ ಹೊತ್ತಿಗೆ ಇಡೀ ರಾಜ್ಯ ಸತತ ಮುರು ವರ್ಷಗಳ ತೀವ್ರ ಬರವನ್ನು ಕಂಡಿತ್ತು. ಆದರೆ ಅದು ಒಂದಿನಿತೂ ಲಾಪೋಡಿಯಾವನ್ನು ಬಾಸಲಿಲ್ಲ. ಅಷ್ಟರ ಮಟ್ಟಿಗಿನ ಜಲ ಸಮೃದ್ಧಿಯನ್ನು ನೀರೆಚ್ಚರದ ಕ್ರಮಗಳಿಂದ ಊರು ಕಂಡಿತ್ತು. ೨೦೦೧ ನೇ ಇಸ್ವಿಯಲ್ಲಂತೂ ರಾಜ್ಯ-ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಯ ಹೆಡ್‌ಲೈನ್‌ಗಳಲ್ಲಿ ಲಾಪೋಡಿಯಾದ ಹೆಸರು ಕಂಗೊಳಿಸಿತ್ತು. ನೀರು ಅಂಥದ್ದೊಂದು ಅವಕಾಶವನ್ನು ಸೃಷ್ಟಿ ಮಾಡಿತ್ತು ಅದುವರೆಗೆ ಲಾಪೋಡಿಯಾದ ಬಗೆಗೆ ಇದ್ದ ಕಳಂಕವೆಲ್ಲಆದೊಂದುೠರಗಾಲ ತೊಳೆದು ಹಾಕಿಬಿಟ್ಟಿತ್ತು. ಇಡೀ ಜಿಲ್ಲೆಯಲ್ಲಿ ಆ ವರ್ಷದ ಬೇಸಿಗೆಯಲ್ಲಿ ಟ್ಯಾಂಕರ್ ನೀರನ್ನು ಮುಟ್ಟದೇ ಜೀವನ ಸಾಗಿಸಿದ್ದರೆ ಅದು ಲಾಪೋಡಿಯನ್ನರು ಮಾತ್ರ. ನಂಬಿದರೆ ನಂಬಿ, ಬಿಟ್ಟರೆ ಬಿಡಿ ಆ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ಒಟ್ಟೂ ಮಳೆ ೩೪೮ ಮಿ.ಮೀ. ಮಾತ್ರ. ಹಾಗಿದ್ದರೂ ಊರಿನ ಬಾವಿಗಳಲ್ಲಿ ಕೇವಲ ೪೫ ಅಡಿಗಳಿಗೇ ನೀರು ಸಿಕ್ಕುತ್ತಿತ್ತು. ನಂತರದ ದಿನಗಳಲ್ಲಿ ಲಾಪೋಡಿಯಾದ ಈ ಮಾದರಿ ಸುತ್ತಲಿನ ೯೦ ಹಳ್ಳಿಗಳಿಗೆ ವಿಸ್ತಾರಗೊಂಡಿತು. ತೋಂಕ್, ಜೈಪುರ ಮತ್ತು ಪಾಲಿ ಸೇರಿದಂತೆ ಹಲವು ಜಿಲ್ಲೆಗಳ ೪೦ ಸಾವಿರ ಕುಟುಂಬಗಳಿಗೀಗ ನೀರ ನೆಮ್ಮದಿ. ೩೦ ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹಸಿರು ಬೆಳೆ ನಳನಳಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಊರಿನ ಪ್ರತಿ ಹೆಣ್ಣು ಮಗಳೂ ಸ್ವಾವಲಂಬಿಯಾಗಿದ್ದಾಳೆ...’

ಲಕ್ಷ್ಮಣ್ ಇನ್ನೂ ಅದೆಷ್ಟೋ ಸಂಗತಿಗಳನ್ನು ಹೇಳುವವರಿದ್ದರು. ಆದರೆ ಸಮಯ ಸಂಕೋಚ ಅದಕ್ಕೆ ಅವಕಾಶ ಕೊಡಲಿಲ್ಲ. ಲಾಪೋಡಿಯಾದ ನೀರ ಬ್ರಹ್ಮನ ಮರು ಸೃಷ್ಟಿಯನ್ನು ಕಣ್ಣಾರೆ ಕಂಡು ಬರುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವರ್ಷದ ದೀಪಾವಳಿ ಬೆಳಗಿನಲ್ಲಿ ನಡೆಯುವ ಜಲ ತೇರಿಗೆ ತಮ್ಮೂರಿಗೆ ಅತ್ಯಂತ ಆತ್ಮೀಯವಾಗಿ ಆಹ್ವಾನಿಸಿದ್ದಾರೆ ಲಕ್ಷ್ಮಣ್‌ಜೀ. ಆ ದಿನಕ್ಕಾಗಿ ಕಾತರ ಹೆಚ್ಚುತ್ತಿದೆ. ಸದ್ಯಕ್ಕೆ ಕಳೆದ ಹತ್ತು ವಾರಗಳಿಂದ ನಡೆಸಿದ್ದ ಲಾಪೋಡಿಯಾದ ಅಕ್ಷರ ಯಾತ್ರೆಗೆ ವಿರಾಮ.

ಉಳಿಸಲು ನೀರು, ಹೊರಟಿದೆ ಭಾವಜಾಗರಣದ ತೇರು

ಲ್ಲಿ ಅದೆಂಥಾ ಸಂಭ್ರಮವಿರುತ್ತದೆ ಎಂದರೆ ಒಬ್ಬೊಬ್ಬರೂ ಮೈಮೇಲೆ ಪರಿವೆಯೇ ಇಲ್ಲದಂತೆ ಹುಚ್ಚೆದ್ದು ಕುಣಿಯುತ್ತಿರುತ್ತಾರೆ. ಭಾಜಾ ಭಜಂತ್ರಿಯ ಲಯಕ್ಕೆ ತಕ್ಕಂತೆ ಅವರ ಹೆಜ್ಜೆಗಳು ಆಡುತ್ತಿರುತ್ತದೆ. ಹೆಂಗಸರು ಮಕ್ಕಳೆನ್ನದೆ ಎಲ್ಲರೂ ಅಲ್ಲಿ ನೃತ್ಯದಲ್ಲಿ ಪಾಲುದಾರರೇ. ವೃದ್ಧರಿಗೂ ಇದರಿಂದ ರಿಯಾಯಿತಿ ಇಲ್ಲ. ಅವರೂ ಹೆಜ್ಜೆ ಹಾಕಬೇಕು. ಗಂಡಸರಂತೂ ತಂತಮ್ಮ ಪೌರುಷಕ್ಕನುಗುಣವಾಗಿ ಸಾಹಸಗಳನ್ನು ಮೆರೆಯುತ್ತಿರುತ್ತಾರೆ. ಬಹುತೇಕ ಗಂಡಸರ ತಲೆಯ ಮೇಲೆ ಹಳದಿ, ಕೆಂಪು, ಬಿಳಿ... ಹೀಗೆ ಒಂದಿಲ್ಲೊಂದು ಗಾಢ ಬಣ್ಣದ ರುಮಾಲು ವಿಜೃಂಭಿಸಿರುತ್ತದೆ. ಪಕ್ಕಾ ಸಾಂಪ್ರದಾಯಿಕ ಬಿಳಿಯ ಧೋತಿ, ಉದ್ದದ ಕುರ್ತಾ ಎಲ್ಲರ ಸಾಮಾನ್ಯ ಉಡುಗೆ. ಮಹಿಳೆಯರ ಗುಂಪಂತೂ ಬಣ್ಣದ ಚಿಟ್ಟೆಗಳ ಸಮೂಹದಂತೆ ಕಂಗೊಳಿಸುತ್ತಿರುತ್ತದೆ. ಬಣ್ಣ ಬಣ್ಣದ ರಾಜಸ್ಥಾನೀ ಉಡುಗೆ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ...

ಊರ ಜಹಗೀರದಾರ ಲಕ್ಷ್ಮಣ್ ಸಿಂಗ್ ನೇತೃತ್ವದಲ್ಲಿ ಒಂದು ತಾಲಾಬ್‌ನಿಂದ ಮತ್ತೊಂದು ತಾಲಾಬ್‌ಗೆ ಹೊರಟ ಮೆರವಣಿಗೆಯದು. ಫಕ್ಕನೆ ನೋಡಿದರೆ ಯಾವುದೇ ಜಾತ್ರೆಯನ್ನು ನೆನಪಿಗೆ ತರಬಲ್ಲ ಸನ್ನಿವೇಶ ಅಲ್ಲಿ ನಿರ್ಮಾಣವಾಗಿರುತ್ತದೆ. ತೇರೆಳೆಯಲು ಪೈಪೋಟಿಯಿಂದ ಮುನ್ನುಗ್ಗುವ ಯುವಕರ ಪಡೆಯೇ ಅಲ್ಲಿದೆ. ಹೌದು, ಅದೂ ಒಂದು ರೀತಿಯ ತೇರಿನ ಮೆರವಣಿಗೆಯೇ. ಅಲ್ಲಿನ ದೇವರು ನೀರು. ಅದು ‘ಜಲತೇರು’ ರಾಜಸ್ಥಾನದ ಒಂದು ಕಾಲದ ತೀವ್ರ ಬರಪೀಡಿತ ಗ್ರಾಮ ಲಾಪೋಡಿಯಾದಲ್ಲಿ ಪುನರ್ ಸ್ಥಾಪನೆಯಾದ ಸಮೃದ್ಧಿಯ ಸೂಚಕವಾಗಿ ಹೊರಟ ತೇರದು. ಸಾಂಸ್ಕೃತಿಕ ಪುನರುಜ್ಜೀವನದ ಪ್ರತೀಕವಾದ ತೇರದು. ಶಾಂತಿ, ಸುಭಿಕ್ಷವನ್ನು ಸಂಕೇತಿಸುವ ತೇರದು.


ಲಕ್ಷ್ಮಣ್ ಸಿಂಗ್ ಅವರ ಪಾಲಿಗೆ ಸಾಂಸ್ಕೃತಿಕ ಪುನರುಜ್ಜೀವನವೆಂದರೆ ಅದು ಕೇವಲ ಭೌತಿಕ ಆಚರಣೆಗಳಲ್ಲ. ಒಂದಿಡೀ ಜೀವನದ ಅವಿಭಾಜ್ಯ ಅಂಗವಾದ ನೀರು ಮತ್ತದರ ಶುದ್ಧತೆ, ಸಮೃದ್ಧಿಯ ಸಂರಕ್ಷಣೆಗೆ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಳ್ಳಬೇಕು. ಪಾರಂಪರಿಕ ಭಾರತದಲ್ಲಿ ಪ್ರಕೃತಿಯ ಆರಾಧನೆಯ ಹಿಂದೆ ಇಂಥದ್ದೇ ಉದ್ದೇಶಗಳಿದ್ದವು. ಸಮುದಾಯ ಸ್ವಯಂಪ್ರೇರಿತವಾಗಿ ಆಚರಿಸುವ ಹಬ್ಬಗಳು, ಅದರ ಸಿದ್ಧತೆಯ ನೆಪದಲ್ಲಿ ನಡೆಸುವ ಕೆಲಸಗಳು ಜಲತಾಣಗಳಿಗೆ ಪೂರಕವಾಗಿರುತ್ತಿದ್ದವು. ಅದನ್ನೇ ಹೊಸ ಸಂಪ್ರದಾಯವಾಗಿ ಲಾಪೋಡಿಯಾದಲ್ಲಿ ಚಾಲ್ತಿಗೆ ತರಲಾಯಿತಷ್ಟೇ ಅಲ್ಲ, ಅದಕ್ಕೊಂದಿಷ್ಟು ವೈಭವದ ಮೆರುಗು ಬರುವಂತೆ ನೋಡಿಕೊಳ್ಳಲಾಯಿತು.


ಇಂಥ ಹಬ್ಬಾಚರಣೆಯ ಹಿಂದೆ ಲಕ್ಷ್ಮಣ್ ಗಮನಿಸಿದ ಇನ್ನೊಂದು ಪ್ರಮುಖ ಅಂಶವೆಂದರೆ ಜಲ ಸಂರಕ್ಷಣೆ ಮತ್ತು ನಿರ್ವಹಣೆಯ ನಿಟ್ಟಿನಲ್ಲಿ ಆ ವರೆಗೆ ಲಾಪೋಡಿಯಾದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಆಚರಣೆಗಳು ನೀರಿನ ಪೋಲು ತಡೆಯುವಲ್ಲಿ ಮತ್ತು ಸುಸ್ಥಿರ ವ್ಯವಸ್ಥಾಪನೆಯಲ್ಲಿ ವಿಫಲವಾಗಿದ್ದವು. ಅವರೇ ಹೇಳುವಂತೆ ‘ಕೃಷಿಯೇತರ ಭೂಮಿಯ ಸದ್ಬಳಕೆ ಹಾಗೂ ಜಲ ಸಂರಕ್ಷಣೆಯ ಅಗತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ಈ ನೆಲದ ಶ್ರೀಮಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಸೂಕ್ತ ಅಸ್ತ್ರವಾಗಬಲ್ಲುದು ಎಂಬುದನ್ನು ಅರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಏಕೆಂದರೆ ದೇವರ ಹೆಸರಿನಲ್ಲಿ ನಡೆಯುವ ಯಾವುದೇ ಕೆಲಸಗಳಿಗೆ ಜನ ಬಹಳ ಶ್ರದ್ಧೆಯಿಂದ ಬರುತ್ತಿದ್ದರು. ಸಂಘಟನಾ ದೃಷ್ಟಿಯಿಂದ ಇದು ಅನುಕೂಲಕಾರಿ ಮಾತ್ರವಲ್ಲ, ನಿರೀಕ್ಷಿತ ಪಾಲ್ಗೊಳ್ಳುವಿಕೆಯೂ ಇಂಥ ಕೆಲಸಗಳಲ್ಲಿ ಹೆಚ್ಚಿರುತ್ತಿದ್ದುದು ಯಶಸ್ಸನ್ನು ಹೆಚ್ಚಿಸುತ್ತಿತ್ತು. ಹೀಗಾಗಿ ಪರಿಸರದ ಪಾವಿತ್ರ್ಯ ಕಾಪಾಡುವ ಭಾರವನ್ನು ದೇವರ ಮೇಲೆಯೇ ಹೊರಿಸಿ ಅದಕ್ಕೊಂದು ಉತ್ಸವದ ಸ್ವರೂಪವನ್ನು ಕೊಡಲಾಯಿತು.’


ಹಾಗೆ ನೋಡಿದರೆ ನಿಸರ್ಗಾರಾಧನೆ ಭಾರತೀಯರಾದ ನಮ್ಮ ಪಾಲಿಗೆ ಹೊಸತೇನೂ ಆಗಿರಲಿಲ್ಲ. ನಿತ್ಯಾಹ್ನಿಕ ಮತ್ತು ವಾರ್ಷಿಕ ಆಚರಣೆಗಳ ಸ್ವರೂಪದಲ್ಲಿ ಜಲತಾಣಗಳನ್ನು ಪೂಜಿಸುವುದು ಲಾಗಾಯ್ತಿನಿಂದಲೂ ನಡೆದುಕೊಂಡೇ ಬಂದಿದೆ. ನೀರೆಂದರೆ ಅದು ಜೀವದಾಯಿ ಎಂಬುದೂ ಇದಕ್ಕೆ ಪ್ರಮುಖ ಕಾರಣ. ಇದನ್ನೇ ಪ್ರೋತ್ಸಾಹಿಸಿದ ಲಾಪೋಡಿಯಾದ ಜಲಯೋಧರ ಪಡೆ, ಅದಕ್ಕೆ ಇನ್ನಷ್ಟು ಒತ್ತು ಕೊಟ್ಟಿತು. ಪರಿಣಾಮ ಪ್ರತಿ ಜಲಾಗಾರದ ಸಮೀಪವೂ ಪುಟ್ಟ ಪುಟ್ಟ ದೇಗುಲಗಳು ಲಾಪೋಡಿಯಾದಲ್ಲಿ ತಲೆ ಎತ್ತಿದವು. ಶಿವ, ದುರ್ಗೆಯರಿಗೆ ಹೆಚ್ಚಿನ ಪ್ರಾತಿನಿಧ್ಯ. ಹೀಗೇಕೆ ಎಂದರೆ ಮತ್ತೆ ಭಾವ ಜಾಗರಣದ ಮಾತುಗಳನ್ನಾಡುತ್ತಾರೆ ಲಕ್ಷ್ಮಣ್‌ಜಿ. ‘ಶಿವ ಇಡೀ ಬ್ರಹ್ಮಾಂಡವನ್ನು ನಿಯಂತ್ರಿಸುವವ. ಅದರಲ್ಲೂ ಪಂಚ ಭೂತಗಳ ಅದೇವತೆ. ಮಾತ್ರವಲ್ಲ ಲಯಕ್ಕೆ ಆತನೇ ಕಾರಣಕರ್ತ. ನೀರಿನ ಪ್ರತಿರೂಪಿ ಗಂಗೆ ಆತನ ಅಡಿಯಾಳು. ಹೀಗಾಗಿ ಜಲತಾಣಗಳಲ್ಲಿ ಶಿವಾರಾಧನೆ ಅರ್ಥಪೂರ್ಣ. ಇನ್ನು ದುರ್ಗೆ ವಿಜಯ ಸ್ವರೂಪಿಣಿ ಎಂಬುದಕ್ಕಿಂತ ಹೆಚ್ಚಾಗಿ ಸ್ತ್ರೀ ಶಕ್ತಿಯ ಪ್ರತೀಕ. ಹೆಣ್ಣಿಗೂ ನೀರಿಗೂ ಅವಿನಾಭಾವ ಸಂಬಂಧ. ಈ ಹಿನ್ನೆಲೆಯಲ್ಲಿ ಶಿವ-ದುರ್ಗೆಯರು ತಾಲಾಬ್‌ಗಳ ಆವರಣದಲ್ಲಿ ಸ್ಥಾನ ಪಡೆದರು’ ಎಂಬುದು ಲಕ್ಷ್ಮಣ್ ವಿವರಣೆ.


ಅಚ್ಚರಿಯ ಸಂಗತಿಯೆಂದರೆ ನೀರ ಸನ್ನಿಯಲ್ಲಿ ಪಾವಿತ್ರ್ಯ, ಸ್ವಚ್ಛತೆ ರಕ್ಷಣೆಗೆ ಇದು ತೀರಾ ಸಹಕಾರಿಯಾಯಿತು. ದೇಗುಲಗಳು ತಲೆ ಎತ್ತಿದ ಮೇಲೆ ನೀರಿನ ಮಾಲಿನ್ಯ ತನ್ನಿಂದ ತಾನೆಯೇ ನಿಯಂತ್ರಣಕ್ಕೆ ಬಂತು ಎನ್ನುವ ಜಲಯೋಧರು ಇದಕ್ಕೆಂದೇ ಪ್ರತೀ ವರ್ಷ ಅದ್ಧೂರಿ ಉತ್ಸವವನ್ನೂ ನಿಗದಿಗೊಳಿಸಿದರು. ಅದು ೧೯೯೦ರ ದೀಪಾವಳಿಯ ಬೆಳಗು. ಊರಿನ ಜೀವ ಸೆಲೆಯೆಂದೇ ಗುರುತಿಸಲಾಗಿದ್ದ ‘ಅನ್ನ ಸಾಗರ’(ಲಾಪೋಡಿಯಾದ ಪ್ರಮುಖ ತಾಲಾಬ್)ದ ಪುನಶ್ಚೇತನ ಕಾರ್ಯ ಆರಂಭಗೊಂಡಿತ್ತು. ಸ್ವಯಂಸೇವಕರ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ನೀರ ಕೆಲಸಕ್ಕೆಂದು ಕರೆದರೆ ಬರುವ ಮನೋಭಾವ ಇನ್ನೂ ಊರ ಮಂದಿಯಲ್ಲಿ ಮೊಳೆತಿರಲಿಲ್ಲ. ವಾರ್ಷಿಕ ಜಲತೇರಿನ ಯೋಜನೆ ಹೊಳೆದದ್ದು ಅದೇ ಸನ್ನಿವೇಶದಲ್ಲಿ. ಪ್ರತೀವರ್ಷ ನವೆಂಬರ್ ಡಿಸೆಂಬರ್‌ನ ಅವಯಲ್ಲಿ ಊರೊಟ್ಟಿನ ಉತ್ಸವ ಪುಟ್ಟದಾಗಿ ನಡೆದುಕೊಂಡು ಬಂದಿತ್ತು. ಅದಕ್ಕೆ ಹೊಸ ಸ್ವರೂಪ ಕೊಡಲು ನಿರ್ಧರಿಸಿದ ಲಕ್ಷ್ಮಣ್‌ಜಿ, ದೀಪಾವಳಿ ಮುಗಿದ ೧೧ನೇ ದಿನ ‘ದೇವ್ನು ಇಗ್ಯಾರಾಸ್’ ಎಂಬ ವಿಶಿಷ್ಟ ಉತ್ಸವವನ್ನು ಆಯೋಜಿಸಲು ನಿರ್ಧರಿಸಿದರು. ಅಂದುಕೊಂಡಂತೆಯೇ ಅದು ಅದ್ಧೂರಿಯಾಗಿ, ಬಹು ವಿಜೃಂಭಣೆಯಿಂದ ಜರುಗಿತು. ಅನ್ನ ಸಾಗರದಿಂದ ಆರಂಭಗೊಂಡ ಉತ್ಸವ ಸುತ್ತಮುತ್ತಲಿನ ಹದಿಮೂರು ನೀರ ತಾಣಗಳನ್ನು ಸಂದರ್ಶಿಸಿ ತೆರೆಕಂಡಿತು. ಮುಂದಿನ ವರ್ಷಗಳಲ್ಲಿ ಅದು ಹೊಸ ಕೆಲಸದ ಆರಂಭದ ದಿನವಾಗಿಯೇ ಗುರುತಿಸಲ್ಪಟ್ಟದ್ದು ವಿಶೇಷ. ಅದರಲ್ಲೂ ವಿಶೇಷವಾಗಿ ಹೂಳೆತ್ತುವುದು, ಕೃಷಿ ಭೂಮಿಯ ಅಭಿವೃದ್ಧಿ ಮತ್ತಿತರ ಮಣ್ಣಿಗೆ ಸಂಬಂಸಿದ ಚಟುವಟಿಕೆಗಳಿಗೆ ಅಂದು ನಾಂದಿ ಹಾಡಿತು. ನಿಗದಿತ ದಿನದಂದು ಊರ ಮಂದಿಯೆಲ್ಲ ಸೇರಿ ದುರ್ಗಾ ಮಾತೆಯ ವಿಗ್ರಹವನ್ನು ಹೊತ್ತು ಪೂರ್ಣಕುಂಭದೊಂದಿಗೆ ಕೃಷಿ ಭೂಮಿಗೆ ಮೆರವಣಿಗೆ ಹೊರಡುತ್ತಾರೆ. ಹಾಗೆ ಹೊರಟ ಮರವಣಿಗೆ ಎಲ್ಲ ಪ್ರಮುಖ ಜಲತಾಣಗಳನ್ನೂ ಸಂದರ್ಶಿಸಿ ಬರುತ್ತದೆ. ನೀರ ಪ್ರೇಮವನ್ನು ಮೂಡಿಸುವುದರೊಂದಿಗೆ ಜಲಜಾಗೃತಿ ಹೆಚ್ಚಿಸುವುದು ಉತ್ಸವದ ಮೂಲ ಉದ್ದೇಶ. ಇಂದಿಗೂ ವರ್ಷದಿಂದ ವರ್ಷಕ್ಕೆ ಸಂಭ್ರಮವನ್ನು ಹೆಚ್ಚಿಸಿಕೊಳ್ಳುತ್ತಲೇ ಈ ಜಲತೇರು ಸಾಗುತ್ತಿದೆ.


ದೀಪಾವಳಿ ಉತ್ಸವವಲ್ಲದೆ ಗಮನ ಸೆಳೆಯುವ ಹಾಗೂ ಪರಿಣಾಮಕಾರಿ ಎನಿಸಿದ ಇನ್ನೊಂದು ಹಬ್ಬ ರಕ್ಷಾಬಂಧನದ್ದು. ಭಾರತೀಯ ಪರಂಪರೆಯಲ್ಲಿ ರಕ್ಷಾಬಂಧನಕ್ಕೆ ಮಹತ್ವದ ಸ್ಥಾನವಿದೆ. ಸೋದರತೆಯ ಪ್ರತೀಕವಾದ ಈ ಹಬ್ಬದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಗಂಡಸರಿಗೆ ರಾಖಿ ಕಟ್ಟುವ ಸಂಪ್ರದಾಯ ಗೊತ್ತಿದ್ದದ್ದೇ. ಇಲ್ಲಿ ರಾಖಿ ಕಟ್ಟಿಸಿಕೊಂಡವ ಅದನ್ನು ಕಟ್ಟಿದ ಹೆಣ್ಣಿನ ಸೋದರನಾಗಿ ನಿಂತು ಆಕೆಯ ರಕ್ಷಣೆಯ ಎಲ್ಲ ಹೊಣೆಯನ್ನೂ ಅಂದಿನಿಂದ ಹೊರುತ್ತಾನೆ ಎಂಬುದು ನಂಬಿಕೆ. ಮಹಿಳೆಯರೂ ಅಷ್ಟೇ ತಾವು ರಾಖಿ ಕಟ್ಟಿದ ವ್ಯಕ್ತಿಯ ಹಿತರಕ್ಷಣೆಯನ್ನು ಸದಾ ಬಯಸುತ್ತಾರೆ. ಇದನ್ನೇ ಲಾಪೋಡಿಯಾದಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆಗೆ ತರಲಾಯಿತು. ಶ್ರಾವಣ ಹುಣ್ಣಿಮೆಯ ದಿನ ಊರಿನ ಎಲ್ಲರೂ ಸೇರಿ ಸುತ್ತಮುತ್ತಲಿನ ಮರಗಿಡಗಳಿಗೆ ರಕ್ಷಾಬಂಧನ ನೆರವೇರಿಸುತ್ತಾರೆ.


ಮರಗಿಡಗಳೆಲ್ಲವೂ ನಮ್ಮ ಸೋದರಿಯರಿದ್ದಂತೆ ಇವೆಲ್ಲವುಗಳ ಸಂರಕ್ಷಣೆಯ ಹೊಣೆಗಾರಿಕೆ ನಮ್ಮದು ಎಂಬ ಪ್ರತಿಜ್ಞೆಯನ್ನೂ ಈ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತದೆ. ಇಲ್ಲಿ ಸ್ತ್ರೀ ಸ್ವರೂಪಿಣಿಯಾದ ಪ್ರಕೃತಿ ಸಹಜವಾಗಿಯೇ ಎಲ್ಲರ ಹಿತರಕ್ಷಣೆಯನ್ನು ಮಾಡುತ್ತದೆ ಎಂಬ ವಿಶಾಲಾರ್ಥವನ್ನು ಗ್ರಹಿಸಲಾಗುತ್ತದೆ. ಅಂದು ಮರಗಳನ್ನು ಹೂವು ಕುಂಕುಮಗಳಿಂದ ಅರ್ಚಿಸಲಾಗುತ್ತದೆ. ಸುಮಾರು ೩೦೦ ಅಡಿ ಉದ್ದದ ಎಳೆಯನ್ನು ರಕ್ಷಾಬಂಧನಕ್ಕಾಗಿಯೇ ಊರಿನ ಎಲ್ಲರೂ ಸೇರಿ ತಯಾರಿಸುತ್ತಾರೆ. ಮಕ್ಕಳು ವೃದ್ಧರು ಎನ್ನದೇ ಈ ಸಂಭ್ರಮದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಒಟ್ಟಾರೆ ಭಾವನಾತ್ಮಕ ನೆಲೆಯಲ್ಲಿ ಆಚರಣೆಗೆ ಬಂದ ಇಂಥ ಹಬ್ಬ- ಉತ್ಸವಗಳು ಕ್ರಮೇಣ ಜನಜೀವನದ ಭಾಗವಾಯಿತು. ಮಾತ್ರವಲ್ಲ ನೀರೆಚ್ಚರದ, ಪ್ರಕೃತಿ ಸಂರಕ್ಷಣೆಯ ಅರಿವು ಮೂಡಿಸುವ ಅತ್ಯುತ್ತಮ ನೆಲೆಯಾಗಿ ನಿಂತಿತು. ಕಾನೂನು-ಶಿಕ್ಷೆಯಂಥ ಶುಷ್ಕ ಕ್ರಮಗಳಿಗಿಂತ ಊರೊಟ್ಟಿನ ಸಂಭ್ರಮ, ಸಮುದಾಯದ ಉತ್ಸವವಾಗಿ ನಡೆದ ಪರಿಸರ ಸಂರಕ್ಷಣೆಯ ಚಳವಳಿ ಮಾದರಿಯಾಗಿ ನಿಂತಿದೆ. ಭಯಕ್ಕಿಂತಲೂ ಪ್ರೇಮ-ಭಕ್ತಿಗಳೇ ಮೇಲು ಎಂಬುದನ್ನು ಲಕ್ಷ್ಮಣ್‌ಜಿ ಆ ಮೂಲಕ ತೋರಿಸಿಕೊಟ್ಟಿದ್ದಾರೆ. ಭಾವ ಬಂಧುರದೊಂದಿಗೆ ಪ್ರಕೃತಿ ಲಾಪೋಡಿಯಾದಲ್ಲಿಂದು ಆರಾಧನೆಗೊಳಪಡುತ್ತಿದೆ. ಊರು ಸುಭಿಕ್ಷವಾಗಲು ಇನ್ನೇನು ಬೇಕು ?

‘ಲಾಸ್ಟ್’ಡ್ರಾಪ್: ದೀಪಾವಳಿ ಉತ್ಸವ ಆರಂಭವಾದ ಬಳಿಕ ಲಾಪೋಡಿಯಾದಲ್ಲಿ ಕೃಷಿ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಇಮ್ಮಡಿಸುತ್ತಿದೆ. ಮೊದಲು ೫೦೦ರಿಂದ ೭೦೦ ರೂ. ಇದ್ದ ಕುಟುಂಬದ ಆದಾಯ ೧೯೯೬ರ ವೇಳೆಗೆ ೧೭ ಸಾವಿರವನ್ನು ದಾಟಿತ್ತು.

ಸುರಿವ ಮಳೆಗೊಂದು ‘ಚೌಕ’ಟ್ಟು ನಿರ್ಮಿಸಿದ ಜಲಯೋಧರು

ಅದೊಂದು ದಿನ ಲಾಪೋಡಿಯಾದ ಪುನರ್ ನಿರ್ಮಾಣದ ಹರಿಕಾರ, ಜಲ ಸೇನಾನಿ ಲಕ್ಷ್ಮಣ್ ಸಿಂಗ್ ಮತ್ತವರ ಜಲ ಯೋಧರ ಪಡೆಯ ಸದಸ್ಯರು, ರಾಜಸ್ಥಾನದ ಪ್ರತಿಷ್ಠಿತ ಉದಯಪುರ ಕೃಷಿ ಕಾಲೇಜಿಗೆ ಭೇಟಿ ನೀಡಿದ್ದರು. ಅಲ್ಲಿನ ಡೀನ್, ಕೃಷಿ ವಿಜ್ಞಾನಿ ಎ.ಸಿ. ಮೆಹನೋತ್ ಅಂದಿನ ದಿನಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದವರು. ಅವರನ್ನು ಭೇಟಿ ಮಾಡಿ ತಮ್ಮೂರಿನ ಕೃಷಿ ಅಭಿವೃದ್ಧಿಯ ಬಗೆಗೆ ಚರ್ಚಿಸಬೇಕು. ಅವರಿಂದ ಒಂದಷ್ಟು ಮಾಹಿತಿ ಸಂಗ್ರಹಿಸಿ ಅಮೂಲ್ಯ ಸಲಹೆಗಳನ್ನು ಪಡೆದು ಬರಬೇಕು ಎಂಬುದು ಲಕ್ಷ್ಮಣ್ ಸಿಂಗ್ ಉದ್ದೇಶವಾಗಿತ್ತು. ಅಷ್ಟು ಹೊತ್ತಿಗಾಗಲೇ ಲಕ್ಷ್ಮಣ್ ಲಾಪೋಡಿಯಾದ ಚಿತ್ರಣವನ್ನು ಒಂದಷ್ಟು ಬದಲಿಸಿಬಿಟ್ಟಿದ್ದರು. ಅಲ್ಲಿನ ತಾಲಾಬ್‌ಗಳು ನಗಲಾರಂಭಿಸಿದ್ದವು. ಮುಂದಿನ ಹೆಜ್ಜೆ ಕೃಷಿ ವ್ಯವಸ್ಥೆಯ ಪುನರ್ ನಿರ್ಮಾಣದ್ದಾಗಿತ್ತು. ಅದಕ್ಕಾಗಿ ತಾಂತ್ರಿಕ ಸಲಹೆ ದೊರಕಬಹುದೆಂಬ ಆಶಾ ಭಾವ ಹೊತ್ತು ಅತ್ಯಂತ ವಿನೀತರಾಗಿಯೇ ಲಕ್ಷ್ಮಣ್ ಕೃಷಿ ಕಾಲೇಜ್‌ಗೆ ಕಾಲಿಟ್ಟಿದ್ದರು.


ಎಷ್ಟಾದರೂ ಅದು ಸರಕಾರಿ ವ್ಯವಸ್ಥೆ. ಅಲ್ಲೊಂದಿಷ್ಟು ಉಡಾಫೆ, ಉದಾಸೀನ, ಅಲ್ಲಿನವರಲ್ಲೊಂದಿಷ್ಟು ಅಹಂ ಇಂಥವೆಲ್ಲಾ ಇರದಿದ್ದರೆ ಹೇಗಾದೀತು ? ಪಕ್ಕಾ ಅದೇ ಪ್ರತಿಕ್ರಿಯೆ ಕೃಷಿ ಕಾಲೇಜು ಮುಖ್ಯಸ್ಥರಿಂದ ದೊರಕಿತ್ತು ಲಕ್ಷ್ಮಣ್ ಮತ್ತವರ ಪಡೆಗೆ. ಕೃಷಿ ಅಭಿವೃದ್ಧಿಯ ಬಗೆಗೆ ಚರ್ಚಿಸುವುದು ಹಾಗಿರಲಿ, ಒಳಗೆ ಬಿಟ್ಟುಕೊಳ್ಳಲೇ ಅವರು ಸಿದ್ಧರಿರಲಿಲ್ಲ. ಕೊನೆಗಂತೂ ಮಹನೋತ್‌ರ ಅದ್ಧೂರಿ ಕ್ಯಾಬಿನ್‌ಗೆ ಹೊಕ್ಕರೆಆವರಿಂದ ತೂರಿ ಬಂದ ಮೊದಲ ಪ್ರಶ್ನೆಯೇ ‘ನೀನು ಓದಿದ್ದೇನು ?’ ಎಂಬುದು. ಅಷ್ಟಕ್ಕೇ ವ್ಯಂಗ್ಯ ನಿಂತಿದ್ದರೆ ಆಗಿರುತ್ತಿತ್ತು. ಹಾಗಾಗಲಿಲ್ಲ. ‘ಹತ್ತನೇ ತರಗತಿಯನ್ನೂ ಮುಗಿಸಲಾಗದ ನಿನಗೆ ನೀರು ನಿರ್ವಹಣೆ, ಕೃಷಿ ಪದ್ಧತಿಗಳ ಬಗೆಗಿನ ವೈಜ್ಞಾನಿಕ ಸಂಶೋಧನೆಗಳಾದರೂ ಹೇಗೆ ಅರ್ಥವಾದೀತು. ಎಲ್ಲರಂತೆ ನೀನೂ ಒಂದಷ್ಟು ಲಫಡಾ ಮಾಡಿ ಬದುಕು ಹೋಗು...’ ಮತ್ತೆ ಒಂದು ಕ್ಷಣವೂ ತಡ ಮಾಡದೇ ಟೇಬಲ್ ಮೇಲಿನ ಕರೆಗಂಟೆ ಒತ್ತಿ ಜವಾನನ ಮೂಲಕ ಬಾಗಿಲನ್ನು ತೋರಿಸಿದ್ದರು ಘನ ಕೃಷಿ ಪಂಡಿತರು.



ಲಕ್ಷ್ಮಣ್‌ಗೇನೂ ಇದು ಹೊಸತಾಗಿರಲಿಲ್ಲ. ಆರಂಭದಿಂದಲೂ ಸರಕಾರಿ ಇಲಾಖೆಗಳಿಂದ ಇಂಥದ್ದೇ ಉದಾಸೀನ, ಅಸಹಕಾರವನ್ನು ಅವರು ಎದುರಿಸಿಕೊಂಡೇ ಬಂದಿದ್ದರು. ಗೋಮಾಳ, ಕೆರೆ ಪರಿಸರ, ಕೃಷಿ ಹಾಗೂ ಒಟ್ಟಾರೆ ಜೈವಿಕ ವ್ಯವಸ್ಥೆ ಹೀಗೆ ಒಟ್ಟೊಟ್ಟಾಗಿಯೇ ಅಭಿವೃದ್ಧಿ ಎಂಬುದು ಸಾಗಬೇಕೆಂಬ ಆಶಯಕ್ಕೆ ಯಾವುದೇ ಸರಕಾರಿ ವ್ಯವಸ್ಥೆಯಿಂದಲೂ ಬೆಂಬಲ ಸಿಗಲೇ ಇಲ್ಲ. ಬದಲಾಗಿ ಟೀಕೆ, ವ್ಯಂಗ್ಯ. ಇದಕ್ಕೂ ಕಾರಣ ಇಲ್ಲದೇ ಇರಲಿಲ್ಲ. ಸರಕಾರಿ ಎಂಜಿನಿಯರ್‌ಗಳು, ತಜ್ಞರೆಂದು ಬೋರ್ಡ್ ಹಾಕಿಸಿಕೊಂಡು, ಫ್ಯಾನು-ಫೋನುಗಳೊಂದಿಗೆ ಕುಳಿತಿದ್ದವರಿಗೆ ತಾವು ಒಂದಕ್ಕೆ ಹತ್ತು ಪಟ್ಟು ವೆಚ್ಚ ತೋರಿಸಿ ರೂಪಿಸಿದ್ದ ಯೋಜನೆಗಳು ಲಕ್ಷ್ಮಣ ಸಿಂಗ್ ಅವರಂಥ ವಾಸ್ತವವಾದಿಗಳ ಕೆಲಸದಿಂದ ವ್ಯರ್ಥವೆನಿಸಿಕೊಳ್ಳುವುದು ಬೇಕಿರಲಿಲ್ಲ. ಹೀಗಾಗಿ ಕಾನೂನಿನ ಹೆಸರಿನಲ್ಲಿ ಅಡ್ಡಿ ಪಡಿಸುತ್ತಲೇ ಬರಲಾಗಿತ್ತು. ಆದರೆ ಭಾರತದ ಹಳ್ಳಿಗಳಿಗೆ ಬೇಕಿರುವುದು ಬೃಹತ್ ಯೋಜನೆಗಳಲ್ಲ. ಸ್ಥಳೀಯ ಅಗತ್ಯಕ್ಕನುಗುಣವಾಗಿ, ಸಹಭಾಗಿತ್ವದ ಅಡಿಯಲ್ಲಿ ರೂಪುಗೊಳ್ಳುವ ಸುಸ್ಥಿರ ವ್ಯವಸ್ಥೆ ಎಂಬುದನ್ನು ಮನಗಂಡಿದ್ದ ಲಕ್ಷ್ಮಣ್ ಅದನ್ನೇ ನಿವಾಸಿಗಳಿಗೂ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಜತೆಗೆ ‘ಸಮಗ್ರ, ಸಮತೋಲಿತ, ಸಮಾನ’ ಎಂಬ ಮೂರು ‘ಸ-ಸೂತ್ರ’ವನ್ನು ರೂಪಿಸಿಕೊಂಡು ಮುಂದೆ ಹೊರಟಿದ್ದರು. ಜಲ ಮರುಪೂರಣಕ್ಕೆ ಆದ್ಯತೆ ಸಿಕ್ಕದ್ದೇ ಈ ಕಾರಣದಿಂದ.
ಇಂಥ ಜಲ ಮರುಪೂರಣ ಕಾರ್ಯಕ್ಕೆ ‘ಚೌಕ ಪದ್ಧತಿ’ ಎಂಬ ಕರೆಸಿಕೊಳ್ಳುವ ಅತಿ ವಿಶಿಷ್ಟ , ಅಷ್ಟೇ ಅಪರೂಪದ ವ್ಯವಸ್ಥೆಯೊಂದನ್ನು ಅಂತಿಮವಾಗಿ ಲಕ್ಷ್ಮಣ್ ಸಿಂಗ್ ಪರಿಚಯಿಸಿದರು. ಪರಿಚಯಿಸಿದರು ಎಂದರೆ ಬಹುಶಃ ತಪ್ಪಾದೀತು. ಏಕೆಂದರೆ ಅದು ಸ್ವತಃ ಲಕ್ಷ್ಮಣರ ಸಂಶೋಧನೆ. ನಿರಂತರ ಅಧ್ಯಯನ, ಸುದೀರ್ಘ ಪ್ರವಾಸಾನುಭವ, ಈ ವ್ಯವಸ್ಥೆಯಲ್ಲಿ ಕಂಡುಂಡ ಸಂಕಷ್ಟ, ಊರಿನ ಪರಿಸರದಲ್ಲಿ ಗೋಚರಿಸಿದ ಲೋಪ ಇವೆಲ್ಲದರ ಫಲವಾಗಿ ರೂಪುಗೊಂಡದ್ದು ಚೌಕ ಪದ್ಧತಿ. ಲಕ್ಷ್ಮಣ್‌ರ ಇಂಥ ಮಳೆ ನೀರಿಂಗಿಸುವ ಚೌಕಗಳು ಇಂದು ವಿಶ್ವ ಸಂಸ್ಥೆಯವರೆಗೆ ಎಲ್ಲೆಡೆ ಅದೇ ಹೆಸರಿನಲ್ಲಿ ಖ್ಯಾತವಾಯಿತು.



ಲಾಪೋಡಿಯಾದಂಥ ಊರಿನಲ್ಲಿ ನಡೆದ ಜಲ ಮರುಪೂರಣ ಕಾರ್‍ಯ ಮಹತ್ವದ್ದೆನಿಸುವುದು, ಅದು ಆಗಾಗ ಬರಕ್ಕೆ ತುತ್ತಾಗುತ್ತಿದ್ದ ಪ್ರದೇಶ ಎಂಬುದಕ್ಕಷ್ಟೇ ಅಲ್ಲ. ಕೃಷಿಗೆ ಅಗತ್ಯ ಲವಣಾಂಶವನ್ನು ಸೂಕ್ತ ಪ್ರಮಾಣದಲ್ಲಿ ಆ ನೆಲದಲ್ಲಿ ಕಾಪಾಡಿಕೊಳ್ಳುವುದೂ ಅನಿವಾರ್ಯ ಎಂಬ ಕಾರಣದಿಂದ ಸಹ. ಲವಣಾಂಶ ಹೆಚ್ಚಿದರೂ ಅದು ಮಣ್ಣನ್ನು ದುರ್ಬಲಗೊಳಿಸುತ್ತದೆ. ಪರಿಣಾಮ ಇಳುವರಿ ಕುಸಿಯುತ್ತದೆ. ಸಾಮಾನ್ಯವಾಗಿ ಮಳೆಯ ಸಂದರ್ಭದಲ್ಲಿ ಲವಣಾಂಶ ತೊಳೆದುಕೊಂಡು ಹೋಗುತ್ತದೆ ಅಥವಾ ಬೇರೆಲ್ಲೋ ಒಂದು ಕಡೆ ಕೇಂದ್ರೀಕರಣಗೊಳ್ಳುತ್ತದೆ. ಇದನ್ನು ತಪ್ಪಿಸಿ ಸಮತೋಲನ ರಕ್ಷಿಸಿದ್ದು ಲಾಪೋಡಿಯಾ ಚೌಕಗಳ ಹೆಗ್ಗಳಿಕೆ. ಲಕ್ಷ್ಮಣ್ ಸಿಂಗ್ ಹಾಗೂ ಊರಿನ ಇತರ ಜಲಯೋಧರು ಕಟ್ಟಿದ ಈ ವ್ಯವಸ್ಥೆಯೇ, ಅವರು ನಿಸರ್ಗದ ಕುರಿತು ಹೊಂದಿದ್ದ ಆಳವಾದ ತಿಳಿವಳಿಕೆಯನ್ನು ಸಾರಿ ಹೇಳುತ್ತದೆ.



ಗ್ರಾಮದ ಮೇಲ್ಭಾಗದಲ್ಲಿರುವ ಊರಿನ ಗೋಮಾಳದಿಂದಲೇ ಇವರ ಕೆಲಸ ಆರಂಭ. ನೆಲದ ಮೇಲೆ ಓಡುವ ನೀರನ್ನು ಹಿಡಿದಿಡಲು ಹಾಗೂ ಗೋಮಾಳವನ್ನು ಪುನಶ್ಚೇತನಗೊಳಿಸಲು ಮಾಡಿದ ತಂತ್ರವಿದು. ಅಲ್ಲಿಂದಲೇ ಚೌಕಗಳ ನಿರ್ಮಾಣ. ಉದ್ದಕ್ಕೂ ಹಾದು ಹೋಗುವ ಸಣ್ಣ ಕಾಲುವೆಗಳು ಹಾಗೂ ಅದಕ್ಕೆ ತಾಗಿಕೊಂಡು ಸಣ್ಣ ಬದುಗಳು. ಒಂದಕ್ಕೊಂದು ಒತ್ತಿ ಕೂರಿಸಿಟ್ಟ ಚೌಕಗಳಂತೆ ಕಾಣುವ ರಚನೆಗಳಿವು. ವಿಸ್ತಾರವಾದ ಗೋಮಾಳ ಭೂಮಿಯನ್ನು ಹೀಗೆ ನೂರಾರು ಚೌಕಗಳಾಗಿ ವಿಭಾಗಿಸಲಾಗುತ್ತಿತ್ತು. ಪ್ರತಿ ಚೌಕದಲ್ಲೂ ಓಡುವ ಮಳೆ ನೀರನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ಹೆಣೆಯಲಾದ ಒಡ್ಡುಗಳು. ಮಳೆಗಾಲದಲ್ಲಿ ಭಾರಿ ವೇಗದಿಂದ ಹರಿಯುವ ನೀರು ಇಡೀ ಪ್ರದೇಶದಲ್ಲಿ ಹರಡಿಹೋಗುವಂತೆ ಮಾಡುವ ಜಾಣ್ಮೆ.



ಈ ಬಗೆಯ ಅಸಂಖ್ಯ ಒಡ್ಡುಗಳ ನಡುವೆ ಹರಿಯುವ ನೀರು ಚೌಕದೊಳಗೆ ತುಂಬಿಕೊಂಡು ಎಷ್ಟು ಸಾಧ್ಯವೋ ಅಷ್ಟು ಆಳಕ್ಕೆ ಇಂಗುತ್ತದೆ. ಹೆಚ್ಚುವರಿ ನೀರು ಅಲ್ಲಿಂದ ಇನ್ನೊಂದು ಚೌಕಕ್ಕೆ ಹರಿಯುತ್ತದೆ, ಇಂಗುತ್ತದೆ. ಅಲ್ಲಿಂದ ಮತ್ತೊಂದು ಚೌಕಕ್ಕೆ... ಹೀಗೇ. ಹೀಗೆ ಇಂಗುತ್ತ ಗೋಮಾಳದ ತಗ್ಗಿಗೆ ಹರಿದುಬಂದ ಉಳಿದ ನೀರು ಸಂಗ್ರಹಗೊಳ್ಳಲು ಅಲ್ಲೊಂದು ಕೆರೆ. ಇದು ಗ್ರಾಮದ ಜನ ಹಾಗೂ ಜಾನುವಾರುಗಳಿಗೆ ಜಲಮೂಲ. ದೊಡ್ಡ ಗಾತ್ರದ ಕೆರೆ ಒಡ್ಡು ನಿರ್ಮಿಸುವುದಕ್ಕೆ ಭಾರಿ ಪ್ರಮಾಣದ ಮಣ್ಣನ್ನು ಅಗೆದು ರಾಶಿ ಹಾಕಬೇಕು. ಗ್ರಾಮಸ್ಥರು ಇಲ್ಲೂ ಜಾಣ್ಮೆ ಮೆರೆದಿದ್ದಾರೆ. ಖಾಲಿ ಗುಂಡಿಗಳನ್ನೆಈ ಕೆರೆಗಳನ್ನಾಗಿ ಪರಿವರ್ತಿಸಿದ್ದಾರೆ. ಬೇಸಗೆಯ ಈ ಸಣ್ಣ ಗುಂಡಿಗಳೇ ಮಳೆಗಾಲದಲ್ಲಿ ಕೆರೆಗಳಾಗಿ ಮಾರ್ಪಡುತ್ತವೆ. ಅವುಗಳ ಸುತ್ತ ಹಸಿರು ತೊನೆಯುತ್ತದೆ. ಗುಂಡಿಗಳ ಸತ್ತಮುತ್ತ, ಚೌಕಗಳಲ್ಲಿ ಇರುವ ನೀರು ಹಾಗೂ ತಂಪಿನ ಪ್ರಮಾಣಕ್ಕನುಗುಣವಾಗಿ ನಾನಾ ಜಾತಿ, ಗಾತ್ರದ ಹುಲ್ಲು ಬೆಳೆಯುತ್ತದೆ. ಇದು ಗ್ರಾಮದ ಸುಮಾರು ಮೂರ್ನಾಲ್ಕು ಸಾವಿರ ಜಾನುವಾರುಗಳಿಗೆ ಆಹಾರ.



ಸಾಂಪ್ರದಾಯಿಕ ಜಲತಜ್ಞರು ಪ್ರತಿಪಾದಿಸುವ ಜಲ ಮರುಪೂರಣ ಗುಂಡಿಗಳಿಗೂ ಈ ಲಾಪೋಡಿಯಾ ಚೌಕಗಳಿಗೆ ವ್ಯತ್ಯಾಸವಿದೆ. ಈ ಚೌಕಗಳು ಅಲ್ಪ ವೆಚ್ಚದ್ದು ಕೂಡ. ಸಾಂಪ್ರದಾಯಿಕ ಗುಂಡಿಗಳಿಗೆ ಹೆಕ್ಟೇರ್‌ಗೆ ೬ ಸಾವಿರ ರೂ.ಗಳಂತೆ ಬೇಕಾದರೆ, ಇದು ಅದಕ್ಕಿಂತ ಮೂರು ಪಟ್ಟು ಕಡಿಮೆ ವೆಚ್ಚದಾಯಕ. ‘ಸರಕಾರಿ ಇಲಾಖೆಗಳು ಪ್ರತಿಪಾದಿಸುವ ಬೃಹತ್ ಇಂಗುಗುಂಡಿಗಳನ್ನು ನಾವು ನೋಡಿದ್ದೇವೆ. ಅವುಗಳಲ್ಲಿ ಸಹಜವಾಗಿ ಹುಲ್ಲು ಬೆಳೆಯುವುದಿಲ್ಲ. ಮೇಲಾಗಿ, ತಗ್ಗು ನೀರಿನಲ್ಲಿ ಬೆಳೆಯುವ ನಾನಾ ವಿಧದ ಹುಲ್ಲುಗಳಿವೆ. ಆಳ ನೀರಿನಲ್ಲಿ ಅವು ಬೆಳೆಯಲಾರವು’ ಎನ್ನುತ್ತಾರೆ ಲಕ್ಷ್ಮಣ್ ಸಿಂಗ್.



ಲಾಪೋಡಿಯಾ ಚೌಕಗಳ ಅನನ್ಯತೆ ಹಾಗೂ ಪರಿಣಾಮಕಾರಿತ್ವವನ್ನು ನಮ್ಮ ಜಲ ತಜ್ಞರು ಹಾಗೂ ನಿಧಾನ ಸರಕಾರಿ ವ್ಯವಸ್ಥೆ ಇನ್ನೂ ಗುರುತಿಸಿಲ್ಲ. ಆದರೆ ಕಣ್ಬಿಟ್ಟು ನೋಡಿ, ಈ ವ್ಯವಸ್ಥೆಯ ಯಶಸ್ಸು ನಿಮ್ಮ ಕಣ್ಣಿಗೇ ಕಾಣಿಸುತ್ತಿದೆ ಇಲ್ಲಿ ಎಂದು ಬೊಟ್ಟು ಮಾಡುತ್ತಾರೆ ಲಕ್ಷ್ಮಣ್ ಸಿಂಗ್. ಸುತ್ತಲೂ ಹಬ್ಬಿರುವ ಮರುಭೂಮಿಯ ನಡುವೆ ಲಾಪೋಡಿಯಾವಷ್ಟೇ ಯಾಕೆ ಹಚ್ಚಹಸಿರಾಗಿದೆ ಎಂಬ ಪ್ರಶ್ನೆಯನ್ನೂ ಅವರು ಒಡ್ಡುತ್ತಾರೆ. ಮತ್ತೆ ಈ ಗೋಮಾಳಗಳಿಗೂ ಯಾವುದೇ ಬೇಲಿಯಿಲ್ಲ, ಇಲ್ಲಿ ಜಾನುವಾರು ಮೇಯಿಸುವುದಕ್ಕೆ ನಿರ್ಬಂಧವೂ ಇಲ್ಲ. ‘ಚೌಕ ನಿರ್ಮಿಸದ ಊರುಗಳನ್ನೇ ನೋಡಿ. ಅಲ್ಲಿನ ಕುಡಿಯುವ ನೀರು ಕೆಟ್ಟದಾಗಿದೆ, ಅದರಲ್ಲಿ ಲವಣಾಂಶ ಹೆಚ್ಚಿದೆ. ನಿರ್ಜಲೀಕರಣ ಹಾಗೂ ಗ್ಯಾಸ್ಟ್ರಿಕ್‌ನಂಥ ಬಾಧೆಗಳು ಅಲ್ಲಿ ಹೆಚ್ಚಿವೆ’ ಎನ್ನುತ್ತಾರೆ ಸಿಂಗ್.

‘ಲಾಸ್ಟ್’ ಡ್ರಾಪ್: ಚೌಕ ಪದ್ಧತಿಯನ್ನು ಪರಿಚಯಿಸುವ ಮುನ್ನ ನಿರಂತರ ಒಂದು ವರ್ಷ ಕಾಲ ಅಧ್ಯಯನ ನಡೆಸಿದ ಲಕ್ಷ್ಮಣ್‌ಜೀ ಗ್ರಾಮದ ನಿಖರ ನಕ್ಷೆಯನ್ನು ಬರೆದಿದ್ದರು. ಇದರಿಂದ ಒಂದೇ ಒಂದು ನಿಸರ್ಗದತ್ತ ಸಸಿಗೂ ಧಕ್ಕೆ ಭಾರದಂತೆ ಎಚ್ಚರ ವಹಿಸಿದ್ದು ಹೆಗ್ಗಳಿಕೆ. ಕೃಷಿ ವಿಜ್ಞಾನಿಗಳೆನಿಸಿಕೊಂಡವರಲ್ಲಿ ಇಂಥ ತಾಳ್ಮೆ, ಸಮರ್ಪಣೆ ಇದ್ದೀತೆ ?


ಕಾದು ಗಾರಾದ ಮಣ್ಣೊಡಲಿನಿಂದ ಮೊಳೆದ ಜೀವಧಾತು

ಒಂದು ಕಾಲದಲ್ಲಿ ಲಾಪೋಡಿಯಾದ ಬಯಲಲ್ಲಿ ಹೋಗಿ ನಿಂತು ನೀವೊಮ್ಮೆ ನೋಡಬೇಕಿತ್ತು. ಆ ಹಳ್ಳಿಯ ಮೇಲೆ ಒಂದು ಗಾಳಿ ಬೀಸಿ ಬಂದರೆ ಸಾಕು ಯಾರೊಬ್ಬರೂ ಕಣ್ಣು ಬಿಟ್ಟುಕೊಂಡಿರಲು ಸಾಧ್ಯವೇ ಇಲ್ಲ. ಮಾತ್ರವಲ್ಲ. ಧೂಳಿನ ತೇರೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮೆರವಣಿಗೆ ಹೊರಟಂತೆ ಕಾಣುತ್ತಿತ್ತು. ಅಷ್ಟೊಂದು ಒಣ ಒಣಗಿ ನಿಂತಿತ್ತು ನೆಲವೆಂಬುದು. ಮಳೆ ಕಾಣದೇ ಅದೆಷ್ಟೋ ವರ್ಷಗಳಾಗಿತ್ತು. ಆಗಾಗ ಬಿದ್ದ ಮಳೆಯ ಒಂದು ಹನಿಯೂ ಅಲ್ಲಿ ನಿಲ್ಲುವ ಪ್ರಶ್ನೆಯೇ ಇರಲಿಲ್ಲ. ಬಿದ್ದ ಮರುಕ್ಷಣಕ್ಕೆ ಅದೆಲ್ಲಿ ಓಡಿ ಹೋಗಿ ಬಿಡುತ್ತಿತ್ತೋ, ಬಹುಶಃ ಬಿದ್ದ ಮಳೆ ಹನಿಗೂ ಗೊತ್ತಾಗುತ್ತಿತ್ತೋ ಇಲ್ಲವೋ. ಒಂದಷ್ಟು ಮರ-ಗಿಡಗಳಾದರೂ ಇದ್ದಿದ್ದರೆ ಅವು ಬಿದ್ದ ಹನಿಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು ಎನ್ನಲು ಅವನ್ನೆಲ್ಲ ಬೇರು ಸಹಿತ ಕಿತ್ತು , ಅದನ್ನೂ ಮಾರಿಕೊಂಡು ಯಾವುದೋ ಕಾಲವಾಗಿತ್ತು ಅಲ್ಲಿನ ಮಂದಿ.

ಲಾಪೋಡಿಯಾದ ಮಂದಿ ಮರೆತದ್ದೇ ಅದನ್ನು. ಯಾವಾಗ ಊರಿನ ಮೇಲೆ ಪ್ರೀತಿ ತೋರಿ ಬರುತ್ತಿದ್ದ ಮಳೆಯನ್ನೂ ಹೊರಗಟ್ಟಲಾರಂಭಿಸಿದರೋ ಅಂದಿನಿಂದಲೇ ಅವರ ವಲಸೆ ಅನಿವಾರ್ಯವಾಯಿತು. ಅಲ್ಪ ಸ್ವಲ್ಪ ನಿಯತ್ತಿದ್ದು, ದುಡಿದೇ ತಿನ್ನಬೇಕೆಂಬ ಮನೋಭಾವದ ಮಂದಿ ಕೆಲಸ ಹುಡುಕಿಕೊಂಡು ಗುಳೆ ಹೋಗಿದ್ದರು. ಪ್ರಾಣಿ ಪಕ್ಷಿಗಳು ವಲಸೆ ಹೋಗದೆ ಬೇರೆ ಮಾರ್ಗವಿರಲಿಲ್ಲ. ಒಂದೊಮ್ಮೆ ಅಲ್ಲಿಯೇ ಉಳಿದರೆ ಹಸಿವಿನಿಂದ ಸಾಯುವ ಮೊದಲೇ ಜನ ಕೊಂದು ತಿನ್ನುವುದು ಖಚಿತವಾಗಿತ್ತು. ಉಳಿದ ಉಢಾಳ ಮಂದಿ ಲಫಡಾಗಳ ಮೂಲಕ ‘ಲಾಪೋಡಿಯಾ’ ಎಂಬ ಹೆಸರುಳಿಸಲು ತಮ್ಮ ಯಥೇಚ್ಛ ಕೊಡುಗೆ ನೀಡುತ್ತಿದ್ದರು.
ಇವತ್ತು ಪರಿಸ್ಥಿತಿ ಸಂಪೂರ್ಣ ತಿರುವು ಮುರುವಾಗಿದೆ. ಮಳೆಗಾಲದಲ್ಲಿ ಲಾಪೋಡಿಯಾವನ್ನೊಮ್ಮೆ ಏರಿಯಲ್ ಸರ್ವೆ ಮಾಡಿದರೆ ಅಲ್ಲಿ ಹಚ್ಚ ಹಸಿರ ಮೇಲು ಹಾಸು ಹೊದೆಸಿದಂತೆ. ಹಾಗೆಂದು ಮರುಗಾಡಿದ್ದುದು ಏಕಾಏಕಿ ಮಲೆನಾಡಾಗಿ ಪರಿವರ್ತಿತವಾದುದೇನೂ ಅಲ್ಲ. ಗೋವು, ಗೋವಿಗಾಗಿ ಮೇವು- ಇವೆರಡರ ಪ್ರಾಮುಖ್ಯತೆ ಅರಿವಾದದ್ದರ ಪರಿಣಾಮವಿದು.


ಭಾರತೀಯ ಸನ್ನಿವೇಶದಲ್ಲಿ ಗೋವುಗಳಿಲ್ಲದ ಅಭಿವೃದ್ಧಿ, ಜೀವನ ಮಟ್ಟ ಸುಧಾರಣೆ ಎಂಬುದಕ್ಕೆ ಅರ್ಥವೇ ಇಲ್ಲ. ಗೋ ರಹಿತ ಕೃಷಿ ಪರಿಪೂರ್ಣವಾಗಿರುವುದಿಲ್ಲ. ಭಾರತದ ಆರ್ಥಿಕ, ಸಾಮಾಜಿಕ ಬದುಕು ನಿಂತಿರುವುದೇ ಗೋವುಗಳಿಂದ. ಗೋವುಗಳಿಲ್ಲದ ಭಾರತದ ಕೃಷಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜಾನುವಾರುಗಳನ್ನು ಜತೆಗಿಟ್ಟುಕೊಂಡೇ ಊರ ಅಭಿವೃದ್ಧಿಯನ್ನು ಸಾಸಬೇಕೆನ್ನುವುದು ಲಾಪೋಡಿಯಾದ ಪುನರ್ ನಿರ್ಮಾಣದ ಕನಸುಗಾರ ಲಕ್ಷ್ಮಣ್ ಸಿಂಗ್ ಗುರಿಯಾಗಿತ್ತು. ಊರೆಂದರೆ ಅಲ್ಲಿ ಮನುಷ್ಯರು ಮಾತ್ರ ಬದುಕಬೇಕೆಂಬ, ಬೇರೇನಾದರೂ ಇದ್ದರೆ ಅದು ಎಲ್ಲವೂ ಮಾನವನಿಗಾಗಿಯೇ ಎಂಬ ಆಧುನಿಕ ಬಕಾಸುರ ಪ್ರವೃತ್ತಿಯ ಪೊರೆ ಕಳಚಿದ ಬಳಿಕವಷ್ಟೇ ಉಳಿದೆಲ್ಲ ಕಾರ್ಯಗಳಿಗೆ ಅರ್ಥ ಬಂದೀತೆಂಬುದನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಟ್ಟರು.
ಯಾಂತ್ರೀಕೃತ ಪಾಶ್ಚಾತ್ಯ ಕೃಷಿ ಪದ್ಧತಿ ಉತ್ಪಾದನಾ ಹೆಚ್ಚಳದ ಗುರಿಯನ್ನು ಮಾತ್ರ ಹೊಂದಿದೆ ಎಂಬುದು ಲಕ್ಷ್ಮಣ್ ಪ್ರತಿಪಾದನೆ. ರಾಸಾಯನಿಕ, ಕೀಟನಾಶಕಗಳು ಸೇರಿದಂತೆ ಎಲ್ಲ ಆಧುನಿಕ ಪರಿಕರಗಳೂ ಇಲ್ಲಿನ ಸದೃಢ ವ್ಯವಸಾಯವನ್ನು, ಸಂಪನ್ಮೂಲಗಳನ್ನೂ ದುರ್ಬಲಗೊಳಿಸುತ್ತ ಸಾಗುತ್ತಿವೆ. ಇದರ ತೀವ್ರತರ ಪರಿಣಾಮಗಳು ಮುಂದಿನ ತಲೆಮಾರಿನ ಭವಿಷ್ಯವನ್ನು ಮಸುಕಾಗಿಸುತ್ತಿದೆ ಎಂಬ ವಾಸ್ತವ ಚಿತ್ರಣ ತೆರೆದಿಡಲು ಲಾಪೋಡಿಯಾಕ್ಕೆ ಹೊರಗಿನಿಂದ ತಜ್ಞರು ಬರಬೇಕಾದ್ದಿರಲಿಲ್ಲ. ಅಲ್ಲಿನ ಪರಂಪರೆಯೇ ಅದನ್ನು ಸಾರುತ್ತಿತ್ತು. ಕೃಷಿ ಮತ್ತು ಹೈನುಗಾರಿಕೆ ಒಟ್ಟೊಟ್ಟಿಗೇ ಸಾಗುತ್ತಿದ್ದ ದಿನಗಳಲ್ಲಿ ಪರಸ್ಪರ ಪೂರಕ ಈ ಅಂಶಗಳೆರಡರಲ್ಲೂ ಸಮೃದ್ಧಿಯನ್ನು ಸಾಸಿದ್ದರು ಅಲ್ಲಿನ ಜನ.


ಲಾಪೋಡಿಯಾದಲ್ಲಿ ಭೂಮಿಯ ಮೇಲ್ಮಣ್ಣು ಸಂಪೂರ್ಣ ನಿಸ್ಸಾರವಾಗಿತ್ತು. ಮರಗಿಡಗಳು ಮಾತ್ರವಲ್ಲ, ಭೂಮಿಗೆ ಹೊದಿಕೆಯಾಗಿದ್ದ ಹುಲ್ಲು, ಕಳೆಗಳೂ ಕಮರಿ ಹೋಗಿತ್ತು, ಇದರಿಂದಾಗಿ ಭೂಮಿಯಲ್ಲಿನ ತೇವಾಂಶ ಬಹುಬೇಗ ಸೂರ್ಯನ ಶಾಖಕ್ಕೆ ತೆರೆದುಕೊಂಡು ಆವಿಯಾಗಿ ಹೋಗುತ್ತಿತ್ತು. ಮಾತ್ರವಲ್ಲ ಬಿಸಿಲ ಗಾರಿಗೆ ಭೂ ಪದರಗಳೆಲ್ಲ ಸಡಿಲಗೊಳ್ಳುವುದರಿಂದ ಮಳೆ ಬಿದ್ದಾಕ್ಷಣ ಲವಣ ಹಾಗೂ ಖನಿಜಾಂಶಗಳು ಸುಲಭವಾಗಿ ಕೊಚ್ಚಿ ಹೋಗುತ್ತಿತ್ತು. ಭೂ ಸವಕಳಿಯೂ ಮಿತಿ ಮೀರಿತ್ತು.


ಇದಕ್ಕಿದ್ದ ಮುಖ್ಯ ಕಾರಣ ಸಸ್ಯಗಳ ಬೇರು ನಾಶ. ಭೂಮಿಯ ತೇವಾಂಶ ರಕ್ಷಣೆಯಲ್ಲಿ ಅತಿ ಮುಖ್ಯಪಾತ್ರ ವಹಿಸುವ ಸಣ್ಣಸಣ್ಣ ಕಳೆಯಂಥವುಗಳು ನೂರಾರು ವರ್ಷಗಳವರೆಗೆ ಭೂಮಿಯಾಳದಲ್ಲಿ ಬೇರುಗಳನ್ನು ಉಳಿಸಿಕೊಂಡು ಬಂದಿರುತ್ತವೆ. ಇಂಥ ಸಸ್ಯರಾಶಿಯ ಬೇರುಗಳು ಮೇಲಕ್ಕೆ ಬಂದು ಬೇಸಿಗೆಯಲ್ಲಿ ಜೀವ ಕಳೆದುಕೊಳ್ಳುತ್ತವೆ. ಒಂದೊಮ್ಮೆ ಅಂಥ ಭೂಮಿಯಲ್ಲಿ ಕೃಷಿ ನಿಲ್ಲಿಸಿದರೆ ಮತ್ತಾ ವುದೇ ಹಸಿರು ಅಲ್ಲಿ ಚಿಗುರದೇ ಬರಡಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ, ಬೀಳುವ ಮಳೆ ನೀರು ಸಹ ಒಳಕ್ಕೆ ಇಳಿಯಲು ಆಸ್ಪದವಿಲ್ಲದಂತಾಗಿ ಆ ಭಾಗದ ಅಂತರ್ಜಲ ಕುಸಿಯುತ್ತ ಸಾಗುತ್ತದೆ. ಅದೇ ಆಗಿತ್ತು ಲಾಪೋಡಿಯಾದಲ್ಲಿ. ಇವೆಲ್ಲವುಗಳಿಂದ ಭೂ ಸವಕಳಿ ಮಿತಿ ಮೀರಿತ್ತು. ಸಡಿಲಗೊಂಡ ಭೂಮಿಯ ಮೇಲ್ಮೈ ಮಳೆಗಾಲದಲ್ಲಿ ಅತ್ಯಂತ ಸುಲಭವಾಗಿ ಕೊಚ್ಚಿ ಹೋಗುತ್ತಿತ್ತು. ಇದರಿಂದ ಎರಡು ರೀತಿಯ ನಷ್ಟವಾಗಿತ್ತು. ಭೂಮಿಗೆ ಹಾಕಿದ ಸಾರ ಕೊಚ್ಚಿ ಹೋಗಿದ್ದಲ್ಲದೇ, ನೀರು ಹೋಗಿ ಸೇರುವ ಕೆರೆ ಇತ್ಯಾದಿ ಜಲಮೂಲಗಳಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ತುಂಬಿತ್ತು. ಕಾಲಕ್ರಮೇಣ ಅವು ಬತ್ತಿ ಬರಿದಾಗಿದ್ದವು.
ಮಣ್ಣಿನಲ್ಲಿರುವ ಎರೆಹುಳು, ಕಪ್ಪೆಯಂಥ ರೈತಸ್ನೇಹಿ ಜೀವಸಂಕುಲ ಸಂಪೂರ್ಣ ನಾಶವಾಗಿ, ಭೂಮಿಯೆಂಬುದು ಬಂಜೆತನಕ್ಕೆ ಬಿದ್ದಿತ್ತು. ಇಡೀ ಪ್ರದೇಶದ ಜೈವಿಕ ಕ್ರಿಯೆಯೇ ಏರುಪೇರಾಗುತ್ತಿರುವುದರ ಪರಿಣಾಮ ಗಮನಿಸಿದರು ಲಕ್ಷ್ಮಣ್. ಭೂಮಿಯ ಹೊದಲು ರಕ್ಷಣೆ, ಬೀಜ ಪ್ರಸರಣದಂಥ ಪ್ರಕ್ರಿಯೆಯಲ್ಲಿ ಜೀವ ವೈವಿಧ್ಯದ ಪಾತ್ರ ಅತ್ಯಂತ ಪ್ರಮುಖ. ಸಾಂಪ್ರದಾಯಿಕ ಪದ್ಧತಿಯ ಸಂದರ್ಭದಲ್ಲಿ ಕಂಡು ಬರುತ್ತಿದ್ದ ಇಂಥ ಪರಸ್ಪರ ಪೂರಕ ವ್ಯವಸ್ಥೆಯ ಮರುಸ್ಥಾಪನೆಯನ್ನು ಮುಖ್ಯ ಗುರಿಯಾಗಿಸಿಕೊಂಡದ್ದರಿಂದಲೇ ಅಂದುಕೊಂಡದ್ದನ್ನು ಅವರು ಸಾಸಲು ಸುಲಭವಾಯಿತು.


ಪಕ್ಷಿ ಸಂಕುಲವೂ ರೈತನ ಹೊಲದತ್ತ ಸುಳಿಯುವುದನ್ನೇ ನಿಲ್ಲಿಸಿ ಎಷ್ಟೋ ವರ್ಷಗಳಾಗಿದ್ದವು. ಅವನ್ನು ಮತ್ತೆ ಹೊಲದತ್ತ ತರಲು ಹೊಲದಲ್ಲಿ ಸುಮ್ಮನೆ ಕಾಳುಗಳನ್ನು ಚೆಲ್ಲಲಾಯಿತು. ಹೊಲದತ್ತ ಆಕರ್ಷಿತಗೊಳ್ಳುವ ಹಕ್ಕಿಗಳು ಬೆಳೆಯನ್ನು ಬಹುತೇಕ ಕೀಟ ಬಾಧೆಯಿಂದ ಪಾರು ಮಾಡುತ್ತವೆಂಬುದು ಇದರ ಹಿಂದಿನ ಬುದ್ಧಿವಂತಿಕೆ. ಹಕ್ಕಿಗಳೇ ಬಾರದಿದ್ದಲ್ಲಿ ಕೀಟನಿಯಂತ್ರಣದ ಪ್ರಕ್ರಿಯೆಗೆ ಸಹಜವಾಗಿ ಹಿನ್ನಡೆಯಾಗುತ್ತದೆ. ಹೀಗೆ ನಿಸರ್ಗದ ಒಂದು ಚಕ್ರವೇ ಏರುಪೇರಾಗಿ ಸಮತೋಲನ ತಪ್ಪುತ್ತಿದ್ದುದನ್ನು ಮತ್ತೆ ಸುಲಲಿತ ಚಲನೆಗೆ ತಂದಾಗಲೇ ಬದುಕಿನ ಭದ್ರತೆ ಕಾಣಸಿಕ್ಕಿದ್ದು.


ವಿಶೇಷವೆಂದರೆ ಊರಿನ ಎಲ್ಲ ಸಮಸ್ಯೆಗೂ ಲಕ್ಷ್ಮಣ್ ಕಂಡುಕೊಂಡ ಕಾರಣ ಹಾಗೂ ಪರಿಹಾರ ಎರಡೂ ಗೋವು ಆಗಿತ್ತು. ಊರ ಬದುಕಿನ ಜೀವಾಳವಾಗಿದ್ದ ಹೈನುಗಾರಿಕೆ ಹಳಿ ತಪ್ಪಿದ್ದರಿಂದ ಇಡೀ ಆರ್ಥಿಕತೆಯೇ ಕುಸಿದು ಬಿದ್ದಿತ್ತು. ಉಳುಮೆಯಿಂದ ಆರಂಭಿಸಿ ಕೊಯ್ದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುವವರೆಗೆ ಸಂಪೂರ್ಣ ಗೋವುಗಳನ್ನೇ ಅವಲಂಬಿಸಿ ನಡೆಯುತ್ತಿದ್ದ ಕೃಷಿ ದುಬಾರಿಯಾಗಿರಲಿಲ್ಲ. ಅಂಥ ಸಹಜ ಕೃಷಿಯನ್ನು ಆದ್ಯತೆಯಾಗಿ ಗುರುತಿಸಿದರು ಜಲ ಯೋಧರು. ಇದರೊಂದಿಗೆ ಇನ್ನು ಕೊಟ್ಟಿಗೆ ಗೊಬ್ಬರದಂಥ ಸಾವಯವ ಸಾರ ಬಳಕೆಗೆ ಮೊದಲು ಮಾಡಿದರು. ಸಾಗಾಟದ ಮಾಧ್ಯಮವಾಗಿ ಎತ್ತಿನ ಬಂಡಿಯ ಬಳಕೆ ಹೆಚ್ಚಿಸಲಾಯಿತು. ಎಲ್ಲಕ್ಕಿಂತಲೂ ಹೆಚ್ಚಾಗಿ ಹಾಲಿನ ಉತ್ಪನ್ನಗಳು ರೈತನ ಆರ್ಥಿಕ ಸ್ಥಿತಿಯ ಸುಧಾರಣೆಗೂ ಕಾರಣವಾಯಿತು. ನೈಜ ಅಭಿವೃದ್ಧಿಗೆ ಭಾಷ್ಯ ಬರೆಯುವುದು ಅಂದರೆ ಇದೇ ಅಲ್ಲವೇ ?

‘ಲಾಸ್ಟ್’ ಡ್ರಾಪ್: ಗೋವು- ಮೇವು- ಕೃಷಿ- ನೀರು ಸರಳವಾಗಿ, ಆದರೆ ಸಂಕೀರ್ಣವಾಗಿ ಹೆಣೆದುಕೊಂಡಿರುವುದೇ ಭಾರತದ ವೈಶಿಷ್ಟ್ಯ.

ಬರಗಾಲದ ಬಗಲಲ್ಲಿ ಅರಳಿತು ಬಂಗಾರದ ಬದುಕು

ಸಿರ ಸಮೃದ್ಧಿಯಿಂದ ಕೂಡಿದ, ಸಂಪದ್ಭರಿತ ಗೋಮಾಳಗಳೆಂದರೆ ಅವು ಆರೋಗ್ಯಕರ, ಆಹ್ಲಾದಕರ ಗ್ರಾಮ ಜೀವನದ ಪ್ರತೀಕ. ಲಾಪೋಡಿಯಾದ ಜಲಯೋಧರ ಪಡೆಯ ವೀರ ಸೇನಾನಿ ಲಕ್ಷ್ಮ ಣ್ ಸಿಂಗ್ ಯಶೋಗಾಥೆಯ ಮತ್ತೊಂದು ಮಗ್ಗುಲು ಬಿಚ್ಚಿಕೊಳ್ಳುವುದು ಈ ವಾಕ್ಯದಿಂದ. ಇಡೀ ಗ್ರಾಮದ ನೈಜ ಅಭಿವೃದ್ಧಿಯ ಸರದಾರರಾಗಿ ಇವತ್ತು ಲಕ್ಷ್ಮಣ್ ಹೊರಹೊಮ್ಮಿದ್ದರೆ ಅದು ರಟ್ಟೆಯ ಕಸುವು ಕೊಟ್ಟ ಪ್ರತಿಫಲವೊಂದೇ ಅಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅವರೊಳಗಿದ್ದ, ಇರುವ ಕನಸಿಗನ ಕೈಚಳಕದ ಫಲವದು.


‘ಗೋಚಾರ್’(ಗೋಮಾಳಕ್ಕೆ ರಾಜಸ್ಥಾನಿ ಭಾಷೆಯ ಪದ)ಗಳ ಹಸಿರಿನ ಗೊಡವೆಗೆ ನಾವು ಹೋಗದೇ ಉಳಿದರಷ್ಟೇ ಸಾಕು. ಮಾನವ ಹಸ್ತಕ್ಷೇಪದಿಂದ ಅವನ್ನು ದೂರವಿಟ್ಟರೆ ಅದೇ ದೊಡ್ಡದು. ಬದುಕು-ನಿಸರ್ಗ-ಜೀವ ಸಂಕುಲ, ಭುವನದ ಮೇಲಿನ ಈ ಮೂರು ಸಂಗತಿಗಳ ನಡುವಿನ ಬಾಂಧವ್ಯ ತನ್ನಿಂದ ತಾನೇ ಗಟ್ಟಿಗೊಳ್ಳುತ್ತದೆ. ಸಂಪತ್ತಿನ ಹೆಚ್ಚಳಕ್ಕೆ ನಾವೇನೂ ಮಾಡುವುದೇ ಬೇಕಿಲ್ಲ- ಇದು ಲಕ್ಷ್ಮಣ್ ಸಿಂಗ್ ಬಲವಾದ ನಂಬಿಕೆ. ಇದನ್ನೇ ಆಧಾರವಾಗಿಟ್ಟುಕೊಂಡು ನಿರೂಪಿಸಿದ ನೀತಿ ಲಾಪೋಡಿಯಾದಲ್ಲಿ ಹಾಲಿನ ಹೊಳೆಯನ್ನು ಹರಿಸಿತು. ನೀರ ನೆಮ್ಮದಿಯನ್ನು ನಿಲ್ಲಿಸಿತು. ಕೃಷಿ ಸಮೃದ್ಧಿಯನ್ನು ಕಟ್ಟಿಕೊಟ್ಟಿತು. ಬದುಕು ಬಂಗಾರವಾಗಿಸಿತು.



೭೦ರ ದಶಕದ ಬಳಿಕ ೯೦ರ ದಶಕದ ಆರಂಭದ ಅವಯಲ್ಲಿ ಅತ್ಯಪೂರ್ವ ಜೀವ ಸಂಸ್ಕೃತಿಯೊಂದಕ್ಕೆ ಭದ್ರ ಬುನಾದಿಯನ್ನು ಹಾಕಿದರು ಲಕ್ಷ್ಮಣ್. ಅದನ್ನವರು ‘ಜೀವ ಸಂಸ್ಕೃತಿಯೆಡೆಗಿನ ಪಯಣ’ ಎಂದೇ ಕರೆದುಕೊಂಡರು. ಇದು ಪರಿಣಾಮಕಾರಿ ಸಮುದಾಯ ಆಧಾರಿತ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ತಂತ್ರಕ್ಕೆ ನಾಂದಿಯಾಯಿತು. ಹಿಂದಿನ ದಿನಗಳಲ್ಲಿ ಇಂಥದ್ದೊಂದು ತಂತ್ರ ರೂಪಿಸುವ ಅಗತ್ಯವೇ ಇರಲಿಲ್ಲ. ಆಗ ಜನಸಂಖ್ಯೆ ಕಡಿಮೆ ಇತ್ತು. ಜಾನುವಾರುಗಳ ಬಾಹುಳ್ಯ ಹೆಚ್ಚಿತ್ತು. ಹೀಗಾಗಿ ಒಂದು ಜಲ ಮೂಲ (ಅದು ಕೆರೆ, ಕಟ್ಟೆ ಯಾವುದೇ ಇರಬಹುದು) ಎಲ್ಲರ ಅಗತ್ಯವನ್ನು ಪೂರೈಸಲು ಸಮರ್ಥವಾಗಿತ್ತು. ಮಾತ್ರವಲ್ಲ ಅವುಗಳ ನಿರ್ವಹಣೆಯೂ ಅಷ್ಟೇ ನಿಯಮಿತವಾಗಿ ಸಾಗಿತ್ತು. ತೇವಾಂಶಯುಕ್ತ ನೆಲವನ್ನು ಗೋ ತ್ಯಾಜ್ಯ ಹೂದಲಾಗಿಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಜನ ನಿಸರ್ಗದ ಸಾಮೀಪ್ಯದಲ್ಲಿ ನಿಸರ್ಗದೊಂದಿಗೇ ಬದುಕುತ್ತಿದ್ದರು. ಆದರೆ ಯಾವತ್ತೂ ನಿಸರ್ಗವನ್ನು ಕಬಳಿಸಿ ಬದುಕುತ್ತಿರಲಿಲ್ಲ. ಈಗದು ಎಲ್ಲ ರೀತಿಯಿಂದಲೂ ತಿರುವುಮುರುವಾಗಿದೆ. ಇಂಥ ಆತಂಕವನ್ನು ಗ್ರಹಿಸಿದ್ದರು ಲಕ್ಷ್ಮಣ್.
ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ತಂತ್ರಜ್ಞಾನಗಳು ಮಾತ್ರವೇ ಪರಿಹಾರವನ್ನು ದೊರಕಿಸಿಕೊಡಬಲ್ಲುದು ಎಂಬುದನ್ನು ಅಧ್ಯಯನಗಳ ಮೂಲಕ ಕಂಡುಕೊಂಡ ಲಕ್ಷ್ಮಣ್ ಮತ್ತವರ ಜಲಯೋಧರ ಪಡೆ, ಅದಕ್ಕಾಗಿ ವ್ಯಾಪಕ ಅಧ್ಯಯನ ಪ್ರವಾಸ ಕೈಗೊಂಡರು. ಸಮುದಾಯ ಸಂಘಟನೆಯಲ್ಲಿ ಅವರಿಗೆ ಮಾದರಿಯಾಗಿ ನಿಂತವರು ರಾಜಸ್ಥಾನದ ಇನ್ನೊಬ್ಬ ಭಗೀರಥ ರಾಜೇಂದ್ರ ಸಿಂಗ್. ಅರಾವರಿ ಸೇರಿದಂತೆ ಐದು ನದಿಗಳನ್ನು ಪುನಶ್ಚೇತನಗೊಳಿಸಿದ ಮಹತ್ ಕಾರ್ಯಕ್ಕಾಗಿ ೨೦೦೧ನೇ ಸಾಲಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಸಿಂಗ್ ಅವರ ಕೆಲಸವನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿದ ಲಾಪೋಡಿಯಾದ ಜಲಯೋಧರ ಪಡೆ, ೧೯೯೧ರಲ್ಲಿ ಮಳೆ ನೀರು ಸಂಗ್ರಹಕ್ಕೆ ಅಡಿಯಿಟ್ಟಿತು. ಇದರ ಫಲವಾಗಿ ಮೂರು ಬೃಹತ್ ನೈಸರ್ಗಿಕ ಕೆರೆಗಳ(ತಾಲಾಬ್) ನಿರ್ಮಾಣ ಮಾಡಿದ್ದಲ್ಲದೇ ಊರಿನ ಸುತ್ತಮುತ್ತಲು ೫೦ ಹೊಸ ತೆರೆದ ಬಾವಿಗಳು ಅಸ್ತಿತ್ವ ಪಡೆದವು. ‘೯೧ರಲ್ಲಿ ನಮ್ಮ ಹಳ್ಳಿ ಹಾಗೂ ಸುತ್ತಮುತ್ತಲು ಪುನರುಜ್ಜೀವನ ಪಡೆದ ಬಾವಿಗಳು ಮತ್ತು ಕೆರೆಗಳ ಒಟ್ಟು ಮೊತ್ತ ೨.೫ ದಶಲಕ್ಷ ರೂ.ಗಳನ್ನು ದಾಟಿತ್ತು. ಇದಕ್ಕಿಂತ ಪರಿಣಾಮಕಾರಿಯಾದ ಫಲವನ್ನು ದೊರಕಿಸಿಕೊಟ್ಟದ್ದು ಗೋಮಾಳಗಳಲ್ಲಿ ನೀರಿನ ಚಟುವಟಿಕೆಗಳಿಗೆ ಚಾಲನೆ ನೀಡಿದ್ದು. ಅವೇ ನಮ್ಮ ಎಲ್ಲ ಕೆಲಸಗಳಿಗೆ ಸಮಗ್ರ ಅರ್ಥವನ್ನು ತಂದುಕೊಟ್ಟಿತು’ ಎನ್ನುತ್ತಾರೆ ಲಕ್ಷ್ಮಣ್.


ಪ್ರತಿ ಹಂತದಲ್ಲೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅವರು ಮರೆಯಲಿಲ್ಲ. ಇದರಿಂದ ಎರಡು ರೀತಿಯ ಪ್ರಯೋಜನಗಳಾದವು ಎನ್ನುತ್ತಾರೆ ಅವರು. ಮೊದಲನೆಯದಾಗಿ ಮಾಡುವ ಕೆಲಸ ನಮ್ಮದು ಎನ್ನುವ ಪ್ರೀತಿ ಜನರಲ್ಲಿ ಮೂಡಿತು. ಅದಕ್ಕಿಂತ ಹೆಚ್ಚಾಗಿ ಒತ್ತುವರಿ ತೆರವಿನಂಥ ಸಂದರ್ಭದಲ್ಲಿ ಬರುವ ವಿರೋಧ ಎದುರಿಸುವುದು ಸುಲಭವಾಯಿತು. ಗೋಮಾಳಗಳ ಅಭಿವೃದ್ಧಿಯಲ್ಲಿ ಮೊದಲು ಮಾಡಿದ ಕೆಲಸವೇ ಒತ್ತುವರಿ ತೆರವು. ಜತೆಗೆ ಸ್ಥಳೀಯ, ಪಾರಂಪರಿಕ ತಂತ್ರಜ್ಞಾನಗಳು ಸಮುದಾಯದೊಳಗೆ ಹುದುಗಿದ್ದವು. ಬೇರೆಲ್ಲಿಂದಲೋ ಕಂಡು ತರುವ ಉಪಾಯಗಳು ಸ್ಥಳೀಯ ಸಮಸ್ಯೆಗಳನ್ನು ಅಷ್ಟು ಸಮರ್ಥವಾಗಿ ಪರಿಹರಿಸಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಸ್ಥಳೀಯ ತಂತ್ರಜ್ಞಾನವನ್ನು ಹೆಕ್ಕಿ ತೆಗೆಯಲಾಯಿತು. ಇದಕ್ಕಾಗಿ ಸ್ಥಳೀಯ ಭೂಮಿ, ಜಲ, ಕೃಷಿಯ ಬಗ್ಗೆ ಅವುಗಳ ಗುಣ ಲಕ್ಷಣದ ಬಗ್ಗೆ ಖಚಿತ ಮಾಹಿತಿಯನ್ನು ಹೊಂದಿರುವ ವಂಶಪಾರಂಪರ್ಯವಾಗಿ ಬಂದಿರುವ ‘ಗಾಜಿದಾರರ’ನ್ನು ಸಂಘಟನೆಯಲ್ಲಿ ಒಳಗೊಳಿಸಿಕೊಳ್ಳಲಾಯಿತು. ಅವರ ಜ್ಞಾನದ ನೆರವಿನ ಮೇಲೆ ಗೋಮಾಳಗಳ ಅಭಿವೃದ್ಧಿಯ ಕಾರ್ಯಕ್ಕೆ ಅಡಿಯಿಡಲಾಯಿತು. ಭೂಮಿಯ ಸ್ವರೂಪ, ಅದರ ನೀರಿಂಗುವ ಸಾಮರ್ಥ್ಯ, ಮಳೆ ಸರಾಸರಿ, ಭೂಮಿಯಲ್ಲಿನ ತೇವಾಂಶದ ಪ್ರಮಾಣ, ಇಳಿಜಾರಿನ ಮಟ್ಟ ಇತ್ಯಾದಿಗಳ ಬಗ್ಗೆ ಅವರಲ್ಲಿ ನಿಖರವಾದ ಅಂಕಿ ಅಂಶಗಳ ಸಮೇತ ಮಾಹಿತಿಗಳಿದ್ದವು. ಇದನ್ನು ಆಧರಿಸಿಯೇ ಊರಿನ ತ್ಯಾಜ್ಯ ನೀರು ಹಾಗೂ ಮಳೆನೀರಿನ ಮರು ಬಳಕೆಯ ಬಗ್ಗೆ ಯೋಜನೆ ರೂಪಿಸಲಾಯಿತು. ಜಲನಕ್ಷೆ ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ. ಬಿದ್ದ ಮಳೆ ನೀರು ಹಾಗೂ ತ್ಯಾಜ್ಯ ಎತ್ತಲಿಂದ ಎತ್ತ ಹರಿಯುತ್ತದೆ ? ಅದು ಕೊನೆಯಲ್ಲಿ ಹೋಗಿ ಸೇರುವುದೆಲ್ಲಿಗೆ ? ನಿಜವಾಗಿ ಕಾಲದ ಗತಿಯಲ್ಲಿ ಅವು ಹಾದಿ ತಪ್ಪಿದ್ದೆಲ್ಲಿ ಎಂಬಿತ್ಯಾದಿಗಳ ಕುರಿತು ಕೂಲಂಕಷ ಮಾಹಿತಿಯನ್ನು ಸಂಗ್ರಹಿಸಲಾಯಿತು. ಇದನ್ನು ಒಳಗೊಂಡ ಸಮಗ್ರ ಜಲ ನಕ್ಷೆಯನ್ನು ರೂಪಿಸಲಾಯಿತು. ಇದಕ್ಕನುಗುಣವಾಗಿ ಊರಿನ ಗೋಮಾಳಗಳು ಸೇರಿದಂತೆ ಸುತ್ತಲಿನ ಜಲಸೂರಿ(ಜಲಾನಯನ)ನತ್ತ ನೀರನ್ನು ಹರಿಸಿಕೊಂಡು ಹೋಗಿ ಅಲ್ಲಿ ಎಲ್ಲವೂ ಇಂಗುವಂತೆ ಮಾಡಲಾಯಿತು. ಹಾಗೆ ಹರಿದು ಹೋಗುವ ನೀರಿಗೆ ಕೃಷಿ ಜಮೀನುಗಳಲ್ಲಿ ಹಾದಿ ಮಾಡಿಕೊಟ್ಟದ್ದು ವಿಶೇಷ ಫಲಿತಾಂಶವನ್ನು ನೀಡಿತು.



ಇಲ್ಲಿ ಅತ್ಯಂತ ಒತ್ತು ಕೊಟ್ಟ ಅಂಶವೆಂದರೆ ಹಳ್ಳಿಯ ಎಲ್ಲ ಭೂಮಿಯನ್ನೂ ಬಳಕೆಗೆ ತಂದುಕೊಂಡದ್ದು. ಇಷ್ಟು ಮಾಡುವ ಹೊತ್ತಿಗೆ ಗ್ರಾಮವಾಸಿಗಳೆಲ್ಲರಿಗೂ ತಮ್ಮ ಸುತ್ತಲಿನ ನೀರು, ಭೂಮಿ ಸೇರಿದಂತೆ ಒಟ್ಟಾರೆ ನಿಸರ್ಗದ ಬಗ್ಗೆ ಸಮಗ್ರ ಮಾಹಿತಿ ದಕ್ಕಿತ್ತು. ಏನು ಮಾಡಿದರೆ ಏನಾದೀತು ಎಂಬುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ದೊರೆಯಿತು. ತಾನು ತನ್ನ ಭೂಮಿಯಲ್ಲಿ ಏನು ಬೆಳೆಯಬೇಕು, ಅದರ ನಿರ್ವಹಣೆಗೆ ಎಷ್ಟು ನೀರು ಬೇಕಾದೀತು...ಯಾವುದು ತನಗೆ ನಷ್ಟ ತರಲಿದೆ...ಹೀಗೆ ಪ್ರತಿಯೊಬ್ಬ ರೈತನೂ ವೈಜ್ಞಾನಿಕವಾಗಿ ವಿಶ್ಲೇಷಣೆಗಿಳಿಯುವ ಮಟ್ಟಕ್ಕೆ ಬೆಳೆದು ನಿಂತಿದ್ದ. ಆತನೇ ಸ್ವತಂತ್ರವಾಗಿ ಕಾಲುವೆಗಳ ಮೂಲಕ ತ್ಯಾಜ್ಯ, ಹೆಚ್ಚುವರಿ ನೀರನ್ನು ಹರಿಸಿಕೊಂಡು ಹೋಗಬಲ್ಲವನಾಗಿದ್ದ. ಮಳೆ ನೀರನ್ನು ಜಮೀನಿನಲ್ಲಿಯೇ ಹೇಗೆ ಇಂಗಿಸಿಕೊಳ್ಳಬೇಕು, ಹೆಚ್ಚಿನ ನೀರನ್ನು ಎಲ್ಲಿಗೆ ಕೊಂಡೊಯ್ದು ಬಿಡಬೇಕು ಎಂಬುದರ ಬಗ್ಗೆ ಸಮಗ್ರವಾದ ನೀತಿಯನ್ನು ರೈತರೇ ನಿರ್ಧರಿಸಿಕೊಂಡರು. ಈ ಹಂತದಲ್ಲಿ ಸಾಕಷ್ಟು ಎಚ್ಚರವನ್ನೂ ಪಾಲಿಸಲಾಯಿತು. ಮತ್ತೆಂದೂ ಅಂತರ್ಜಲಕ್ಕಾಗಲೀ, ಭೂಮಿಯ ಮೇಲಿನ ಜಲಮೂಲಕ್ಕಾಗಿಯಾಗಲೀ ಧಕ್ಕೆ ತಾರದಂತೆ ಜಾಗೃತಿ ಮೂಡಿಸಲಾಗಿತ್ತು. ಇದು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಯಿತು ಎಂದು ನಿಟ್ಟುಸಿರು ಬಿಡುತ್ತಾರೆ ಲಕ್ಷ್ಮಣ್.
‘ಜೀವ ಸಂಸ್ಕೃತಿಯೆಡೆಗಿನ ಪಯಣ’ದಲ್ಲಿ ಪ್ರಾಣಿ-ಪಕ್ಷಿಗಳ ಸಹಜ ಬದುಕು, ಪರಿಸರ ವ್ಯವಸ್ಥೆ, ಜಲ ಸಂರಕ್ಷಣೆ ಹಾಗೂ ಕೃಷಿಯನ್ನು ಪ್ರಧಾನವಾಗಿ ಗಮನದಲ್ಲಿಟ್ಟುಕೊಳ್ಳಲಾಗಿತ್ತು. ಭೂಮಿಯನ್ನೂ ಪ್ರಮುಖವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿತ್ತು. ಮೊದಲನೆಯದ್ದು ನೀರಾವರಿಗೆ ಮೀಸಲಾದರೆ ಇನ್ನೊಂದನ್ನು ಕಡ್ಡಾಯವಾಗಿ ಗೋಮಾಳವನ್ನಾಗಿ ಪರಿವರ್ತಿಸುವ ನಿರ್ಧಾರ ಕೈಗೊಳ್ಳಲಾಯಿತು. ಗ್ರಾಮದ ಇನ್ನೊಂದು ಪಾರ್ಶ್ವದಲ್ಲಿ ಸಹಜ ನಿಸರ್ಗದ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಳ್ಳಲಾಗಿತ್ತು. ಅಲ್ಲಿ ಮಾನವ ಪ್ರವೇಶವನ್ನೇ ನಿರ್ಬಂಸಿದ್ದು ಗಮನಾರ್ಹ. ವಿಕೃತಿಗಳೆಲ್ಲ ಮಾಯವಾಗಿ ನಿಜವಾದ ಸಂಸ್ಕೃತಿ ಎಂಬುದು ಮೊಳೆಯಲಾರಂಭಿಸಿದ್ದೇ ಆವಾಗ. ಅದೇ ಇಂದಿನ ಲಾಪೋಡಿಯಾದ ಸತ್ವಯುತ ಬದುಕನ್ನು ಅರಳಿಸಿದ್ದು ಎನ್ನುವಾಗ ಲಕ್ಷ್ಮಣ್ ಮುಖದಲ್ಲಿ ಆಯಾಸ ವಿರಲಿಲ್ಲ. ಬದಲಿಗೆ ಹೆಮ್ಮೆಯ ಮುಖಭಾವದೊಂದಿಗೆ ಅವರು ಕಿರು ನಗೆ ಹೊಮ್ಮಿಸುತ್ತಿದ್ದರು.

‘ಲಾಸ್ಟ್’ಡ್ರಾಪ್: ನಿಸರ್ಗದ ಸಾಮೀಪ್ಯಕ್ಕೆ ಬಂದ ಮೇಲೆಯೇ ಲಾಪೋಡಿಯಾದ ಜನ ಬರಗಾಲವನ್ನು ಬಗಲಲ್ಲಿ ಇಟ್ಟುಕೊಂಡೇ ನಗುತ್ತಾ ಬದುಕುವುದನ್ನು ಕಲಿತರು. ಅದಕ್ಕಾಗಿಯೇ ಆ ಊರು ಇಂದು ಮಾದರಿಯಾದದ್ದು ಎಂಬುದಕ್ಕೆ ಬೇರೆ ಪುರಾವೆ ಅಗತ್ಯವಿದೆಯೇ ?



ನೀರಿನ ನೆವದಲ್ಲಿ ಹಸಿರಿಗೆ ರಹದಾರಿ, ಬೇಟೆ ದುಬಾರಿ

ಕಂಜೂಸಿ ದಾನ್ ಸೆ ಜೀತೊ...
ಅಸತ್ಯ ಕೋ ಸತ್ಯಸೆ ಜೀತೊ...
ದ್ವೇಷ್-ಕ್ರೋಧ್ ಕೋ ಸದಾಚಾರ್ ಸೆ ಜೀತೊ...!

ಆ ಯೋಧರ ಪಡೆಯ ಮೂಲ ಮಂತ್ರಗಳಿವು. ಪ್ರಾರ್ಥನೆ ಹೀಗೆಯೇ ಸಾಗುತ್ತದೆ. ಇದೇನು ಹೊಸತಲ್ಲ ಬಿಡಿ. ನಮ್ಮ ದೇಶದ ದಾರ್ಶನಿಕರೆನಿಸಿಕೊಂಡವರೆಲ್ಲ ಬೋಸಿದ್ದು ಇದನ್ನೇ ಅಲ್ಲವೇ ? ಅಷ್ಟೇಕೆ ಭಾರತೀಯ ಮೂಲ ನಂಬಿಕೆಯೇ ಇದು. ಹೊಸತಿರುವುದು ಅದರ ಅನುಷ್ಠಾನದಲ್ಲಿ. ಹೇಗೆ ನೋಡಿದರೂ ಲಕ್ಷ್ಮಣ್ ಸಿಂಗ್‌ರಲ್ಲಿ ಒಬ್ಬ ಗಾಂ, ಒಬ್ಬ ಬುದ್ಧ, ಒಬ್ಬ ಮಹಾವೀರ, ಒಬ್ಬ ಧರ್ಮರಾಜ ಕಂಡರೆ ಅದಕ್ಕೆ ಕಾರಣ ಅವರು ಲಾಪೋಡಿಯಾದಲ್ಲಿ ತಾಲಾಬ್‌ಗಳ ಪುನರ್ ನಿರ್ಮಾಣ ಮಾಡಿದರು ಎಂಬುದಕ್ಕಲ್ಲ. ಅಲ್ಲಿ ನೀರಿನ ಸಮೃದ್ಧತೆಯನ್ನು ಮರಳಿ ತಂದರು ಎಂಬುದಕ್ಕಲ್ಲ. ಹಾದಿ ತಪ್ಪಿ ಹೋಗಿದ್ದ, ಬರಗೆಟ್ಟು ಬುಕಣಾಸಿಯಾಗಿ ಹೋಗಿದ್ದ ಲಾಪೋಡಿಯಾದ ಜನಜೀವನದಲ್ಲಿ ಧರ್ಮದ ಪುನರ್‌ಸ್ಥಾಪನೆ ಮಾಡಿದರು. ಅದು ಶುದ್ಧಾತಿಶುದ್ಧ ಮಾನವೀಯ ಧರ್ಮವಾಗಿತ್ತು. ಜೀವ ಧರ್ಮವಾಗಿತ್ತು. ಅಧರ್ಮವನ್ನು ಧರ್ಮ ಮಾರ್ಗದಿಂದ ಜಯಿಸಿದ್ದೇ ಲಕ್ಷ್ಮಣ್ ಸಾಹಸಗಾಥೆಗೆ ಇಟ್ಟ ಮುಕುಟ.
ಒಂದು ಕಾಲದಲ್ಲಿ ರಾಜಸ್ಥಾನದ ಆ ಪುಟ್ಟ ಹಳ್ಳಿಯ ಯುವಕರು ಅದೆಷ್ಟು ಪೋಲಿಬಿದ್ದು ಹೋಗಿದ್ದರೆಂದರೆ ಅವರಿವರನ್ನು ಟೀಕಿಸದಿದ್ದರೆ, ವ್ಯಂಗ್ಯ ಮಾಡದಿದ್ದರೆ ಅವರಿಗೆ ತಿಂದ ಅನ್ನವನ್ನು ಅರಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅದು ಎಷ್ಟರಮಟ್ಟಿಗೆ ಅವರಿಗೆ ರೂಢಿಬಿದ್ದು ಹೋಗಿತ್ತೆಂದರೆ ಊರಿನವರನ್ನು ಹಾಗಿರಲಿ, ಊರಿಗೆ ಬರುತ್ತಿದ್ದ ಅತಿಥಿಗಳನ್ನು, ದಾರಿಹೋಕರನ್ನೂ ಅವರು ಬಿಡುತ್ತಿರಲಿಲ್ಲ. ಕೊನೇ ಪಕ್ಷ ಅವರಿಗೆ ಅದು ಬಿಟ್ಟರೆ ಬೇರೇನೂ ಉದ್ಯೋಗವೂ ಇರಲಿಲ್ಲ. ಹಾಗೆಂದು ಹೊಟ್ಟೆ ಕೇಳಬೇಕಲ್ಲಾ ? ಬದುಕಿಗೊಂದು ಮಾರ್ಗ ಬೇಕಿತ್ತಲ್ಲ ? ಅದಕ್ಕೆ ಸಿಕ್ಕಿದ್ದು ದಗಾ-ವಂಚನೆ-ಮೋಸ... ಕೊನೆಗೆ ಖೂನಿ- ಕೊಲೆಗಳಿಗೂ ಅವರು ಹೇಸಿದ್ದು ಸುಳ್ಳು. ಅಂಥ ವಾತಾವರಣದಲ್ಲಿ ಮನುಷ್ಯ ಜೀವನವೇ ನರಕವಾಗಿರುವಾಗ ಪ್ರಾಣಿ-ಪಕ್ಷಿಗಳು ನೆಮ್ಮದಿಯಿಂದ ಉಸಿರಾಡುವುದು, ಸ್ವಚ್ಛಂದವಾಗಿ ಬದುಕುವುದು ದೂರದ ಮಾತಾಗಿತ್ತು. ಹಕ್ಕಿಗಳ ಕಲರವವನ್ನು ಮರೆತು ಅದೆಷ್ಟೋ ಕಾಲವಾಗಿತ್ತು. ಅವಿದ್ದರೆ ತಾನೇ ಚಿಲಿಪಿಲಿಗುಟ್ಟಲು. ಬಹುತೇಕವನ್ನು ಕೊಂದು ತಿಂದಾಗಿತ್ತು. ಅಳಿದುಳಿದವು ನೀರು ಕಾಳು ಕಾಣದೇ ನೆರೆ ರಾಜ್ಯಗಳಿಗೆ ವಲಸೆ ಹೋಗಿದ್ದವು.


ಅಂಥ ವಾತಾವರಣದಲ್ಲಿ ಮತ್ತೆ ಜೀವ ಸಾಮ್ರಾಜ್ಯವನ್ನು ಪುನರ್‌ಸ್ಥಾಪಿಸುವುದೆಂದರೆ ಅದು ಕಟುಕನ ಬಳಿ ದಯೆಯ ಅರ್ಥ ಕೇಳಿದಂತಾಗಿತ್ತು. ಆದರೆ ಲಕ್ಷ್ಮಣ್ ನಿರ್ಧಾರ ಮಾಡಿಯಾಗಿತ್ತು. ಲಾಪೋಡಿಯಾದ ಹೆಸರನ್ನು ಬದಲಿಸಬೇಕು. ಅದು ಭೌತಿಕವಾಗಿಯಷ್ಟೇ ಅಲ್ಲ, ಊರಿನ ಜನರ ಅಂತರಂಗದಲ್ಲಿ ಅಂಥ ಬದಲಾವಣೆ ಇಣುಕಬೇಕು. ಅಲ್ಲಿಯೇ ಅದು ಮನೆ ಮಾಡಬೇಕು. ಆಗ ಮಾತ್ರವೇ ಲಾಪೋಡಿಯಾ ಮತ್ತೆ ಬಹದ್ದೂರ್ ನಗರವಾಗಿ ಪರಿವರ್ತನೆ ಹೊಂದಲು ಸಾಧ್ಯ- ಈ ಗುರಿಯೊಂದಿಗೇ ಲಕ್ಷ್ಮಣ್ ಗ್ರಾಮ ವಿಕಾಸ ನವಯುವಕ ಮಂಡಲವನ್ನು ಕಟ್ಟಿದರು. ಅಲ್ಲಿಯ ಪ್ರಾರ್ಥನೆಯೇ ಸಂಘಟನೆಯ ಇಡೀ ಉದ್ದೇಶವನ್ನು ವಿವರಿಸುತ್ತದೆ.



ಜಿಪುಣನನ್ನು ದಾನದಿಂದ ಗೆಲ್ಲು, ಅಸತ್ಯವನ್ನು ಸತ್ಯದಿಂದ ಗೆಲ್ಲು....ಹೀಗೆಯೇ ಸಾಗುತ್ತದೆ ಆ ಪ್ರಾರ್ಥನೆಯ ಸಾಲುಗಳು. ಅದು ಕೇವಲ ಸಾಲುಗಳಾಗಿರಲಿಲ್ಲ. ಅದರಲ್ಲಿ ಜೀವ ಶಕ್ತಿಯನ್ನು ತುಂಬಿದ್ದರು ಲಕ್ಷ್ಮಣ್ ಸಿಂಗ್. ಪ್ರಾರ್ಥನೆ ಹಾಡುತ್ತಲೇ ಅದರ ಅನುಷ್ಠಾನವನ್ನೂ ಸಾಸಿಬಿಟ್ಟರು ಅವರು. ಸ್ಥಳೀಯ ಪರಂಪರೆಯ ಅಧ್ಯಯನಕ್ಕೆ ಅವರು ಮೊದಲು ಮಾಡಿದರು. ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ ದೇಸಿ ಸಂಸ್ಕೃತಿಯ ಸೊಗಡು ಅಷ್ಟಿಷ್ಟು ಊರಿನ ಹಳೆಯ ತಲೆಮಾರಿನಲ್ಲಿ ಉಳಿದಿತ್ತು. ಅದರ ನೆನಪುಗಳು ಅವರಲ್ಲಿನ್ನೂ ಹಸಿರಾಗಿತ್ತು. ಅಂಥ ನೆನಪುಗಳ ಹಸಿರು ಮಾಸುವ ಮೊದಲೇ ಜೀವ ಸಂಸ್ಕೃತಿಯನ್ನು ಚಿಗುರಿಸಿಬಿಡಬೇಕೆಂಬ ಎಚ್ಚರಿಕೆ ಮೂಡಿದ್ದು ಸಕಾಲಿಕವಾಗಿತ್ತು.



ಪಂಚಾಯಿತಿಗಳ, ಯುವಕ ಮಂಡಲಗಳ ಸಹಾಯದಿಂದ ಕೆಲ ಸಣ್ಣಪುಟ್ಟ ಸಂಪ್ರದಾಯಗಳನ್ನು ಊರಿನಲ್ಲಿ ಮತ್ತೆ ಜಾರಿಗೆ ತರಲಾಯಿತು. ಅದನ್ನು ನೀತಿ ನಿರೂಪಣೆಯನ್ನಾಗಿ ಪರಿವರ್ತಿಸಲಾಯಿತು. ಆರಂಭದಲ್ಲಿ ಇದಕ್ಕೆ ಎಂದಿನಂತೆಯೇ ವಿರೋಧ ವ್ಯಕ್ತವಾದರೂ ಯುವಕರ ಸಂಕಲ್ಪ ಶಕ್ತಿಯೆದುರು ಇದಾವುದೂ ನಿಲ್ಲಲಿಲ್ಲ. ನಿಯಮಗಳನ್ನು ಹೇರುವ ಬದಲು ಮನಪರಿವರ್ತನೆಯ ಮೂಲಕ ಅದನ್ನು ಅಳವಡಿಸಿಕೊಳ್ಳುವಂತೆ ಊರವರನ್ನು ಒಲಿಸಲಾಯಿತು. ಒಮ್ಮೆ ಮನೋಭಾವ ಬದಲಾದ ಮೇಲೆ ಮುಂದಿನದು ಕಷ್ಟವಾಗಲಿಲ್ಲ.



ನಿರುದ್ಯೋಗಿ ಕೈಗಳಿಗೆ ಉದ್ಯೋಗ, ಕಲಿಯುವ ಮನಸ್ಸಿಗೆ ಶಿಕ್ಷಣ- ಇವೆರಡಕ್ಕೆ ಅವಕಾಶವಾಗುತ್ತಿದ್ದಂತೆಯೇ ತನ್ನಿಂದ ತಾನೇ ಕ್ರಾಂತಿ ಇಣುಕಿತು. ಒಂದೆಡೆಯಲ್ಲಿ ಸುಶಿಕ್ಷಿತರು, ಯುವಕರ ಸಂಘಟನೆಯಾಗುತ್ತಿದ್ದರೆ ಇನ್ನೊಂದೆಡೆ ಊರಿನಲ್ಲಿದ್ದ ಶಾಲೆಯ ಅಭಿವೃದ್ಧಿ ಕಾರ್ಯ ಆರಂಭವಾಗಿತ್ತು. ಊರಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಶಾಲೆಗೆ ಹೋಗಲೇಬೇಕೆಂಬ ನಿಯಮವನ್ನು ಜಾರಿಗೆ ತರಲಾಯಿತು ಎಂಬುದಕ್ಕಿಂತ ಊರವರು ಸ್ವಯಂ ಪ್ರೇರಿತರಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮಾಡಲಾಯಿತು. ನಂತರದ್ದು ಅರಣ್ಯ ಸಂರಕ್ಷಣೆ. ಊರಿನ ಅರಣ್ಯ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ಮನುಷ್ಯರು ಪ್ರವೇಶಿಸುವಂತಿಲ್ಲ. ಅಲ್ಲಿ ಸಸಿಗಳನ್ನು ಯಾರೂ ಉದ್ದೇಶಪೂರ್ವಕ ನೆಡುವುದು ಬೇಕಿಲ್ಲ. ಸ್ವಾಭಾವಿಕವಾಗಿಯೇ ಹುಟ್ಟುವ ಸಸ್ಯಗಳ ಜತೆಗೆ ಮಾನವನ ಹಸ್ತಕ್ಷೇಪ ಆಗದಿದ್ದಲ್ಲಿ ಮೂರು ವರ್ಷಗಳಲ್ಲಿ ತನ್ನಿಂದ ತಾನೇ ದಟ್ಟ ಹಸಿರು ಕಾಣಲಾರಂಭಿಸುತ್ತದೆ. ಒಮ್ಮೆ ಅರಣ್ಯ ಸೊಂಪಾಗಿಬಿಟ್ಟರೆ ಜೀವ ಸಂಕುಲಗಳ ಅಭಿವೃದ್ಧಿ ಕಷ್ಟದ ಕೆಲಸವಲ್ಲ. ಅದು ಸುಲಭದ ಮಾರ್ಗವಾಗಿತ್ತು. ಕೇವಲ ಉಪದೇಶದಿಂದ ಇದು ಸಾಧ್ಯವಾಗುವುದಲ್ಲ ಎಂಬ ಎಚ್ಚರಿಕೆಯೊಂದಿಗೆ ಕೆಲವು ನಿಬಂಧನೆಗಳನ್ನು ಜಾರಿಗೆ ತರಲಾಯಿತು. ಒಂದು ಮರ ಕಡಿದರೆ ಆ ವ್ಯಕ್ತಿ ಕನಿಷ್ಠ ಎರಡು ಸಸಿಗಳನ್ನು ಬೆಳೆಸುವುದು ಜತೆಗೆ ಒಂದು ೧೨ ಮಣ (ಒಂದು ಮಣ ಎಂದರೆ ೪೦ ಕೆ.ಜಿ.) ಧಾನ್ಯವನ್ನು ದಂಡ ರೂಪದಲ್ಲಿ ಕೊಡಬೇಕು ಎಂಬುದನ್ನು ಕಡ್ಡಾಯಗೊಳಿಸಲಾಯಿತು. ಹಾಗೆ ದಂಡದ ರೂಪದಲ್ಲಿ ಬಂದ ಧಾನ್ಯವನ್ನುಯುವಕ ಮಂಡಲದ ಸದಸ್ಯರು ಪ್ರತಿ ದಿನ ಮುಂಜಾವು ಮತ್ತು ಸಂಜೆಯ ವೇಳೆ ಊರಿನ ವ್ಯಾಪ್ತಿಯಲ್ಲಿ ಬೆಟ್ಟ ಗುಡ್ಡಗಳಲ್ಲಿ ಹೋಗಿ ಎರಚಿ ಬರುತ್ತಿದ್ದರು. ಹೀಗೆ ಎರಚಿದ ಕಾಳುಗಳಿಂದ ಆಕರ್ಷಿತವಾಗಿ ಹೆಚ್ಚು ಹೆಚ್ಚು ಪಕ್ಷಿಗಳು ಲಾಪೋಡಿಯಾದ ಕಡೆಗೆ ಬರಲು ಆರಂಭಿಸಿದವು. ಹಾಗೆ ಬಂದವು ಅಲ್ಲಿ ಕಣ್ಣು ಬಿಡಲಾರಂಭಿಸಿದ್ದ ಹಸಿರಿನ ಸಸಿಗಳಲ್ಲಿ ಆಶ್ರಯ ಪಡೆಯಲಾರಂಭಿಸಿದವು. ಆಗ ಊರಿನಲ್ಲಿ ಜಾರಿಗೆ ಬಂದದ್ದು ಪ್ರಾಣಿ-ಪಕ್ಷಿಗಳ ಬೇಟೆ ನಿಷೇಧ. ಒಂದು ಪ್ರಾಣಿ ಕೊಂದರೆ ಆತ ೫ ಸಾವಿರ ರೂ. ದಂಡ ಪಾವತಿಸುವಂತಾಯಿತು. ಹಕ್ಕಿಗಳಿಗೆ ಕಲ್ಲು ಹೊಡೆದವ ೫೦೦ ರೂ. ತೆರಬೇಕಾಯಿತು. ಊರಿನ ಹೊರಭಾಗದಲ್ಲಿ ಈ ಸಂಬಂಧ ಸೂಚನಾ ಫಲಕವನ್ನೇ ಬರೆಸಿ ಹಾಕಲಾಯಿತು.



ಇಷ್ಟೆಲ್ಲ ಆಗುವ ಹೊತ್ತಿಗೆ ಸರಕಾರಿ ಆಡಳಿತ ಯಂತ್ರ ಸುಮ್ಮನಿದ್ದೀತೆ ? ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಎಲ್ಲರೂ ಸಂವಿಧಾನ ಬದ್ಧ ಕಾನೂನನ್ನೇ ಗೌರವಿಸಬೇಕೇ ಹೊರತು ಸ್ಥಳೀಯ ನಿಯಮಗಳಿಗೆ ಅವಕಾಶವಿಲ್ಲ ಎಂಬ ಆಕ್ಷೇಪ ತಹಸೀಲ್ದಾರರಿಂದ ಕೇಳಿಬಂತು. ಈ ಸಂಬಂಧ ಗ್ರಾಮ ಪಂಚಾಯಿತಿಗೆ ನೋಟಿಸ್ ಸಹ ಜಾರಿಯಾಯಿತು. ಆದರೆ ಅಷ್ಟರಲ್ಲಾಗಲೇ ಕಾನೂನು ಗೌರವಿಸುವ ಜನರ ಮನಪರಿವರ್ತನೆ ಆಗಿ ಬಿಟ್ಟಿತ್ತು. ಜನ ಸ್ಥಳೀಯ ನಿಯಮವನ್ನು ಸ್ವ ಸಂತೋಷದಿಂದ ಒಪ್ಪಿಕೊಂಡುಬಿಟ್ಟಿದ್ದರು. ಹೀಗಾಗಿ ಬೇರಾವುದೂ ಅವರ ಮೇಲೆ ಪರಿಣಾಮ ಬೀರಲಿಲ್ಲ. ಆದ್ದರಿಂದ ಲಾಪೋಡಿಯಾದಲ್ಲಿ ಗೋಚರ್(ನಮ್ಮ ಗೋಮಾಳ)ಗಳ ಸಂರಕ್ಷಣೆಗೆ ನಡೆದ ಆಂದೋಲನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜೈವಿಕ-ಪರಿಸರ ವ್ಯವಸ್ಥೆಯ ಅಭಿವೃದ್ಧಿ, ಗೋಮಾಳಗಳ ಒತ್ತುವರಿ ತೆರವು ಮತ್ತು ನಿರ್ಬಂಧ, ಕೆರೆ ಸಂರಕ್ಷಣೆ, ತಾಲಾಬ್‌ಗಳ ಪುನಶ್ಚೇತನ, ಮಕ್ಕಳ ಶಿಕ್ಷಣ- ಹೀಗೆ ಎಲ್ಲವೂ ಒತ್ತೊಟ್ಟಿಗೇ ನಡೆದದ್ದು ಲಾಪೋಡಿಯಾದ ಚಿತ್ರಣವನ್ನೇ ೩೦ ವರ್ಷಗಳಲ್ಲಿ ಬದಲಿಸಿಬಿಟ್ಟಿತು. ಸಾರ್ವಜನಿಕ ಬದುಕು ಸುಂದರವಾಗಿಸಿದ ಲಕ್ಷ್ಮಣ್‌ಸಿಂಗ್ ಅಲ್ಲಿ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದಿದ್ದರು. ನಿಜವಾಗಿ ಸಹಭಾಗಿತ್ವದಿಂದ ವಿಕಾಸವಾಗಿತ್ತು. ಅಂಥ ವಿಕಾಸ ಶಾಂತಿಯನ್ನು ದಕ್ಕಿಸಿಕೊಟ್ಟಿತ್ತು.

ಲಾಸ್ಟ್‘ಡ್ರಾಪ್‘: ಚೌಕ ಪದ್ಧತಿ ದೇಶದ ಜಲ ಸಂರಕ್ಷಣಾ ವ್ಯವಸ್ಥೆಯಲ್ಲಿ ವಿನೂತನ ತಂತ್ರಜ್ಞಾನವಾಗಿ ಹೊರಹೊಮ್ಮಿದೆ. ಇದರ ತವರು ಲಾಪೋಡಿಯಾ.

Lost and found

Karnataka villages are reviving underground springs that were once their lifeline in summers
Aparna Pallavi

Down to Earth: 15th April 2010

A concrete structure like this one in a village in Koratagere prevents the talaparige from
getting silted. In Karmadi and surrounding villages the beginning of March is a busy period. This is when ponds and wells in Tumkur district of Karnataka start drying up, midway through the paddy and ragi crops. This is also the time when some 80 farmers from Karmadi and four other villages get together to clean the underground spring called talaparige in the region. (Tala in Kannada means underground and parige, fountain or fairy.) The spring will nourish their 153 hectares (ha) of crops through the difficult months of March and April, and also provide water for people and cattle
"From tomorrow, a man from each family getting irrigation water from the talaparige will help in desilting and cleaning the spring’s mouth and the 3-km-long channel," said Gamkar K C Nagaraju of Karmadi. The title ‘Gamkar’ denotes Nagaraju is the head of the talaparige maintenance team. Water supply will start after puja, he added.
Underground springs were once an integral part of the irrigation system in Tumkur, Chitradurga, Bellary and Koppala districts of Karnataka and in the adjoining Ananthapur district of Andhra Pradesh. People began abandoning them in the 1960s and the ’70s when bore wells became popular. In the past couple of years, however, a non-profit has begun spreading awareness about talapariges among farmers and government officials. The campaign is working and some villages have revived their streams.
Between sand and hard rock Talapariges are unique to areas having sandy soil and a rocky substratum. They are mostly found in the beds of ponds, streams and rivers; some are around them. While the sandy soil ensures ample water percolates during rains and from water bodies, the rocky substratum prevents the water from percolating too deep. During the summer when rivers and ponds dry up, this water, sweet and purified by filtration through the soil, is still oozing out of the talaparige.People dig a pit, five to 15 feet deep, at the site of the spring, build a stone wall around it to prevent the water eye— jalada kannu —of the talparige from getting silted, and construct channels along the contours of the surrounding land, providing a gradient for the water to flow. Water from the talaparige is supplied for irrigation to tracts of land near the channels. More crucially, underground springs are a source of drinking water during the summer."Before bore wells came along, only land close to a talaparige could grow a second crop," said farmer Sankaraiyah of Karmadi. "Even today farmers who do not have bore wells can rely on the talaparige to see the crop through." Sankaraiyah receives an hour of water supply daily for his ragi and paddy crops, each in three hectares, from the underground spring.
A talaparige and its channels are maintained by a community of farmers. The community is headed by a gamkar who calls meetings and initiates maintenance work. A neeraganti coordinates with farmers in distributing water. Water division, as Sankaraiyah showed, is done through a deceptively simple technique of placing rocks at strategic points in the channel to direct the flow. "The position of rocks is changed every hour so that everyone gets water," said Sankaraiyah, as he carefully packed some rocks at the mouth of one channel, reducing the flow.From 2,000 to 150 In 2007, Mallikarjuna Hosapalya, head of the Tumkur-based non-profit, Dhanya, conducted a survey in the five districts of Karnataka and Andhra Pradesh where underground springs were an integral part of the irrigation system

Farmers say in the 1950s and the ’60s there were some 2,000 underground springs in Tumkur alone, but the study found 150 in the five districts put together. All but 20-30 per cent of these have fallen into disuse, he said."Decline of the talaparige began with the advent of bore wells, which not only depleted the groundwater, destroying springheads, but also destroyed the fabric of social cooperation," said Mallikarjuna. "In more recent years, mining, especially sand mining in the beds of rivers and ponds, has destroyed many talapariges." Farmers say frequent monsoon failures and reduced rainfall have also played a role.
One encouraging finding of the study is that a few underground springs, mostly in Koratagere, Madhugiri and Pavagada taluks of Tumkur, are still in good condition, and their water cooperatives active. Karmadi is one of them.
Spring clean In August 2008, Dhanya held a workshop on saving underground springs at Madhugiri. Many communities expressed eagerness to revive their springs. The first village to take up the challenge was Basavanahalli, where the women campaigned with officials at the district and the division level to get money especially for desilting the channels and the mouth of two underground springs in the village tank. The officials sanctioned an additional Rs 12,000 under the state government’s tank revival scheme Jalasamvardhana Yojana Sangha. Anita Lakshmi, president of the newly constituted tank development cooperative, said 14 ha land, belonging to 35 farmers in the village, has been receiving water from April till the monsoon for the past two years. "For many years our village had seen only one crop. Now we have two crops on 14 ha," she said.
In Madhugiri town, which is predominantly agricultural, along with the talaparige in the irrigation tank, the old water committee was resurrected. Young Gamkar M B Rangaraju, whose father had served in the post before him, said, "Our tank irrigates 120 ha, but in summers—April and May—we have started supplying water to 12 ha of areca plantations from the talaparige. This is crucial for the plantations." The committee also imposes a fine of Rs 150 a day on those staying away from maintenance duties.Following Madhugiri, people have revived 15 more underground springs under the state scheme. Coordinator of the scheme Nagaraja Naik is all for a large-scale revival of the numerous smaller springs. "In Madhugiri and Pavagada, where we have revived such talapariges, people shifted to them for drinking water because the bore well water has high fluoride levels," Naik said.
Mallikarjuna has also taken up the cause with the district panchayats. Tumkur district panchayat ceo Tulasi Naddineni has sanctioned work for reviving three talapariges under the National Rural Employment Guarantee Act this year. "Our next step is to lobby with the government for reviving talapariges instead of sinking bore wells under drinking water schemes," said Mallikarjuna. "In areas where people have started drinking the talaparige water, health problems caused by fluoride, like joint pain, are decreasing."

http://www.downtoearth.org.in/full6.asp?foldername=20100415&filename=news&sid=30&page=2&sec_id=50

Monday, March 22, 2010

ನೀರಿನ ನೆವದಲ್ಲಿ ಹಸಿರಿಗೆ ರಹದಾರಿ, ಬೇಟೆ ದುಬಾರಿ

ಕಂಜೂಸಿ ದಾನ್ ಸೆ ಜೀತೊ...
ಅಸತ್ಯ ಕೋ ಸತ್ಯಸೆ ಜೀತೊ...
ದ್ವೇಷ್-ಕ್ರೋಧ್ ಕೋ ಸದಾಚಾರ್ ಸೆ ಜೀತೊ...!


ಆ ಯೋಧರ ಪಡೆಯ ಮೂಲ ಮಂತ್ರಗಳಿವು. ಪ್ರಾರ್ಥನೆ ಹೀಗೆಯೇ ಸಾಗುತ್ತದೆ. ಇದೇನು ಹೊಸತಲ್ಲ ಬಿಡಿ. ನಮ್ಮ ದೇಶದ ದಾರ್ಶನಿಕರೆನಿಸಿಕೊಂಡವರೆಲ್ಲ ಬೋಸಿದ್ದು ಇದನ್ನೇ ಅಲ್ಲವೇ ? ಅಷ್ಟೇಕೆ ಭಾರತೀಯ ಮೂಲ ನಂಬಿಕೆಯೇ ಇದು. ಹೊಸತಿರುವುದು ಅದರ ಅನುಷ್ಠಾನದಲ್ಲಿ. ಹೇಗೆ ನೋಡಿದರೂ ಲಕ್ಷ್ಮಣ್ ಸಿಂಗ್‌ರಲ್ಲಿ ಒಬ್ಬ ಗಾಂ, ಒಬ್ಬ ಬುದ್ಧ, ಒಬ್ಬ ಮಹಾವೀರ, ಒಬ್ಬ ಧರ್ಮರಾಜ ಕಂಡರೆ ಅದಕ್ಕೆ ಕಾರಣ ಅವರು ಲಾಪೋಡಿಯಾದಲ್ಲಿ ತಾಲಾಬ್‌ಗಳ ಪುನರ್ ನಿರ್ಮಾಣ ಮಾಡಿದರು ಎಂಬುದಕ್ಕಲ್ಲ. ಅಲ್ಲಿ ನೀರಿನ ಸಮೃದ್ಧತೆಯನ್ನು ಮರಳಿ ತಂದರು ಎಂಬುದಕ್ಕಲ್ಲ. ಹಾದಿ ತಪ್ಪಿ ಹೋಗಿದ್ದ, ಬರಗೆಟ್ಟು ಬುಕಣಾಸಿಯಾಗಿ ಹೋಗಿದ್ದ ಲಾಪೋಡಿಯಾದ ಜನಜೀವನದಲ್ಲಿ ಧರ್ಮದ ಪುನರ್‌ಸ್ಥಾಪನೆ ಮಾಡಿದರು. ಅದು ಶುದ್ಧಾತಿಶುದ್ಧ ಮಾನವೀಯ ಧರ್ಮವಾಗಿತ್ತು. ಜೀವ ಧರ್ಮವಾಗಿತ್ತು. ಅಧರ್ಮವನ್ನು ಧರ್ಮ ಮಾರ್ಗದಿಂದ ಜಯಿಸಿದ್ದೇ ಲಕ್ಷ್ಮಣ್ ಸಾಹಸಗಾಥೆಗೆ ಇಟ್ಟ ಮುಕುಟ.
ಒಂದು ಕಾಲದಲ್ಲಿ ರಾಜಸ್ಥಾನದ ಆ ಪುಟ್ಟ ಹಳ್ಳಿಯ ಯುವಕರು ಅದೆಷ್ಟು ಪೋಲಿಬಿದ್ದು ಹೋಗಿದ್ದರೆಂದರೆ ಅವರಿವರನ್ನು ಟೀಕಿಸದಿದ್ದರೆ, ವ್ಯಂಗ್ಯ ಮಾಡದಿದ್ದರೆ ಅವರಿಗೆ ತಿಂದ ಅನ್ನವನ್ನು ಅರಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅದು ಎಷ್ಟರಮಟ್ಟಿಗೆ ಅವರಿಗೆ ರೂಢಿಬಿದ್ದು ಹೋಗಿತ್ತೆಂದರೆ ಊರಿನವರನ್ನು ಹಾಗಿರಲಿ, ಊರಿಗೆ ಬರುತ್ತಿದ್ದ ಅತಿಥಿಗಳನ್ನು, ದಾರಿಹೋಕರನ್ನೂ ಅವರು ಬಿಡುತ್ತಿರಲಿಲ್ಲ. ಕೊನೇ ಪಕ್ಷ ಅವರಿಗೆ ಅದು ಬಿಟ್ಟರೆ ಬೇರೇನೂ ಉದ್ಯೋಗವೂ ಇರಲಿಲ್ಲ. ಹಾಗೆಂದು ಹೊಟ್ಟೆ ಕೇಳಬೇಕಲ್ಲಾ ? ಬದುಕಿಗೊಂದು ಮಾರ್ಗ ಬೇಕಿತ್ತಲ್ಲ ? ಅದಕ್ಕೆ ಸಿಕ್ಕಿದ್ದು ದಗಾ-ವಂಚನೆ-ಮೋಸ... ಕೊನೆಗೆ ಖೂನಿ- ಕೊಲೆಗಳಿಗೂ ಅವರು ಹೇಸಿದ್ದು ಸುಳ್ಳು. ಅಂಥ ವಾತಾವರಣದಲ್ಲಿ ಮನುಷ್ಯ ಜೀವನವೇ ನರಕವಾಗಿರುವಾಗ ಪ್ರಾಣಿ-ಪಕ್ಷಿಗಳು ನೆಮ್ಮದಿಯಿಂದ ಉಸಿರಾಡುವುದು, ಸ್ವಚ್ಛಂದವಾಗಿ ಬದುಕುವುದು ದೂರದ ಮಾತಾಗಿತ್ತು. ಹಕ್ಕಿಗಳ ಕಲರವವನ್ನು ಮರೆತು ಅದೆಷ್ಟೋ ಕಾಲವಾಗಿತ್ತು. ಅವಿದ್ದರೆ ತಾನೇ ಚಿಲಿಪಿಲಿಗುಟ್ಟಲು. ಬಹುತೇಕವನ್ನು ಕೊಂದು ತಿಂದಾಗಿತ್ತು. ಅಳಿದುಳಿದವು ನೀರು ಕಾಳು ಕಾಣದೇ ನೆರೆ ರಾಜ್ಯಗಳಿಗೆ ವಲಸೆ ಹೋಗಿದ್ದವು.


ಅಂಥ ವಾತಾವರಣದಲ್ಲಿ ಮತ್ತೆ ಜೀವ ಸಾಮ್ರಾಜ್ಯವನ್ನು ಪುನರ್‌ಸ್ಥಾಪಿಸುವುದೆಂದರೆ ಅದು ಕಟುಕನ ಬಳಿ ದಯೆಯ ಅರ್ಥ ಕೇಳಿದಂತಾಗಿತ್ತು. ಆದರೆ ಲಕ್ಷ್ಮಣ್ ನಿರ್ಧಾರ ಮಾಡಿಯಾಗಿತ್ತು. ಲಾಪೋಡಿಯಾದ ಹೆಸರನ್ನು ಬದಲಿಸಬೇಕು. ಅದು ಭೌತಿಕವಾಗಿಯಷ್ಟೇ ಅಲ್ಲ, ಊರಿನ ಜನರ ಅಂತರಂಗದಲ್ಲಿ ಅಂಥ ಬದಲಾವಣೆ ಇಣುಕಬೇಕು. ಅಲ್ಲಿಯೇ ಅದು ಮನೆ ಮಾಡಬೇಕು. ಆಗ ಮಾತ್ರವೇ ಲಾಪೋಡಿಯಾ ಮತ್ತೆ ಬಹದ್ದೂರ್ ನಗರವಾಗಿ ಪರಿವರ್ತನೆ ಹೊಂದಲು ಸಾಧ್ಯ- ಈ ಗುರಿಯೊಂದಿಗೇ ಲಕ್ಷ್ಮಣ್ ಗ್ರಾಮ ವಿಕಾಸ ನವಯುವಕ ಮಂಡಲವನ್ನು ಕಟ್ಟಿದರು. ಅಲ್ಲಿಯ ಪ್ರಾರ್ಥನೆಯೇ ಸಂಘಟನೆಯ ಇಡೀ ಉದ್ದೇಶವನ್ನು ವಿವರಿಸುತ್ತದೆ.


ಜಿಪುಣನನ್ನು ದಾನದಿಂದ ಗೆಲ್ಲು, ಅಸತ್ಯವನ್ನು ಸತ್ಯದಿಂದ ಗೆಲ್ಲು....ಹೀಗೆಯೇ ಸಾಗುತ್ತದೆ ಆ ಪ್ರಾರ್ಥನೆಯ ಸಾಲುಗಳು. ಅದು ಕೇವಲ ಸಾಲುಗಳಾಗಿರಲಿಲ್ಲ. ಅದರಲ್ಲಿ ಜೀವ ಶಕ್ತಿಯನ್ನು ತುಂಬಿದ್ದರು ಲಕ್ಷ್ಮಣ್ ಸಿಂಗ್. ಪ್ರಾರ್ಥನೆ ಹಾಡುತ್ತಲೇ ಅದರ ಅನುಷ್ಠಾನವನ್ನೂ ಸಾಸಿಬಿಟ್ಟರು ಅವರು. ಸ್ಥಳೀಯ ಪರಂಪರೆಯ ಅಧ್ಯಯನಕ್ಕೆ ಅವರು ಮೊದಲು ಮಾಡಿದರು. ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ ದೇಸಿ ಸಂಸ್ಕೃತಿಯ ಸೊಗಡು ಅಷ್ಟಿಷ್ಟು ಊರಿನ ಹಳೆಯ ತಲೆಮಾರಿನಲ್ಲಿ ಉಳಿದಿತ್ತು. ಅದರ ನೆನಪುಗಳು ಅವರಲ್ಲಿನ್ನೂ ಹಸಿರಾಗಿತ್ತು. ಅಂಥ ನೆನಪುಗಳ ಹಸಿರು ಮಾಸುವ ಮೊದಲೇ ಜೀವ ಸಂಸ್ಕೃತಿಯನ್ನು ಚಿಗುರಿಸಿಬಿಡಬೇಕೆಂಬ ಎಚ್ಚರಿಕೆ ಮೂಡಿದ್ದು ಸಕಾಲಿಕವಾಗಿತ್ತು.


ಪಂಚಾಯಿತಿಗಳ, ಯುವಕ ಮಂಡಲಗಳ ಸಹಾಯದಿಂದ ಕೆಲ ಸಣ್ಣಪುಟ್ಟ ಸಂಪ್ರದಾಯಗಳನ್ನು ಊರಿನಲ್ಲಿ ಮತ್ತೆ ಜಾರಿಗೆ ತರಲಾಯಿತು. ಅದನ್ನು ನೀತಿ ನಿರೂಪಣೆಯನ್ನಾಗಿ ಪರಿವರ್ತಿಸಲಾಯಿತು. ಆರಂಭದಲ್ಲಿ ಇದಕ್ಕೆ ಎಂದಿನಂತೆಯೇ ವಿರೋಧ ವ್ಯಕ್ತವಾದರೂ ಯುವಕರ ಸಂಕಲ್ಪ ಶಕ್ತಿಯೆದುರು ಇದಾವುದೂ ನಿಲ್ಲಲಿಲ್ಲ. ನಿಯಮಗಳನ್ನು ಹೇರುವ ಬದಲು ಮನಪರಿವರ್ತನೆಯ ಮೂಲಕ ಅದನ್ನು ಅಳವಡಿಸಿಕೊಳ್ಳುವಂತೆ ಊರವರನ್ನು ಒಲಿಸಲಾಯಿತು. ಒಮ್ಮೆ ಮನೋಭಾವ ಬದಲಾದ ಮೇಲೆ ಮುಂದಿನದು ಕಷ್ಟವಾಗಲಿಲ್ಲ.


ನಿರುದ್ಯೋಗಿ ಕೈಗಳಿಗೆ ಉದ್ಯೋಗ, ಕಲಿಯುವ ಮನಸ್ಸಿಗೆ ಶಿಕ್ಷಣ- ಇವೆರಡಕ್ಕೆ ಅವಕಾಶವಾಗುತ್ತಿದ್ದಂತೆಯೇ ತನ್ನಿಂದ ತಾನೇ ಕ್ರಾಂತಿ ಇಣುಕಿತು. ಒಂದೆಡೆಯಲ್ಲಿ ಸುಶಿಕ್ಷಿತರು, ಯುವಕರ ಸಂಘಟನೆಯಾಗುತ್ತಿದ್ದರೆ ಇನ್ನೊಂದೆಡೆ ಊರಿನಲ್ಲಿದ್ದ ಶಾಲೆಯ ಅಭಿವೃದ್ಧಿ ಕಾರ್ಯ ಆರಂಭವಾಗಿತ್ತು. ಊರಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಶಾಲೆಗೆ ಹೋಗಲೇಬೇಕೆಂಬ ನಿಯಮವನ್ನು ಜಾರಿಗೆ ತರಲಾಯಿತು ಎಂಬುದಕ್ಕಿಂತ ಊರವರು ಸ್ವಯಂ ಪ್ರೇರಿತರಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮಾಡಲಾಯಿತು. ನಂತರದ್ದು ಅರಣ್ಯ ಸಂರಕ್ಷಣೆ. ಊರಿನ ಅರಣ್ಯ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ಮನುಷ್ಯರು ಪ್ರವೇಶಿಸುವಂತಿಲ್ಲ. ಅಲ್ಲಿ ಸಸಿಗಳನ್ನು ಯಾರೂ ಉದ್ದೇಶಪೂರ್ವಕ ನೆಡುವುದು ಬೇಕಿಲ್ಲ. ಸ್ವಾಭಾವಿಕವಾಗಿಯೇ ಹುಟ್ಟುವ ಸಸ್ಯಗಳ ಜತೆಗೆ ಮಾನವನ ಹಸ್ತಕ್ಷೇಪ ಆಗದಿದ್ದಲ್ಲಿ ಮೂರು ವರ್ಷಗಳಲ್ಲಿ ತನ್ನಿಂದ ತಾನೇ ದಟ್ಟ ಹಸಿರು ಕಾಣಲಾರಂಭಿಸುತ್ತದೆ. ಒಮ್ಮೆ ಅರಣ್ಯ ಸೊಂಪಾಗಿಬಿಟ್ಟರೆ ಜೀವ ಸಂಕುಲಗಳ ಅಭಿವೃದ್ಧಿ ಕಷ್ಟದ ಕೆಲಸವಲ್ಲ. ಅದು ಸುಲಭದ ಮಾರ್ಗವಾಗಿತ್ತು. ಕೇವಲ ಉಪದೇಶದಿಂದ ಇದು ಸಾಧ್ಯವಾಗುವುದಲ್ಲ ಎಂಬ ಎಚ್ಚರಿಕೆಯೊಂದಿಗೆ ಕೆಲವು ನಿಬಂಧನೆಗಳನ್ನು ಜಾರಿಗೆ ತರಲಾಯಿತು. ಒಂದು ಮರ ಕಡಿದರೆ ಆ ವ್ಯಕ್ತಿ ಕನಿಷ್ಠ ಎರಡು ಸಸಿಗಳನ್ನು ಬೆಳೆಸುವುದು ಜತೆಗೆ ಒಂದು ೧೨ ಮಣ (ಒಂದು ಮಣ ಎಂದರೆ ೪೦ ಕೆ.ಜಿ.) ಧಾನ್ಯವನ್ನು ದಂಡ ರೂಪದಲ್ಲಿ ಕೊಡಬೇಕು ಎಂಬುದನ್ನು ಕಡ್ಡಾಯಗೊಳಿಸಲಾಯಿತು. ಹಾಗೆ ದಂಡದ ರೂಪದಲ್ಲಿ ಬಂದ ಧಾನ್ಯವನ್ನುಯುವಕ ಮಂಡಲದ ಸದಸ್ಯರು ಪ್ರತಿ ದಿನ ಮುಂಜಾವು ಮತ್ತು ಸಂಜೆಯ ವೇಳೆ ಊರಿನ ವ್ಯಾಪ್ತಿಯಲ್ಲಿ ಬೆಟ್ಟ ಗುಡ್ಡಗಳಲ್ಲಿ ಹೋಗಿ ಎರಚಿ ಬರುತ್ತಿದ್ದರು. ಹೀಗೆ ಎರಚಿದ ಕಾಳುಗಳಿಂದ ಆಕರ್ಷಿತವಾಗಿ ಹೆಚ್ಚು ಹೆಚ್ಚು ಪಕ್ಷಿಗಳು ಲಾಪೋಡಿಯಾದ ಕಡೆಗೆ ಬರಲು ಆರಂಭಿಸಿದವು. ಹಾಗೆ ಬಂದವು ಅಲ್ಲಿ ಕಣ್ಣು ಬಿಡಲಾರಂಭಿಸಿದ್ದ ಹಸಿರಿನ ಸಸಿಗಳಲ್ಲಿ ಆಶ್ರಯ ಪಡೆಯಲಾರಂಭಿಸಿದವು. ಆಗ ಊರಿನಲ್ಲಿ ಜಾರಿಗೆ ಬಂದದ್ದು ಪ್ರಾಣಿ-ಪಕ್ಷಿಗಳ ಬೇಟೆ ನಿಷೇಧ. ಒಂದು ಪ್ರಾಣಿ ಕೊಂದರೆ ಆತ ೫ ಸಾವಿರ ರೂ. ದಂಡ ಪಾವತಿಸುವಂತಾಯಿತು. ಹಕ್ಕಿಗಳಿಗೆ ಕಲ್ಲು ಹೊಡೆದವ ೫೦೦ ರೂ. ತೆರಬೇಕಾಯಿತು. ಊರಿನ ಹೊರಭಾಗದಲ್ಲಿ ಈ ಸಂಬಂಧ ಸೂಚನಾ ಫಲಕವನ್ನೇ ಬರೆಸಿ ಹಾಕಲಾಯಿತು.


ಇಷ್ಟೆಲ್ಲ ಆಗುವ ಹೊತ್ತಿಗೆ ಸರಕಾರಿ ಆಡಳಿತ ಯಂತ್ರ ಸುಮ್ಮನಿದ್ದೀತೆ ? ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಎಲ್ಲರೂ ಸಂವಿಧಾನ ಬದ್ಧ ಕಾನೂನನ್ನೇ ಗೌರವಿಸಬೇಕೇ ಹೊರತು ಸ್ಥಳೀಯ ನಿಯಮಗಳಿಗೆ ಅವಕಾಶವಿಲ್ಲ ಎಂಬ ಆಕ್ಷೇಪ ತಹಸೀಲ್ದಾರರಿಂದ ಕೇಳಿಬಂತು. ಈ ಸಂಬಂಧ ಗ್ರಾಮ ಪಂಚಾಯಿತಿಗೆ ನೋಟಿಸ್ ಸಹ ಜಾರಿಯಾಯಿತು. ಆದರೆ ಅಷ್ಟರಲ್ಲಾಗಲೇ ಕಾನೂನು ಗೌರವಿಸುವ ಜನರ ಮನಪರಿವರ್ತನೆ ಆಗಿ ಬಿಟ್ಟಿತ್ತು. ಜನ ಸ್ಥಳೀಯ ನಿಯಮವನ್ನು ಸ್ವ ಸಂತೋಷದಿಂದ ಒಪ್ಪಿಕೊಂಡುಬಿಟ್ಟಿದ್ದರು. ಹೀಗಾಗಿ ಬೇರಾವುದೂ ಅವರ ಮೇಲೆ ಪರಿಣಾಮ ಬೀರಲಿಲ್ಲ. ಆದ್ದರಿಂದ ಲಾಪೋಡಿಯಾದಲ್ಲಿ ಗೋಚರ್(ನಮ್ಮ ಗೋಮಾಳ)ಗಳ ಸಂರಕ್ಷಣೆಗೆ ನಡೆದ ಆಂದೋಲನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜೈವಿಕ-ಪರಿಸರ ವ್ಯವಸ್ಥೆಯ ಅಭಿವೃದ್ಧಿ, ಗೋಮಾಳಗಳ ಒತ್ತುವರಿ ತೆರವು ಮತ್ತು ನಿರ್ಬಂಧ, ಕೆರೆ ಸಂರಕ್ಷಣೆ, ತಾಲಾಬ್‌ಗಳ ಪುನಶ್ಚೇತನ, ಮಕ್ಕಳ ಶಿಕ್ಷಣ- ಹೀಗೆ ಎಲ್ಲವೂ ಒತ್ತೊಟ್ಟಿಗೇ ನಡೆದದ್ದು ಲಾಪೋಡಿಯಾದ ಚಿತ್ರಣವನ್ನೇ ೩೦ ವರ್ಷಗಳಲ್ಲಿ ಬದಲಿಸಿಬಿಟ್ಟಿತು. ಸಾರ್ವಜನಿಕ ಬದುಕು ಸುಂದರವಾಗಿಸಿದ ಲಕ್ಷ್ಮಣ್‌ಸಿಂಗ್ ಅಲ್ಲಿ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದಿದ್ದರು. ನಿಜವಾಗಿ ಸಹಭಾಗಿತ್ವದಿಂದ ವಿಕಾಸವಾಗಿತ್ತು. ಅಂಥ ವಿಕಾಸ ಶಾಂತಿಯನ್ನು ದಕ್ಕಿಸಿಕೊಟ್ಟಿತ್ತು.


ಲಾಸ್ಟ್‘ಡ್ರಾಪ್‘: ಚೌಕ ಪದ್ಧತಿ ದೇಶದ ಜಲ ಸಂರಕ್ಷಣಾ ವ್ಯವಸ್ಥೆಯಲ್ಲಿ ವಿನೂತನ ತಂತ್ರಜ್ಞಾನವಾಗಿ ಹೊರಹೊಮ್ಮಿದೆ. ಇದರ ತವರು ಲಾಪೋಡಿಯಾ.

Monday, March 15, 2010

ರಜಪೂತರ ಕುಡಿ ಕಟ್ಟಿದ ಜಲಯೋಧರ ಸೇನೆ

ನಮ್ಮೊಳಗೆ ನಾನೂ ಒಬ್ಬ. ಇದು ನನ್ನೊಬ್ಬನಿಂದಾದ ಕೆಲಸವಲ್ಲ. ಆದರೆ ಇದು ನಾನೇ ಮಾಡಬೇಕಾದದ್ದು. ನಾನಲ್ಲದೇ ಇದನ್ನು ಮಾಡುವವರು ಬೇರಾರೂ ಇಲ್ಲ. ನಾನೇ ಇದನ್ನು ಆರಂಭಿಸಬೇಕು. ಆದರೆ ನನ್ನಿಂದಲೇ ಆಗುತ್ತದೆ ಎಂದೇನೂ ಇಲ್ಲ. ನಾನಿಲ್ಲದಿದ್ದರೂ ಇದು ಆಗುವುದರಲ್ಲಿ ಅನುಮಾನವಿಲ್ಲ. ಅದರಲ್ಲಿ ’ನಾನು’ ಎಂಬುದು ತೀರಾ ನಗಣ್ಯ. ಹೀಗಿದ್ದೂ ನಾನು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುವುದಿಲ್ಲ. ನಾವೆಲ್ಲರೂ ಸೇರಿಯೇ ಇದನ್ನು ತಲೆ ಕಾಣಿಸಬೇಕು. ನನ್ನೊಬ್ಬನಿಗಾಗಿ ಇದನ್ನು ಮಾಡುವುದಲ್ಲ. ನಮ್ಮೆಲ್ಲರಿಗಾಗಿ ನಾನು ಮಾಡಬೇಕಾದದ್ದನ್ನು ಬೇರೆಯವರು ಮಾಡಲಿ ಎಂದು ಬಯಸುವುದು ಎಷ್ಟು ಸರಿ...
ಲಾಪೋಡಿಯಾದ ನೀರಸಾಧಕ ಲಕ್ಷ್ಮಣ್ ಸಿಂಗ್ ಹೇಳುತ್ತಾ ಹೋಗುತ್ತಿದ್ದರೆ ಅವರ ಕಣ್ಣುಗಳು ಹೊಳೆಯುತ್ತವೆ. ಅವರೊಳಗಿರಬಹುದಾದ ತತ್ತ್ವಜ್ಞಾನಿಯ ದರ್ಶನವಾಗುತ್ತದೆ. ಆತ ಬರೀ ಸಾಧಕನಲ್ಲ. ಮಹಾನ್ ತಪಸ್ವಿಯಾಗಿ ಗೋಚರಿಸುತ್ತಾರೆ. ಒಬ್ಬ ಯೋಗಿಯ ದೃಢತೆಗೆ ಪ್ರತೀಕವಾಗುತ್ತಾರೆ. ಶಾಂತಿಯ ಅವಧೂತನಂತೆ ಕಂಗೊಳಿಸುತ್ತಾರೆ. ಸತ್ಯ- ಅಹಿಂಸೆಗಳಿಗೆ ಮೂರ್ತ ಸ್ವರೂಪ ಕಟ್ಟಿಕೊಡುತ್ತಾರೆ. ಒಟ್ಟಾರೆ ಗಾಂ, ಬುದ್ಧ, ಪರಮಹಂಸ, ವಿವೇಕ ಇವೆಲ್ಲರ ತತ್ತ್ವಾಧಾರಿತ ಸಂಮಿಳಿತ ಸ್ವರೂಪದಲ್ಲಿ ಲಕ್ಷ್ಮಣ್ ನಿಲ್ಲುತ್ತಾರೆ. ಅವರನ್ನು ಭೇಟಿಯಾದರೆ, ಮಾತನಾಡಿಸಿದರೆ ಇದಾವುದೂ ಉತ್ಪ್ರೇಕ್ಷೆ ಅನ್ನಿಸುವ ಪ್ರಮೇಯವೇ ಇಲ್ಲ.
ಅದು ಯಾವುದೇ ಅಭಿವೃದ್ಧಿ ಇರಬಹುದು, ಜನರಿಂದ, ಅವರ ಸಹಭಾಗಿತ್ವದಿಂದ ನಡೆದಾಗಲೇ ಅದಕ್ಕೊಂದು ಅರ್ಥ. ಅದೇ ನಿಜವಾದ ಯಶಸ್ಸು- ಲಕ್ಷ್ಮಣ್‌ರ ಯಶಸ್ಸಿನ ಗುಟ್ಟೇ ಇದು. ‘ಜನರೂ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು. ಜನರಲ್ಲಿ ಇದು ನಮ್ಮದೇ ಕೆಲಸ, ಇದು ನಮಗಾಗಿ ನಾವು ಮಾಡಿಕೊಳ್ಳುವುದು, ಇದರ ಸಂಪೂರ್ಣ ಯಶಸ್ಸು ನಮಗೇ ಸಿಗಬೇಕು ನಮ್ಮ ಸ್ವ ಪ್ರಯತ್ನದಿಂದ ನಮ್ಮ ಊರು ಅಭಿವೃದ್ಧಿ ಹೊಂದಬೇಕು ಎಂಬ ಮನೋಭಾವ ನೆಲೆಗೊಂಡಲ್ಲಿ ಮಾತ್ರ ಸುಸ್ಥಿರತೆಯನ್ನು ಸಾಸಲಾಗುತ್ತದೆ ಎಂಬ ನಂಬಿಕೆಯೇ ಲಾಪೋಡಿಯಾದ ದಿಕ್ಕನ್ನೇ ಬದಲಿಸಿತು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅವರು.
ನಮಗಾಗಿ ನಮ್ಮಿಂದ- ಪ್ರತಿಯೊಬ್ಬರೂ ಇಂಥ ಮನೋಭಾವದಿಂದಲೇ ಕಣಕ್ಕಿಳಿದಾಗ ಮಾತ್ರವೇ ಯಾವುದೇ ಸಾಧನೆ ಸಾಧ್ಯವಾಗುತ್ತದೆ. ಅಂಥ ವಿನೀತ ಭಾವದಿಂದಲೇ ಲಾಪೋಡಿಯಾದ ಸ್ಥಿತಿಯನ್ನು ಬದಲಿಸುವ ನಿರ್ಧಾರಕ್ಕೆ ಅಡಿ ಇಟ್ಟದ್ದು. ಅಲ್ಲಿನ ಜನರಿಗೆ ಹೇಳಿದ್ದೂ ಇದನ್ನೇ. ಮುಖ್ಯವಾಗಿ ಯುವಜನರ ಸಂಘಟನೆ ಮಾಡಿದ್ದು ಇದೇ ತತ್ತ್ವದ ಆಧಾರದ ಮೇಲೆಯೇ. ಅದೇನೂ ಸಣ್ಣ ಮಾತಾಗಿರಲಿಲ್ಲ. ಸಂಪೂರ್ಣ ದಾರಿದ್ರ್ಯಕ್ಕೆ ಒಳಗಾಗಿದ್ದ ಹಳ್ಳಿಗರ ಮನಃಸ್ಥಿತಿಯನ್ನು ಬದಲಿಸುವುದು ತಾಲಾಬ್‌ಗಳ ಪುನಶ್ಚೇತನಕ್ಕಿಂತ ಹೆಚ್ಚಿನ ದುಃಸ್ಸಾಹಸವಾಗಿತ್ತು.

ಹಾಗೆಂದು ಯಾವುದೋ ಹೊರಗಿನ ನೆರವನ್ನು ಪಡೆದೋ, ಸರಕಾರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡೋ ತಾಲಾಬ್ ಅನ್ನು ಕಟ್ಟಿಬಿಡುತ್ತೇನೆ, ಊರಿನ ಅಭಿವೃದ್ಧಿ ಮಾಡಿಬಿಡುತ್ತೇನೆ ಎಂಬುದು ಕೇವಲ ಭ್ರಮೆಯಾಗಿತ್ತು. ಹಾಗೊಮ್ಮೆ ಆಗುವುದಿದ್ದರೆ ಸ್ವಾತಂತ್ರ್ಯಾನಂತರದ ಇಷ್ಟು ವರ್ಷಗಳಲ್ಲಿ ಊರಿನ ಸ್ಥಿತಿ ಬದಲಾಗಿ ಯಾವುದೋ ಕಾಲವಾಗಿರುತ್ತಿತ್ತು. ಹಾಗಾಗಲಿಲ್ಲ ಎಂದರೆ ಅಲ್ಲಿ ಆಗಬೇಕಿದ್ದುದು ಬೇರೆಯೇ ಇತ್ತು. ನಿಜವಾಗಿ ನಾವಲ್ಲಿ ಕಟ್ಟಬೇಕಿದ್ದುದು ತಾಲಾಬ್ ಅನ್ನು ಮಾತ್ರವಲ್ಲ. ಮನಸ್ಸುಗಳನ್ನು ಕಟ್ಟಬೇಕಿತ್ತು. ಸಂಸ್ಕೃತಿಯನ್ನು ಜೋಡಿಸಬೇಕಿತ್ತು. ಬಂಜೆ ಭೂಮಿಯಲ್ಲಿ ಮತ್ತೆ ಬಯಕೆಯನ್ನು ಚಿಗುರಿಸಬೇಕಿತ್ತು. ಹಳ್ಳಹಿಡಿದಿದ್ದ ಪರಿಸರವನ್ನು ಪುನಶ್ಚೇತನಗೊಳಿಸಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಊರು ತೊರೆದು ಹೋದ ಪ್ರತೀ ಜೀವಿಯಲ್ಲೂ ‘ಇದು ನಮ್ಮೂರು’ ಎಂಬ ಮಮಕಾರವನ್ನು ಮೂಡಿಸಿ ಮರಳಿ ಕರೆತರಬೇಕಿತ್ತು. ಬದುಕಿನ ಅನಿಶ್ಚಿತತೆಯನ್ನು ಹೊಡೆದೋಡಿಸಬೇಕಿತ್ತು-ಲಕ್ಷ್ಮಣ್ ವಿವರಿಸುತ್ತಾ ಹೋಗುತ್ತಿದ್ದರೆ ಅಲ್ಲಿನ ಕರಾಳ ಚಿತ್ರಣ ತೆರೆದುಕೊಳ್ಳುತ್ತ ಹೋಗುತ್ತದೆ. ನೀರೊಂದು ಹಾದಿ ತಪ್ಪಿದರೆ ಇಡೀ ಬದುಕು ಹೇಗೆ ಹಳ್ಳ ಹಿಡಿದು ಹೋಗುತ್ತದೆ ಎಂಬುದಕ್ಕೆ ಲಾಪೋಡಿಯಾ ಪ್ರತ್ಯಕ್ಷ ಸಾಕ್ಷಿಯಾಗಿತ್ತು.
ಇವೆಲ್ಲದಕ್ಕಾಗಿ ಬದುಕು ಸವೆಸಲು ಒಂದಷ್ಟು ಮಂದಿ ಸಂಘಟಿತರಾಗಲೇಬೇಕಿತ್ತು. ಸಂಘಟನೆಗೆ ಮೂಲಾಧಾರವಾಗಬಹುದಾದದ್ದು ಜಾಗೃತಿ. ಜತೆಗೆ ಒತ್ತುವರಿ ಮತ್ತಿತರೆ ನೂರಾರು ಕಾರಣಗಳಿಂದ ಒಡೆದು ಹೋಗಿದ್ದ ಗ್ರಾಮದ ಮನಸ್ಸುಗಳನ್ನೂ ಒಂದುಗೂಡಿಸುವುದಕ್ಕೆ ವ್ಯವಸ್ಥಿತ ಸಾಂಸ್ಥಿಕ ಸ್ವರೂಪಗಳು ಮೈದಳೆಯುವುದು ಅತ್ಯವಶ್ಯಕ ಎನಿಸಿತು. ಸರಕಾರಿ ಛತ್ರದಡಿಯ ಪಂಚಾಯಿತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯಲು ಹವಣಿಸುವ ಪಟ್ಟ ಭದ್ರರು, ಭ್ರಷ್ಟಾಚಾರಿಗಳ ತಾಣವಾಗಿತ್ತು. ನಮ್ಮ ಕೆಲಸ ಆರಂಭವಾಗುತ್ತಿದ್ದಂತೆಯೇ ವಿರೋಧ ಬಂದದ್ದೇ ಇಂಥವರಿಂದ. ಸ್ವಾಭಾವಿಕ ಅರಣ್ಯವನ್ನೂ ಬಿಡದೇ ಒತ್ತುವರಿ ಮಾಡಿಕೊಂಡಿದ್ದ ಮಂದಿ ಇವರ ಬೆಂಬಲಕ್ಕೆ ನಿಂತರು. ಇದಕ್ಕೆ ಪ್ರತ್ಯಸ್ತ್ರವಾಗಿ ಮೊದಲಿಗೆ ನಾವು ಪ್ರಯೋಗಿಸಿದ್ದು ಗ್ರಾಮ ಸಮಿತಿಗಳ ಬಲವೃದ್ಧಿ. ಸ್ಥಳೀಯರನ್ನು ಒಳಗೊಂಡ ನೈಜ ಪ್ರಜಾ ಪ್ರತಿನಿಗಳನ್ನು ಆಡಳಿತ ವ್ಯವಸ್ಥೆಗೆ ಎಲ್ಲ ಅಕಾರವನ್ನು ಹಸ್ತಾಂತರಿಸುವಂತೆ ಮಾಡಲಾಯಿತು. ಒಮ್ಮೆ ಗ್ರಾಮ ಸಮಿತಿಗಳು ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಶ್ರಮದಾನಕ್ಕೆ ಜನರನ್ನು ಒಗ್ಗೂಡಿಸುವ ಹೊಣೆಯನ್ನು ಅವುಗಳಿಗೊಪ್ಪಿಸಲಾಯಿತು. ಮುಂದಿನದು ಕಷ್ಟವಾಗಲಿಲ್ಲ- ಲಕ್ಷ್ಮಣ್ ಹಳೆಯ ಹರಸಾಹಸವನ್ನು ನೆನೆದು ಒಮ್ಮೆ ನಿಟ್ಟುಸಿರು ಬಿಟ್ಟರು.


ಮುಂದಿನ ಸವಾಲು ಊರಿನ ಯುವಬಲ ಸೂಕ್ತ ದಿಕ್ಕಿನಲ್ಲಿ ಹರಿಯುವಂತೆ ಮಾಡುವುದು. ಗ್ರಾಮೀಣ ಯುವಕರೇ ಅವರ ಒಟ್ಟಾರೆ ಯಶೋಗಾಥೆಯ ಸರದಾರರು. ಒಂದು ವರ್ಷದಲ್ಲಿ ೩೦ ಯುವಕ ಮಂಡಲಗಳನ್ನು ಲಕ್ಷ್ಮಣ್ ಸಿಂಗ್ ಅಸ್ತಿತ್ವಕ್ಕೆ ತಂದಿದ್ದರು. ಆನಂತರ ಸುತ್ತಲಿನ ೪೨ ಹಳ್ಳಿಗಳಿಗೆ ಅದು ವಿಸ್ತಾರಗೊಂಡಿತು. ಸುತ್ತಮುತ್ತಲ ಹಳ್ಳಿಗಳ ಇಂಥ ಯುವ ಮಂಡಲದ ಸ್ವಯಂ ಸೇವಾ ಸದಸ್ಯರನ್ನು ‘ಜಲಯೋಧರು’ ಎಂಬ ಸುಂದರ, ಉತ್ಸಾಹದಾಯಕ ಹೆಸರಿನಿಂದ ಕರೆದರು ಲಕ್ಷ್ಮಣ್. ಅಂಥ ಎಲ್ಲ ಯುವಮಂಡಲದ ಒಕ್ಕೂಟವನ್ನು ರಚಿಸಿ ೧೯೮೬ರಲ್ಲಿ ’ಲಾಪೋಡಿಯಾದ ಗ್ರಾಮೀಣ ವಿಕಾಸ ನವಯುವಕ ಮಂಡಲ(ಜಿವಿಎನ್‌ಎಂ)’ ಎಂಬ ಅಕೃತ ಸ್ವಯಂ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು.


ಇಂದು ಜಿವಿಎನ್‌ಎಂನಲ್ಲಿ ೭೦ ಮಂದಿ ಪೂರ್ಣಾವ ಕಾರ್ಯಕರ್ತರಿದ್ದಾರೆ. ೨೫೦ ನೌಕರರು ಸಂಸ್ಥೆಯ ದೈನಂದಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಜಲಯೋಧರ ಸಂಖ್ಯೆ ೮ ಸಾವಿರಕ್ಕೆ ಬೆಳೆದಿದೆ. ಲಾಪೋಡಿಯಾದಿಂದ ಪ್ರೇರಣೆ ಪಡೆದು ಇವತ್ತು ನಾಲ್ಕು ಜಿಲ್ಲೆಗಳಲ್ಲಿ ಬೃಹದಾಕಾರವಾಗಿ ಬೆಳೆದಿರುವ ಸಂಘಟನೆ ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದೆ. ೩೦ ವರ್ಷಗಳ ಅವಿರತ ಶ್ರಮದ ಫಲವಾಗಿ ಲಕ್ಷ್ಮಣ್‌ರ ಕನಸಿನ ನವ ವಿಕಾಸ ಮಂಡಲದ ಹೆಸರು ದೇಶ ವಿದೇಶಗಳಲ್ಲಿ ಮಾರ್ದನಿಸುತ್ತಿದೆ. ನೀವು ನಂಬಬೇಕು, ಈಗಿನ ಜಿವಿಎನ್‌ಎಂನ ವಾರ್ಷಿಕ ಬಜೆಟ್ ೪.೫ ದಶಲಕ್ಷ ರೂ.ಗಳು. ಹಳ್ಳಿಗಳ ಬಲವೃದ್ಧಿ, ಸ್ಥಳೀಯರ ಕೈಗೆ ಅಕಾರ, ಗ್ರಾಮ ಸ್ವರಾಜ್ಯದ ಗಾಂಜಿಯವರ ಸಿದ್ಧಾಂತ ಅನುಷ್ಠಾನದಲ್ಲಿ ಗ್ರಾಮವಿಕಾಸ ಮಂಡಲ ಮಹತ್ವದ ಪಾತ್ರವನ್ನು ವಹಿಸಿದೆ. ದುಡಿಯುವ ಕೈಗಳು ಸುಮ್ಮನೆ ಕೂರದಂತೆ ಮಾಡಿದೆ. ೪೨ ಸಾವಿರ ಕುಟುಂಬಗಳು ಇಂದು ಸ್ವಾವಲಂಬಿಯಾಗಿ ಬದುಕುತ್ತಿದೆ. ೨೦೦ ಹೆಕ್ಟೇರ್‌ನಷ್ಟು ಕೃಷಿ ಭೂಮಿ ನಳನಳಿಸುತ್ತಿದೆ. ಶೂನ್ಯವಿದ್ದ ಊರಿನ ಜನರ ತಲಾದಾಯ ೧೪ ಸಾವಿರ ರೂ.ಗಳಿಗೆ ಏರಿದೆ. ಇನ್ನೊಂದು ವಿಶೇಷವೆಂದರೆ ತಾಲಾಬ್‌ಗಳ ಮರು ನಿರ್ಮಾಣ ಸೇರಿದಂತೆ ಊರಿನಲ್ಲಿ ಕೈಗೊಂಡ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಸಂಪನ್ಮೂಲ ಒದಗಿಸಿದ್ದು ಸ್ಥಳೀಯರೇ. ಪ್ರತಿ ಕುಟುಂಬ, ಪ್ರತಿ ಹೊಸ ಯೋಜನೆಗೆ ತಲಾ ನೂರು ರೂ.ಗಳ ದೇಣಿಗೆ ನೀಡುವ ಸಂಪ್ರದಾಯ ಬೆಳೆದು ಬಂದಿದೆ. ಇಷ್ಟಕ್ಕೇ ಹೊಣೆಗಾರಿಕೆ ಮುಗಿಯುವುದಿಲ್ಲ. ಎಲ್ಲ ಯೋಜನೆಗಳಿಗೂ ಪ್ರತಿ ಕುಟುಂಬದಿಂದ ಒಬ್ಬನ ಶ್ರಮದಾನ ಕಡ್ಡಾಯ. ಹಣ ಕೊಡಲಾಗದಿದ್ದವರು ಅದಕ್ಕೆ ಪರಿಹಾರ ರೂಪದಲ್ಲಿ ಶ್ರಮದಾನಕ್ಕೆ ಹೆಚ್ಚುವರಿ ಆಳನ್ನು ಮೊದಲ ಸುಗ್ಗಿಯ ಬಳಿಕ ಮೂರು ತಿಂಗಳ (ಮೇನಿಂದ ಜುಲೈ) ಅವಗೆ ಕಳುಹಿಸಿಕೊಡಬೇಕು. ಹಾಗೆಂದು ಶ್ರಮದಾನಕ್ಕೆ ಇಂಥ ವಿನಾಯ್ತಿ ಇಲ್ಲ. ಆಳಿನ ಬದಲು ಹೆಚ್ಚುವರಿ ಹಣವನ್ನು ಕೊಡುತ್ತೇನೆ ಎನ್ನುವ ಪ್ರಶ್ನೆಯೇ ಇಲ್ಲ. ಗ್ರಾಮ ಸಮಿತಿಗಳು ಕೆಲಸ, ಹಣ ಹಾಗೂ ಮಾನವ ಸಂಪನ್ಮೂಲದ ನಿರ್ವಹಣೆ ಮಾಡುತ್ತದೆ. ಜತೆಗೆ ನೀರಿನ ನಿರ್ವಹಣೆಯನ್ನೂ ಅದೇ ನೋಡಿಕೊಳ್ಳುತ್ತದೆ. ಇದಕ್ಕಾಗಿ ಯುವಕರಿಗೆ ವಿಶೇಷ ತಾಂತ್ರಿಕ ತರಬೇತಿಯನ್ನು ಒದಗಿಸಲಾಗುತ್ತದೆ.


ಇದಲ್ಲವೇ ನಿಜವಾದ ಪ್ರಜಾಪ್ರಭುತ್ವ? ಇದಲ್ಲವೇ ಸೂಕ್ತ ಅಕಾರ ವಿಕೇಂದ್ರೀಕರಣ ? ಇದಲ್ಲವೇ ಪೂರ್ಣ ಸಮುದಾಯ ಸಹಭಾಗಿತ್ವ? ಒಬ್ಬ ಸಮರ್ಥ ಆಡಳಿತಗಾರ ತಾನೆಂಬುದನ್ನೂ ಈ ಮೂಲಕ ಲಕ್ಷ್ಮಣ್ ಸಿಂಗ್ ಸಾಬೀತು ಪಡಿಸಿದ್ದಾರೆ. ಎಷ್ಟಾದರೂ ಅವರು ರಜಪೂತ ರಾಜಮನೆತನದ ಕುಡಿಯಲ್ಲವೇ. ರಾಜಾ ಪ್ರತ್ಯಕ್ಷ ದೇವತಾಃ- ಎಂಬ ಪದಕ್ಕೆ ನಿಜ ಅರ್ಥದಲ್ಲಿ ಇಂದು ಲಕ್ಷ್ಮಣ್ ಭಾಜನರಾಗಿದ್ದಾರೆ. ಜಯ ಹೋ ಲಕ್ಷ್ಮಣ್.


‘ಲಾಸ್ಟ್‘ಡ್ರಾಪ್: ಪ್ರಾಣಿ- ಪಕ್ಷಿಗಳನ್ನು ದಂಡಿಸುವ ಮನುಷ್ಯ ಲಾಪೋಡಿಯಾದಲ್ಲಿ ಇಂದು ದಂಡ ತೆರಲೇಬೇಕು. ಅಂಥದ್ದೊಂದು ಕಠಿಣ ಕಟ್ಟಳೆ ಅಲ್ಲಿನ ಸ್ಥಳೀಯರಿಂದ ಸ್ವಯಂ ಪ್ರೇರಿತವಾಗಿ ಜಾರಿಗೊಂಡಿದೆ.

Sunday, March 7, 2010

ತಾಲಾಬ್‌ಗಳ ತೊಟ್ಟಿಲಲ್ಲಿ ಮತ್ತೆ ಹಸಿರಿನ ತೊನೆದಾಟ

ಡು ಕಂದು ಬಣ್ಣದ, ಮಿರಮಿರನೆ ಮಿಂಚುವ ತೊಗಲಿನ, ಉದ್ದ ಕಿವಿಯ, ಎದ್ದು ಕಾಣುವ ಭುಜದ ತುಂಬಿದ ಮೈಯ ಆ ಹಸು ನಡೆದು ಬರುತ್ತಿದ್ದರೆ ಅದೇನೋ ಎಂತೋ ತನ್ನಿಂದ ತಾನೇ ಭಕ್ತಿಭಾವ ಉಕ್ಕುತ್ತಿತ್ತು. ಆಕೆ ಗೋಮಾತೆ. ಆಕೆಯ ಮುಗ್ಧಮುಖ ಕಂಡರೆ ಸಾಕು ಎಂಥವರೂ ಒಮ್ಮೆ ಮೈದಡವಿ ಮುದ್ದಿಸುವಂತಿತ್ತು. ಅದಾದರೂ ಸಾಮಾನ್ಯದ್ದಲ್ಲ. ಲಾಪೋಡಿಯಾದ ರಾಜಮನೆತನದ ಗೋ ಮಾತೆ. ಒಂದು ಕಾಲದಲ್ಲಿ ಆ ‘ಗೋ ಮಾತೆ’ ಅಲ್ಲಿನ ನೀರನ್ನು ಕುಡಿಯುತ್ತಿರಲಿಲ್ಲ. ಕುಡಿಯುವುದು ಹಾಗಿರಲಿ ಮೂಸಿಯೂ ನೋಡುತ್ತಿರಲಿಲ್ಲ. ಉಳಿದೆಲ್ಲ ಜಾನುವಾರುಗಳೂ ಅ ಹೊಂಡಕ್ಕೆ ಬಂದು ಅಳಿದುಳಿದ ಕೆಸರು ನೀರನ್ನೇ ಕುಡಿದು ದಾಹ ತೀರಿಸಿಕೊಳ್ಳುತ್ತಿದ್ದವು. ಆದರೆ ಈಕೆ.... ಊಹುಂ...ಸರ್ವಥಾ ಇಲ್ಲ. ಜಹಗೀರರ ಮನೆಯದ್ದು ಎಂಬ ಕಾರಣಕ್ಕೆ ಅದು ಹೊಂಡದ ನೀರನ್ನು ಕುಡಿಯುತ್ತಿರಲಿಲ್ಲ ಎಂಬುದಕ್ಕಿಂತ ಅತ್ಯಂತ ಕುಶಾಗ್ರಮತಿಯಾದ ಆ ಹಸುವಿಗೆ ಲಾಪೋಡಿಯಾದ ಕಲುಷಿತ ನೀರನ್ನು ಕುಡಿಯುವ ಮನಸ್ಸಿರಲಿಲ್ಲ.

ಲಕ್ಷ್ಮಣ್ ಸಿಂಗ್ ಹೇಳುತ್ತ ಹೋಗುತ್ತಿದ್ದರೆ ಒಂದು ರೀತಿಯ ರೋಮಾಂಚನ. ‘ಕೊನೆಗೂ ಅನ್ನ ಸಾಗರವೆಂಬೋ ಅನ್ನ ಸಾಗರವನ್ನು ಕಟ್ಟಿ ನಿಲ್ಲಿಸುವವರೆಗೆ ಅದು ಅಲ್ಲಿನ ನೀರನ್ನು ಮುಟ್ಟಲಿಲ್ಲ. ಮಾತ್ರವಲ್ಲ. ಆ ಗೋಮಾತಾ ತಾಲಾಬ್‌ನ ಹತ್ತಿರವೆಲ್ಲೂ ಸುಳಿಯುತ್ತಿರಲಿಲ್ಲ. ಇವತ್ತು ಗೋಮಾತೆಯನ್ನು ನೀವು ನೋಡಬೇಕು. ಆಕೆಯ ಹರ್ಷ, ಸಂತಸಕ್ಕೆ ಪಾರವೇ ಇಲ್ಲ. ಪ್ರತಿ ದಿನ ೧.೫ ಕಿಮೀ ಉದ್ದದ ತಾಲಾಬ್‌ನ ಸುತ್ತ ೧೫ ಅಡಿ ಎತ್ತರಕ್ಕೆ ನಿರ್ಮಿಸಿದ ದಂಡೆಯ ಮೇಲೆ ಒಂದು ಸುತ್ತು ಬಂದೇ ಬರುತ್ತದೆ. ಅಲ್ಲಿಯೇ ಮೇಯುತ್ತಿರುತ್ತದೆ. ಅಲ್ಲಿನ ಸುಂದರ ಪರಿಸರಕ್ಕೆ ಸಾಕ್ಷಿಯಾಗುತ್ತದೆ. ಸುತ್ತಲಿನ ಹಕ್ಕಿಗಳ ಕಲರವಕ್ಕೆ ಕೊರಳಾಗುತ್ತದೆ. ಬಿಸಿಲಿಗೆ ಬೆವರುತ್ತದೆ. ಹಸಿರಿಗೆ ಮೈಯೊಡ್ಡಿ ಬೆರೆಯುತ್ತದೆ. ನೆರಳಿಗೆ ನಿಂತು ತಣಿಯುತ್ತದೆ. ಮಂದೆಯೊಳಗೊಂದಾಗಿ ಇದ್ದೂ ಮುಂದಾಗಿ ಕಾಣುತ್ತದೆ....ಒಟ್ಟಾರೆ ತಾಲಾಬ್ ತುಂಬಿನಿಂತ ಮೇಲೆ ಆಕೆಯ ಸಂಭ್ರಮ ಇಮ್ಮಡಿಸಿದೆ....’


ಅತ್ಯಂತ ಸೂಕ್ಷ್ಮ, ಸಂವೇದನಾಶೀಲ ಸ್ವಭಾವದ ಆ ಗೀರ್ ತಳಿಯ ಸರಿ ಸುಮಾರು ಮೂರು ತಲೆಮಾರಿನ ಜಾನುವಾರುಗಳು ಶುದ್ಧ ನೀರಿನಿಂದ ವಂಚಿತವಾಗಿತ್ತು. ಲಾಪೋಡಿಯಾದ ಪುರಾತನ ಆ ತಾಲಾಬ್ ಒಡ್ಡು ಕಳಚಿಕೊಂಡು ಗೊಡ್ಡು ಬಿದ್ದ ಮೇಲೆ ಮೂವತ್ತು ವರ್ಷಗಳ ಕಾಲ ಊರಿಗೆ ಊರೇ ನೀರಿನ ಕೊರತೆಯನ್ನು ಎದುರಿಸಿತ್ತು. ಬರಗಾಲ ಬಗಲಲ್ಲಿಟ್ಟುಕೊಂಡೇ ಅವರು ಬದುಕುತ್ತ ಬಂದಿದ್ದರು ಜನ. ಆವತ್ತು ಲಕ್ಷ್ಮಣ್‌ಸಿಂಗ್‌ಗೆ ಆ ಗೋ ಮಾತೆಯ ಗೋಳು ನೋಡಲಾಗಲಿಲ್ಲ. ಅದು ಸಂಕೇತವಾಗಿತ್ತು. ಬಹುತೇಕ ಊರಿನ ಶೇ. ೭೫ರಷ್ಟು ಜೀವ ಸಂಕುಲ ಅದಾಗಲೇ ಪಕ್ಕದ ಜಿಲ್ಲೆಗಳಿಗೆ ವಲಸೆ ಹೋಗಿದ್ದವು. ಯಾರು ಜತೆಗಿದ್ದಾರೋ ಇಲ್ಲವೋ ಎಂಬುದನ್ನು ನೋಡಲಿಲ್ಲ; ಅಂದು ಬೆಳಗ್ಗೆದ್ದವರೇ ಗುದ್ದಲಿ ಕೈಯಲ್ಲಿ ಹಿಡಿದು ತಾಲಾಬ್‌ನತ್ತ ನಡೆದೇ ಬಿಟ್ಟರು ಲಕ್ಷ್ಮಣ್‌ಸಿಂಗ್. ಮೊದಲ ಗುದ್ದಲಿ ಮಣ್ಣು ತಾಲಾಬ್‌ನ ಒಡಲಿಂದ ಹೊರ ಬೀಳುವವರೆಗಷ್ಟೇ ಎಂಥದ್ದೋ ಒಂದು ರೀತಿಯ ಆತಂಕ ಮನೆ ಮಾಡಿತ್ತು. ಕೆಲಸಕ್ಕೆ ಕೈಹಚ್ಚಿದ್ದಷ್ಟೇ, ಆಮೇಲೆ ತಲೆ ಎತ್ತಲೇ ಇಲ್ಲ. ಸ್ವಲ್ಪ ಹೊತ್ತು ಬಿಟ್ಟು ಏನೋ ಗದ್ದಲ ಕೇಳಿ ತಲೆ ಎತ್ತಿದರೆ ಅವರ ಅಕ್ಕ ಪಕ್ಕ ಇನ್ನೂ ಹತ್ತು ಕೈಗಳು ಕೆಲಸ ಮಾಡುತ್ತಿದ್ದವು. ಲಕ್ಷ್ಮಣ್ ಮತ್ತೆ ಕೆಲಸಕ್ಕೆ ತೊಡಗುವ ಮುನ್ನ ಹೇಳಿದ್ದಿಷ್ಟೇ- ‘ಇದು ನಮ್ಮೂರಿನ ಕೆಲಸ. ಇದನ್ನು ನಾವು ಮಾಡದೇ ಇನ್ನಾರೂ ಮಾಡಲು ಸಾಧ್ಯವಿಲ್ಲ. ಇಲ್ಲಿ ನೀರೊಡೆಯುವವರೆಗೆ ಊರಿನ ಜಮೀನುಗಳಲ್ಲಿ ಬೆಳೆಯ ಹೊಡೆಯೊಡೆಯುವುದು ಸಾಧ್ಯ ಇಲ್ಲ. ಅಂಥ ಹಸಿರು ಒಡಮೂಡದ ಹೊರತೂ ನಮ್ಮ ಉಸಿರು ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿಯಾದರೂ ಇಲ್ಲಿ ಮತ್ತೆ ತಾಲಾಬ್ ಅನ್ನು ಕಟ್ಟಿ ನಿಲ್ಲಿಸಬೇಕು.’


ಮುಂಜಾವಿನ ಆ ಎಳೆ ಬಿಸಿಲು ಹಿತವಾಗಿ ಮೈದಡವಬೇಕಿತ್ತು. ಆದರೆ ಅದು ರಾಜಸ್ಥಾನ. ಹಾಗೆನ್ನುವುದಕ್ಕಿಂತ ಬರಪೀಡಿತ ರಾಜ್ಯವೊಂದರ ಬರಪೀಡಿತ ಜಿಲ್ಲೆಯ ಅತ್ಯಂತ ಹೀನಾಯ ಸನ್ನಿವೇಶವನ್ನು ನೀರಿನ ವಿಚಾರದಲ್ಲಿ ಎದುರಿಸುತ್ತಿರುವ ಲಾಪೋಡಿಯಾದ ಮುಂಜಾವು ಅದಾಗಿತ್ತು. ಹಾಗಾಗಿ ಎಳೆಯ ಕಿರಣಗಳೂ ಚರ್ಮವನ್ನು ಚುರುಗುಡಿಸುತ್ತಿದ್ದವು. ಅಂಥ ಸುಡು ಬಿಸಿಲು ನೆತ್ತಿಯ ಮೇಲೆ ಬರುವವರೆಗೂ ಅಂದು ಕೆಲಸ ಸಾಗಿತ್ತು. ಅಷ್ಟೇ ದುಡಿದ ದೇಹದಲ್ಲಿ ಮೂಡಿದ ಬೆವರ ಹನಿಗಳು ತಾಲಾಬ್‌ನಲ್ಲಿ ಇಳಿದು ಮುತ್ತಾಗಿ ಕಟ್ಟಿನಿಲ್ಲಲು ಪ್ರೇರಣೆಯಾಯಿತು. ಊರಿನ ಮಂದಿಗೆ ಎರಡು ಪ್ರಮುಖ ಸಂಗತಿಗಳು ಅಲ್ಲಿ ಮನದಟ್ಟಾಗಿತ್ತು. ಉದ್ಯೋಗವಿಲ್ಲದೇ ಬಹುಕಾಲದಿಂದ ಜಡ್ಡುಗಟ್ಟಿಹೋಗಿದ್ದ ಮೈ ಮನಗಳು ಅಂದಿನ ಶ್ರಮದಾನದಿಂದ ಎಂಥದ್ದೋ ಉತ್ಸಾಹದಿಂದ ಪುಟಿಯುತ್ತಿದ್ದವು. ಇದು ಮುಂದುವರಿದರೆ ಇಷ್ಟರಲ್ಲೇ ತಮ್ಮ ಬದುಕು ದಡ ಹತ್ತುವಲ್ಲಿ ಅನುಮಾನ ಉಳಿದಿರಲಿಲ್ಲ. ಕೃಷಿಯೇ ಜೀವಾಳವಾಗಿದ್ದ ಸರಿ ಸುಮಾರು ೨೦೦ ಕುಟುಂಬಗಳ ಆ ಊರಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೇ ನೀರಾಗಿತ್ತು. ಅದು ತಾಲಾಬ್ ಅನ್ನು ಕಟ್ಟಿ ನಿಲ್ಲಿಸುವುದರೊಂದಿಗೆ ಕೊನೆಗೊಳ್ಳುತ್ತದೆ.


ಮತ್ತೊಂದು ವಿಶೇಷವೆಂದರೆ ತಮ್ಮ ರಾಜ(ವಂಶಸ್ಥ) ಲಕ್ಷ್ಮಣ್ ಸಿಂಗ್ ಸ್ವತಃ ತಾಲಾಬ್‌ನ ಪುನಶ್ಚೇತನಕ್ಕೆ ಟೊಂಕ ಕಟ್ಟಿ ಅಂಗಳಕ್ಕೆ ಇಳಿದಿದ್ದಾರೆ. ಅವರೊಂದಿಗೆ ಕೈ ಜೋಡಿಸುವುದು ಕರ್ತವ್ಯ ಎಂಬುದಕ್ಕಿಂತ ಅದು ಧರ್ಮ. ಎಷ್ಟೋ ವರ್ಷಗಳ ನಂತರ ಮೊದಲಬಾರಿಗೆ ಪ್ರಭುತ್ವ ಊರಿನ ಸಮಸ್ಯೆಯ ಬೇರು ಹುಡುಕಿ ಹೊರಟಿದೆ. ಅದು ಪರಿಹಾರ ಕಾಣುವ ಆಶಾ ಕಿರಣವೂ ಮೂಡಿದೆ. ಈ ಸಂದರ್ಭದಲ್ಲಿ ನಾವು ಜತೆಗೂಡದಿದ್ದರೆ ಇನ್ನೆಂದಿಗೂ ಊರು ಉದ್ಧಾರವಾಗಲು ಸಾಧ್ಯವೇ ಇಲ್ಲ ಎಂಬ ಸಂಗತಿ ಮನವರಿಕೆಯಾಗುತ್ತಿದ್ದಂತೆ ಒಬ್ಬೊಬ್ಬರೇ ಬಂದು ಸೇರಿಕೊಳ್ಳತೊಡಗಿದರು. ಅಂದು ಸಂಜೆ ಊರ ಮುಂದಿನ ಕಟ್ಟೆಯಲ್ಲಿ ಲಕ್ಷ್ಮಣ್ ಪುಟ್ಟ ಭಾಷಣವನ್ನು ಮಾಡಿದರು-‘ನಾವು ಕೃಷಿಯನ್ನೇ ಬದುಕಾಗಿ ಸ್ವೀಕರಿಸಿದವರು. ಅದಿಲ್ಲದೇ ನಮಗೆ ಬೇರೆ ದಿಕ್ಕಿಲ್ಲ. ಪೇಟೆಗೆ ಹೋಗಿ ಉದ್ಯೋಗ ಮಾಡಲು ಶಿಕ್ಷಣ ಬೇಕೇಬೇಕು. ಊರಲ್ಲಿದ್ದು ಉತ್ತಿಬಿತ್ತಲು ನೀರು ಬೇಕು. ಶಿಕ್ಷಣ ನಮಗೆ ಮರೀಚಿಕೆಯಾಗಿರುವುದು ಗೊತ್ತೇ ಇದೆ. ಅಂಥ ಆರ್ಥಿಕ ಶಕ್ತಿಯೂ ನಮ್ಮಲ್ಲಿ ಉಳಿದಿಲ್ಲ. ಅದನ್ನು ಗಳಿಸಿಕೊಳ್ಳಬೇಕಾದರೆ ನಾವು ಮೊದಲು ಕೃಷಿಯಲ್ಲಿ ತೊಡಗಿಕೊಳ್ಳುವುದು ಅನಿವಾರ್ಯ. ಅದಕ್ಕೆ ಅಗತ್ಯ ನೀರನ್ನು ಸೃಷ್ಟಿಸಿಕೊಳ್ಳುವುದು ನಮಗೆ ಗೊತ್ತಿದೆ. ಅದು ನಮ್ಮಿಂದ ಸಾಧ್ಯವೂ ಇದೆ. ಅದಿಲ್ಲದಿದ್ದರೆ ನಮ್ಮ ಬಡತನವನ್ನು ಲೇವಾದೇವಿಗಾರರು ಮತ್ತಿತರ ಪಟ್ಟಭದ್ರ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಮಾತ್ರವಲ್ಲ ಈಗಾಗಲೇ ಒತ್ತೆ ಇಟ್ಟ ನಮ್ಮ ಜಮೀನುಗಳು ಮುಂದೊಂದು ದಿನ ಹಣವಂತರ ಪಾಲಾಗುತ್ತದೆ. ಅವತ್ತು ನಮ್ಮ ಜಮೀನಿನಲ್ಲಿ ನಾವೇ ಕೂಲಿಗಳಾಗಿ ಜೀತ ಮಾಡಬೇಕಾದ ಪರಿಸ್ಥಿತಿ ತಲೆದೋರುತ್ತದೆ. ಯೋಚಿಸಿ ನೋಡಿ, ಉತ್ತಮ ಬದುಕು ಬೇಕಿದ್ದರೆ ನಮ್ಮೊಂದಿಗೆ ಕೈಜೋಡಿಸಿ. ನಾವು ಕಟ್ಟುತ್ತಿರುವುದು ಕೇವಲ ಅನ್ನ ಸಾಗರವನ್ನಲ್ಲ. ಅದು ಜೀವ ಸಾಗರ. ಅದುಳಿದರೆ ಊರು ಉಳಿದೀತು. ಊರುಳಿದರೆ ಎಲ್ಲವೂ ಉಳಿದುಕೊಂಡೀತು. ಆಯ್ಕೆ ನಿಮಗೆ ಬಿಟ್ಟದ್ದು.’


ಅಷ್ಟು ಹೇಳಿ ಮನೆಗೆ ಹೊರಟ ಲಕ್ಷ್ಮಣ್‌ರನ್ನು ಮೂವತ್ತು ಮಂದಿಯ ಸಣ್ಣದೊಂದು ಪಡೆಯೇ ಹಿಂಬಾಲಿಸಿತ್ತು. ಅವತ್ತು ರಾತ್ರಿ ಯಾರೊಬ್ಬರೂ ಸರಿಯಾಗಿ ನಿದ್ರೆ ಮಾಡಲಿಲ್ಲ. ಅವತ್ತು ಅಂತಲೇ ಅಲ್ಲ. ಮುಂದಿನ ಒಂದು ತಿಂಗಳ ಕಾಲ ನಿದ್ದೆ ಮಾಡಲಿಲ್ಲ. ಪ್ರತಿ ದಿನ ಮುಂಜಾವು ಹತ್ಯಾರಗಳೊಂದಿಗೆ ಲಕ್ಷ್ಮಣ್ ಕೆರೆಯಂಗಳಕ್ಕೆ ಬಂದು ನಿಲ್ಲುವುದರೊಳಗೆ ಸ್ವಯಂಸೇವಕರ ದಂಡು ಅಲ್ಲಿ ನೆರೆದಿರುತ್ತಿತ್ತು. ಮಧ್ಯಾಹ್ನದವರೆಗೆ ದುಡಿತ. ತಾಲಾಬ್‌ನಲ್ಲಿ ತುಂಬಿದ್ದ ಹೂಳು ಹೊರಬಿದ್ದು ಸುತ್ತಲೂ ಏರಿಯಾಗಿ ಪೇರಿಸತೊಡಗಿತ್ತು. ಮಧ್ಯಾಹ್ನದ ನಂತರ ಮತ್ತೆ ಚರ್ಚೆ, ಜಾಗೃತಿ....ನಡೆದವು. ಮರು ದಿನ ಮತ್ತೊಂದಿಷ್ಟು ಜನ ಬಂದು ಸೇರಿಕೊಳ್ಳುತ್ತಿದ್ದರು. ಹೀಗೆಯೇ ಸಾಗಿತ್ತು.


ಅಲ್ಲಿ ಕೆಲಸ ನಡೆದಿರುವಾಗ ಇತ್ತ ಜನ ಮಾತನಾಡಿಕೊಳ್ಳತೊಡಗಿದರು. ಸುದ್ದಿ ಸುತ್ತಲೂ ಜನರಿಂದ ಜನರ ಕಿವಿಗೆ ಹಬ್ಬತೊಡಗಿತ್ತು. ಯೋಜನೆಯಂತೆ ಪ್ರತಿ ದಿನ ಕನಿಷ್ಠ ೬೦ ಸ್ವಯಂ ಸೇವಕರು ನಿರಂತರ ದುಡಿದರೆ ಮಾತ್ರ ಅಂದುಕೊಂಡಂತೆ ತಾಲಾಬ್ ನೀರಿನಿಂದ ತುಂಬಿಕೊಳ್ಳುವುದು ಸಾಧ್ಯವಿತ್ತು. ಅದಕ್ಕೆ ಹೆಚ್ಚು ದಿನ ತಾಲಾಬ್‌ನ ನೆಪದಲ್ಲಿ ನೀರೆಚ್ಚರ ಮೂಡಿಸುವಲ್ಲಿ ಲಕ್ಷ್ಮಣ್ ಯಶಸ್ವಿಯಾಗಿದ್ದರು. ಅದು ಅಲ್ಲಿಗೇ ನಿಲ್ಲಲಿಲ್ಲ. ಅನ್ನಸಾಗರದ ಬಳಿಕ ದೇವಸಾಗರ. ಅದರ ನಂತರ ಫೂಲ್ ಸಾಗರ...ಹೀಗೆ ಮೂರು ಬೃಹತ್ ತಾಲಾಬ್‌ಗಳು ಲಾಪೋಡಿಯಾದ ಮೂರು ದಿಕ್ಕಿನಲ್ಲಿ ನಳನಳಿಸತೊಡಗಿದ್ದವು. ಕೃಷಿಗೊಂದು, ಪೂಜಾ ಕೈಂಕರ್ಯ ಸೇರಿದಂತೆ ಧಾರ್ಮಿಕ ವಿವಿಧಾನಗಳಿಗೊಂದು, ನಿಸರ್ಗದ ಪ್ರಾಣಿ-ಪಕ್ಷಿಗಳಂಥ ಇತರ ಜೀವರಾಶಿಗಳಿಗೊಂದು ಹೀಗೆ ಮೂರು ತಾಲಾಬ್‌ಗಳೂ ಅನ್ವರ್ಥಕಗೊಂಡವು. ೩೦೦ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಹಸಿರು ಚಿಗುರಲಾರಂಭಿಸಿದ್ದೇ ತಡ ಗುಳೇ ಹೋಗಿದ್ದ ಕುಟುಂಬಗಳು ಒಂದೊಂದಾಗಿ ಮರಳಲಾರಂಭಿಸಿದವು; ಜತೆಗೆ ವಲಸೆ ಹೋಗಿದ್ದ ಜೀವರಾಶಿಗಳೂ ಸಹ. ಮತ್ತಲ್ಲಿ ಮೂಡಿತ್ತು ಹಿಂದಿನ ಕಲರವ. ಮರಳಿತ್ತು ಲಾಪೋಡಿಯಾದ ವೈಭವ. ಆ ಗೋ ಮಾತೆ ಮನದಲ್ಲಿ ಯಾವ ಕಳಂಕವಿಲ್ಲದೇ ನೆಮ್ಮದಿಯಿಂದ ದೇವ ಸಾಗರವನ್ನೊಮ್ಮೆ ಪ್ರದಕ್ಷಿಣೆ ಮಾಡಿ, ಅನ್ನ ಸಾಗರವನ್ನೊಮ್ಮೆ ಅವಲೋಕಿಸಿ ಫೂಲ್(ಹೂವು) ಸಾಗರಕ್ಕೆ ಬಂದು ಪ್ರತಿ ದಿನ ದಾಹ ತೀರಿಸಿಕೊಳ್ಳುತ್ತಿದ್ದಾಳೆ. ಅದರ ಫಲವಾಗಿ ಇಂದು ಲಾಪೋಡಿಯಾದಲ್ಲಿ ನೀರಿನದಷ್ಟೇ ಅಲ್ಲ, ಹಾಲಿನ ಹೊಳೆಯೂ ಹರಿಯುತ್ತಿದೆ.


‘ಲಾಸ್ಟ್’ ಡ್ರಾಪ್: ಲಕ್ಷ್ಮಣ್ ಸಿಂಗ್ ನಿರ್ಮಿಸಿದ ಮೂರು ತಾಲಾಬ್‌ಗಳು ಅವರು ನಂಬಿದ ಸಹಭಾಗಿತ್ವ, ವಿಕಾಸ ಮತ್ತು ಶಾಂತಿ- ಈ ಮೂರು ತತ್ತ್ವಗಳ ಪ್ರತೀಕವಾದದ್ದು ಕಾಕತಾಳೀಯವಲ್ಲ.

Wednesday, March 3, 2010

ನೀರ ಕಾರಣದಿಂದ ಊರು ದಾರಿಗೆ ಬಂತು

ವರದು ರಾಜಸ್ಥಾನದ ರಜಪೂತ ಮನೆತನ. ಹಾಗೆ ನೋಡಿದರೆ ಲಕ್ಷ್ಮಣ್ ಸಿಂಗ್ ಎಂಬ ರಾಜವಂಶಸ್ಥರ ಉತ್ತರಾಕಾರಿ ಕಾಲಮೇಲೆ ಕಾಲು ಹಾಕಿಕೊಂಡು ದರ್ಬಾರು ನಡೆಸಬಹುದಿತ್ತು. ಇವತ್ತು ಅವರನ್ನು ನೋಡಿದರೆ ಒಬ್ಬ ಸಾಮಾನ್ಯ ರೈತನಿಗಿಂತ ಹೆಚ್ಚೇನೂ ಆಡಂಬರವಿಲ್ಲದ ಅತ್ಯಂತ ಸರಳ ಬದುಕನ್ನು ಅವರು ಬದುಕುತ್ತಿದ್ದಾರೆ. ಅದು ಅವರ ಸ್ವಯಂ ನಿರ್ಧಾರದ ಆಯ್ಕೆ. ಲಾಪೋಡಿಯಾದ ಸುತ್ತಮುತ್ತಲಿನ ಬರೋಬ್ಬರಿ ೮೦ ಗ್ರಾಮಗಳ ಜಹಗೀರುದಾರಿಕೆ ಅವರ ಮನೆತನಕ್ಕಿತ್ತು. ತೀರಾ ಇತ್ತೀಚೆಗೆ ಸ್ವಾತಂತ್ರ್ಯ ಬಂದ ಆರಂಭದ ವರ್ಷಗಳವರೆಗೂ (೧೯೫೦ರವರೆಗೂ) ಅವರ ತಂದೆ ಜಹಗೀರರಾಗಿಯೇ ಇದ್ದವರು. ಇಂದಿಗೂ ಆ ಮನೆತನದ ಮಟ್ಟಿಗೆ ಸುತ್ತಮುತ್ತಲಿನ ಹಳ್ಳಿಗರಲ್ಲಿ ‘ನಮ್ಮ ಒಡೆಯರು’ ಎಂಬ ಸ್ವಾಮಿಭಕ್ತಿ ಮುಂದುವರಿದಿದೆ. ಹಾಗೆ ಪಾಳೇಗಾರಿಕೆ ಮಾಡಿಕೊಂಡು ಇದ್ದು ಬಿಡಲು ಲಕ್ಷ್ಮಣ್ ಸಿಂಗ್ ಮನಸ್ಸು ಅದೇಕೋ ಒಪ್ಪಲೇ ಇಲ್ಲ. ಮುಖದಲ್ಲಿ ಸದಾ ಸುಳಿದಾಡುತ್ತಿರುವ ಬಿಚ್ಚು ನಗೆ. ಅವರ ಮನಸ್ಸಿನಷ್ಟೇ ನಿರ್ಮಲವಾದ ಅಚ್ಚ ಬಿಳಿಯ ಒಂದು ಪಕ್ಕಾ ಖಾದಿಯ ಅಂಗಿ, ಅಂಥದೇ ಒಂದು ಪೈಜಾಮು ಇವು ಬಿಟ್ಟರೆ ಉಳಿದಾವ ಗತ್ತು ಗೈರತ್ತುಗಳೂ ಆ ಮುತ್ತಿನಂಥಾ ವ್ಯಕ್ತಿತ್ವದಲ್ಲಿ ಹುಡುಕಿದರೂ ನಿಮಗೆ ಸಿಗಲು ಸಾಧ್ಯವಿಲ್ಲ. ಆದರೆ ಆ ವ್ಯಕ್ತಿತ್ವ, ಅವರ ದಿಟ್ಟ ನಿಲುವು, ಅವರ ತತ್ವ ಸಿದ್ಧಾಂತ, ಸಂಘಟನಾ ಚಾತುರ್ಯ, ದೂರದರ್ಶಿತ್ವ, ಮಾನವೀಯ ಅಂಶಗಳು ಮಾತ್ರ ರಾಜವಂಶದ ಹೆಸರು ಹೇಳಿಸುತ್ತವೆ.

ಇಷ್ಟು ಹೇಳಿಬಿಟ್ಟರೆ ಅವರು ಎಂಥ ಮನೆತನದ ಹಿನ್ನೆಲೆಯುಳ್ಳವರು ಎಂಬುದು ಬಹುಶಃ ಸ್ಪಷ್ಟಗೊಳ್ಳಲಿಕ್ಕಿಲ್ಲ. ಅದು ಲಕ್ಷ್ಮಣ್ ಸಿಂಗ್‌ರ ಅಜ್ಜನ ಆಡಳಿತದ ಕಾಲ. ಲಾಪೋಡಿಯಾ ಮಧ್ಯಭಾಗದಲ್ಲೊಂದು ಭವ್ಯ ಅಂತಸ್ತಿನ ಕಟ್ಟಡ. ಜಹಗೀರುದಾರರು ಎಂದ ಮೇಲೆ ಹಾಗೂ ಇಲ್ಲದಿದ್ದರೆ. ಅದನ್ನವರು ರಾಜಸ್ಥಾನಿ ಭಾಷೆಯಲ್ಲಿ ಬಸ್ತಿಗಳು ಎನ್ನುತ್ತಾರೆ. ಅದು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಯಾವುದೇ ಸಮಯವಿರಬಹುದು. ಜಹಗೀರುದಾರರು ಆಹಾರ ಸೇವನೆಗೆ ಹೋರಡುವ ಮುನ್ನ ಬಸ್ತಿಗಳ ಮೇಲೆ ಉಪ್ಪರಿಗೆಗೆ ಬಂದು ನಿಲ್ಲುತ್ತಿದ್ದರು. ಅಲ್ಲಿಂದ ನಿಂತು ಕೂಗಿದರೆ ಸರ್ವೇಸಾಮಾನ್ಯ ಇಡೀ ಊರಿಗೆ ಕೇಳುತ್ತಿತ್ತು. ಹಾಗೆ ಬಂದು ನಿಂತ ಜಹಗೀರುದಾರರು ‘ಕೋಯಿ ಭೂಕಾ ಹೈ...?’(ಯಾರಾದರೂ ಹಸಿದಿದ್ದೀರಾ ?) ಎಂದೊಮ್ಮೆ ಗಟ್ಟಿ ಸ್ವರದಲ್ಲಿ ಕೇಳುತ್ತಿದ್ದರು. ಯಾರಿಂದಲೂ ಹಸಿದ ಸ್ವರ ಕೇಳಿಸದಿದ್ದರೆ ಮಾತ್ರವೇ ಅವರು ಊಟಕ್ಕೆ ತೆರಳುತ್ತಿದ್ದುದು. ಒಂದೊಮ್ಮೆ ಯಾರೊಬ್ಬರು ಹಸಿದ ಹೊಟ್ಟೆಯಲ್ಲಿದ್ದರೂ ಅವರಿಗೆ ಉಣಬಡಿಸಿದ ಮೇಲೆಯೇ ಜಹಗೀರುದಾರರ ಊಟ. ಯಜಮಾನ ಎಂಬ ಪದಕ್ಕೆ ಇದಲ್ಲವೇ ಅನ್ವರ್ಥ ?


ಇಂಥ ಸಂಸ್ಕೃತಿಯನ್ನು ನೋಡಿಕೊಂಡೇ ಬೆಳೆದವರು ನಮ್ಮ ಹೀರೋ ಲಕ್ಷ್ಮಣ್ ಸಿಂಗ್. ಊರಿನಲ್ಲಾದರೂ ಅಷ್ಟೇ. ಯಾವುದಕ್ಕೂ ಕೊರತೆ ಇಲ್ಲ ಎನ್ನುವಂಥ ನೆಮ್ಮದಿ. ಸದಾ ಸಮೃದ್ಧಿಯಿಂದ ತುಂಬಿ ತುಳುಕುವ ತಾಲಾಬ್‌ಗಳು. ಬೀಳುವ ಸರಾಸರಿ ೩೦೦-೩೫೦ ಮಿಲಿಮೀಟರ್‌ನಷ್ಟು ಮಳೆಯನ್ನೇ ತಾಲಾಬ್‌ಗಳಲ್ಲಿ ಹಿಡಿದಿಟ್ಟುಕೊಂಡು ಇಡೀ ವರ್ಷ ನಿರ್ವಹಿಸಿಕೊಳ್ಳುವ ಜಾಣ್ಮೆ. ಇರುವ ಜಮೀನಿನಲ್ಲೇ ಮೈ ಮುರಿದು ತಿನ್ನುವ ಜಾಯಮಾನ. ಕೆರೆ ಕಟ್ಟೆಗಳು, ಅರಣ್ಯ ಗುಡ್ಡಗಳು, ಪ್ರಾಣಿಪಕ್ಷಿಗಳನ್ನೊಳಗೊಂಡು ನಿಸರ್ಗವೇ ದೇವರೆಂದು ಪೂಜಿಸುವ ಸಾಂಸ್ಕೃತಿಕ ಶ್ರೀಮಂತಿಕೆ. ಗೋವುಗಳೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಕಾಳಜಿ. ಎಲ್ಲಕ್ಕಿಂತ ಹೆಚ್ಚಾಗಿ ಸ್ವಾವಲಂಬಿ ಬದುಕನ್ನೇ ತತ್ತ್ವವನ್ನಾಗಿಸಿಕೊಂಡ ಸದಾಚಾರ ಇವು ಒಂದು ಕಾಲದ ಲಾಪೋಡಿಯಾ ಅಂದರೆ ನೆನಪಿಗೆ ಬರುತ್ತಿದ್ದ ಅಂಶಗಳು. ಅದನ್ನೇ ಮಾದರಿಯಾಗಿಟ್ಟುಕೊಂಡು ಬದುಕಿನ ಕಲ್ಪನೆಯನ್ನು ರೂಪಿಸಿಕೊಂಡಿದ್ದ ಲಕ್ಷ್ಮಣ್ ಸಿಂಗ್ ಜೈಪುರಕ್ಕೆ ವಿದ್ಯಾಭ್ಯಾಸಕ್ಕೆ ತೆರಳಿದ್ದವರು.


ಅದೇನು ದರಿದ್ರ ಗಳಿಗೆಯೋ ಇಡೀ ಲಾಪೋಡಿಯಾಕ್ಕೆ ಲಾಪೋಡಿಯಾದ ಬದುಕೇ ಬೋರಲು ಬಿದ್ದುಬಿಟ್ಟಿತು. ಸ್ವಾಂತಂತ್ರ್ಯಾನಂತರದ ಪ್ರಜಾಪ್ರಭುತ್ವದಲ್ಲಿ ಜಾಗೀರುದಾರಿಕೆ ಅರ್ಥ ಕಳೆದುಕೊಂಡಿತ್ತು. ಅದರ ಜತೆಯಲ್ಲೇ ಆ ಮನೆತನದಲ್ಲಿದ್ದ ನೈತಿಕತೆಯೂ ನೆಲಕಚ್ಚಿತ್ತು. ಹಿಂದೆಯೇ ಸಮುದಾಯದ ಕಲ್ಪನೆಯೂ ಸಾಯಲಾರಂಭಿಸಿತು. ಸ್ವಾವಲಂಬಿ ಗ್ರಾಮಗಳು ನಿಶ್ಯಕ್ತವಾಗತೊಡಗಿದವು. ಒಂದು ರೀತಿಯಲ್ಲಿ ಹಳ್ಳಿಗರ ಬದುಕು ಹಳ್ಳ ಹಿಡಿಯಿತು. ಅಪರಾಧ ಹೆಚ್ಚಿತು. ಕೊಲೆ ಸುಲಿಗೆಗಳು ಮನೆ ಮಾತಾಯಿತು. ಎಲ್ಲೆಲ್ಲೂ ಹಾಹಾಕಾರ, ಹಸಿವು. ಕಾದು ಕಂಗಾಲಾದ ಬದುಕಿನ ನಿರ್ವಹಣೆಯೇ ಸಾಧ್ಯವಾಗದ ಸ್ಥಿತಿಯಲ್ಲಿ ಜನ ಪಕ್ಕದ ಊರುಗಳಿಗೆ ಗುಳೇ ಹೊರಟರು. ಜಾನುವಾರುಗಳು ಎಲ್ಲೆಂದರಲ್ಲಿ ಸತ್ತುಬಿದ್ದವು. ಅಳಿದುಳಿದವನ್ನು ಸಾಕಲಾಗದ ಮಂದಿ ಅವನ್ನೇ ಮಾರಿ ಬಂದಷ್ಟು ದಿನ ಉಂಡು ತೇಗಿದರು. ಊರಿನ ಸುತ್ತಮುತ್ತಲ ಪ್ರದೇಶದಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದ ಶೇ.೭೫ರಷ್ಟು ಜೀವ ಸಮೂಹ ನೆರೆಯ ರಾಜ್ಯಗಳಿಗೆ ವಲಸೆ ಹೋಯಿತು. ಒಟ್ಟಾರೆ ಲಕಲಕಿಸುತ್ತಿದ್ದ ಲಾಪೋಡಿಯಾ ಎಂದರೆ ಸ್ಮಶಾನ ಸದೃಶತೆಗೆ ಸಾಕ್ಷಿಯಾಯಿತು. ಇವೆಲ್ಲಕ್ಕೂ ಮೂಲ ಕಾರಣ ಊರಿನ ಪ್ರಮುಖ ನೀರಾಧಾರವಾಗಿದ್ದ ಅನ್ನ ಸಾಗರ್ ಎಂಬ ಬೃಹತ್ ತಾಲಾಬ್ ಒಂದು ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡ ಘಟನೆ ಎಂದರೆ ನೀವು ನಂಬುತ್ತೀರಾ ?
ಇದನ್ನು ನಂಬಿ ಬಿಡಿ, ಇಂಥ ಘೋರ ಸತ್ಯ ಲಕ್ಷ್ಮಣ್ ಸಿಂಗ್ ಮತ್ತವರ ಜಲಯೋಧರಿಗೆ ಮನವರಿಕೆಯಾದದ್ದರಿಂದಲೇ ಅವರು ಶಿಕ್ಷಣವನ್ನು ೧೦ನೇ ತರಗತಿಯಲ್ಲಿದ್ದಾಗಲೇ ಅರ್ಧಕ್ಕೇ ನಿಲ್ಲಿಸಿ ತಮ್ಮ ಬದುಕನ್ನೇ ನೀರಿನ ಕಾಯಕಕ್ಕೆ ಮುಡುಪಾಗಿಟ್ಟರು. ಇಡೀ ಊರಿನ ಸಾಂಸ್ಕೃತಿಕ ಪರಂಪರೆಗೆ, ನೆಮ್ಮದಿಗೆ ಬೇಲಿಯಾಗಿರಬೇಕಿದ್ದ ತಮ್ಮ ಮನೆತನದ ಹಿರಿಯರೇ ಅದಕ್ಕೆ ಕಂಟಕರಾದದ್ದನ್ನು ಲಕ್ಷ್ಮಣ್‌ಗೆ ಅರಗಿಸಿಕೊಳ್ಳಲಾಗಲಿಲ್ಲ.


ಅವತ್ತು ದೀಪಾವಳಿ, ಊರಿಗೆ ರಜೆಗೆಂದು ಬಂದಿದ್ದ ಲಕ್ಷ್ಮಣ್ ಸಿಂಗ್ ಗಮನ ಸೆಳೆದದ್ದು ಒಂದು ಪುಟ್ಟ ಘಟನೆ. ಹಬ್ಬದ ಸಡಗರದ ನಡುವೆಯೂ ಊರಿನ ಜಮೀನು ಒತ್ತುವರಿಯ ವ್ಯಾಜ್ಯವೊಂದು ಮನೆಯ ಜಗುಲಿ ಹತ್ತಿತ್ತು. ಜಹಗೀರದಾರರಾಗಿದ್ದ ಲಕ್ಷ್ಮಣ್‌ರ ತಂದೆ, ಪಂಚಾಯಿತಿ ನಡೆಸಿ ಒತ್ತುವರಿದಾರ ೨೦೦ ರೂ. ಪರಿಹಾರಧನವನ್ನು ಕೊಡಬೇಕೆಂದು ತೀರ್ಪ ನೀಡಿದರು. ಆತನೇನೋ ಅದನ್ನು ಕೆಲ ದಿನಗಳಲ್ಲೇ ಪಂಚಾಯಿತಿದಾರರಿಗೆ ಕೊಟ್ಟು ಬಿಟ್ಟ. ಆದರೆ ನಿಜವಾದ ಸಂತ್ರಸ್ತನಿಗೆ ತಲುಪಲೇ ಇಲ್ಲ. ದಿನಗಳು ಕಳೆಯುತ್ತಲೇ ಇತ್ತು. ವಾಯಿದೆಯಂತೆ ಪ್ರತಿ ಹತ್ತು ದಿನಗಳಿಗೊಮ್ಮೆ ಊರ ಹಿರಿಯರ ಮನೆ ಬಾಗಿಲಿಗೆ ಆತ ತಿರುಗುವದಾಯಿತೇ ವಿನಃ ಪ್ರಯೋಜನವಾಗಲಿಲ್ಲ. ಇದನ್ನು ಗಮನಿಸಿದ್ದ ಲಕ್ಷ್ಮಣ್ ಸಿಂಗ್ ತಾವೇ ಸ್ವತಃ ಪರಿಹಾರ ಮೊತ್ತವನ್ನು ಸಂತ್ರಸ್ತನಿಗೆ ಕೊಟ್ಟು, ವ್ಯವಸ್ಥೆಯ ವಿರುದ್ಧ ಸಿಡಿದು ನಿಂತರು. ಅವತ್ತು ಊರಿನ ಬದುಕಿನ ಪುನರ್‌ಸ್ಥಾಪನೆಯ ಪಣತೊಟ್ಟು ಹೊರಟರು.


೧೯೭೫ರಲ್ಲಿ ಐವರು ಯುವಕರ ಪುಟ್ಟ ಪಡೆ ಗ್ರಾಮೀಣ ವಿಕಾಸ ನವಯುವಕ ಮಂಡಲ ಲಾಪೋಡಿಯಾದಲ್ಲಿ ಅಸ್ತಿತ್ವಕ್ಕೆ ಬಂದಿತು. ಊರಿನ ಸಮಸ್ಯೆಯ ಬೇರುಗಳನ್ನು ಅರಿಯುವುದು ಮಂಡಲದ ಮೊದಲ ಆದ್ಯತೆಯಾಯಿತು. ಊರೂರು ಸುತ್ತಿದ ಲಕ್ಷ್ಮಣ್‌ಗೆ ನೀರಿನ ನಿರ್ವಹಣೆಯಲ್ಲಿ ಎಡವಿದ್ದೇ ಬದುಕು ಹಾದಿಬಿಟ್ಟಿದ್ದಕ್ಕೆ ಕಾರಣ ಎಂಬ ಅಂಶ ಗಮನಕ್ಕೆ ಬರಲು ಹೆಚ್ಚು ಸಮಯ ಹಿಡಿಯಲಿಲ್ಲ. ಸಮುದಾಯದ ಹಿಡಿತದಲ್ಲಿದ್ದ ನೀರು ನಿರ್ವಹಣಾ ವ್ಯವಸ್ಥೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಸರಕಾರಿ ವ್ಯವಸ್ಥೆಯಡಿ ಬಂದತ್ತು. ಅಲ್ಲಿಯೇ ದೋಷ ಇಣುಕಲಾರಂಭಿಸಿದ್ದು. ಇಡೀ ಊರಿನ ಜಲಾಶ್ರಯ ತಾಣವಾಗಿದ್ದ ಅನ್ನ ಸಾಗರ್ ಅದೊಂದು ಮಳೆಗಾಲದಲ್ಲಿ ಒಡ್ಡು ಒಡೆದು ಇಡೀ ಊರಿನ ಬದುಕೇ ಕೊಚ್ಚಿಕೊಂಡು ಹೋಗಿತ್ತು. ಅಂದಿನಿಂದ ಗ್ರಾಮಕ್ಕೆ ಕಾಲಿಟ್ಟ ದಾರಿದ್ರ್ಯವೇ ಇಂದಿಗೂ ತಾಂಡವವಾಡುತ್ತಿದೆ ಎಂಬುದನ್ನು ಮನಗಂಡ ಲಕ್ಷ್ಮಣ್‌ರ ಸಾರಥ್ಯದ ಜಲಯೋಧರ ಪಡೆ ಆ ತಾಲಾಬ್ ಅನ್ನು ಮರು ನಿರ್ಮಿಸುವುದರೊಂದಿಗೆ ಇಡೀ ಜನಜೀವನವನ್ನು ಪುನರ್ ನಿರ್ಮಿಸುವ ಸಂಕಲ್ಪಕ್ಕೆ ಬಂದಿತು.


ಗ್ರಾಮದಲ್ಲಿ ಮೊದಲಿದ್ದ ನೀರ ಸಂಸ್ಕೃತಿಯ ಆಧಾರದಲ್ಲೇ ಜೀವನ ಸಂಸ್ಕೃತಿಯನ್ನು ಚಿಗುರಿಸಬೇಕೆಂಬ ದೃಢ ನಿರ್ಧಾರ ಅವರದ್ದಾಗಿತ್ತು. ಇದಕ್ಕಾಗಿ ಹಳ್ಳಿಹಳ್ಳಿಗಳ ಮನೆಮನೆಯ ಬಾಗಿಲಿಗೆ ಹೋದರು. ಊರವರಲ್ಲಿ ಅದರಲ್ಲೂ ಯುವಕರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದರು. ನಿಸರ್ಗವನ್ನು ಗೌರವಿಸದೇ ಬದುಕು ಹಸನಾಗಲು ಸಾಧ್ಯವೇ ಇಲ್ಲ. ಶಿಕ್ಷಣವಿಲ್ಲದೇ ಸಮಾಜದ ಸುಧಾರಣೆ ಕಾಣಲು ಆಗುವುದಿಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಟ್ಟರು. ಎಂದಿನಂತೆ ವಿರೋಧ ವ್ಯಕ್ತವಾಯಿತಾದರೂ ಮತ್ತೆ ಹಿಂದಿನ ನೆಮ್ಮದಿಯ ಕನಸು ಕಂಡ ಮನಸ್ಸುಗಳೆದುರು ಅದ್ಯಾವುದೂ ಲೆಕ್ಕಕ್ಕೆ ಬರಲಿಲ್ಲ. ಮೊದಲು ಐದಾರು ಗ್ರಾಮಗಳಲ್ಲಿ ಸುತ್ತಿದಾಗ ಇಂಥ ಕಹಿಘಟನೆಗಳು ಅನುಭವಕ್ಕೆ ಬಂದರೂ ಜಲಯೋಧರಲ್ಲಿನ ಪ್ರಾಮಾಣಿಕತೆಯಿಂದ ಅಂಥವು ಪುನರಾವರ್ತನೆ ಆಗಲಿಲ್ಲ. ಪಡೆ ಬೆಳೆಯುತ್ತ ಹೋಯಿತು. ಇಬ್ಬರಿದ್ದ ಪಡೆ ೭೦ಕ್ಕೆ ಏರಿತು. ಎಲ್ಲರೂ ಗುಂಪುಗಳಲ್ಲಿ ಪ್ರತಿದಿನ ಮುಂಜಾವು ಹೊರಟರೆ ಮನೆ ಸೇರುತ್ತಿದ್ದುದು ಹೊತ್ತು ಮುಳುಗಿದ ಮೇಲೆಯೇ. ಹೋದಲ್ಲೆಲ್ಲ ನೀರ ಸಂಸ್ಕೃತಿ ಬಿತ್ತುವ ಮಾತುಗಳಿಂದಲೇ ಬೋಧನೆ ಆರಂಭ. ರಾತ್ರಿ ಮುಂದಿನ ರೂಪುರೇಷೆಯ ಬಗೆಗೆ ಚರ್ಚೆ. ನಡುವೊಂದಿಷ್ಟು ಅಧ್ಯಯನ. ಬೇರೆ ಬೇರೆ ಯಶೋಗಾಥೆಗಳ ಅವಲೋಕನ. ಅಗತ್ಯವೆನಿಸಿದ ಸ್ಥಳಗಳಿಗೆ ಭೇಟಿ. ತಜ್ಞರೊಂದಿಗೆ ಚರ್ಚೆ. ಅದರ ಫಲವಾಗಿ ಸುತ್ತಲಿನ ೪೦ ಗ್ರಾಮಗಳಲ್ಲಿ ಸಂಘಟನೆಗಳಾದವು. ಜಲಯೋಧರ ಪಡೆಯಲ್ಲಿ ಈಗ ೨ ಸಾವಿರ ಸ್ವಯಂ ಸೇವಕರಿದ್ದರು. ಶ್ರಮದಾನದ ಮೂಲಕವೇ ತಾಲಾಬ್ ಅನ್ನು ಕಟ್ಟಿ ನಿಲ್ಲಿಸಲು ನಿರ್ಧಾರವಾಯಿತು. ನಾಲ್ಕು ಸಾವಿರ ಕೈಗಳು ಗುದ್ದಲಿ, ಪಿಕಾಸಿ ಹಿಡಿದು ಸಜ್ಜಾದವು. ಒಡೆದು ಹೋಗಿದ್ದ ಬೃಹತ್ ಅನ್ನ ಸಾಗರದ ಒಡ್ಡು ಸತತ ಮಾನವ ಶ್ರಮದಿಂದ ಮತ್ತೆ ಎದ್ದು ನಿಂತದ್ದು ಜಾದೂ ಆಲ್ಲ. ಅದು ಲಕ್ಷ್ಮಣ್ ಸಿಂಗ್ ಎಂಬ ಪ್ರಬಲ ಇಚ್ಛಾ ಶಕ್ತಿಯುಳ್ಳ ವ್ಯಕ್ತಿಯ ದೂರದೃಷ್ಟಿಯ ಪರಿಣಾಮ.


ಅಲ್ಲಿಂದ ಬದಲಾಗಲಾರಂಭಿಸಿದ ಲಾಪೋಡಿಯಾ ಇಂದು ಸಮುದಾಯ ಆಧಾರಿತ ನೀರು ನಿರ್ವಹಣಾ ವ್ಯವಸ್ಥೆಯಲ್ಲಿ ಜಗತ್ತಿಗೇ ಮಾದರಿಯಾಗಿ ನಿಂತಿದೆ.


‘ಲಾಸ್ಟ್’ಡ್ರಾಪ್: ಸಹಭಾಗಿತ್ವ, ವಿಕಾಸ ಹಾಗೂ ಶಾಂತಿ ಇವು ಲಾಪೋಡಿಯಾ ದ ವೀರ ಜಲಸೇನಾನಿ ಲಕ್ಷ್ಮಣ್‌ಸಿಂಗ್‌ರ ಯಶಸ್ಸಿನ ಮೂಲ ಮಂತ್ರ. ಗಾಂ ಹೇಳಿದ್ದೂ ಇದನ್ನೇ ಅಲ್ಲವೇ ?

Monday, February 22, 2010

ಲಾಪೋಡಿಯಾದ ಲಫಡಾಗೆ ಈತ ‘ಲಕ್ಷ್ಮಣ’ ರೇಖೆ

ಹೇಳಿ, ಕೇಳಿ ಅದು ಹುಚ್ಚರ ಹಳ್ಳಿ. ನಂಬಬೇಕು ಆ ಊರಿನ ಹೆಸರೇ ಹಾಗೆ. ಅದಕ್ಕೂ ಕಾರಣವಿದೆ. ಅದನ್ನು ತಿಳಿಯುವ ಮುನ್ನ ಒಂದು ಕಥೆ ಕೇಳಿ.

ಅದು ೧೯೭೩ರ ಸುಮಾರು, ಇನ್ನೇನು ಚಳಿ ಮುಕ್ಕರಿಸಿಕೊಂಡು ಮುಗಿಬೀಳುವ ಹುನ್ನಾರದಲ್ಲಿತ್ತು. ಹತ್ತು ಹದಿನೈದು ದಿನಗಳು ದಾಟಿಬಿಟ್ಟರೆ ಮೈ ಕೈ ಮರಗಟ್ಟಿಹೋಗುವುದರಲ್ಲಿ ಅನುಮಾನವಿಲ್ಲ. ಅಂಥಾ ಊರಿಗೊಬ್ಬ ಕಂಬಳಿ ಮಾರುವವ ಬಂದ. ಮುಖವನ್ನೂ ಮೀರಿ ನಿಂತ ಪೊಗದಸ್ತಾದ ಮೀಸೆ. ಅಷ್ಟೇ ಮಸ್ತಾದ ದೇಹ. ಕಟ್ಟಾಳು. ತಲೆಯ ಮೇಲೊಂದು ಬಿಗಿಯಾದ ಹೊರೆ ಹೊತ್ತು ಆ ಊರಿಗೆ ಕಾಲಿಟ್ಟದ್ದೇ ತಡ ಊರಿನ ಜಹಗೀರದಾರ್ ಎದುರಾದ. ಊರೆಲ್ಲ ಸುತ್ತಾಡಿ ಸುಮ್ಮನೇ ಏಕೆ ಕಷ್ಟಪಡುವೆ ? ಒಂದು ತಿಂಗಳ ಮಾತಿಗೆ ಕಂಬಳಿ ದುಡ್ಡಿಗೆ ಸಾಲ ನಿಲ್ಲುವುದಾದರೆ ಎಲ್ಲವನ್ನೂ ಮಾರಿಸಿಕೊಡುವ ಭರವಸೆಯನ್ನು ಆತ ನೀಡಿದ. ವ್ಯಾಪಾರಿ ಅಂದ ಮೇಲೆ ಫಾಯಿದೆ ನೋಡದಿರುತ್ತಾರೆಯೇ ? ಪಾಪ ಜಹಗೀರದಾರನ ವರಸೆ ಆತನಿಗೇನು ಗೊತ್ತು ? ಅನಾಯಾಸವಾಗಿ ಅಷ್ಟೂ ಕಂಬಳಿ ಮಾರಾಟವಾಗುವುದಾದರೆ ಒಂದು ತಿಂಗಳಲ್ಲಿ ಆಗುವುದೇನಿದೆ ? ಹೇಗೂ ಜಹಗೀರದಾರರೇ ಜಾಮೀನು ನಿಂತಿದ್ದಾರೆ. ಹಣ ಎಲ್ಲಿಗೆ ಹೋದೀತು ಎಂದುಕೊಂಡು ಇಡೀ ಹೊರೆಯನ್ನೇ ಅಲ್ಲಿಳಿಸಿ ಹೋಗಿಬಿಟ್ಟ. ಕ್ಷಣದಲ್ಲಿ ಕಂಬಳಿಗಳು ಬಿಕರಿಯಾಗಿ ಬಿಟ್ಟವು.


ಕಂಬಳಿ ಮಾರಾಟಗಾರ ಆತ್ತ ಹೋದನೋ ಇಲ್ಲವೋ ಹೊಂಚು ಹಾಕುತ್ತ ಕುಳಿತಂತಿದ್ದ ಚಳಿ ಊರಿಗೆ ಕಾಲಿಟ್ಟಿತು. ಕಳೆದ ಬೇಸಿಗೆ ಬಿಸಲಿಗೆ, ಮಳೆಗಾಲದಲ್ಲಿ ಕಾಡಿದ್ದ ಬರಕ್ಕೆ ಸವಾಲು ಹಾಕುವ ರೀತಿಯಲ್ಲಿತ್ತು ಆ ವರ್ಷದ ಚಳಿ. ಇಡೀ ಊರಿಗೆ ಊರೇ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕುಳಿತಿತ್ತು. ಹಾಗೆ ಬೆಚ್ಚಗೆ ಇದ್ದಾಗ ದಿನ ಕಳೆದದ್ದಾದರೂ ಹೇಗೆ ತಿಳಿಯುತ್ತದೆ ? ಅಕೋ-ಇಕೋ ಎನ್ನುತ್ತಿರುವಾಗಲೇ ಒಂದು ತಿಂಗಳು ಕಳೆದು ಹೋಯಿತು. ಮಾತಿನಂತೆ ಕಂಬಳಿಯ ದುಡ್ಡನ್ನು ಎಲ್ಲರೂ ಪಾವತಿಸಬೇಕಿತ್ತು. ಅದನ್ನು ವಸೂಲು ಮಾಡಲು ಮತ್ತೆ ಬಂದ ಮಾರಾಟಗಾರ ಹಣ ಪಡೆದು ಹಸನ್ಮುಖಿಯಾಗಿ ಮರಳಬೇಕಿತ್ತು. ಅಷ್ಟಾಗಿಬಿಟ್ಟರೆ ಅದು ಹುಚ್ಚರಹಳ್ಳಿ ಹೇಗಾದೀತು ? ಹಣ ಕೊಡಬೇಕಾದವರು ಕೊಡಲಿಲ್ಲ. ಕೊಡಿಸುತ್ತೇನೆಂದವರು ಸಿಗಲಿಲ್ಲ. ಏನು ಮಾಡಬೇಕೆಂಬ ಚಿಂತೆಗೆ ಬಿದ್ದಿದ್ದಾಗಲೇ ಒಂದಿಬ್ಬರು ‘ಸಂಪನ್ನ’ರೆಂಬುವವರು ಎದುರಾದರು. ಕಷ್ಟ ಕಾಲದಲ್ಲಿ ಮಾತನಾಡಿಸುತ್ತಿದ್ದಾರೆಂದಾದ ಮೇಲೆ ನಂಬದಿರಲಾದೀತೆ ? ಷರಾಬು ಬಾಟಲಿಯ ಬೇಡಿಕೆಯೊಂದಿಗೆ ಹಣ ವಸೂಲಿ ಮಾಡಿಕೊಡಿಸುವ ಷರತ್ತಿನ ಭರವಸೆ ಅವರಿಂದ ಕಂಬಳಿಗಾರನಿಗೆ ಸಿಕ್ಕಿತು. ಅವತ್ತೇನೋ ಗಡಂಗು ನಡೆದು ಹೋಯಿತು. ಒಂದೆರಡು ದಿನ ಬಿಟ್ಟು ಬರಲು ಹೇಳಿ ಆತನನ್ನು ಕಳಿಸಿದ್ದೂ ಆಯಿತು. ಇಲ್ಲದ ಆಶಾ ಭಾವ, ಒಲ್ಲದ ಮನಸ್ಸಿನೊಂದಿಗೆ ಅವ ಹೋದದ್ದೂ ಆಯಿತು, ಮತ್ತೆ ಬಂದದ್ದೂ ಆಯಿತು. ಈ ಬಾರಿ ಸಿಕ್ಕ ಸಂಪನ್ನರೆಂಬೋ ಸಂಪನ್ನರ ಮಾತಿನ ಧಾಟಿ ಬದಲಾಗಿತ್ತು. ತಮ್ಮಿಬ್ಬರ ಕಂಬಳಿ ಹಣವನ್ನು ಮಾಫಿ ಮಾಡಿಬಿಟ್ಟರೆ ಉಳಿದ ಹಣ ಕೈಸೇರುತ್ತೆ ಎಂಬ ಕಂಡೀಷನ್ ಮುಂದೆ ಬಂದಿತ್ತು. ಕಂಬಳಿಗಾರನಿಗೂ ರೇಗಿ ಹೋಯಿತು. ಮಾತಿಗೆ ಮಾತು ಬೆಳೆಯಿತು. ಇವರೂ ಬಿಡಲಿಲ್ಲ ಕೈ ಹಚ್ಚಿದರು. ಧರ್ಮದೇಟುಗಳೂ ಬಿದ್ದವು. ಆದರೂ ಯಾರೊಬ್ಬರೂ ನ್ಯಾಯಕ್ಕೆ ಬರಲಿಲ್ಲ. ಮಾತಾಡಿಕೊಟ್ಟಿದ್ದ ಜಾಗೀರ್‌ದಾರ್ ಈಗ ನ್ಯಾಯಕ್ಕೆ ಕುಳಿತ. ಊರವರ ಮೇಲೆ ಕೈ ಮಾಡಿದರೆ ಕಾಲು ಮುರಿಯಬೇಕಾದೀತು ಎಂಬ ಎಚ್ಚರಿಕೆ ಬಂತು, ಪಂಚಾಯತಿಯಿಂದ ಇಬ್ಬರ ಜತೆ ಮತ್ತಿಬ್ಬರು ಸೇರಿದರು, ನಾಲ್ಕಿದ್ದ ಮಂದಿ ಎಂಟಾದರು. ಸಣ್ಣದೊಂದು ಗುಂಪೇ ನೆರೆಯಿತು. ಎಲ್ಲರೂ ಸೇರಿ ಮಾಡಿದ ನ್ಯಾಯ ಪಂಚಾಯ್ತಿ ಅತ್ಯದ್ಭುತವಾಗಿತ್ತು. ಈ ಕ್ಷಣ ಕಂಬಳಿಗಾರ ಊರು ಬಿಟ್ಟು ಹೋಗದಿದ್ದರೆ ಮುಂದಿನ ಅನಾಹುತಕ್ಕೆ ಯಾರೂ ಹೊಣೆಯಾಗಲು ಸಾಧ್ಯವಿಲ್ಲ... ಇಷ್ಟು ಆಗುವುದರೊಳಗೆ ಎದ್ದೆನೋ ಬಿದ್ದೆನೋ ಅಂತ ಆತ ಓಡಿ ಹೋಗಿಯಾಗಿತ್ತು. ಮತ್ತೆ ರಾತ್ರಿ ಊರಲ್ಲಿಆ ಸಂಭ್ರಮದಲ್ಲಿ ಗಡಂಗು ಸಮಾರಾಧನೆ.


‘ಹುಚ್ಚರ ಹಳ್ಳಿ’ ಅಂತ ಅದಕ್ಕೆ ಹೆಸರು ಬರಲು ಬೇರೆ ಕಾರಣ ಬೇಕಿಲ್ಲ ತಾನೆ ? ಹೌದು, ರಾಜಸ್ಥಾನದ ತೀರಾ ಹೀನಾಯ ಬರಪೀಡಿತ ಲಾಪೋಡಿಯಾ ಎಂಬ ಊರಿನ ಮಂದಿ ಅಕ್ಷರಶಃ ಇಂಥ ಲಫಡಾಗಳಿಂದಲೇ ಒಂದು ಕಾಲದಲ್ಲಿ ಕುಖ್ಯಾತರಾದವರು. ಗುರ್ಜರ್ ಜನಾಂಗದವರೇ ಹೆಚ್ಚಾಗಿ ವಾಸಿಸುವ ಪ್ರದೇಶವದು. ಲಾಪೋಡಿಯಾ ಎಂಬ ರಾಜಸ್ಥಾನಿ ಪದದ ಅರ್ಥ ಹುಚ್ಚರ ಹಳ್ಳಿ ಎಂದೇ. ಆ ಬಗ್ಗೆ ಅವರಿಗೆ ಕಿಂಚಿತ್ತೂ ಬೇಸರ ಇರಲಿಲ್ಲ. ಅವರಿರುವುದೇ ಹಾಗೆ. ಎಂತಾದರೂ ಆಗಲಿ; ಹೊಟ್ಟೆ ತುಂಬಬೇಕಷ್ಟೆ. ಉದ್ಯೋಗ ಮಾಡಲು ಮನಸ್ಸಿಲ್ಲ. ಮನಸ್ಸಿದ್ದರೂ ಗೊತ್ತಿದ್ದ ಒಂದೇ ಉದ್ಯೋಗ ಕೃಷಿಗೆ ಅಗತ್ಯ ನೀರು ಕಾಣದೇ ಅದೆಷ್ಟು ವರ್ಷಗಳಾಯಿತೋ. ಮಳೆ ಬೀಳದೇ ಭೂಮಿಯೇ ಬಾಯ್ದೆರೆದುಕೊಂಡು ಮಲಗಿರುವಾಗ ಮನುಷ್ಯರಿಗಾದರೂ ಎಲ್ಲಿಂದ ಸಿಕ್ಕೀತು ನೀರು. ವರ್ಷಕ್ಕೆ ಹೆಚ್ಚೆಂದರೆ ೩೨೦ ಮಿಲಿ ಮೀಟರ್ ಮಳೆ. ಅಷ್ಟನ್ನೂ ಸರಿಯಾಗಿ ಕಾಣುವುದು ಐದೋ ಆರೋ ವರ್ಷಕ್ಕೊಮ್ಮೆ. ಹೋಗಲಿ ಅದಾದರೂ ತಾಲಾಬ್‌ಗಳಲ್ಲಿ ನಿಂತಿದ್ದರೆ ಬೇಸಿಗೆ ಭಾರವಾಗುತ್ತಿರಲಿಲ್ಲ. ಆದರೆ ತಾಲಾಬ್‌ಗಳೇ ಹೂಳಿನಡಿ ಹೂತು ಹೋಗುತ್ತಿದ್ದಾಗ ನೀರಾದರೂ ಹೇಗೆ ನಿಲ್ಲಲು ಸಾಧ್ಯವಾದೀತು ? ಮನುಷ್ಯ ಬದುಕುವುದೇ ಕಷ್ಟವಾಗಿರುವಾಗ ಜಾನುವಾರುಗಳನ್ನು ಸಾಕುವುದಾದರೂ ಹೇಗೆ ? ಹೀಗಾಗಿ ಅವುಗಳನ್ನು ಹೊಡೆದಟ್ಟಿಯಾಗಿತ್ತು. ಸಾಕಿದವರು ಹೊಡೆದಟ್ಟಿದರು ಎನ್ನುವುದಕ್ಕಿಂತ ಮೇವು-ನೀರು ಸಿಗದಿದ್ದ ಮೇಲೆ ಜಾನುವಾರುಗಳೇ ಅವನ್ನು ಹುಡುಕಿಕೊಂಡು ಹೊರಟುಬಿಟ್ಟಿದ್ದವು.


ಇಂತಿಪ್ಪ ಸನ್ನಿವೇಶದಲ್ಲಿ ಜನ ಲಫಡಾಕ್ಕಿಳಿಯದೇ ಮತ್ತಿನ್ನೇನು ಮಾಡಿಯಾರು ? ಹಿರಿಯರೇ ಹೀಗೆ ಹಾದಿ ತಪ್ಪಿದ ಮೇಲೆ ಯುವಕರು ಮಕ್ಕಳ ಕಥೆ ಏನಾದೀತೆಂಬುದನ್ನು ಊಹಿಸಿಕೊಳ್ಳಬಹುದು. ಒಟ್ಟರೆ, ಕಂಡಕಂಡ ಕಟ್ಟೆಗಳಲ್ಲಿ ಕುಳಿತು ಕಾಡು ಹರಟೆ ಹೊಡೆಯವುದು, ದಾರಿ ಹೋಕರನ್ನು ವ್ಯಂಗ್ಯ ಮಾಡುವುದು, ಪಾಪದವರು ಸಿಕ್ಕರೆ ಅವರನ್ನು ಸುಲಿದು ಪರದೇಶಿಗಳನ್ನಾಗಿ ಮಾಡುವುದು, ಒಟ್ಟಾರೆ ಕಂಡವರ ಅನ್ನಕ್ಕೆ ಕನ್ನ ಹಾಕಿಯೇ ಜೀವಿಸುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಲಾಪೋಡಿಯಾದ ಮಂದಿಯ ಅಂಥ ಪ್ರವೃತ್ತಿಗೆ ಒಂದು ಉದಾಹರಣೆ ಕಂಬಳಿಗಾರನ ಪ್ರಕರಣ. ಇಷ್ಟಕ್ಕೇ ಕಥೆ ಮುಗಿಯುವುದಿಲ್ಲ.


ಇಷ್ಟೆಲ್ಲವೂ ಆಗುವಾಗ ಆಗಿನ್ನೂ ಹರೆಯಕ್ಕೆ ಕಾಲಿಡುತ್ತಿದ್ದ ಒಬ್ಬ ಯುವಕ ಸುಮ್ಮನೆ ನಿಂತು ಗಮನಿಸುತ್ತಿದ್ದ. ಅದೂ ಮುಂದೆ ನಿಂತು ಊರನ್ನು ಅಂಥ ಮಾರ್ಗದಲ್ಲಿ ಮುನ್ನಡೆಸುತ್ತಿದ್ದ, ಅನ್ಯಾಯವನ್ನು ಕಂಡೂ ಕಾಣದಂತೆ ಪೋಷಿಸುತ್ತಿದ್ದ ಜಹಗೀರುದಾರನ ಹಿರಿಯ ಮಗನಾತ. ಲಾಪೋಡಿಯಾದಲ್ಲಿ ಜಹಗೀರುದಾರಿಕೆಯೆಂದರೆ ಅದು ರಾಜಸ್ಥಾನದ ರಾಜಮನೆತನದ ಬಳವಳಿ. ಮಾತ್ರವಲ್ಲ, ಅವರೂ ಅದೇ ಮೂಲ ರಾಜ ಮನೆತನಕ್ಕೇ ಸೇರಿದವರು. ಅಂಥ ರಾಜ ಕುಟುಂಬದ ಆ ಯುವಕನಿಗೆ ಇದೇನೋ ವಿಚಿತ್ರವಾಗಿ ಕಂಡಿತು. ಯಾವತ್ತಿಗೂ ಅಪ್ಪನ, ಊರಿನವರ ನಡವಳಿಕೆ ಸರಿ ತೋರಲಿಲ್ಲ. ಹಾಗೆಂದು ಅಂಥದ್ದರ ಪರಿಚಯ ಅವನಿಗೆ ಆವರೆಗೂ ಆಗಿದ್ದಿರಲಿಲ್ಲ. ಆತ ಊರಿನಲ್ಲಿದ್ದರೆ ತಾನೆ ಅದು ಅರಿವಿಗೆ ಬರುವುದು ? ಆತ ದೂರದ ಜೈಪುರದಲ್ಲಿ ಉನ್ನತ ಶಿಕ್ಷಣಕ್ಕೆಂದು ತೆರಳಿದ್ದ. ಲಾಪೋಡಿಯಾದ ಮಟ್ಟಿಗೆ ಉನ್ನತ ಶಿಕ್ಷಣವೆಂದರೆ ನಾಲ್ಕನೆಯ ತರಗತಿಯ ನಂತರದ ಓದೆಲ್ಲವನ್ನೂ ಅವರು ಹಾಗೆಂದೇ ಗುರುತಿಸುತ್ತಿದ್ದರು. ಏಕೆಂದರೆ ಆ ಊರಿನಲ್ಲಿ ಆಗ ಇದ್ದುದೇ ಮೂರನೆಯ ತರಗತಿಯವರೆಗಿನ ಶಾಲೆ. ತೀರಾ ಶ್ರೀಮಂತರ ಮಕ್ಕಳು ಮಾತ್ರ ಹೆಚ್ಚಿನ ಓದಿಗಾಗಿ ಜೈಪುರಕ್ಕೆ ಹೋಗುತ್ತಿದ್ದರು. ಜಹಗೀರದಾರನ ಮಗನೂ ಹಾಗೆ ಊರುಬಿಟ್ಟು ಆಗಲೇ ಆರೇಳು ವರ್ಷಗಳಾಗಿತ್ತು. ವರ್ಷಕ್ಕೊಮ್ಮೆ ಸಿಗುವ ದೀಪಾವಳಿ ರಜಕ್ಕೆ ಮಾತ್ರ ನಾಲ್ಕು ದಿನ ಊರಿಗೆ ಬಂದು ಮತ್ತೆ ಹೋಗಿ ಬಿಡುತ್ತಿದ್ದ. ಹೀಗಾಗಿ ಊರಿನ ಪರಿಸ್ಥಿತಿ ಆತನಿಗೆ ತೀರಾ ಅಪರಿಚಿತ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಹೀಗೆ ಊರಿಗೆ ಬಂದಾಗಲೇ ಇಂಥ ಘೋರ ಚಿತ್ರಣವೊಂದರ ದರ್ಶನವಾದ್ದು.


ಅಷ್ಟೇ, ತನಗೆ ಸರಿಕಾಣದ ಸಂಗತಿಯ ಬಗ್ಗೆ ಸಿಡಿದೆದ್ದ. ಖಂಡತುಂಡವಾಗಿ ಅನ್ಯಾಯವನ್ನು ಖಂಡಿಸಿದ. ಸ್ವತಃ ಜಹಗೀರದಾರ ತಂದೆಗೇ ಎದುರು ವಾದಿಸಿ ಅವರನ್ನು ಸರಿದಾರಿಗೆ ತರಲು ಯತ್ನಿಸಿದ. ಊರಿನ ದುಃಸ್ಥಿತಿಯ ಬಗ್ಗೆ ಮರುಗಿದ. ಇಡೀ ಹಳ್ಳಿಯನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡು ಹಿಂಡುತ್ತಿದ್ದ ಬಡತನವನ್ನು ಬಡಿದೋಡಿಸಬೇಕೆಂದು ಚಿಂತಿಸಿದ. ಎಂದೋ ಊರುಬಿಟ್ಟು ಹೋಗಿದ್ದ ಶ್ರೀಮಂತ ಭಾರತೀಯ ಸಂಸ್ಕೃತಿಯನ್ನು ಮತ್ತೆ ನೆಲೆಗೊಳಿಸಬೇಕೆಂದು ಆಶಿಸಿದ. ಇಷ್ಟಲ್ಲಕ್ಕೂ ಕಾರಣವಾಗಿರುವ, ಸುತ್ತಮುತ್ತಲ ಹತ್ತು ಹಳ್ಳಿಗಳಲ್ಲಿ ಹತ್ತಾರು ವರ್ಷಗಳಿಂದ ಬೋರಲು ಬಿದ್ದುಕೊಂಡಿದ್ದ ಭೀಕರ ಬರಗಾಲವನ್ನು ಹೇಗಾದರೂ ನಿವಾರಿಸಬೇಕೆಂದು ನಿಶ್ಚಯಿಸಿದ. ಇದೆಲ್ಲವೂ ತನ್ನೊಬ್ಬನಿಂದಲೇ ಸಾಧ್ಯವಾಗದೆಂದು ನಿಶ್ಚಯಿಸಿದವನೇ ನಾಲ್ಕಾರು ಗೆಳೆಯರನ್ನು ಒಟ್ಟುಗೂಡಿಸಿಕೊಂಡು ರಾತ್ರಿ ಬೆಳಗೆನ್ನದೇ ಚರ್ಚೆಗೆ ನಿಂತ. ಕೊನೆಗೊಂದು ದಿನ ಬದುಕು ಕಲಿಸದ ಓದನ್ನು ಅಷ್ಟಕ್ಕೇ ನಿಲ್ಲಿಸಿ ತನ್ನೂರಿನವರಿಗೊಂದು ಹೊಸ ಬದುಕನ್ನು ಕಟ್ಟಿಕೊಡಲು ತನ್ನ ಜೀವನವನ್ನೇ ಮುಡಿಪಾಗಿಡಲು ನಿರ್ಧರಿಸಿ ಎದ್ದು ನಿಂತ.
ಇಂದು ಲಾಪೋಡಿಯಾ ಎಂಬುದು ದೇಶಕ್ಕೇ ಮಾದರಿ ನೀರಾವರಿ ವ್ಯವಸ್ಥೆಯನ್ನು ಕಟ್ಟಿಕೊಟ್ಟಿದ್ದರೆ, ವಿಶ್ವವೇ ನಿಬ್ಬೆರಗಾಗಿ ನೋಡುವಂಥ ಬರ ನಿರೋಧಕ ಜಾಣ್ಮೆಯನ್ನು ಮೆರೆದಿದ್ದರೆ, ಅಲ್ಲಿನ ಬಾನ್ದಳ ಸ್ವಚ್ಛಂದ ಹಕ್ಕಿಗಳ ಕಲರವದಿಂದ ತುಂಬಿಹೋಗಿದ್ದರೆ, ಜಾನುವಾರುಗಳು ಮೈಕೈ ತುಂಬಿಕೊಂಡು ಹಾಲಿನ ಹೊಳೆ ಹರಿಸುತ್ತಿದ್ದರೆ, ಕಾನನ ಹಸಿರಾಚ್ಛಾದಿತವಾಗಿ ಕಂಗೊಳಿಸುತ್ತಿದ್ದರೆ, ನೀರ ಸಂಸ್ಕೃತಿಯೊಂದಿಗೆ ಭಾರತೀಯ ಸತ್ಪರಂಪರೆ ಮನೆ ಮಾಡಿದ್ದರೆ, ಕಂಡಕಂಡವರನ್ನು ಸುಲಿಯುತ್ತಿದ್ದ ಅದೇ ಹಳ್ಳಿಯ ಜನ ಇಂದು ಹೊಸಬರು ಯಾರೇ ಕಂಡರೂ ಯಾರೆಂಬುದನ್ನೂ ವಿಚಾರಿಸದೇ ಅತ್ಯಂತ ಗೌರವ-ಪ್ರೀತಿಪೂರ್ವಕವಾಗಿ ‘ರಾಂ ರಾಂ ಸಾಬ್‘ ಎಂದು ಕೈ ಮುಗಿದು ಆದರಿಸುತ್ತಿದ್ದರೆ... ಇಂಥ ಇನ್ನೂ ನೂರಾರು ರೇಗಳ ಸಾಮ್ರಾಜ್ಯ ವಾಸ್ತವಗಳಾಗಿ ಅನುಷ್ಠಾನಗೊಂಡಿದೆ ಎಂದರೆ ಅದಕ್ಕೆ ಆ ಯುವಕನೇ ಕಾರಣ.


ಇದೇನು ಅಮೀರ್ ಖಾನ್‌ನ ಹೊಸ ಸಿನೆಮಾದ ಸ್ಕಿಪ್ಟ್ ಅಲ್ಲ. ಆ ಯುವಕ ಚಿತ್ರದ ಹೀರೋನೂ ಅಲ್ಲ. ಆತ ರಾಜಸ್ಥಾನದ ನೀರ ಯಶೋಗಾಥೆಯ ನಾಯಕ, ಗ್ರಾಮವಿಕಾಸ್ ನವ ಯುವಕ್ ಮಂಡಲವೆಂಬ ಎಂಟು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜಲಯೋಧಪಡೆಯ ಸೇನಾಪತಿ. ಹೆಸರು ಲಕ್ಷ್ಮಣ ಸಿಂಗ್. ಜಲ ಪುನರುತ್ಥಾನಕ್ಕಾಗಿ ಜೀವನವನ್ನೇ ಮುಡುಪಿಟ್ಟು ಗೆದ್ದ ಅದೇ ಯುವಕ ಐಐಎಂಬಿಯಲ್ಲಿ ತಮ್ಮ ಅನುಭವ ಹಂಚಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಛಾಯಾಚಿತ್ರಗ್ರಾಹಕ ಮಹೇಶ್ ಭಟ್ ಪರಿಚಯಿಸಿ ಸುಮ್ಮನೆ ಕುಳಿತರು. ಖುಲ್ಲಂಖುಲ್ಲ ಮೂರು ತಾಸು ಅವರ ಜತೆ ಹರಟಿ ಯಶೋಗಾಥೆಯನ್ನು ಮನದುಂಬಿಸಿಕೊಂಡು ಬಂದಿದ್ದೇನೆ. ಇನ್ನೊಂದಷ್ಟು ವಾರ ಕಂತುಗಳಲ್ಲಿ ಅದನ್ನು ನಿಮ್ಮ ಜತೆ ಹಂಚಿಕೊಳ್ಳದಿದ್ದರೆ ನನಗೆಲ್ಲಿಯ ನೆಮ್ಮದಿ. ಇದು ಆರಂಭ. ಉಳಿದೆಲ್ಲದಕ್ಕೆ ಮುಂದಿನ ವಾರದವರೆಗೆ ಕಾಯಬೇಕಷ್ಟೇ.

ತಿಳಿನೀರ ಕೆರೆ ಜತೆ ನೀರೆಯ ಮಾನವೀಯತೆ

ಚೆಲುವೆಯ ಮುಗ್ಧ ನಗು ಅಲ್ಲಿ ಪ್ರತಿಫಲಿಸುತ್ತದೆ. ಆಕೆಯ ನಿಷ್ಕಲ್ಮಶ ಪ್ರೇಮದ ಸವಿ ಆ ನೀರಿನಲ್ಲಿ ಅಡಗಿದೆ. ಅವಳ ಪುಣ್ಯದ ಫಲ ತಲೆಮಾರುಗಳನ್ನು ಪೊರೆಯುತ್ತಿದೆ. ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ, ಪ್ರೀತಿ- ವಾತ್ಸಲ್ಯಗಳ ಪ್ರತೀಕವಾಗಿ ಆಕೆಯ ಹೆಸರಿನಲ್ಲೇ ಆ ಕೆರೆ ಅಲ್ಲಿ ಮೈ ಹರವಿ ಮಲಗಿದ್ದರೆ ಅಲ್ಲಿನ ಜನ ಹೆಮ್ಮೆಯಿಂದ ಆಕೆಯನ್ನು ಸ್ಮರಿಸಿಕೊಳ್ಳುತ್ತಾರೆ.

ಹೌದು, ಅವಳು ಸೂಳೆ. ಈ ಸಮಾಜ ಅತ್ಯಂತ ನಿಕೃಷ್ಟವಾಗಿ ಕಾಣುವ, ಆದರೆ ನೈಜ ನಿಷ್ಠೆ-ಪ್ರಾಮಾಣಿಕತೆಗೆ ಸಾಕ್ಷಿಯಾದ ವೇಶ್ಯೆಯೊಬ್ಬಳ ಹೆಸರು ಇಂದು ನಾಡಿನ ಹಲವು ಹಳ್ಳಿಗಳಲ್ಲಿ ಅಜರಾಮರವಾಗಿದ್ದರೆ ಅದು ಆಕೆ ಮಾಡಿದ ನೀರ ಕಾರ್ಯದಿಂದ; ಅವಳ ಪಾತಿವ್ರತ್ಯದಿಂದ. ಇದೇನಿದು, ಒಬ್ಬ ವೇಶ್ಯೆಗೂ ನಿಷ್ಠೆ-ಬದ್ಧತೆಗೂ, ಪಾತಿವ್ರತ್ಯಕ್ಕೂ ಎತ್ತಣಿಂದೆತ್ತಣ ಸಂಬಂಧ ? ಹಾಗೆನ್ನುವಾಗ ಎಲ್ಲೋ ಓದಿದ ಕಥೆಯೊಂದು ನೆನಪಿಗೆ ಬರುತ್ತಿದೆ. ಬಹುಶಃ ಇದು ಸಹ ಭಾಗೀರಥಿ ಕಥೆಯಂತೆಯೇ ಜನಪದರಲ್ಲಿ ಹುಟ್ಟಿ ಬೆಳೆದದ್ದೇ ಇರಬಹುದು.


ಆ ಊರಿನಲ್ಲಿ- ಯಾವುದೋ ಒಂದು ಊರು. ಬೇಕಿದ್ದರೆ ಬೇಕೂರು ಅಂತಲೇ ಇಟ್ಟುಕೊಳ್ಳೋಣ- ಅಂಥ ಬೇಕೂರಿನಲ್ಲಿ ಭೀಕರ ನೀರಿನ ಕ್ಷಾಮ ತಲೆದೋರಿತ್ತು. ಹಾಗೆಂದು ನೀರು ಇಲ್ಲವೆಂದಲ್ಲ. ಬೇಕಷ್ಟು ಬಾವಿಗಳಿದ್ದವು. ಊರ ದೇಗುಲದಲ್ಲಿ ಒಂದು ಕೆರೆಯೂ ಇತ್ತೆನ್ನಿ. ಅದರೊಳಗಣ ಸಮೃದ್ಧ ಜಲ ಸಂಪನ್ಮೂಲ ಮಾತ್ರ ಉಳ್ಳವರ, ಕುಲೀನರ ಸುಪರ್ದಿಗೆ ಒಳಪಟ್ಟಿತ್ತು. ಊರೆಂದರೆ ಅವರಷ್ಟೇ ಇರುವುದಿಲ್ಲವಲ್ಲಾ ? ಇತರರಿಗೆ ನೀರಿಲ್ಲ. ಅದೇ ಕ್ಷಾಮ. ಕೊನೆಗೂ ದೂರು ದೊರೆಯವರೆಗೆ ಹೋಗಿ ಮುಟ್ಟುತ್ತದೆ. ಪ್ರಜೆಗಳಲ್ಲಿ ಕುಲೀನರು- ಕುಲಹೀನರೆಂಬ ಭೇದವೆಲ್ಲಿಯದು. ಕೊನೆಗೆ ಬೇಕೂರಿಗಿನ್ನೊಂದು ಕೆರೆ ಬೇಕೆಂಬ ಬೇಡಿಕೆಗೆ ರಾಜಮನ್ನಣೆ ದೊರೆಯುತ್ತದೆ. ಕೆರೆ ಕಟ್ಟಿ ನಿಲ್ಲಿಸಿದರೆ ಅದೇನು ದುರದೃಷ್ಟವೋ ಒಂದು ಹನಿ ನೀರೂ ಅಲ್ಲಿ ಬೀಳುವುದಿಲ್ಲ. ಇದು ರಾಜನಿಗೆ ಅಪಮಾನ ಎನ್ನಿಸಿಬಿಡುತ್ತದೆ. ತಾನು ಕಟ್ಟಿಸಿದ ಕೆರೆಯಲ್ಲಿ ನೀರು ಬೀಳುವುದಿಲ್ಲವೆಂದರೆ ಏನರ್ಥ ? ಪೂಜೆ ಪುನಸ್ಕಾರಗಳು ನೆರೆವೇರುತ್ತದೆ. ಗಂಗೆಯ ಸುಳಿವಿಲ್ಲ. ನಾಡಿನ ಧರ್ಮಿಷ್ಠರೆಲ್ಲರ ಪುಣ್ಯದ ಧಾರೆಯಾಗುತ್ತದೆ. ಕೊನೆ ಸ್ವತಃ ರಾಜ ತನ್ನ ಧರ್ಮಾಡಳಿತದ, ತಾನು ಕುಳಿತ ಧರ್ಮಪೀಠದ ಪುಣ್ಯ ಸಂಚಯವನ್ನೆಲ್ಲ ಕೆರೆಯ ನೀರಿಗಾಗಿ ವ್ಯಯಿಸುತ್ತಾನೆ. ಆದರೂ ಪ್ರಯೋಜನವಾಗದಿದ್ದಾಗ ಕೈ ಚೆಲ್ಲಿ ಕುಳಿತುಬಿಡುತ್ತಾನೆ.


ಅಂಥ ಸಂಕಷ್ಟಕ್ಕೆ ಒದಗುವವಳು ಒಬ್ಬ ವೇಶ್ಯೆ. ಊರಿನ ಮಂದಿಯ ವ್ಯಥೆಯೆಂದರೆ, ರಾಜನಿಗೆದುರಾದ ಸವಾಲೆಂದರೆ ಅದು ತನ್ನದೇ ಎಂದುಕೊಳ್ಳುವ ಆಕೆ ಆ ಕೆರೆಯ ಮುಂದೆ ನಿಂತು ಕೈಮುಗಿದು ಗಂಗಾ ಮಾತೆಯನ್ನು ಪ್ರಾರ್ಥಿಸುತ್ತಾಳೆ. ‘ನಾನು ನಿಜವಾಗಿಯೂ ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಧರ್ಮ ಪಾಲನೆ ಮಾಡಿದ್ದರೆ, ಜೀವನದಲ್ಲಿ ಈವರೆಗೆ ನೈತಿಕವಾಗಿ ಬದುಕಿದ್ದರೆ, ನಿಜವಾಗಿ ಪಾತಿವ್ರತ್ಯ ನನ್ನಲ್ಲಿದ್ದರೆ, ಆ ಎಲ್ಲದರ ಪುಣ್ಯವನ್ನು ಧಾರೆ ಎರೆಯುತ್ತೇನೆ. ಈ ಕೆರೆಯಲ್ಲಿ ಬೆಳಗಾಗುವುದರಲ್ಲಿ ನೀರು ಬೀಳುವಂತಾಗಲಿ’ ಎನ್ನುತ್ತಾಳೆ. ಅಚ್ಚರಿಯೆಂದರೆ ಬೆಳಗಿನ ಕಿರಣಗಳು ಆ ಕೆರೆಯನ್ನು ತಲುಪಿದವೋ ಇಲ್ಲವೋ, ಅದು ತುಂಬಿ ತುಳುಕುತ್ತದೆ. ಆಗಸದ ಹೊಂಬಣ್ಣ ಆ ನೀರಲೆಗಳಲ್ಲಿ ಪ್ರತಿಫಲಿಸುತ್ತದೆ. ರಾಜ ಇದು ಹೇಗೆಂದು ಕೇಳಿದಾಗ ವೇಶ್ಯೆಯ ಉತ್ತರ ಕೇಳಿ- ನಾನು ಎಂದಿಗೂ ವೈಯಕ್ತಿಕ ವಾಂಛೆಗಾಗಿ ಬೇರೊಬ್ಬರೊಂದಿಗೆ ಮಲಗಿಲ್ಲ. ಎಂದಿಗೂ ನನ್ನ ವೃತ್ತಿಯ ಬಗ್ಗೆಯಾಗಲೀ, ವ್ಯವಹಾರದಲ್ಲಾಗಲೀ ಸುಳ್ಳು ಹೇಳಿಲ್ಲ. ನನ್ನ ಬಳಿ ಬರುವ ಗಿರಾಕಿಗಳಿಗೆ ಸದಾ ನಾನು ನಿಷ್ಠೆಯಿಂದಲೇ ಇರುತ್ತೇನೆ. ಹಾಗಾಗಿ ಒಬ್ಬ ಪತಿವ್ರತೆಯಷ್ಟೇ ನಾನೂ ಪವಿತ್ರಳು. ಅಂಥ ಧರ್ಮದ ಫಲವೇ ಇಂದು ಊರ ಜನರನ್ನು ಪೊರೆಯುತ್ತಿದೆ.- ಧರ್ಮ ಸೂಕ್ಷ್ಮ ಎಂದರೆ ಇದೇ ಇರಬಹುದೇ ?


ಅದೇನೇ ಇರಲಿ, ವೇಶ್ಯೆಯರಿಗೂ ಕೆರೆಗಳಿಗೂ ಅವಿನಾ ಸಂಬಂಧವಿರುವುದು ಇತಿಹಾಸದುದ್ದಕ್ಕೂ ಕಂಡು ಬರುತ್ತದೆ. ನಾಡಿನ ಹಲವೆಡೆಗಳಲ್ಲಿ ‘ಸೂಳೆಕೆರೆ’ ಹೆಸರಿನ ಹಲವು ನಿರ್ಮಾಣಗಳು ಇಂದಿಗೂ ಅಸ್ತಿತ್ವದಲ್ಲಿವೆ. ಇಲ್ಲಿ ಎರಡು ಅಂಶಗಳು ಪ್ರಮುಖವಾಗಿ ಗಮನ ಸೆಳೆಯುತ್ತವೆ. ನೀರಿಗಿಂತ ದೊಡ್ಡ ಧರ್ಮವೆಂಬುದು ಯಾವುದೂ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ, ಕೀಳಾಗಿ ನೋಡಲ್ಪಟ್ಟ ವೇಶ್ಯೆಯರು ತಾವು ಪಾಪಪ್ರಜ್ಞೆಯಿಂದ ಮುಕ್ತರಾಗಲು ಕೆರೆಗಳ ನಿರ್ಮಾಣಕ್ಕೆ ಮುಂದಾಗಿದ್ದಿರಬಹುದು. ಮತ್ತೊಂದು ಅಂಶ ನೀರಿನ ಸಂಕಷ್ಟ ಎಂದರೆ ಅದು ನೀರೆಯ ಸಂಕಷ್ಟ. ಒಬ್ಬ ಹೆಣ್ಣಿನ ನೋವನ್ನು ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು. ಮಾತ್ರವಲ್ಲ ಅದಕ್ಕೆ ಪರಿಹಾರವೂ ಆಕೆ ಮಾತ್ರ ದೊರಕಿಸಿಕೊಡಬಲ್ಲಳು. ಇಲ್ಲಿ ಒಬ್ಬ ಹೆಣ್ಣಾಗಿ ನೀರಿನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ವೇಶ್ಯೆ, ಅದಕ್ಕೆ ಪರಿಹಾರ ರೂಪದಲ್ಲಿ ಕೆರೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಿರಬಹುದು.


ನಾಡಿನ ಇಂಥ ಹಲವು ಕೆರೆಗಳಲ್ಲಿ ಗಮನ ಸೆಳೆಯುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ. ನಿಜಕ್ಕೂ ಅದರ ವೈಶಾಲ್ಯ, ಸುತ್ತಲಿನ ಮನಮೋಹಕ ಪರಿಸರ, ನೀರಿನ ಸಮೃದ್ಧಿ, ತಾಂತ್ರಿಕ ನಿರ್ಮಾಣಗಳು ಗಮನ ಸೆಳೆಯುತ್ತದೆ. ಏಷ್ಯಾಖಂಡದಲ್ಲೇ ಎರಡನೆ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಇದು ಪಾತ್ರ. ಹಾಗೆ ನೋಡಿದರೆ ಕೆರೆಯಿರುವ ಪ್ರದೇಶ ಅರೆ ಮಲೆನಾಡು. ಬಟಾನು ಬಯಲಿನ ನಡುವೆ ಮೈವೆತ್ತ ಸೂಳೆಕೆರೆ ಹೆಮ್ಮೆಯ ನಿಸರ್ಗ ತಾಣ. ಕುಡಿಯುವ ನೀರಿಗೆ ಮಾತ್ರವಲ್ಲದೆ ನೂರಾರು ರೈತ ಕುಟುಂಬಗಳ ಜೀವನಕ್ಕೆ ಆಧಾರವಾಗಿದೆ.


ಬರೋಬ್ಬರಿ ೪೪೧೬ ಎಕರೆ ೧೭ ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆ, ಪಕ್ಕಾ ಸಮುದ್ರದಂತೆಯೇ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು ೯೫೦ ಅಡಿ ಉದ್ದಕ್ಕೆ ಬದುವನ್ನು ಕಟ್ಟಿ ನಡುವೆ ನೀರು ನಿಲ್ಲಿಸಲಾಗಿದೆ. ಬದುವಿನ ಒಂದು ಪಾರ್ಶ್ವ ೬೦ ಅಡಿ, ಇನ್ನೊಂದೆಡೆ ೮೦ ಅಡಿ ಅಗಲವಿದೆ.


ಈ ಕೆರೆಯ ಹಿಂದೆಯೂ ಒಂದು ಜಾನಪದ ಕಥೆ ಬಿಚ್ಚಿಕೊಳ್ಳುತ್ತದೆ. ಅದು ಸ್ವರ್ಗಾವತಿ ನಗರ. ವಿಕ್ರಮರಾಯ ಅದರ ಅರಸ. ನೂತನಾದೇವಿ ಪಟ್ಟದರಸಿ. ದಂಪತಿಗೆ ಶಾತಲಾದೇವಿ ಮುದ್ದಿನ ಮಗಳು. ಒಮ್ಮೆ ಏರು ಜವ್ವನೆ ಶಾಂತಲಾ ನೆರೆ ಊರಿಗೆ ಹೋಗಿರುತ್ತಾಳೆ. ಅವಳು ಮರಳಿ ಬರುವ ಹೊತ್ತಿಗೆ ರಾಜನಿಗೆ ಅವಳ ಬಗ್ಗೆ ಕೇಳಬಾರದ ಮಾತು ಕೇಳಿಬರುತ್ತದೆ. ಆಕೆಯನ್ನು ಆಕ್ಷೇಪಿಸುವ ವಿಕ್ರಮರಾಯ ನಡತೆಗೆಟ್ಟವಳೆಂದು ಆರೋಪಿಸುತ್ತಾನೆ.


ತಂದೆಯ ಬೈಗುಳದಿಂದ ಮನ ನೊಂದ ಶಾಂತಲಾದೇವಿ ಆರೋಪದಿಂದ ಮುಕ್ತಳಾಗಲು ಕೆರೆಯನ್ನು ನಿರ್ಮಿಸಲು ನಿರ್ಧರಿಸುತ್ತಾಳೆ. ಸ್ವರ್ಗಾವತಿಯಲ್ಲಿ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶವನ್ನು ಅದಕ್ಕೆ ಆಯ್ಕೆ ಮಾಡಿಕೊಂಡು, ಆ ಜಾಗವನ್ನು ಬಿಟ್ಟುಕೊಡುವಂತೆ ವೇಶ್ಯೆಯರನ್ನು ಕೇಳುತ್ತಾಳೆ. ಕೆರೆಗೆ ‘ಸೂಳೆಕೆರೆ’ ಎಂದು ನಾಮಕರಣ ಮಾಡುವುದಾದರೆ ಆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅವರು ಹೇಳುತ್ತಾರೆ.ಆ ಬೇಡಿಕೆಗೆ ಒಪ್ಪಿದ ರಾಜಪುತ್ರಿ ಅಲ್ಲಿ ಕೆರೆ ನಿರ್ಮಾಣ ಮಾಡಿದಳು ಎಂದು ಇತಿಹಾಸ ಹೇಳುತ್ತದೆ.


ಬಹಳ ವಿಶೇಷವೆಂದರೆ ಬ್ರಿಟಿಷ್ ನೀರಾವರಿ ತಂತ್ರಜ್ಞರ ಪ್ರಕಾರ ಯಾವ ರೀತಿಯಿಂದ ನೋಡಿದರೂ ಅದು ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ. ಆದರೆ ಅತ್ಯಂತ ಚಾಣಾಕ್ಷ ತನದಿಂದ ಅಂಥ ಬೃಹತ್ ಕೆರೆಯನ್ನು ಭಾರತೀಯರು ನಿರ್ಮಿಸಿದ್ದರೆಂದರೆ ನಮ್ಮ ತಂತ್ರಜ್ಞಾನದ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಬೆಟ್ಟಗಳ ನಡುವಿರುವ ಕೆರೆಗೆ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಹರಿದು ಬರುತ್ತದೆ. ಕೆರೆಯ ಉತ್ತರದಲ್ಲಿ ಸಿದ್ಧ ನಾಲೆ ಹಾಗೂ ದಕ್ಷಿಣದಲ್ಲಿ ಬಸವ ನಾಲೆ ಎಂಬ ಎರಡು ನಾಲೆಗಳಿವೆ. ಕೆರೆಯಿಂದ ನೀರು ಹರಿದು ಹೋಗಲು ಒಟ್ಟು ಮೂರು ತೂಬುಗಳಿವೆ. ಈ ಕೆರೆ ಸುಮಾರು ೧೫ರಿಂದ ೨೦ ಹಳ್ಳಿಗಳ ೨೦೦೦ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನೂ ಪೂರೈಸುತ್ತಿದೆ.


ಕೆರೆಯ ಪೂರ್ವ ದಿಕ್ಕಿಗೆ ಹೊಯ್ಸಳ ಮತ್ತು ಕೆಳದಿ ವಾಸ್ತುಶೈಲಿಯ ಸಿದ್ದೇಶ್ವರ ದೇವಾಲಯವಿದೆ. ಕೆರೆಯ ಅಂಚಿನಲ್ಲಿ ಆಕರ್ಷಕ ಕಲ್ಲು ಮಂಟಪವಿದೆ. ಆ ಕಲ್ಲು ಮಂಟಪದ ಬಳಿ ನಿಂತು ಕೆರೆ ನೋಡುವುದೇ ಒಂದು ಅಭೂತಪೂರ್ವ ಅನುಭವ.


ಏನಿಲ್ಲವೆಂದರೂ ೨೭ ಅಡಿಗೂ ಹೆಚ್ಚಿನ ನೀರಿನ ಮಟ್ಟ ಹೊಂದಿರುವ ಕೆರೆಯಲ್ಲಿ ಇತ್ತೀಚೆಗೆ ಹೂಳು ತುಂಬಿಕೊಂಡಿರುವುದು ದುರಂತದ ಸಂಗತಿ. ಕೆರೆಗಳ ಹೂಳನ್ನು ಕಾಲಕಾಲಕ್ಕೆ ತೆಗೆದು ಕೆರೆಯನ್ನು ಬಲಪಡಿಸುವ ಗ್ರಾಮಗಳಿಗೆ ಅಂದಿನ ಕಾಲದಲ್ಲಿ ತೆರಿಗೆ ವಿನಾಯಿತಿ ನೀಡುವ ಪದ್ಧತಿ ಇತ್ತು ಎಂಬುದು ಕೌಟಿಲ್ಯನ ‘ಅರ್ಥಶಾಸ್ತ್ರ’ದ ಉಲ್ಲೇಖ. ಆದರೆ ಈಗ ಹೂಳು ತೆಗೆಯುವ ವ್ಯವಸ್ಥೆಯೇ ಇಲ್ಲ. ಸರ್ಕಾರಿ ದಾಖಲೆಗಳಲ್ಲಿ ಶಾಂತಿಸಾಗರ ಎಂದಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಅದು ಇಂದಿಗೂ ಸೂಳೆಕೆರೆ ಆಗಿ ಉಳಿದಿದೆ. ಹೆಸರು ಬದಲಾವಣೆ ಬಗ್ಗೆ ವಿರೋಧವೂ ಈ ಹಿಂದೆ ವ್ಯಕ್ತವಾಗಿತ್ತು. ಏನೇ ಆದರೂ ಇಂದಿಗೂ ಅದು ಸೂಳೆ ಕೆರೆಯಂತಲೇ ಜನಪ್ರಿಯ.


ಮಾನವತೆಯ ಚರಿತ್ರೆಯಲ್ಲಿ ಕೊನೆಗೂ ಉಳಿಯುವುದು ಇಂಥವರೇ. ಆ ಕೆರೆ ಕಟ್ಟಿಸಿದ ರಾಜ ಯಾರೆಂದು ಜನರಿಗೆ ಮರೆತು ಹೋಗಬಹುದು, ಆದರೆ ಕೆರೆಯ ಹಿಂದಿರುವ ವೇಶ್ಯೆಯ ಕತೆ ಮರೆತುಹೋಗದು. ಊರಿನ ಕೊಳೆಯನ್ನು ಒಡಲಲ್ಲಿ ತುಂಬಿಕೊಂಡು ಮೇಲೆ ತಿಳಿನೀರನ್ನು ಜನರಿಗೆ ಉಣಿಸುವ ಕೆರೆಯಂತೆಯೇ, ನೋವು ದೂಷಣೆಗಳನ್ನು ನುಂಗಿಕೊಂಡು ಜನತೆಗೆ ಸುಖ ನೀಡುವ ವೇಶ್ಯೆಯರು ಜನತೆಯ ಸ್ವಾಸ್ಥ್ಯವನ್ನು ರಕ್ಷಿಸುತ್ತಿದ್ದರು ಎಂಬುದು ನಿಜವಲ್ಲವೆ ?


ಲಾಸ್ಟ್ ಡ್ರಾಪ್: ಸ್ವಚ್ಛ ಕೆರೆಯಲ್ಲಿ ಸ್ನಾನ ಮಾಡಿ ಕೊಳೆ ತುಂಬಿಸುವವರು, ಅದರ ಹೂಳು ತೆಗೆಯುವ ಬಗ್ಗೆಯೂ ಯೋಚಿಸಿ ಸಾಮಾಜಿಕ ಪ್ರಜ್ಞೆ ಮೆರೆಯಬೇಕು.

ಊರಿಗೊಂದು ಊರಣಿ, ಜಲ ಶ್ರೀಮಂತಿಕೆಯ ಗಣಿ

ಫಕ್ಕನೆ ನೋಡಿದರೆ ಅದೊಂದು ಸರೋವರ. ಯಾವ ಕೋನದಲ್ಲಿ ನಿಂತರೂ ಅದರ ಸುಂದರ ಹರವು, ವಿಶಾಲ ವಿಸ್ತಾರ, ದಿಟ್ಟ ನಿಲುವು, ಘನ ಗಂಭೀರ ಆಕೃತಿ ಗಮನ ಸೆಳೆಯದೇ ಇರದು. ಒಂದಿಡೀ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೈ ಚಾಚಿಕೊಂಡಿರುವ ಊರಣಿಗಳೆಂದರೆ ಅಪರೂಪದ ಜಲ ಸಮೃದ್ಧಿಯ ತಾಣ. ಸುತ್ತಲ ದಟ್ಟ ಹಸಿರನ್ನೇ ಪ್ರತಿಫಲಿಸುತ್ತ, ಮೈದುಂಬಿ ತೊನೆದಾಡುತ್ತ, ತಿಳಿಗಾಳಿಯೊಡನೆ ಸಲ್ಲಾಪಕ್ಕಿಳಿದು ಅದಕ್ಕೆ ಸ್ಪಂದಿಸಿದ್ದರ ಪರಿಣಾಮವೋ ಎಂಬಂತೆ ಅಲೆಗಳನ್ನೆಬ್ಬಿಸುತ್ತ, ಅಂಥ ಅಲೆಗಳು ಪಡಿಪಡಿಯಾಗಿ ವಿಸ್ತಾರಗೊಳ್ಳುತ್ತ ತಟವನ್ನು ಚುಂಬಿಸುವುದರ ಒಳಗೆ ಮತ್ತಷ್ಟು ತರಂಗಗಳನ್ನು ತಳ್ಳಿಬಿಡುತ್ತ ನಿಂತಿರುವ ಊರಣಿಗಳ ದಂಡೆಯ ಮೇಲೆ ನಿಂತು ಕಣ್ತುಂಬಿಕೊಳ್ಳುವುದೆಂದರೆ ಅದೊಂದು ಅನಿರ್ವಚನೀಯ ಅನುಭವ.


ಹಾಗೆಂದು ಅದು ಉಕ್ಕುವ ಊಟೆಯೇನಲ್ಲ, ಕುಲುಕುವ ಕುಂಟೆಯೂ ಅಲ್ಲ, ಕಟ್ಟಿ ನಿಲ್ಲಿಸಿದ ಕೆರೆಯಲ್ಲ, ಕಟ್ಟೆ, ಗೋಕಟ್ಟೆಗಳ ರೀತಿಯೂ ಇಲ್ಲ. ಆದರೆ ಊರಣಿಗಳೆಂದರೆ ಇವೆಲ್ಲವೂ ಹೌದು. ವಿಚಿತ್ರ ಹೆಸರಿನ, ಅಷ್ಟೇ ವಿಚಿತ್ರ ಸ್ವಭಾವದ, ತುಂಬು ವ್ಯಕ್ತಿತ್ವದ ಈ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ, ಗ್ರಾಮೀಣ ತಮಿಳುನಾಡಿನ ಜನಜೀವನದ ಜೀವ ನಾಡಿಗಳು ಎಂದರೆ ಅಚ್ಚರಿಪಡಬೇಕಿಲ್ಲ. ಹೌದು, ತಮಿಳುನಾಡಿನ ಊರಣಿಗಳೆಂದರೆ ಕೇವಲ ಒಂದು ಸಂರಚನೆಯಾಗಿ, ನಿರ್ಮಿತಿಯಾಗಿ ನಿಲ್ಲುವುದಿಲ್ಲ. ಅದೊಂದು ಜೀವಂತ ವ್ಯವಸ್ಥೆ. ಖಂಡಿತಾ ಅದಕ್ಕೊಂದು ವ್ಯಕ್ತಿತ್ವ ಇದೆ. ಅದು ಅಕ್ಷರಶಃ ತನ್ನ ಸುತ್ತಮುತ್ತಲ ಜೀವಪರಿಸರ ವ್ಯವಸ್ಥೆಯೊಡನೆ ಸಂವಾದಿಸಬಲ್ಲುದು. ಜನಜೀವನಕ್ಕೆ ಸ್ಪಂದಿಸಬಲ್ಲುದು. ಅಷ್ಟೇಕೆ ಮುಂದಿನ ಐದು ವರ್ಷಗಳ ಕೃಷಿ ವ್ಯವಸ್ಥೆಯ ವೇಳಾಪಟ್ಟಿಯನ್ನು ರೈತರಿಗೆ ನಿಗದಿಪಡಿಸಿಕೊಡುವ ಮಟ್ಟಿಗಿನ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತದೆ ಎಂಬುದು ಸತ್ಯ.



ಕೊಯಮತ್ತೂರಿನಲ್ಲಿ ಯಾವುದೋ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂಲತಃ ಮೈಸೂರಿನವನಾದ ಗೆಳೆಯ ಕಿರಣ್, ಊರಣಿಯ ವೈಶಿಷ್ಟ್ಯದ ಬಗ್ಗೆ ಹೇಳಿದಾಗ ಹೆಚ್ಚೆಂದರೆ ನಮ್ಮ ಕೆರೆ-ಕುಂಟೆಗಳಂಥ ಇನ್ನೊಂದು ಸಂರಚನೆ ಅದಾಗಿರಬಹುದು ಎಂಬ ಊಹಾ ಚಿತ್ರಣ, ಅಂಥದ್ದೊಂದರ ಎದುರು ಹೋಗಿ ನಿಂತಾಗ ಸಂಪೂರ್ಣ ಬದಲಾಗಿತ್ತು. ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಅದರಲ್ಲೂ ಶಿವಗಂಗೆ ಜಿಲ್ಲೆಯಾದ್ಯಂತ ಕಂಡು ಬರುವ ಊರಣಿಗಳು ನಿಜಕ್ಕೂ ಅಪೂರ್ವ ಜಲನಿ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದರ ಒಡಲಲ್ಲಿ ತುಂಬಿಕೊಂಡಿರುವ ಅಮೃತ ಸಮಾನ ಸವಿಯ ನೀರು, ಅದಕ್ಕಿರುವ ಔಷಯ ಗುಣಗಳು ಗಮನ ಸೆಳೆಯುತ್ತದೆ. ಅದಕ್ಕೇ ಊರಣಿಯನ್ನು ‘ಪಾಲ್‌ಕೊಟ್ಟೈ ಊರಣಿಗಳ್‘ ಎಂದು ಸ್ಥಳೀಯರು ಅತ್ಯಂತ ಆಪ್ಯಾಯತೆಯಿಂದ ಕರೆಯುತ್ತಾರೆ. ಹಾಲಿಗಿಂತ ಅಮೃತ ಬೇಕೇ ? ಊರಣಿಗಳ ನೀರೆಂದರೆ ಹಾಲಿನಷ್ಟೇ ಸವಿಯಾದ್ದು, ಮಾತ್ರವಲ್ಲ ಅಷ್ಟೇ ಆರೋಗ್ಯಕಾರಿ ಎಂಬುದು ನಂಬಿಕೆ. ಇದು ನಂಬಿಕೆ ಮಾತ್ರವಲ್ಲ, ಊರಣಿಯ ನೀರಿನಲ್ಲಿ ಆ ಪರಿಯ ಸವಿ ಅಡಗಿರುವುದರ ಹಿಂದೆಯೂ ಒಂದು ರಹಸ್ಯವಿದೆ. ಅದು ಗ್ರಾಮೀಣರ ಪಾಲಿಗೆ ದೇಗುಲಕ್ಕಿಂತಲೂ ಪವಿತ್ರ ತಾಣ. ಹಾಗೊಂದು ಭಾವನಾತ್ಮಕ ಸಂಬಂಧದ ಸೆಳವಿನಲ್ಲೇ ಕೃಷಿಕರು ಅದನ್ನು ಕಾಪಿಟ್ಟುಕೊಂಡು ಬರುತ್ತಾರೆ. ಅಷ್ಟೇ ಪೂಜನೀಯ ದೃಷ್ಟಿಯಿಂದ ಊರಣಿಗಳನ್ನು ನೋಡುತ್ತಾರೆ. ದೇಗುಲಗಳ ಪ್ರಾಂಗಣವನ್ನು ಇಟ್ಟುಕೊಳ್ಳುವ ರೀತಿಯಲ್ಲೇ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಾರೆ ಹಳ್ಳಿಗರು. ದೇವತಾಣಗಳನ್ನು ಎಂದಾದರೂ ನಾವು ಭಾರತೀಯರು ಮೈಲಿಗೆ ಮಾಡಲುಂಟೇ ? ಹಾಗೆಯೇ ಯಾವುದೇ ಕಾರಣಕ್ಕೂ ಊರಣಿಯ ಸುತ್ತಮುತ್ತಲ ಪ್ರದೇಶ ಆಶೌಚಕ್ಕೊಳಗಾಗದಂತೆ ಸಂರಕ್ಷಿಸುತ್ತಾರೆ. ಪಕ್ಕದಲ್ಲೇ ದೇಗುಲ ನಿರ್ಮಾಣದ ಮೂಲಕ ಪವಿತ್ರ ವಾತಾವರಣವನ್ನು ಕಲ್ಪಿಸುತ್ತಾರೆ.



ಸಾಮಾನ್ಯವಾಗಿ ಊರಣಿಯ ಒಂದು ಪಕ್ಕದಲ್ಲಿ ಒಂದಿಲ್ಲೊಂದು ದೇಗುಲಗಳಿದ್ದರೆ, ಉಳಿದ ಪಾರ್ಶ್ವಗಳನ್ನು ಉತ್ತಮ ಜಾತಿಯ ಮರಗಿಡಗಳು ಆಕ್ರಮಿಸಿಕೊಂಡಿರುತ್ತವೆ. ಹಾಗೆನ್ನುವುದಕ್ಕಿಂತ ಉದ್ದೇಶಪೂರ್ವಕ ಹುಣಸೆ-ಹೊಂಗೆ, ಬೇವು-ಬನ್ನಿಯಂಥ ಔಷಯ ಸಸ್ಯಗಳನ್ನು ಮತ್ತು ಆಲ-ಅರಳಿ- ಅತ್ತಿಯಂಥ ಪವಿತ್ರ ಸಸಿಗಳನ್ನು ಆಯ್ದು ತಂದು ಹಚ್ಚಿರುತ್ತಾರೆ. ಯಾವುದೇ ಕಾರಣಕ್ಕೂ ಸುತ್ತಮುತ್ತಲಿನ ಕಲ್ಮಶಗಳು ಮಲೆ ನೀರಿನೊಂದಿಗೆ ಹರಿದು ಬಂದು ಊರಣಿಯನ್ನು ಸೇರಬಾರದೆಂಬ ಮುನ್ನೆಚ್ಚರಿಕೆ ಒಂದೆಡೆಯಾದರೆ, ಊರಣಿಯ ಒಡಲು ಸೇರಲು ಹವಣಿಸುವ ಹೂಳನ್ನು ಇಂಥ ಮರಗಿಡಗಳ ದಟ್ಟ ಬೇರು ತಡೆದು ನಿಲ್ಲಿಸುತ್ತದೆ. ಇದಕ್ಕಿಂತ ಗಮನಾರ್ಹ ಸಂಗತಿಯೆಂದರೆ ಊರಣಿಗಳ ಸುತ್ತಲಿನ ಜಲಾನಯನ ಪ್ರದೇಶದ ತುಂಬೆಲ್ಲ ವ್ಯಾಪಿಸಿರುವ ಅಪೂರ್ವ ಸಸ್ಯ ಸಂಕುಲದ ಮೂಲಕ ಹರಿದು ಬರುವ ನೀರು ತಂತಾನೇ ಅವುಗಳನ್ನು ಔಷಯ ಅಂಶಗಳನ್ನು ಒಳಗೊಂಡು ಬರುತ್ತದೆ. ಹೀಗಾಗಿಯೇ ಊರಣಿಯ ನೀರಿಗೆ ಆ ಮಟ್ಟಿಗಿನ ಸಿಹಿ ದೊರಕಿರುತ್ತದೆ.



ಸುತ್ತಮುತ್ತಲ ಜನವಸತಿಯನ್ನು ಅವಲಂಬಿಸಿ ಊರಣಿಗಳ ವಿಸ್ತಾರ, ಬಳಕೆಯ ಕ್ರಮಗಳು ನಿರ್ಧಾರವಾಗುವುದು ಇನ್ನೊಂದು ವಿಶೇಷ. ಜಲಮಾಲಿನ್ಯ ತಪ್ಪಿಸುವ ದೃಷ್ಟಿಯಿಂದ ಇಡೀ ಊರಣಿಯನ್ನು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಒಂದೊಂದು ಭಾಗದ ನೀರು ಒಂದೊಂದು ರೀತಿಯ ಬಳಕೆಗೆ ನಿಗದಿಯಾಗುತ್ತದೆ. ಜಾನುವಾರುಗಳು ಕುಡಿಯಲು, ದೇಗುಲದ ಬಳಕೆ, ಕೃಷಿ ಉಪಯೋಗಕ್ಕೆ, ಕುಡಿಯುವ ನೀರಿಗಾಗಿ ಹೀಗೆ ಪ್ರತ್ಯೇಕ ಪಾರ್ಶ್ವಗಳಲ್ಲಿ ನೀರು ಬಳಕೆಯಾಗುವುದರಿಂದ ಊರಣಿಗಳ ನೀರಿನ ಗುಣಮಟ್ಟಕ್ಕೆ ಧಕ್ಕೆ ಬರುವುದೇ ಇಲ್ಲ. ಹಾಗೆಯೇ ಜನಸಂಖ್ಯೆ ಆಧಾರದಲ್ಲಿ ಇವುಗಳ ವಿಸ್ತಾರವೂ ಬದಲಾಗುತ್ತದೆ. ಎಲ್ಲ ಊರಣಿಗಳೂ ಇಷ್ಟೇ ಆಳ ಅಗಲ ಇರಬೇಕೆಂಬ ನಿಯಮವೇನೂ ಇರುವುದಿಲ್ಲ. ಕೆಲವೊಂದು ಊರಣಿಗಳು ಎರಡು- ಎರಡೂವರೆ ಎಕರೆಗೂ ಮೀರಿದ ಹರವನ್ನು ಹೊಂದಿರುತ್ತದೆ. ತೀರಾ ಆಳವಲ್ಲದಿದ್ದರೂ ಒಂದಾಳು, ಕೆಲವು ಅದಕ್ಕಿಂತಲೂ ಹೆಚ್ಚು ಆಳವನ್ನು ಹೊಂದಿರುತ್ತವೆ. ಊರಣಿಯ ಮಧ್ಯಭಾಗದಲ್ಲಿ ಮಾತ್ರ ಅಷ್ಟು ಆಳವನ್ನು ಕಾಣಬಹುದು, ಅಗಲ ಹೆಚ್ಚಿದಂತೆಲ್ಲ ಆಳ ಕಡಿಮೆಯಾಗುತ್ತ ಹೋಗಿರುತ್ತದೆ.



ಸಾಮಾನ್ಯವಾಗಿ ಚಚ್ಚೌಕಾಕಾರದಲ್ಲೇ ಇರುವ ಊರಣಿಗಳಿಗೆ ಅತ್ಯಂತ ವ್ಯವಸ್ಥಿತವಾದ ನಿರ್ಮಾಣವನ್ನೂ ಮಾಡಲಾಗಿರುತ್ತದೆ. ನೆಲಮಟ್ಟಕ್ಕೇ ತೆರೆದುಕೊಂಡಿರುವ ಇವು ಸಾಮಾನ್ಯವಾಗಿ ಇಡೀ ವರ್ಷದ ಎಲ್ಲ ಕಾಲದಲ್ಲೂ ಮೈದುಂಬಿಕೊಂಡೇ ಇರುತ್ತವೆ. ಬಹುತೇಕ ಸುತ್ತಮುತ್ತಲೆಲ್ಲ ಬಾವಿಗಳು ಬತ್ತಿದ್ದರೂ ಇವುಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದು ಅತ್ಯಂತ ವಿರಳ. ಅತ್ಯಂತ ವೈಜ್ಞಾನಿಕ ರೀತಿಯಲ್ಲಿ, ಇದನ್ನು ನಿರ್ಮಿಸಲಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸುತ್ತಮುತ್ತಲಿನ ಮಳೆ ಹರಿವು ನೇರವಾಗಿ ಊರಣಿಗಳನ್ನೇ ಬಂದು ಸೇರುವಂತೆ ಜಾಗಗಳ ಆಯ್ಕೆ ಮಾಡಿರುತ್ತಾರೆ.



ಹಾಗೆ ನೋಡಿದರೆ ಊರಣಿಗಳ ಇತಿಹಾಸ ನೂರಿನ್ನೂರು ವರ್ಷಗಳ ಹಿಂದಕ್ಕೆ ಹೋಗುತ್ತದೆ. ಅತ್ಯಂತ ಪುರಾತನ ಹಾಗೂ ಬೃಹತ್ ಎಂಬ ಖ್ಯಾತಿಗೆ ಪಾತ್ರವಾಗಿರುವ ವೆಂಕೈಪಟ್ಟಿ ಊರಣಿ ಮುನ್ನೂರು ವರ್ಷಕ್ಕೂ ಹಿಂದೆ ರಾಜಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡದ್ದೆನ್ನುತ್ತಾರೆ ಸ್ಥಳೀಯರು. ನಮ್ಮಲ್ಲಿ ಗೋಕಟ್ಟೆಗಳ ನಿರ್ಮಾಣಕ್ಕೆ ಎಷ್ಟು ಮಹತ್ವವನ್ನು ರಾಜಾಡಳಿತದ ಅವಯಲ್ಲಿ ನೀಡಲಾಗಿತ್ತೋ ಅದೇ ರೀತಿ ತಮಿಳುನಾಡಿನಲ್ಲಿ ಊರಣಿಗಳ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಲಾಗಿತ್ತು. ಆದರೆ ಇವು ಬಹೂಪಯೋಗಿಯಾಗಿ ಊರಿನ ಮಧ್ಯದಲ್ಲೇ ಅಸ್ತಿತ್ವ ಪಡೆದು ಗಮನಸೆಳೆಯುತ್ತವೆ. ಊರಣಿಗಳಷ್ಟೇ ಪುರಾತನವಾದ್ದು ಇದರ ನೀರಿನ ಶುದ್ಧೀಕರಣ ತಂತ್ರಜ್ಞಾನ. ಸಂಪೂರ್ಣ ದೇಸೀ ಪದ್ಧತಿಯನ್ನು ಆಧರಿಸಿದ ಈ ಕ್ರಮ ಎಲ್ಲವೂ ಗಿಡಮೂಲಿಕೆಗಳನ್ನೇ ಆಧರಿಸಿದ್ದು. ಸ್ಥಳೀಯ ಅರಣ್ಯಗಳಲ್ಲಿ ಮಾತ್ರ ಸಿಗುವ ವಿಶಿಷ್ಟ ಮರದ ಬೀಜವೊಂದನ್ನು ತಂದು ಅದನ್ನು ಉಜ್ಜಿ ಊರಣಿಯಲ್ಲಿ ಮೊಗೆದುಕೊಂಡ ನೀರಿನಲ್ಲಿ ಹಾಕಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ನೀರಿನಲ್ಲಿರುವ ಸೂಕ್ಷ್ಮಾತಿ ಸೂಕ್ಷ್ಮ ಕಲ್ಮಷದ ಕಣಗಳೂ ನೀರಿನ ತಳಕ್ಕಿಳಿದುಬಿಡುತ್ತವೆ. ಎಷ್ಟೋ ಸಂದರ್ಭದಲ್ಲಿ ಉತ್ತಮ ಬೀಜಗಳನ್ನು ತಂದು ಊರಣಿಗೇ ಬೆರೆಸುವುದೂ ಇದೆ.
ಒಟ್ಟಾರೆ, ಇಂದಿಗೂ ಪೂರ್ಣ ಸ್ಥಳೀಯ ಸೊಗಡನ್ನು ಉಳಿಸಿಕೊಂಡು ಗ್ರಾಮೀಣ ಪರಂಪರೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಂತಿರುವ ಊರಣಿಗಳು ಖಂಡಿತಾ ತನ್ನ ಜಲವೈಭವದೊಂದಿಗೆ ಮೌಲ್ಯಯುತವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಸಮುದಾಯದ ಸಹಭಾಗಿತ್ವದೊಂದಿಗೆ ಸಂರಕ್ಷಣೆಗೊಳಪಡುತ್ತಿರುವುದು ಪ್ರಶಂಸನೀಯ ಸಂಗತಿ.



‘ಲಾಸ್ಟ್‘ಡ್ರಾಪ್: ಗ್ರಾಮೀಣ ಭಾರತದ ಒಡಲಲ್ಲಿ ಹುದುಗಿರುವ ಅದೆಷ್ಟೋ ಪಾರಂಪರಿಕ ಜಲಸಂರಕ್ಷಣಾ ಪದ್ಧತಿಗಳಲ್ಲಿ ಅಳವಡಿಕೆಯಾಗಿರುವ ತಂತ್ರಜ್ಞಾನ ತನ್ನ ಸುಸ್ಥಿರತೆಯಿಂದ ಇಂದಿಗೂ ಮಾದರಿಯಾಗಿವೆ. ಅದನ್ನು ದಕ್ಕಿಸಿಕೊಳ್ಳುವ ಜ್ಞಾನ, ಅಧ್ಯಯನದ ತಾಳ್ಮೆ ಮಾತ್ರ ನಮ್ಮಲ್ಲಿ ಉಳಿದಿಲ್ಲ.

ನೋಯಿಡಾದಲ್ಲಿ ಗಾಲಿಗಳ ಮೇಲೆ ನೀರ ಮನೆ ನೋಡಾ


ಒಂದೆರಡು ವರ್ಷಗಳ ಹಿಂದಿನ ಮಾತಿದು. ಸಾಗರ ಸಮೀಪದ ಹಳ್ಳಿಯೊಂದರ ಶಾಲಾ ಮಕ್ಕಳ ಉದ್ದನೆಯ ಸರತಿ ರಸ್ತೆಯಲ್ಲಿ ಹೊರಟಿತ್ತು. ಪಕ್ಕಾ ಇರುವೆ ಸಾಲಿನಂತೆ, ಯೂನಿಫಾರ್ಮ್‌ನಲ್ಲಿ ಶಿಸ್ತಿನ ಸಿಪಾಯಿಗಳಾಗಿ ಸಾಗಿ ಹೋಗುತ್ತಿದ್ದರು ಚಿಣ್ಣರು. ಹಾಗೆಂದು ಕಲರವಕ್ಕೆ ಅಲ್ಲಿ ಕೊರತೆ ಇರಲಿಲ್ಲ. ದಾರಿಯುದ್ದಕ್ಕೂ ಕಿಲಾಡಿತನ ಮಾಡುತ್ತ, ಏನನ್ನೋ ಹರಟುತ್ತ, ಜಗಳ ಕಾಯುತ್ತ ಮುಂದುವರಿದಿದ್ದ ಅವರನ್ನು ನಡುನಡುವೆ ಗದರುತ್ತ ನಿಯಂತ್ರಿಸುವ ಪ್ರಯತ್ನ ನಡೆಸಿದ್ದರು ಶಿಕ್ಷಕರು. ಎಲ್ಲರಿಗಿಂತ ಮುಂದೆ ಎದೆ ಸೆಟೆಸಿ ತುಸು ಹಮ್ಮಿನಿಂದಲೇ ನಡೆಯುತ್ತಿದ್ದ ಇಬ್ಬರು ಹುಡುಗರ ಕೈಯಲ್ಲಿ ಎಂಥದ್ದೋ ಬ್ಯಾನರ್. ಕುತೂಹಲಕ್ಕೆ ಇಣುಕಿದರೆ ಸುಂದರ ಅಕ್ಷರಗಳಲ್ಲಿ ಗಮನ ಸೆಳೆಯುತ್ತಿತ್ತು ‘ಜಲತೇರು’ ಎಂಬ ಮುದ್ದಾದ ಪದ.


ಹಳ್ಳಿಗಳಲ್ಲಿ ಜಾತ್ರೆಗಳು ಸಾಮಾನ್ಯ. ಅಂಥ ಜಾತ್ರೆಗಳಲ್ಲಿ ಬಣ್ಣಬಣ್ಣದ ಪತಾಕೆಗಳನ್ನು ಹೊತ್ತು ಬಾನೆತ್ತರಕ್ಕೆ ಮುಖ ಮಾಡಿ ನಿಲ್ಲುವ ತೇರುಗಳನ್ನೂ ನೋಡಿದ್ದೇವೆ. ಅಂಥ ತೇರನ್ನೆಳೆಯಲು ಊರಿಗೆ ಊರೇ ಪೈಪೋಟಿಗೆ ಬಿದ್ದು, ಆ ಗಡಿಬಿಡಿಯಲ್ಲಿ ಒಬ್ಬರ ಕಾಲಡಿಗೆ ಇನ್ನೊಬ್ಬರು ಸಿಲುಕಿ, ಸಾವರಿಸಿಕೊಂಡು ಎದ್ದು ಅಂತೂ ಪುನೀತರಾದೆವೆಂಬ ಕೃತಾರ್ಥ ಭಾವದಲ್ಲಿ ಮನೆ ಸೇರಿದರೆ ಮತ್ತೆ ಮುಂದಿನ ತೇರಿಗೆ ಅದೇ ದೃಶ್ಯ ಪುನರಾವರ್ತನೆ. ಆದರೆ ಈ ಜಲ ತೇರಿನಲ್ಲಿ ಅಂಥ ಯಾವ ಅಲಂಕಾರ, ಆಡಂಬರಗಳ ಸುಳಿವೂ ಸಿಗಲಿಲ್ಲ. ಮೆಲ್ಲಗೆ ಒಬ್ಬ ಹುಡುಗನನ್ನು ಸರತಿಯಿಂದ ಪಕ್ಕಕ್ಕೆ ಎಳೆದು ಕೇಳಿದರೆ, ‘ಇವತ್ತು ಹುಳೇಗಾರಿಗೆ ಪಿಕ್ನಿಕ್ ಹೋಗ್ತಾ ಇದ್ದೀವಿ’ ಅಂದ. ಹುಳೇಗಾರೇನು ಗೊತ್ತಿಲ್ಲದ್ದೇ ? ಸಾಗರದ ಹತ್ತು ಹಳ್ಳಿಗಳಲ್ಲಿ ಹನ್ನೊಂದನೆಯದ್ದಿದ್ದಂತಿರುವ ಊರು. ಅಲ್ಲಿಗೆಂತಾ ಪಿಕ್ನಿಕ್ಕು ? ಕುತೂಹಲ. ಅದರ ಬೆನ್ನತ್ತಿ ಹೊರಟಾಗ ಅತ್ಯಂತ ಅಚ್ಚರಿಯ ಸಂಗತಿಗಳು ಬಯಲಾಗಿದ್ದವು.


ಹುಳೇಗಾರು ಹೊಸತೊಂದು ಬದಲಾವಣೆಗೆ ತೆರೆದುಕೊಂಡಿತ್ತು. ಖಂಡಿತಾ ಅದು ನೋಡಲೇ ಬೇಕಾದ ತಾಣವಾಗಿ ಮಾರ್ಪಟ್ಟಿತ್ತು ಎಂಬುದಕ್ಕಿಂತ ಊರಿನ ಕ್ರಿಯಾಶೀಲ ಮನಸ್ಸುಗಳು ಒಂದಾಗಿ ಹಾಗೆ ಮಾಡಿದ್ದರು. ಒಂದಿಡೀ ಗ್ರಾಮವನ್ನು ರಾಸಾಯನಿಕ ಮುಕ್ತಗೊಳಿಸಿ, ಮಳೆ ನೀರಿನ ಕೊಯ್ಲಿನಲ್ಲಿ ಮಹತ್ವದ ಸಾಧನೆ ಮಾಡಿ ತೋರಿಸಿದ್ದರು. ಹಾಗೆಂದೇ ಶಾಲಾ ಮಕ್ಕಳನ್ನು ಹುಳೇಗಾರಿನವರು ತಮ್ಮೂರಿಗೆ ಆಹ್ವಾನಿಸಿದ್ದರು. ಜತೆಗೆ ಪೋಷಕರಿಗೂ ಊರ ಬಾಗಿಲು ತೆರೆದಿದ್ದರು. ಬಂದವರಿಗೆ ಎಂದಿನ ಮಲೆನಾಡಿನ ಊಟ ಉಪಚಾರದೊಂದಿಗೆ ತಮ್ಮ ಯಶೋಗಾಥೆಯನ್ನು ಸಾರುವ, ತೋಡಿಟ್ಟ ಇಂಗುಗುಂಡಿಗಳ ತೋರುವ, ಕೂಡಿಟ್ಟ ಮಳೆನೀರ ಕುಡಿಸುವ ಯೋಜನೆ ರೂಪಿಸಿದ್ದರು. ಇಂಥದ್ದೊಂದು ಕಾನ್ಸೆಪ್ಟ್‌ಗೆ ಅವರಿಟ್ಟ ಹೆಸರು ‘ಜಲತೇರು’.
ನಿಜವಾಗಿ ನೀರೆಚ್ಚರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವವರು ಮಕ್ಕಳು. ಅದು ಯಾವುದೇ ವಿಚಾರವಿರಲಿ, ಮಕ್ಕಳ ತಲೆಗೊಮ್ಮೆ ಹುಳು ಬಿಟ್ಟರೆ ಸಾಕು, ದೊಡ್ಡವರು ಮರೆತರೂ ಮಕ್ಕಳು ಮರೆಯುವುದಿಲ್ಲ. ಬೇಕಿದ್ದರೆ ನೋಡಿ, ಮನೆಯಲ್ಲಿ ಅಮ್ಮನಿಗೆ ಶಾಪಿಂಗ್ ಹೋಗಬೇಕೆನಿಸಿದರೆ ಮಕ್ಕಳಿಗೆ ಛೂ...ಬಿಟ್ಟು ಬಿಡುತ್ತಾಳೆ. ಅಷ್ಟೇ, ಅಪ್ಪ ಆಪೀಸಿನಿಂದ ಬರುವುದನ್ನೇ ಕಾಯುವ ಮಕ್ಕಳು ವರಾತ ತೆಗೆದು, ರಂಪ ಹಿಡಿದು ಅಂತೂ ಅಂದುಕೊಂಡದ್ದನ್ನು ಮಾಡಿಸಿಯೇ ತೀರುತ್ತಾರೆ. ದೊಡ್ಡವರಿಂದಾಗದ ಕೆಲಸ ಮಕ್ಕಳಿಂದ ಸಲೀಸು. ಹೀಗಾಗಿ ಹುಳೇಗಾರಿನ ಮಂದಿ, ಶಾಲಾಮಕ್ಕಳಲ್ಲಿ ಅರಿವು ಮೂಡಿಸುವ ಬುದ್ಧಿವಂತಿಕೆಯ ಯೋಜನೆ ರೂಪಿಸಿದ್ದರು.
ಅಂಥದ್ದೇ ಬುದ್ಧಿವಂತಿಕೆಯನ್ನು ದೂರದ ಉತ್ತರ ಪ್ರದೇಶದ ನೋಯಿಡಾದ ‘ಜನಹಿತ್ ಫೌಂಡೇಶನ್’ ಸಹ ತೋರುತ್ತಿದೆ. ಅದು ಸಹ ನೀರೆಚ್ಚರದ ಯಾತ್ರೆಯೇ. ಹೆಸರು ವಾಟರ್ ಲಿಟರಸಿ ಆನ್ ವ್ಹೀಲ್’. ‘ಗಾಲಿಗಳ ಮೇಲೆ ನೀರ ಸಾಕ್ಷರತೆ’ ಎಂದು ಕನ್ನಡದಲ್ಲಿ ತರ್ಜುಮೆ ಮಾಡಿಕೊಳ್ಳಬಹುದೇನೋ. ಇದೇ ತಿಂಗಳ ೧೩ಕ್ಕೆ ಇಂಥದ್ದೊಂದು ಅಪರೂಪದ ಯಾತ್ರೆಗೆ ನೆಹರೂ ಅಂತಾರಾಷ್ಟ್ರೀಯ ಪಬ್ಲಿಕ್ ಸ್ಕೂಲ್‌ನಲ್ಲಿ ಚಾಲನೆ ನೀಡಲಾಗಿದೆ. ಯಾತ್ರಗಾಗಿಯೇ ವಿಶೇಷವಾಗಿ ವಾಹನವೊಂದನ್ನು ರೂಪಿಸಲಾಗಿದೆ. ಹೊಚ್ಚ ಹೊಸ ಟಾಟಾ ವಿಂಜರ್ ವಾಹನವನ್ನು ಇದಕ್ಕಾಗಿಯೇ ಸಜ್ಜುಗೊಳಿಸಲಾಗಿದೆ. ವಾಹನದ ಹೊರಭಾಗದಲ್ಲಿ ಜಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಬರಹಗಳನ್ನು ಬರೆಸಲಾಗಿದೆ. ಜಲ ಶುದ್ಧತೆಯ ಪರೀಕ್ಷೆಗೆ ಅಗತ್ಯ ಉಪಕರಣಗಳನ್ನೂ ಹೊಂದಿರುವ ಈ ವಾಹನ ನೋಯಿಡಾ ಜಿಲ್ಲೆಯ ಹಳ್ಳಿ-ಹಳ್ಳಿಗಳನ್ನು ಸುತ್ತಲಿದೆ. ದಾರಿಯುದ್ದಕ್ಕೂ ಸಿಗುವ ಶಾಲೆಗಳ ಆವರಣ ಹೊಕ್ಕು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಯಾತ್ರೆಯ ಉದ್ದೇಶ.


ಕಳೆದ ಆಗಸ್ಟ್‌ನಲ್ಲೇ ರೂಪುಗೊಂಡಿರುವ ಯೋಜನೆಗೆ ಚಾರಿಟೀಸ್ ಏಯ್ಡ್ ಫೌಂಡೇಷನ್(ಸಿಎಎಫ್) ಹಾಗೂ ಅಡೋಬ್ ಇಂಡಿಯಾ ಸಿಸ್ಟಮ್ಸ್ ಲಿ. ಸಹಯೋಗವನ್ನು ಒದಗಿಸಿವೆ. ಆಗಿನಿಂದಲೂ ಉದ್ದೇಶಿತ ಯಾತ್ರೆಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ನೋಯಿಡಾ ಎದುರಿಸುತ್ತಿರುವ ಜಲ ಮಾಲಿನ್ಯ ಮತ್ತು ನೀರಿನ ಕೊರತೆಯೇ ಇದಕ್ಕೆ ಪ್ರೇರಣೆ ಎನ್ನುತ್ತಾರೆ ಸಂಸ್ಥೆಯ ಸೋನಾಕ್ಷಿ ಗುಡ್ಡ. ಸಮುದಾಯದಲ್ಲಿನ ಅರಿವಿನ ಕೊರತೆಯೇ ಎಲ್ಲ ಸಮಸ್ಯೆಗಳಿಗೆ ಮೂಲ. ಇದನ್ನು ಗಮನದಲ್ಲಿಟ್ಟುಕೊಂಡು ಜಾಗೃತಿ ಮೂಡಿಸುವ ದೃಷ್ಟಿಯಿಂದ ಜನಹಿತ್ ಫೌಂಡೇಶನ್ ಕಾರ್ಯಕ್ಷೇತ್ರಕ್ಕಿಳಿದಿದೆ. ಭಾವೀ ಪ್ರಜೆಗಳು ಎಚ್ಚೆತ್ತರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳನ್ನು ತಲುಪಲು ಸುಲಭ ಮಾರ್ಗವಾಗಿ ಶಾಲೆಗಳನ್ನು ಆಯ್ದುಕೊಂಡೆವು ಎಂಬುದು ಅವರ ವಿವರಣೆ.


ಎಲ್ಲರಿಗೂ ಶುದ್ಧ ಕುಡಿಯುವ ನೀರು ಮೂಲಭೂತ ಹಕ್ಕು. ಇದು ಜನ ಜಾಗೃತಿಯಿಂದ ಮಾತ್ರ ಸಾಧ್ಯವಾಗುವಂಥದ್ದು. ಫೌಂಡೇಶನ್‌ನ ‘ಗಾಲಿಗಳ ಮೇಲೆ ನೀರ ಸಾಕ್ಷರತೆ’ ಗುರಿಯೇ ನೀರಿನ ಗುಣಮಟ್ಟ ಹಾಗೂ ಜಲ ನಿರ್ವಹಣೆಯ ಪ್ರಾಮುಖ್ಯದ ಬಗೆಗೆ ವಿದ್ಯಾರ್ಥಿಗಳ ಗಮನ ಸೆಳೆಯುವುದು. ಯೋಜನೆಯು ಮೂರು ವರ್ಷಗಳ ಕಾಲ ನಾನಾ ಹಂತಗಳಲ್ಲಿ ಅನುಷ್ಠಾನಗೊಳ್ಳಲಿದ್ದು, ಅಂತಿಮ ವರ್ಷದಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಕುಡಿಯುವ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಹತ್ತು ಶಾಲೆಗಳನ್ನು ಗುರುತಿಸಲಾಗುತ್ತದೆ. ಆ ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯಂಥ ನೀರಿನ ಸಂರಕ್ಷಣಾ ನಿರ್ಮಿತಿಗಳನ್ನು ಕಟ್ಟಿ, ನೀರಿನ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗುತ್ತದೆ. ಇಷ್ಟಕ್ಕೇ ಯೋಜನೆ ಮುಗಿದು ಹೋಗುವುದಿಲ್ಲ. ಶಾಲಾ ಪಠ್ಯಗಳಲ್ಲಿ ಸುರಕ್ಷಿತ ಮತ್ತು ಉತ್ತಮ ನೀರು ನಿರ್ವಹಣೆಯ ಕುರಿತಾದ ವಿಷಯಗಳ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡಲಿದೆ.


ಈಗಾಗಲೇ ಮೊದಲ ಹಂತದಲ್ಲಿ ಯೋಜಿತ ರೀತಿಯಲ್ಲೇ ಕಾರ್ಯಾನುಷ್ಠಾನ ಮಾಡಲಾಗಿದ್ದು, ಸಂಚಾರಿ ಜಲ ಸಾಕ್ಷರತಾ ವಾಹನಕ್ಕೆ ಚಾಲನೆ ನೀಡಲಾಗಿದೆ. ಶಾಲೆಗಳಲ್ಲಿ ನೀರೆಚ್ಚರ ಮೂಡಿಸಲು ಹೊರಟಿರುವ ಈ ವಾಹನ ಜಿಪಿಆರ್‌ಎಸ್ ವ್ಯವಸ್ಥೆ, ಎಲ್‌ಸಿಡಿ ಪ್ರೊಜೆಕ್ಟರ್, ಲ್ಯಾಪ್‌ಟಾಪ್ ಮತ್ತಿತರ ಆಧುನಿಕ ಸಲಕರಣೆಗಳನ್ನು ಒಳಗೊಂಡಿದೆ. ಹೋದೆಡೆಯಲ್ಲೆಲ್ಲ ಯಾತ್ರೆಗಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಸ್ಲೈಡ್‌ಗಳು, ಕಿರು ಚಿತ್ರಗಳ ಮೂಲಕ ನೀರಿನ ಮಾಹಿತಿಗಳನ್ನು ಬಿತ್ತರಿಸಲಾಗುವುದು. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳು ತಾವೇ ಸ್ವತಃ ಪ್ರಯೋಗಕ್ಕೆ ಮುಂದಾಗಿ ನೀರಿನ ಗುಣಮಟ್ಟದ ಪ್ರಾಥಮಿಕ ಪರೀಕ್ಷೆಗೆ ಅನುಕೂಲವಾಗುವಂತೆ ಸಿದ್ಧಪಡಿಸಲಾದ ಕಿಟ್ ಒಂದನ್ನು ಈ ಸಂಚಾರಿ ವಾಹನ ಒಳಗೊಂಡಿದೆ. ನೀರೆಚ್ಚರ ಮೂಡಿಸುವ ಬರಹಗಳನ್ನೊಳಗೊಂಡ ಆಕರ್ಷಕ ಬಣ್ಣಗಳಲ್ಲಿ ಮುದ್ರಿಸಲಾದ ಸಾಹಿತ್ಯವನ್ನೂ ವಾಹನದಲ್ಲಿ ಒಯ್ಯಲಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.


ಯೋಜನೆಗೆ ಸಂಬಂಸಿದ ಎಲ್ಲ ವಿವರವನ್ನು ಒಳಗೊಂಡ ಕಿರು ಸಾಕ್ಷ್ಯ ಚಿತ್ರವನ್ನೂ ಹೊರತರಲಾಗಿದೆ. ನೋಯಿಡಾ ಮತ್ತು ಗ್ರೇಟರ್ ನೋಯಿಡಾದ ಎಲ್ಲ ಶಾಲೆಗಳನ್ನೂ ತಲುಪುವುದು ಯೋಜನೆಯ ಗುರಿ. ನೀರಿನ ಸಂರಕ್ಷಣೆಯಲ್ಲಿ ಶಾಲೆಗಳ ಪಾತ್ರ ಎಷ್ಟು ಮುಖ್ಯವಾದ್ದು ಎಂಬುದರ ಬಗ್ಗೆ ಎಲ್ಲ ಶಾಲಾ ಮುಖ್ಯಸ್ಥರನ್ನೂ ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಸೋನಾಕ್ಷಿ.


ಅಂತರ್ಜಲ ಸಂರಕ್ಷಣೆ, ನದಿ ನೀರಿನ ಮಾಲಿನ್ಯ ನಿಯಂತ್ರಣ, ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳ ಕುರಿತು ಅರಿವು ಮೂಡಿಸುವುದು, ಸ್ಥಳೀಯ ಸಮುದಾಯಗಳಲ್ಲಿ ಪರಿಸರ ಹಾಗೂ ಅದರ ಪ್ರಾಮುಖ್ಯದ ಕುರಿತು ಜಾಗೃತಿ ಮೂಡಿಸುವುದೇ ಮತ್ತಿತರ ಪರಿಸರ ಸಂಬಂ ಹಲವು ಚಟುವಟಿಕೆಗಳಲ್ಲಿ ೧೯೯೮ರಿಂದಲೂ ತೊಡಗಿಸಿಕೊಂಡಿದೆ ಜನಹಿತ್ ಫೌಂಡೇಶನ್. ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಥೆಯ ಚಟುವಟಿಕೆಗಳೆಲ್ಲವೂ ಸಮುದಾಯ ಕೇಂದ್ರಿತವಾಗಿದ್ದು, ನಿಜವಾಗಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಪರಿಸರ ಸಂರಕ್ಷಣೆಯಂಥ ಅತ್ಯಂತ ಪ್ರಮುಖ ಅಷ್ಟೇ ಸೂಕ್ಷ್ಮ ಕಾರ್ಯ ಸಾಧನೆಯಾಗಲು ಸಾಧ್ಯ ಎಂಬುದನ್ನು ಅರಿತ ಸಂಸ್ಥೆ, ಸ್ಥಳೀಯರನ್ನು ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸಂಘಟಿಸುತ್ತಿದೆ. ಅದರ ಮುಂದುವರಿದ ಭಾಗವೇ ‘ಗಾಲಿಗಳ ಮೇಲೆ ನೀರ ಸಾಕ್ಷರತೆ’ ಯಾತ್ರೆ.


ಇಂಥ ಪ್ರಯೋಗಗಳು ಖಂಡಿತಾ ಎಲ್ಲ ರಾಜ್ಯಕ್ಕೂ ಮಾದರಿಯಾಗಬಲ್ಲುದು. ನಮ್ಮ ಹುಳೇಗಾರಿನಂಥ ಊರಿನಲ್ಲಿ ಯಾವಾಗಲೋ ಪ್ರಯೋಗಕ್ಕೊಳಪಟ್ಟು ಯಶಸ್ವಿಯಾಗಿರುವ ಯೋಜನೆಯನ್ನುಸರಕಾರ ರಾಜ್ಯಾದ್ಯಂತ ವಿಸ್ತರಿಸುವ ಬಗ್ಗೆ ಯೋಚಿಸಿದರೊಳಿತು. ಹೇಗೂ ಈಗ ಶಾಲಾ ಶೈಕ್ಷಣಿಕ ಪ್ರವಾಸದ ಸಮಯ. ಇಂಥ ಸಂದರ್ಭದ ಸದುಪಯೋಗ ಪಡೆದು ವಿದ್ಯಾರ್ಥಿಗಳನ್ನು ಯಾವುದೋ ಫ್ಯಾಂಟಸಿ ಪಾರ್ಕ್‌ಗಳಿಗೆ, ಉದ್ಯಾನಗಳಿಗೆ ಕರೆದೊಯ್ಯುವ ಬದಲಾಗಿ ದೈನಂದಿನ ಬದುಕನ್ನು ಪರಿಚಯಿಸುವ, ನೀರಿನಂಥ ಮೂಲಭೂತ ಅಗತ್ಯಗಳ ಪೂರೈಕೆಯಲ್ಲಿ ಮಾದರಿಯಾಗಬಲ್ಲ ಸ್ಥಳಗಳಿಗೆ ಭೇಟಿ ಕೊಡುವುದು ಉತ್ತಮ.


‘ಲಾಸ್ಟ್’ ಡ್ರಾಪ್: ಮನರಂಜನೆಗಾಗಿ ನೀರಿನಲ್ಲಿ ಮಕ್ಕಳು ಆಟವಾಡುವ ಫ್ಯಾಂಟಸಿ ಪಾರ್ಕ್‌ಗಳನ್ನು ರೂಪಿಸುವ ಬದಲು, ನೀರಿನ ಪಾಠ ಹೇಳುವ ಜಲಪಾರ್ಕ್‌ಗಳನ್ನು ಜಿಲ್ಲೆಗೊಂದರಂತೆ ರೂಪಿಸಿದರೆ ಹೇಗೆ ?

ಘಮ ಘಮ ಘಮಾಡಿಸ್ತಾವ ಮಣ್ಣಿಗೆ, ನೀನು ಹೊಂಟಿದ್ದೀಗ ಎಲ್ಲಿಗೆ ?

ಪ್ರೇಯಸಿಯ ಮೈ ಗಂಧವನ್ನೂ ಮೀರುವ ಸುವಾಸನೆಯದು. ಹುಚ್ಚು ಹಿಡಿಸಿಬಿಡುತ್ತದೆ. ಎಂಥ ವಿಷಾದದ, ವಿಷಣ್ಣ ಮನಸ್ಸನ್ನೂ ಉಲ್ಲಸಿತಗೊಳಿಸುವ ಶಕ್ತಿ ಅದಕ್ಕಿದೆ. ಯಾವುದೇ ನೋವನ್ನೂ ಮರೆಸಿ ಇಡೀ ಮನಸ್ಸನ್ನು ಆವರಿಸಿಕೊಳ್ಳಬಲ್ಲಂಥದ್ದು ಅದು. ಒಂದೇ ಒಂದು ಕ್ಷಣದಲ್ಲಿ ಎಂಥ ಕಠೋರ ಹೃದಯಿಯನ್ನೂ ಕರಗಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬಲ್ಲ ರಸಿಕತನ ಅದರಲ್ಲಡಗಿಕುಳಿತಿದೆ. ಬಡ ಅಕ್ಷರಗಳ ಬಣ್ಣನೆಗೆ ಸಿಲಕುವಷ್ಟು ಸುಲಭದಲ್ಲಿಲ್ಲ ಅದರ ವೈಶಿಷ್ಟ್ಯ. ಅದನ್ನು ಅನುಭವಿಸಿಯೇ ಆನಂದಿಸಬೇಕು.

ಅದರ ಶಕ್ತಿಯೇ ಅಂಥದ್ದು. ಓಹ್...ಅದೆಷ್ಟು ಮಹದಾನಂದ ? ಎಲ್ಲವನ್ನೂ ಕಳೆದುಕೊಂಡು ಸೋತು ಕುಳಿತಾಗಲೊಮ್ಮೆ, ಕಣ್ಣೀರ ಕೋಡಿಯಾಗಿ ಬದುಕನ್ನು ಬಲವಂತವಾಗಿ ನಿಲ್ಲಿಸಿಕೊಂಡಾಗಲೊಮ್ಮೆ, ಅಂಧಕಾರವೇ ನಮ್ಮ ಸುತ್ತೆಲ್ಲ ಆವರಿಸಿಕೊಂಡಾಗಲೊಮ್ಮೆ, ನಿರಾಸೆಯ ಕಾರ್ಮೋಡ ದಟ್ಟೈಸಿ ಮಂಕು ಕವಿದಕೊಂಡಿದ್ದಾಗಲೊಮ್ಮೆ, ಸಂಕಷ್ಟದಲ್ಲಿ ಜೀವನ ಮುಳಕುಹಾಕೇಳುತ್ತಿರುವಾಗಲೊಮ್ಮೆ, ಆಶಾವಾದವೇ ಮುಗ್ಗರಿಸಿ ಮಕಾಡೆ ಮಲಗಿರುವಾಗಲೊಮ್ಮೆ ಇಂಥ ಸುವಾಸನೆ ಮೂಗಿಗೆ ಅಡರಿದರೆ ಸಾಕು, ಕುಂಟ ಕುಮಿತ್ರಿಯೂ ಎದ್ದು ಓಡುವ ಚೈತನ್ಯವನ್ನು ಗಳಿಸಿಕೊಳ್ಳುತ್ತಾಳೆ. ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಬೀಸಿ ಬರುವ ತಂಗಾಳಿಯೊಂದಿಗೆ ತೇಲಿ ಬರುವ ಆ ಪರಿಮಳಕ್ಕೆ ಅದೆಷ್ಟು ಸಾಮರ್ಥ್ಯವಿದೆ ಎಂದರೆ ಬೇಡಬೇಡವೆಂದರೂ ಮನಸ್ಸು ಯೌವನದಿಂದ ಪುಟಿಯುವಂತೆ ಮಾಡಿಬಿಡುತ್ತದೆ. ನೆನಪುಗಳ ಹಾಯಿದೋಣಿಯಲ್ಲಿ ಪಯಣ ಆರಂಭವಾಗಿಬಿಡುತ್ತದೆ. ಕಳಕೊಂಡ ಪ್ರಿಯಕರನ ನೆನಪುಗಳ ಸಾಗರದಲ್ಲಿ ನಾವು ನಮಗೇ ಗೊತ್ತಿಲ್ಲದಂತೆ ವಿಹರಿಸಲಾರಂಭಿಸಿರುತ್ತೇವೆ. ಗೆಳತಿಯ ತೋಳ್ತೆಕ್ಕೆಯೊಳಗಿನ ಸಮೃದ್ಧ ಸುಖದ ಅನುಭೂತಿಯಾಗಿ ಮೀಟುತ್ತದೆ. ಮನದ ಮೂಲೆಯಲ್ಲೆಲ್ಲೋ ಅಡಗಿ ಕುಳಿತಿರಬಹುದಾದ ದುಗುಡ ದುಮ್ಮಾನಗಳನ್ನು ಗುಡಿಸಿ ಆಚೆ ತೆಗೆದೊಗೆದುಬಿಡುತ್ತದೆ. ಅಮ್ಮನ ಮಡಿಲ ಬೆಚ್ಚನೆಯ ಸಾಂತ್ವನಕ್ಕೆ ತಹತಹಿಸುತ್ತಿರುವ ಹೃದಯ ಎಂಥದ್ದೋ ಸಂತೃಪ್ತಿಯಲ್ಲಿ ಗದ್ದಲ ಮಾಡದೇ ಸುಖ ನಿದ್ದೆಗೆ ಜಾರುತ್ತದೆ. ಸೋದರಿಯ ವಾತ್ಸಲ್ಯಕ್ಕಾಗಿ ಹಂಬಲಿಸಿ ಸೋತು ಸುಣ್ಣವಾದವರನ್ನೂ ಸಂತೈಸಿಬಿಡುತ್ತದೆ. ಮಗಳ ಮುಗ್ಧತೆಯ ಸ್ಪರ್ಶದೊಂದಿಗೆ ಮುಖ ಅರಳುತ್ತದೆ. ಅಂಹಕಾರದಿಂದ ಅಬ್ಬರಿಸುತ್ತಿರವವರನ್ನು ಅಟಕಾಯಿಸಿಕೊಂಡು ನೆಲಕ್ಕಿಳಿಸುತ್ತದೆ. ಅಜ್ಞಾನ ತಿಮಿರದಿಂದ ಅಂಧರಾದವರನ್ನು ಜ್ಞಾನ ಶಲಾಕೆಯಾಗಿ ತಿವಿಯುತ್ತದೆ. ಮುಪ್ಪಿನಲ್ಲಿ ಮುದುಡಿದವರನ್ನು ಕೈಹಿಡಿದೇಳಿಸುತ್ತದೆ. ಉತ್ಸಾಹಿಗಳ ಉತ್ತೇಜಿಸುತ್ತದೆ. ಮೈಗಳ್ಳರಲ್ಲೂ ಲವಲವಿಕೆಯನ್ನು ಮೈಗೂಡಿಸುತ್ತದೆ.


ನೂರಕ್ಕೆ ನೂರು ಸತ್ಯ ‘ಮಣ್ಣಿನ ವಾಸನೆ’ಯೆಂದರೇ ಹಾಗೆ. ಅದು ವಿರಹೋತ್ಕಟೆಯೊಬ್ಬಳು ತನ್ನಿನಿಯನ ಸಾಂಗತ್ಯದಲ್ಲಿದ್ದಾಗ ಹೊರಹೊಮ್ಮಿಸುವ ಸೌಗಂಧದಂತೆ. ಕಾದು ಕಂಗಾಲಾಗಿ, ಗಾರಿ ಗಬರೆದ್ದು ಹೋದ ನೆಲಕ್ಕೆ ಬೀಳುವ ಮೊದಲ ಮುತ್ತಿನ ಮಳೆಯ ಸಿಂಚನಕ್ಕೆ ಪಸರಿಸುವ ಆ ಪರಿಮಳಕ್ಕೆ ಸಮನಾದುದು ಈ ಭೂಮಿಯ ಮೇಲೆ ಮತ್ತೊಂದಿಲ್ಲ. ಮಣ್ಣಿನ ವಾಸನೆ ಇಷ್ಟವಾಗದವರೂ ಈ ಜಗತ್ತಿನಲ್ಲಿರಲಿಕ್ಕೆ ಸಾಧ್ಯವೇ ? ಮುಂಗಾರ ಮಳೆಯ ಮೊದಲೆರಡು ಹನಿಗಳು ಧೂಳಿನ ರಾಶಿಯ ಮೇಲೆ ಚಿಟಪಟನೆ ಸದ್ದು ಮಾಡುತ್ತ ಬೀಳುವುದಕ್ಕೆ ತಡವಿಲ್ಲ. ಸುತ್ತಮುತ್ತಲ ಪರಿಸರಕ್ಕೆ ಅದೇನಾಗುತ್ತದೋ ಕಾಣೆ. ತಂಗಾಳಿ ತೀಡಲಾರಂಭಿಸುತ್ತದೆ. ಹಸಿರೆಲೆಗಳು ಲಾಸ್ಯಕ್ಕಿಟ್ಟುಕೊಳ್ಳುತ್ತವೆ. ಹಕ್ಕಿ-ಪಕ್ಷಿಗಳು ಹಬ್ಬದ ಸಂಭ್ರಮದೊಂದಿಗೆ ಹಾರಾಡತೊಡಗುತ್ತವೆ. ಅಷ್ಟೇ, ಮೇಘ ಮೇದಿನಿಯರ ಮಿಲನದ ಪ್ರತೀಕವಾಗಿ ಮಣ್ಣಿನ ವಾಸನೆ ಮೆಲ್ಲಗೆ ಪಸರಿಸಲಾರಂಭಿಸುತ್ತದೆ. ಮನೆಯ ಮೂಲೆಯಲ್ಲೆಲ್ಲಿದ್ದರೂ ಬಿಡದೇ ಹಿಡಿದೆಳೆದು ಹೊರತಂದು ನಿಲ್ಲಿಸುತ್ತದೆ ಆ ಘಮ.


ಮಣ್ಣಿಗೆ ಈ ಮಟ್ಟಿಗಿನ ಸುವಾಸನೆಯನ್ನು ತುಂಬಿದವರಾದರೂ ಯಾರು ? ನೂರು, ಸಾವಿರಾರು ವೈವಿಧ್ಯಮಯ ಪರಿಮಳಗಳಿಂದ ಈ ಜಗತ್ತು ಆವೃತ್ತವಾಗಿದ್ದರೂ ಅದ್ಯಾವುದಕ್ಕೂ ಮನುಷ್ಯ ಇಂಥಾ ಪರಿ ಮನಸೋಲದ ಹಿಂದಿನ ಗುಟ್ಟೇನು ? ಅವರಿವರೆನ್ನುವ ಭೇದವಿಲ್ಲದೇ ಇರುವವರೆಲ್ಲರನ್ನೂ ಸೆಳೆಯುವ ಮಣ್ಣಿನ ವಾಸನೆಯಲ್ಲಿರುವ ಶಕ್ತಿಯಾದರೂ ಎಂಥದ್ದು ? ಅಲ್ಲಿಯವರೆಗೂ ಅವಿತು ಕುಳಿತು ಮೊದಲ ಹನಿಗೇ ಮೈಮರೆಯುವಂತೆ ಮಾಡುವ ಉದ್ದೇಶವಾದರೂ ಏನು?


ಭೂರಮೆಯ ಸುಗಂಧಕ್ಕೆ ಮೂಲಕಾರಣೀಭೂತವಾದದ್ದು ಒಂದು ಬ್ಯಾಕ್ಟೀರಿಯಾ ಎಂದರೆ ನಂಬಲಾದೀತೇ ? ಸಹಸ್ರಾರು ವರ್ಷಗಳ ಹಿಂದೆಯೇ ಇದನ್ನು ಕಂಡು ಹಿಡಿಯಲಾಗಿದ್ದರೂ ನಿಖರವಾಗಿ ದು ಹೀಗೆಯೇ ಏಕೆ ಆಗುತ್ತದೆ? ಮಣ್ಣಿನ ವಾಸನೆಯಿಂದ ಮನುಷ್ಯನ ಮನಸ್ಸು ಇಷ್ಟೇಕೆ ಪ್ರಚೋದನೆಗೊಳಗಾಗುತ್ತದೆ ? ಭೂಗಂಧಕ್ಕೂ ರಸಿಕತನಕ್ಕೂ ಸಂಬಂಧವೇನು...? ಜೈವಿಕ ವಿಜ್ಞಾನ ವಲಯವನ್ನು ಕಾಡುತ್ತಲೇ ಇದ್ದ ಇಂಥ ಹತ್ತು ಹಲವು ಕುತೂಹಲಕ್ಕೆ ಕೊನೆಗೂ ಕೇವಲ ಎರಡು ವರ್ಷಗಳ ಹಿಂದಷ್ಟೇ ನಿಖರ ಉತ್ತರ ಸಿಕ್ಕಿದೆ. ಅತ್ಯಂತ ಭಾವನಾತ್ಮಕ ಸಂಯೋಜನೆಯ ಫಲವಾಗಿ ಹೊರಹೊಮ್ಮುವ ಇದಕ್ಕೆ ಇಂಗ್ಲಿಷ್ ವೈಜ್ಞಾನಿಕ ಪರಿಭಾಷೆಯಲ್ಲಿ ‘ಪೆಟ್ರಿಕಾರ್’ ಎಂಬ ಶುಷ್ಕ ಪದವೊಂದಿದೆ. ಶೃಂಗಾರದ ಶೃಂಗಕ್ಕೆ ಕರೆದೊಯ್ಯಬಲ್ಲ ಪರಿಮಳವನ್ನು ಇನ್ನೂ ಸ್ವಲ್ಪ ಕಾವ್ಯಾತ್ಮಕವಾಗಿ ಹೇಳುವ ಪ್ರಯತ್ನವಾಗಿ ‘ಜಿಯಾಸ್ಮಿನ್’ ಎಂತಲೂ ಬಳಸುವುದಿದೆ. ಅಸಲಿಗೆ ಜೀವ ರಾಸಾಯನಿಕವಾಗಿರುವ ಈ ಜಿಯಾಸ್ಮಿನ್‌ನ ಇಂಥ ಉತ್ತೇಜನಕಾರಿ ಗುಣದ ಉದ್ದೇಶವೇನೆಂಬುದರ ರಹಸ್ಯವನ್ನು ಪ್ರಕೃತಿ ಇನ್ನೂ ಹಾಗೆಯೇ ಬಚ್ಚಿಟ್ಟುಕೊಂಡಿದೆ. ಆದರೂ ಒಂದೆರಡು ಊಹಾತ್ಮಕ ಕಾರಣಗಳನ್ನು ವಿಜ್ಞಾನಿಗಳು ಮುಂದಿಡುತ್ತಾರೆ.


ಸ್ಟ್ರೆಪ್ಟೋಮೈಸ್ ಎಂಬ ಸೂಕ್ಷ್ಮಾತಿಸೂಕ್ಷ್ಮ ಜೀವಿ ಮಹಾಶಯನ ಕೆಲಸವಿದು. ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಡೆವಿಡ್ ಕೇನ್ ಎಂಬ ವಿಜ್ಞಾನಿಯ ನೇತೃತ್ವದ ತಂಡ ಇದನ್ನು ಪತ್ತೆಹಚ್ಚಿತು. ಅದೂ ಆಕಸ್ಮಿಕವೇ ಅನ್ನಿ. ಕೇನ್ ಮತ್ತವರ ಗೆಳೆಯರು, ‘ಟರ್‍ಪೇನ್ ’ ಎಂಬ ಇನ್ನೊಂದು ಸಂಯುಕ್ತ ಧಾತುವಿನ ಬಗ್ಗೆ ಸಂಶೋಧನಾ ನಿರತರಾಗಿದ್ದರು. ವಿಶೇಷವೆಂದರೆ ಇದೂ ಸಹ ಸ್ಟ್ರೆಪ್ಟೋಮೈಸ್‌ನಿಂದಲೇ ಆದದ್ದು, ಜತೆಗೆ ಶ್ರೀಗಂಧದಲ್ಲಿ ಸೌಗಂಧಕ್ಕೂ ಇದೇ ಕಾರಣ. ಟರ್‍ಪೇನ್‌ನಿಂದ ಉತ್ಪತ್ತಿಯಾಗುವ ಜೀನ್ ಅನ್ನು ಕಂಡು ಹಿಡಿಯುವ ಉತ್ಸಾಹದಲ್ಲಿರುವಾಗಲೇ ಅಚಾನಕ್ ಆಗಿ ಕೇನ್‌ಗೆ ಇನ್ನೊಂದು ಜೀನ್‌ನ ಪ್ರತಿಕ್ರಿಯೂ ಗಮನಕ್ಕೆ ಬಂತು. ಟರ್‍ಪೇನ್ ನಲ್ಲಿ ಜೀನ್‌ಗಳಲ್ಲಿ ಒಂದೇ ಮಣ್ಣಿನ ವಾಸನೆಯ ಹುಟ್ಟಿಗೂ ಕಾರಣವಾಗಿರಬಹುದೇ ಎಂಬ ಅನುಮಾನ ಕಾಡಿತು. ತಡ ಮಾಡಲಿಲ್ಲ. ಇಡೀ ತಂಡ ಮಾಡುತ್ತಿದ್ದ ಸಂಶೋಧನೆಯನ್ನು ಬದಿಗಿಟ್ಟು ಮಣ್ಣಿನ ವಾಸನೆಯ ಬೆನ್ನು ಹತ್ತಿತು. ಜಿಯಾಸ್ಮಿನ್ ಪರಿಮಳವನ್ನು ಹೊರಸೂಸುವುದನ್ನು ಬಿಟ್ಟು ಬೇರೇನನ್ನೂ ಮಾಡುವುದಿಲ್ಲ. ಆದರೆ ಅದೇಕೋ ಮನುಷ್ಯ ಇದನ್ನು ಆಘ್ರಾಣಿಸುತ್ತಲೇ ಆತನ ಇಂದ್ರಿಯಗಳು ಇದಕ್ಕೆ ಕ್ಷಿಪ್ರವಾಗಿ ಸ್ಪಂದಿಸಲಾರಂಭಿಸುತ್ತದೆ. ಅದಕ್ಕಾಗಿಯೇ ಎಲ್ಲರಿಗೂ ಇಷ್ಟವಾಗುತ್ತದೆ. ಇದು ಎಷ್ಟರಮಟ್ಟಿಗೆ ಪ್ರಭಾವಶಾಲಿಯೆಂದರೆ ಮೂರು ಶತಕೋಟಿಲೀಟರ್ ನೀರಿನಲ್ಲಿ ಕೇವಲ ಒಂದು ಹತ್ತು ಲೀಟರ್‌ನಷ್ಟು ಜಿಯಾಸ್ಮಿನ್ ಇದ್ದರೂ ಸಾಕು, ಮನುಷ್ಯನ ಮೂಗು ಇದನ್ನು ಗ್ರಹಿಸಿಬಿಡುತ್ತದೆ. ಬೇರೆ ಯಾವುದೇ ವಾಸನೆಗಿಂತಲೂ ಕೋಟ್ಯಂತರ ಪಟ್ಟು ಹೆಚ್ಚು ಸೂಕ್ಷ್ಮಗ್ರಾಹಿಯಾಗಿರುತ್ತದೆ ಇದರ ಪ್ರಭಾವ ಎಂಬುದು ಸ್ವತಃ ಕೇನ್‌ನ ವಿಶ್ಲೇಷಣೆ. ಹೇಗಿರಬಹುದು ಇದರ ಸಾಮರ್ಥ್ಯ ಎಂಬುದು ಊಹಿಸಿಕೊಳ್ಳಿ ಸಾಕು. ಆದ್ದರಿಂದಲೇ ಒಂದೇ ಒಂದು ಹನಿ ಮಳೆ ನೀರು ಮಣ್ಣಿನ ಮೇಲೆ ಬಿದ್ದರೂ ಸಾಕು ಸುತ್ತೆಲ್ಲ ಪರಿಮಳ ಹರಡಲಾರಂಭಿಸುತ್ತದೆ.


ಏಕೆ ಎಂಬುದು ಗೊತ್ತಿಲ್ಲ, ಆದರೆ ನಿಸರ್ಗವಂತೂ ಈ ಜಿಯಾಸ್ಮಿನ್‌ಗೆ ಅತ್ಯಂತ ಮಹತ್ವದ ಸ್ಥಾನವನ್ನು ನೀಡಿದೆ; ಮನದಲ್ಲೇ ಆರಾಸುವ ನಮ್ಮ ‘ದೇವತೆ’ಗೆ ನಾವು ಕೊಟ್ಟ ಆದ್ಯತೆಯಂತೆ. ಹಾಗೆಂದು ಸ್ಟ್ರೆಪ್ಟೋಮೈಸ್ ಏನೂ ಒಂಟಿಯಾಗಿ ಈ ಮಣ್ಣಿನ ವಾಸನೆಯನ್ನು ಉತ್ಪಾದಿಸುವುದಿಲ್ಲ. ಇದಕ್ಕೂ ಸಂಗಾತಿಗಳಿದ್ದಾರೆ. ಅದೂ ಒಂದೆರಡಲ್ಲ. ಸರಿಸುಮಾರು ಮೂರು ಡಜನ್ ಸಂಗಾತಿ(ಜೀನ್‌ಗಳ)ಯ ಸರದಾರ ಈ ಸ್ಟ್ರೆಪ್ಟೋಮೈಸ್. ಇವೆಲ್ಲವಕ್ಕೂ ಪಕ್ಕಾ ಇನಿಯನದ್ದೇ (ಸ್ಟ್ರೆಪ್ಟೋಮೈಸ್) ಗುಣ. ಅವುಗಳಲ್ಲಿ ಮೈಕ್ಸೋಬ್ಯಾಕ್ಟೀರಿಯಾಕ್ಕೆ ಪಟ್ಟದರಸಿಯ ಸ್ಥಾನ.


ಈ ಮಣ್ಣಿನ ವಾಸನೆಯ ಪ್ರಯೋಜನವೇನು ಎಂಬುದು ಈವರೆಗೆ ಯಾರಿಗೂ ಗೊತ್ತಿಲ್ಲದ ಸಂಗತಿ. ಮೇಲ್ನೋಟಕ್ಕೆ ಸಿಕ್ಕಿದ ಒಂದು ಊಹಾ ಚಿತ್ರಣವೆಂದರೆ ಮಳೆ ಬಿದ್ದಾಕ್ಷಣ ನೆಲದೊಳಗೆ ಇರುವ ಅನೇಕ ಸೂಕ್ಷ್ಮ ಕ್ರಿಮಿಗಳು ಆಕರ್ಷಿತಗೊಳ್ಳುತ್ತವೆ. ವಶೀಕರಣಕ್ಕೆ ಒಳಗಾದವರಂತೆ ಅವು ನೀರು-ಮಣ್ಣು ಸಂಯೋಜನೆಗೊಂಡ ತಾಣಕ್ಕೆ ನುಗ್ಗುತ್ತವೆ. ಮಾತ್ರವಲ್ಲ ಹುಚ್ಚಿಗೆ ಬಿದ್ದು ಮಣ್ಣನ್ನು ಮುಕ್ಕಲಾರಂಭಿಸುತ್ತವೆ. ಇದರಿಂದ ನೆಲದೊಡಲು ಸಡಿಲಾಗಲಾರಂಭಿಸುತ್ತದೆ. ಅವು ಹಾಗೆ ತಿಂದು ವಿಸರ್ಜಿಸುವ ಕಾಸ್ಟ್ ಎಂಬ ವಸ್ತು ಅತ್ಯಂತ ಸಾರಯುಕ್ತವಾಗಿದ್ದು, ಭೂಮಿಯ ಫಲವತ್ತತೆಯನ್ನು ದ್ವಿಗುಣಗೊಳಿಸುತ್ತದೆ. ಈ ಸಂದರ್ಭದಲ್ಲಿ ಹೊರಹೊಮ್ಮುವ ಪರಿಮಳವೇ ಗಾಳಿಯೊಂದಿಗೆ ಬೆರೆತು ನಮ್ಮ ಮೂಗಿಗೆ ಅಡರುವುದು. ಅಂದರೆ ಸ್ಟ್ರೆಪ್ಟೋಮೈಸ್‌ನ ಕಾರ್ಯ ನಮ್ಮ ಮಟ್ಟಿಗೆ ಅತ್ಯಂತ ಉಪಯುಕ್ತ ಎಂದ ಹಾಗಾಯಿತು.


ಹಾಗೆಂದು ಎಲ್ಲ ಸಂದರ್ಭದಲ್ಲೂ ಮನುಷ್ಯನಿಗೆ ಇದು ಹಿತವಾಗಿಯೇ ಇರುತ್ತದೆ ಎಂಬುದೇನೂ ಇಲ್ಲ ಬಿಡಿ. ಇಂಥ ವಾಸನೆ ಮಣ್ಣಿನಿಂದ ಗಾಳಿಯಲ್ಲಿ ಬೆರತಾಗಲಷ್ಟೇ ನಾವೆಲ್ಲರೂ ಪ್ರೇಮಿಗಳಾಗಿ ವರ್ತಿಸುತ್ತೇವಷ್ಟೇ. ಅದೇ ಆ ವಾಸನೆ ನೀರಿಗೆ ಸೇರಿ ಬಿಟ್ಟರೆ ಖಂಡಿತಾ ಮುಖ ಸಿಂಡರಿಸಿಕೊಳ್ಳುತ್ತೇವೆ. ಅಪ್ಪಿ ತಪ್ಪಿಯೂ ನೀರು ಮಣ್ಣಿನ ವಾಸನೆಯಿಂದ ಕೂಡಿದ್ದರೆ ಅದನ್ನು ನಾವು ಸಹಿಸುವುದಿಲ್ಲ. ಸಾರ್ವಜನಿಕ ನೀರು ಪೂರೈಕೆಯ ವ್ಯವಸ್ಥೆಯಲ್ಲಿ ಇದನ್ನು ನಾವು ಗಮನಿಸಬಹುದು. ಒಂದು ರೀತಿಯ ಮುಗ್ಗಲು ವಾಸನೆ ನೀರನ್ನು ಕಾಡುತ್ತಿರುತ್ತದೆ. ಮಜಾ ಅಂದರೆ ನೀರು ಶುದ್ಧೀಕರಣ ಸಂದರ್ಭದಲ್ಲಿ ಇಂಥ ವಾಸನೆಯನ್ನು ತೊಡೆದು ಹಾಕಲೆಂದೇ ಕೋಟ್ಯಂತರ ರೂಗಳನ್ನು ನಾವು ವೆಚ್ಚ ಮಾಡುತ್ತೇವೆ. ಏನಾದರೂ ಹೇಳಿ, ಮೊದಲ ಮಳೆಗೆ ಮುಖವೊಡ್ಡಿ ಮಣ್ಣಿನ ವಾಸನೆಯನ್ನು ಹೀರುವುದೆಂದರೆ ಅದೊಂದು ರೀತಿ ಅಹ್ಲಾದಕರ ಅನುಭವ. ಯಾವಾತನೂ ಅಮಥ ಅನುಭವದಿಮದ ವಂಚಿತನಾಗಲು ಇಷ್ಟಪಡಲಾರ.


‘ಲಾಸ್ಟ್’ಡ್ರಾಪ್: ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸ್‌ನ ತಂಡವೊಂದು ವಿಜ್ಞಾನ ಪ್ರಯೋಗಾಲಯದೊಳಗೆ ರಾಸಾಯನಿಕ ಸಂಯೋಜನೆಯಿಂದ ಕೃತಕ ಮಣ್ಣಿನ ವಾಸನೆಯನ್ನು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಇನ್ನು ಅಮಥ ಅನುಭೂತಿಗೆ ಮೊದಲ ಮಳೆಗಾಗಿಯೇ ಕಾಯಬೇಕಿಲ್ಲ. ಬೇಕೆಂದಾಗಲೆಲ್ಲ ಮೂಗು ತೂರಿಸಿದರಾಯಿತು.